Homeಕರ್ನಾಟಕಕಾರ್ಕಳ: ಬಿಜೆಪಿ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್‌‌ ಕಾರ್ಯಕರ್ತನಿಗೆ ಇನ್ಸ್‌ಪೆಕ್ಟರ್‌‌‌ನಿಂದ ಹಲ್ಲೆ ಆರೋಪ

ಕಾರ್ಕಳ: ಬಿಜೆಪಿ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್‌‌ ಕಾರ್ಯಕರ್ತನಿಗೆ ಇನ್ಸ್‌ಪೆಕ್ಟರ್‌‌‌ನಿಂದ ಹಲ್ಲೆ ಆರೋಪ

- Advertisement -
- Advertisement -

ಉಡುಪಿಯ ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ನಾಯಕ್‌ ಎಂಬುವವರ ಮೇಲೆ ಕಾರ್ಕಾಳ ನಗರ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಮಧು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಗುರುವಾರ ಆರೋಪಿಸಿದೆ.

ವರ್ಷಗಳ ಹಿಂದೆ ರಾಧಾಕೃಷ್ಟ ಹಿರ್ಗಾನ ಎಂಬ ಹೆಸರಿನ ಫೇಸ್‌‌ಬುಕ್ ಖಾತೆಯಿಂದ ಸೈನಿಕರನ್ನು ಅವಮಾನಿಸುವ ಪೋಸ್ಟ್‌ ಒಂದು ಮಾಡಲಾಗಿತ್ತು. ಹೀಗಾಗಿ ರಾಧಾಕೃಷ್ಣ ನಾಯಕ್ ಅವರ ವಿರುದ್ದ ಬೆಂಗಳೂರು ಮತ್ತು ಕಾರ್ಕಾಳದಲ್ಲಿ ಪ್ರಕರಣದ ದಾಖಲಿಸಲಾಗಿತ್ತು. ಈ ಹಿನ್ನಲೆಯಲ್ಲಿ ಕಾರ್ಕಾಳ ಪೊಲೀಸರು ಅವರನ್ನು ಗುರುವಾರ ಠಾಣೆಗೆ ಕರೆಸಿ ಬಿಜೆಪಿ ನಾಯಕರ ಸಮ್ಮುಖದಲ್ಲಿ ಮಧು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಆದರೆ ರಾಧಾಕೃಷ್ಣ, ಪ್ರಕರಣ ದಾಖಲಾಗಿದ್ದ ಬೆಂಗಳೂರಿನ ಠಾಣೆಗೆ ತೆರಳಿ ವಿವಾದಿತ ಖಾತೆಯು ತನ್ನದಲ್ಲ ಎಂದು ಸಮಜಾಯಿಷಿ ನೀಡಿದ್ದರು ಹಾಗೂ ಅವರಿಗೆ ಪೊಲೀಸರು ಕ್ಲೀನ್ ಚಿಟ್ ನೀಡಿದ್ದರು ಎಂದು ಕಾಂಗ್ರೆಸ್ ಕಾರ್ಯಕರ್ತ ಜ್ಞಾನಿ ತಾವರೆಕೆರೆ ನಾನುಗೌರಿ.ಕಾಂ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ಇದನ್ನೂ ಓದಿ: ಉಪ್ಪಿನಂಗಡಿ: ಪೊಲೀಸರ ಬೇಜವಾಬ್ದಾರಿಯಿಂದ ಯುವಕ ಸಾವು , ನಿಲ್ಲದ ಪೊಲೀಸ್‌ ದೌರ್ಜನ್ಯ- ಆರೋಪ

“ರಾಧಾಕೃಷ್ಣ ಅವರಿಗೆ ಹೃದಯ ಸಂಬಂಧಿ ಸಮಸ್ಯೆಯಿದ್ದು, ಇತ್ತೀಚೆಗಷ್ಟೆ ಸ್ಟಂಟ್ ಹಾಕಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಈ ಹಿಂದೆಯೆ ಬೆಂಗಳೂರಿನ ಠಾಣೆಗೆ ತೆರಳಿ ಪೊಲೀಸರಿಂದ ಕ್ಲೀನ್ ಚಿಟ್ ಪಡೆದಿದ್ದರು. ಆದರೆ ಗುರುವಾರ ಪ್ರಕರಣ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ವಿಚಾರಣೆಗೆ ಕರೆಸಿದ್ದ ಕಾರ್ಕಳ ಇನ್ಸ್‌ಪೆಕ್ಟರ್‌ ಮಧು ಅವರು ಬಿಜೆಪಿ ನಾಯಕರ ಸಮ್ಮುಖದಲ್ಲಿ ರಾಧಾಕೃಷ್ಣ ಅವರ ಎದೆ ಮತ್ತು ಹೊಟ್ಟೆಗೆ ಹಲ್ಲೆ ನಡೆಸಿದ್ದಾರೆ” ಎಂದು ಜ್ಞಾನಿ ಆರೋಪಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಯುವ ನಾಯಕ ರಕ್ಷಾ ರಾಮಯ್ಯ, ಮಿಥುನ್ ರೈ ಸೇರಿದಂತೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು ಕಾರ್ಕಾಳ ಇನ್ಸ್‌ಪೆಕ್ಟರ್‌ ಮಧುವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, “ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ನಾಯಕ್ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಖಂಡನೀಯ. ಇವರ ಅನಾರೋಗ್ಯವನ್ನೂ‌ ಲೆಕ್ಕಿಸದೆ, ಹಳೆ ಸುಳ್ಳು ಕೇಸ್ ಆಧರಿಸಿ, ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಈ ಬಗ್ಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆ ನಡೆಸಿ ನೊಂದ ಯುವಕನಿಗೆ ನ್ಯಾಯ ಒದಗಿಸಬೇಕು” ಎಂದು ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್ ಕೂಡಾ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು,“ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಪೊಲೀಸರು ಬಿಜೆಪಿ ನಾಯಕರ ಅಣತಿಯಂತೆ ಕೆಲಸ ಮಾಡುತ್ತಿರುವುದು ಸ್ಪಷ್ಟ. ಬಿಜೆಪಿ ಕುಮ್ಮಕ್ಕಿನಿಂದ ಕಾರ್ಕಳದ ನಮ್ಮ ಕಾರ್ಯಕರ್ತ ರಾಧಾಕೃಷ್ಣ ಹಿರ್ಗಾನ ಮೇಲಿನ ಪೊಲೀಸ್ ದೌರ್ಜನ್ಯ ಖಂಡನೀಯ. ಅನಾರೋಗ್ಯವನ್ನೂ ಲೆಕ್ಕಿಸದೆ ಅಮಾನವೀಯವಾಗಿ ಹಲ್ಲೆ ನಡೆಸಿದ ಪೊಲೀಸರನ್ನು ಕೊಡಲೇ ಅಮಾನತುಗೊಳಿಸಬೇಕೆಂದು ಆಗ್ರಹಿಸುತ್ತೇವೆ” ಎಂದು ಹೇಳಿದೆ.

ಇದನ್ನೂ ಓದಿ: ಅಕ್ರಮ ಕಲ್ಲು ಗಣಿಗಾರಿಕೆಗೆ ಎಚ್.ಡಿ.ಕುಮಾರಸ್ವಾಮಿಯೇ ಪ್ರಮುಖ ರೂವಾರಿ: ಎಎಪಿ

ತಮ್ಮ ಮೇಲಿನ ಆರೋಪವನ್ನು ಕಾರ್ಕಾಳ ನಗರ ಠಾಣೆಯ ಇನ್ಸ್‌ಪೆಕ್ಟರ್‌ ಮಧು ನಿರಾಕರಿಸಿದ್ದು, ಠಾಣೆಗೆ ಕರೆದು ವಿಚಾರಣೆ ನಡೆಸಿದ್ದೇವೆ ಅಷ್ಟೇ ಹಲ್ಲೆ ನಡೆಸಿಲ್ಲ ಎಂದಿದ್ದಾರೆ. ಅದೇ ಕಾರಣಕ್ಕೆ, ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ತಿಳಿಸಿದ್ದಾರೆ.

“ಭಾರತೀಯ ಸೈನಿಕರನ್ನು ಅವಹೇಳನ ಮಾಡಿದ್ದರ ಕುರಿತು ಅವರ ವಿರುದ್ದ ಎಂಟು ತಿಂಗಳ ಹಿಂದೆ ಕಾರ್ಕಾಳದ ಸಂದೀಪ್ ಎಂಬವರು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಕುರಿತು ತನಿಖೆಗಾಗಿ ಠಾಣೆಗೆ ಕರೆಸಿದ್ದು ಹೌದು. ಅವರ ಮೇಲೆ ಯಾವುದೆ ಹಲ್ಲೆಯಾಗಿಲ್ಲ, ಅವರನ್ನು ನಾವು ವೈದ್ಯಕೀಯ ತಪಾಸಣೆ ಮಾಡಿಯೆ ಕಳುಹಿಸಿದ್ದೇವೆ. ವೈದ್ಯಕೀಯ ತಪಾಸಣೆಯ ಸಮಯದಲ್ಲಿ ತನ್ನ ಮೇಲೆ ಯಾವುದೆ ಹಲ್ಲೆ ಆಗಿಲ್ಲ ಎಂದು ಸ್ವತಃ ಅವರೆ ಹೇಳಿಕೆ ನೀಡಿದ್ದಾರೆ” ಎಂದು ಪೊಲೀಸ್ ಅಧಿಕಾರಿ ಮಧು ನಾನುಗೌರಿ.ಕಾಂ ಗೆ ಹೇಳಿದ್ದಾರೆ.

ಠಾಣೆಯಲ್ಲಿ ಬಿಜೆಪಿ ನಾಯಕರ ಸಮ್ಮುಖದಲ್ಲೇ ಹಲ್ಲೆ ನಡೆಸಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, “ಇದು ಸತ್ಯಕ್ಕೆ ದೂರವಾದ ಮಾತು. ಠಾಣೆಗೆ ತುಂಬಾ ಜನರು ಬರುತ್ತಾರೆ, ಅವರೆಲ್ಲಾ ಬಿಜೆಪಿಯೊ, ಕಾಂಗ್ರೆಸ್ಸೋ ಎಂದು ನಮಗೆ ತಿಳಿದಿಲ್ಲ. ನಾವು ಈ ಯಾರ ಮುಂದೆಯು ಅವರನ್ನು ವಿಚಾರಣೆ ನಡೆಸಲಿಲ್ಲ” ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಬಾಂಗ್ಲಾ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 12 ಜನರ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಈ ಹಲ್ಲೆ ಕಂಡನಾರ್ಹ. ಹಲ್ಲೆ ಮಾಡಿರುವ ಪಿ.ಎಸ್.ಐ.ಗೆ ಸೂಕ್ತ ಶಿಕ್ಷೆ ಆಗಬೇಕು.

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...