Homeಮುಖಪುಟಪಾದ್ರಿ ಸ್ಟಾನ್ ಸ್ವಾಮಿ ಸಾವು: ಭಾರತದ ಮುಖ್ಯ ನ್ಯಾಯಾಧೀಶರಿಗೊಂದು ಬಹಿರಂಗ ಪತ್ರ

ಪಾದ್ರಿ ಸ್ಟಾನ್ ಸ್ವಾಮಿ ಸಾವು: ಭಾರತದ ಮುಖ್ಯ ನ್ಯಾಯಾಧೀಶರಿಗೊಂದು ಬಹಿರಂಗ ಪತ್ರ

- Advertisement -
- Advertisement -

ಭಾರತದ ಮುಖ್ಯ ನ್ಯಾಯಾಧೀಶರಿಗೊಂದು ಬಹಿರಂಗ ಪತ್ರ

ವಿಷಯ: ಈ ದೇಶದಲ್ಲಿ ಮೋದಿವಾದಿಗಳಿಗೊಂದು ಕಾನೂನು- ಜನವಾದಿಗಳಿಗೊಂದು ಕಾನೂನಿದೆಯೇ?

ಯುವರ್ ಆನರ್,

ಸಂತ ಪಾದ್ರಿ ಸ್ಟಾನ್ ಸ್ವಾಮಿಯವರ ಸಾವು ತಮ್ಮ ನಿದ್ದೆಯನ್ನು ಕೂಡಾ ಕೆಡಿಸಿರಬಹುದು.

ಆದರೆ ಒಂದು ಸಾಂವಿಧಾನಿಕ ಸಂಸ್ಥೆಯಾಗಿ, ನ್ಯಾಯಾಂಗವು ಸರ್ಕಾರದ ದಾಳಿಯಿಂದ ನಾಗರಿಕ ಸ್ವಾತಂತ್ರ್ಯ ವನ್ನು ರಕ್ಷಿಸಲು ವಿಫಲವಾಗಿರುವುದರಿಂದಲೇ ಈ ಸಂತನ ಸಾಂಸ್ಥಿಕ ಹತ್ಯೆ ಯಾಗಿದೆಯೆಂದು

ಈ ದೇಶದ ಜನರಾದ ನಾವು”

ಕಳವಳಗೊಂಡಿದ್ದೇವೆ…

ಎಲ್ಲಕ್ಕಿಂತ ಹೆಚ್ಚಾಗಿ ,

ಕಳೆದ ಏಳುವರ್ಷಗಳಿಂದ ಈ ದೇಶದಲ್ಲಿ “ಒಂದು ದೇಶ-ಎರಡೆರಡು ಕಾನೂನು” ಜಾರಿಯಲ್ಲಿರುವುದು ಆತಂಕ ಹುಟ್ಟಿಸಿದೆ.

ಮತ್ತು ನ್ಯಾಯಾಂಗದ ಕೆಳಹಂತದಿಂದ ಮೇಲಿನವರೆಗೆ ನ್ಯಾಯದಾನ ಮಾಡುವಾಗ ‘ಮೋದಿವಾದಿಗಳಿಗೊಂದು ಮಾನದಂಡ… ಜನವಾದಿಗಳಿಗೊಂದು ಮಾನದಂಡವನ್ನು ಅನುಸರಿಸುತ್ತಾ ಬಂದಿರುವುದು ಈ ದೇಶದ ಪ್ರಜಾತಂತ್ರದ ಭವಿಷ್ಯದ ಬಗ್ಗೆ ತೀವ್ರವಾದ ಕಾಳಜಿ ಹುಟ್ಟಿಸುತ್ತಿದೆ…

ಏಕೆಂದರೆ, 2021ರ ಮಾರ್ಚ್ ನಲ್ಲಿ ಫಾದರ್ ಸ್ವಾಮಿಯವರ ಜಾಮೀನು ಅರ್ಜಿಯನ್ನು ತಿರಸ್ಕರಿಸುತ್ತಾ ವಿಶೇಷ ನ್ಯಾಯಾಲಯವು ಪಾದ್ರಿಯವರ “right to personal liberty and other grounds like his old age and sickness were outweighed by the “collective interest of the community” (ಸಮುದಾಯದ ಸಾಮೂಹಿಕ ಹಿತಾಸಕ್ತಿಯ ತೂಕವು ಸ್ವಾಮಿಯವರ ವೈಯಕ್ತಿಕ ಸ್ವಾತಂತ್ರ್ಯ, ಅವರ ವಯಸ್ಸು ಹಾಗೂ ಖಾಯಿಲೆಗಳಿಂಗಿಂತ ಹೆಚ್ಚು ತೂಗುತ್ತದೆ. ಆದ್ದರಿಂದ ಜಾಮೀನು ಅರ್ಜಿ ತಿರಸ್ಕರಿಸಲಾಗಿದೆ ) ಎಂದು ಹೇಳಿತ್ತು.

ಅಂದರೆ ವಿಚಾರಣೆಗೆ ಮುನ್ನವೇ, ಹಾಗೂ ಆರೋಪಿಗೆ ತನ್ನ ನಿರಪರಾಧಿತ್ವವನ್ನು ಸಾಬೀತು ಪಡಿಸುವ ಅವಕಾಶವನ್ನೂ ನೀಡದೆಯೇ, ಏಕಪಕ್ಷೀಯವಾಗಿ ನ್ಯಾಯಾಲಯವು ಫಾದರ್ ಸ್ವಾಮಿಯವರು prima facie ಅಪರಾಧಿಯಾಗಿರಬಹುದೆಂಬ ಅಭಿಪ್ರಾಯವನ್ನು ತಳೆದುಬಿಟ್ಟಿತು.

ಯುವರ್ ಆನರ್,

ಇದು ಯಾವ ಪ್ರಜಾತಾಂತ್ರಿಕ ನ್ಯಾಯಸಂಹಿತೆ?

ಇಂಥಾ ಸಂವಿಧಾನ ಬಾಹಿರ ಮಾನದಂಡವಿರುವ UAPA ಕಾಯಿದೆಯೇ ನ್ಯಾಯಬಾಹಿರ ಹಾಗೂ ಸಂವಿಧಾನ ವಿರೋಧಿಯಲ್ಲವೇ?

ಸಂವಿಧಾನವನ್ನು ಇಂಥಾ ದಾಳಿಯಿಂದ ರಕ್ಷಿಸಬೇಕಾದ ಸಾಂವಿಧಾನಿಕ ಜವಾಬ್ದಾರಿಯಿರುವ ತಮ್ಮ ಘನ ನ್ಯಾಯಾಲಯವು, ಈ ಅನ್ಯಾಯ ಹಾಗೂ ಅಕ್ರಮವಾದ ಸಂವಿಧಾನ ಉಲ್ಲಂಘನೆ ಯನ್ನು ಸ್ವಪ್ರೇರಿತರಾಗಿ ಖೈದು ಮಾಡುವ ಬದಲು ಜಾರಿ ಮಾಡುತ್ತಿರುವುದೇಕೆ?

ವಿಪರ್ಯಾಸ ಮತ್ತು ಅಪಾಯಕಾರಿ ಯಾದ ವಿಷಯವೆಂದರೆ,

ಭಾರತದ ನ್ಯಾಯಾಲಯಗಳು ದೇಶದ ಭಾವೈಕ್ಯತೆಗೆ ಹಾಗೂ ದೇಶದ ಭದ್ರತೆಗೆ ಧಕ್ಕೆ ಎಂದು ಭಾವಿಸಿದ ಎಲ್ಲಾ ಪ್ರಕರಣಗಳಲ್ಲೂ “ಆರೋಪಿಗಳ ವೈಯಕ್ತಿಕ ಸ್ವಾತಂತ್ರ್ಯಕ್ಕಿಂತ ಸಮುದಾಯದ ಸಾಮೂಹಿಕ ಹಿತಾಸಕ್ತಿಯೇ ಪ್ರಧಾನ” ಎಂದೇನೂ ಪರಿಗಣಿಸುತ್ತಿಲ್ಲ!

ವಾಸ್ತವವಾಗಿ ಮೋದಿ ಪರವಾದ ಹಲವಾರು ಅಪರಾಧಿಗಳು ಸಮಾಜದ ಹಾಗೂ ದೇಶದ ಭದ್ರತೆ ಹಾಗು ಐಕ್ಯತೆಗೆ ತೀವ್ರವಾಗಿ ಹಾನಿ ಮಾಡಿರುವ ಅಪರಾಧಗಳು ಸಾಕ್ಷಾಧಾರಗಳಿಂದ ಸಾಬೀತಾದ ನಂತರವೂ… ಭಾರತದ ಉಚ್ಚ ಹಾಗೂ ಪರಮೋಚ್ಚ ನ್ಯಾಯಾಲಯಗಳು ಮೋದಿ ಪರವಾದಿಗಳ ಹಿತವನ್ನು “ಸಮುದಾಯದ ಹಿತಕ್ಕಿಂತ ದೇಶದ ಐಕ್ಯತೆ ಮತ್ತು ಭದ್ರತೆಗಿಂತ ಪ್ರಧಾನ” ಎಂದು ಪರಿಗಣಿಸುತ್ತಿವೆಯೇ ಎಂಬ ಸಕಾರಣ ಅನುಮಾನ ಕಳೆದ ಏಳುವರ್ಷಗಳಿಂದ ಈ ದೇಶದ ಜನರನ್ನು ಕಾಡುತ್ತಿದೆ….

ಉದಾಹರಣೆಗೆ:

1.ಗುಜರಾತ್ ಭಯೋತ್ಪಾದನೆಯ ಮಾಯಾ ಕೊಡ್ನಾನಿ

ಮಾಯಾ ಕೊಡ್ನಾನಿ 2002ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಸರ್ಕಾರದಲ್ಲಿ ಮಂತ್ರಿ. ಆಗ ಮುಖ್ಯಮಂತ್ರಿ ಮೋದಿಯವರ ಪ್ರತ್ಯಕ್ಷ ಹಾಗೂ ಪರೋಕ್ಷ ಸಹಕಾರ, ಯೋಜನೆಗಳೊಂದಿಗೆ ನಡೆದ ಮುಸ್ಲಿಮರ ಮಾರಣಹೋಮದಲ್ಲಿ ಮಾಯಾ ಕೊಡ್ನಾನಿ ನೇರವಾಗಿ ಭಾಗವಹಿಸಿದ್ದರು. ಇದು ಅಂದಿನ ಸುಪ್ರೀಂಕೋರ್ಟ್ ಉಸ್ತುವಾರಿಯಲ್ಲಿ ನಡೆಸಿದ ಸ್ವತಂತ್ರ ತನಿಖೆಗಳಲ್ಲೂ ಸ್ಪಷ್ಟವಾಗಿತ್ತು…

ಅದರಲ್ಲೂ ವಿಶೇಷವಾಗಿ ಅಹಮದಾಬಾದಿನ ನರೋದಾ ಪಾಟಿಯಾದಲ್ಲಿ ಈಕೆಯ ನೇತೃತ್ವದ ಹಿಂದುತ್ವವಾದಿ ಉಗ್ರರ ಗುಂಪು 2002ರ ಫೆಬ್ರವರಿ 28 ರಂದು 97 ಮುಸ್ಲಿಮರ ಕಗ್ಗೊಲೆ ನಡೆಸಿದ್ದು ಸಕಲ ಸಾಕ್ಷಾಧಾರಗಳಿಂದ ಸಾಬೀತಾಗಿತ್ತು. ಬಲಿಯಾದವರಲ್ಲಿ 36 ಜನ ಮಹಿಳೆಯರು…35 ಜನ ಮಕ್ಕಳು!

ಅಪರಾಧ ಸಾಬೀತಾಗಿದ್ದರಿಂದ 2012ರ ಆಗಸ್ಟಿನಲ್ಲಿ ಈಕೆಗೆ 28 ವರ್ಷಗಳ ಶಿಕ್ಷೆಯನ್ನು ವಿಶೇಷ ಕೋರ್ಟು ವಿಧಿಸಿತ್ತು.

ಆದರೆ… ದುರದೃಷ್ಟವಶಾತ್.. 2014ರಲ್ಲಿ ಮೋದಿಯವರು ಪ್ರಧಾನ ಮಂತ್ರಿಯಾದ ಮೇಲೆ ನ್ಯಾಯಾಲಯಗಳಲ್ಲೂ ಸಮುದಾಯದ ಮತ್ತು ದೇಶದ ಹಿತಾಸಕ್ತಿಯ ವ್ಯಾಖ್ಯಾನಗಳು ಬದಲಾಗಿದ್ದರಿಂದ… ಅಪರಾಧ ಸಾಬೀತಾಗಿ ಜೈಲಿನಲ್ಲಿದ್ದ ಮಾಯಾ ಕೊಡ್ನಾನಿ, ಕೇಂದ್ರದಲ್ಲಿ ಮೋದಿ ಪ್ರಧಾನಿಯಾದ ಕೂಡಲೇ ತನಗೆ ಆರೋಗ್ಯ ಸರಿಯಿಲ್ಲವೆಂದು ತನ್ನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕೆಂದು ಗುಜರಾತಿನ ಹೈಕೋರ್ಟಿಗೆ ಒಂದೇ ಒಂದು ಅರ್ಜಿ ಹಾಕಿಕೊಂಡರು.

ಕೂಡಲೇ ಅದನ್ನು ಪುರಸ್ಕರಿಸಿದ ಗುಜರಾತ್ ಹೈಕೋರ್ಟಿನ ಜಸ್ಟೀಸ್ ಸಹಾಯ್ ಮತ್ತು ಜಸ್ಟೀಸ್ ದೋಹಾರಿಯಾ ಅವರ ದ್ವಿಸದಸ್ಯ ಪೀಠ ಆಕೆಯ “ಅನಾರೋಗ್ಯದ ಕಾರಣಕ್ಕಾಗಿ” ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದು ಮಾತ್ರವಲ್ಲ, ಅವರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಅಮಾನತ್ತು ಮಾಡಿತು! 97 ಅಮಾಯಕರನ್ನು ಕೊಂದ ಅಪರಾಧಿ ಒಂದೂವರೆ ವರ್ಷವೂ ಜೈಲಿನಲ್ಲಿರಲಿಲ್ಲ.

ಈ ಹೊಸ ನ್ಯಾಯವ್ಯಾಖ್ಯಾನಗಳು ಮುಂದುವರೆದು 2018ರಲ್ಲಿ ಇದೆ ಕೋರ್ಟು ಕೊಡ್ನಾನಿಯವರನ್ನು ದೋಷಮುಕ್ತಗೊಳಿಸಿತು.

ಹಾಗಿದ್ದಲ್ಲಿ ನ್ಯಾಯದ ತಕ್ಕಡಿಯಲ್ಲಿ ಬಲಿಯಾದ ಅಮಾಯಕ ಅಲ್ಪಸಂಖ್ಯಾತ ಸಮುದಾಯದ ಹಿತಾಸಕ್ತಿಗೆ ಬೆಲೆ ಇಲ್ಲವೇ?

2.ಸುಪಾರಿ ಭಯೋತ್ಪಾದಕ ಬಾಬು ಭಜರಂಗಿ

ಇದೆ ನರೋಡಾ ಪಾಟಿಯಾದ ಹಾಗು ಗುಜರಾತಿನಲ್ಲಿ ನಡೆದ ಇತರ ಹಿಂದುತ್ವವಾದಿ ನರಸಂಹಾರಗಳ ಸಾಬೀತಾದ ರೂವಾರಿ ಬಾಬು ಭಜರಂಗಿ. ನರೋಡಾ ಪಾಟಿಯಾ ಪ್ರಕರಣದಲ್ಲಿ ಈತನ ಪಾತ್ರವೂ ಸಾಕ್ಷಾಧಾರಗಳಿಂದ ರುಜುವಾತಾಗಿ ಭಜರಂಗಿಗೆ ಅಜೀವ ಕಾರಾಗೃಹ ಶಿಕ್ಷೆಯನ್ನು 2012ರಲ್ಲಿ ವಿಧಿಸಲಾಗಿತ್ತು.

ಆದರೆ … 2012-16ರ ನಡುವೆ ಆತನಿಗೆ, ಹೆಂಡತಿಯ ಅನಾರೋಗ್ಯದ ಹೆಸರಿನಲ್ಲಿ ಮತ್ತು ಆತನದೇ ಅನಾರೋಗ್ಯದ ನೆಪದಲ್ಲಿ 14 ಬಾರಿ ಏಳೇಳು ದಿನಗಳ ತಾತ್ಕಾಲಿಕ ಜಾಮೀನನ್ನು ಕರುಣಾಮಯಿ ಕೋರ್ಟುಗಳು ದಯಪಾಲಿಸಿದ್ದವು!

ಅಷ್ಟು ಮಾತ್ರವಲ್ಲ.. 2019ರ ಮಾರ್ಚ ನಲ್ಲಿ ಜಸ್ಟೀಸ್ ಕಾನ್ವಿಲ್ಕರ್ ನೇತೃತ್ವ ಸುಪ್ರೀಂ ಕೋರ್ಟ್ ಪೀಠ ಅನಾರೋಗ್ಯದ ಕಾರಣವನ್ನು ನೀಡಿ ಬಾಬಾ ಭಜರಂಗಿಗೆ ಪರ್ಮನೆಂಟ್ ಜಾಮೀನನ್ನು ನೀಡಿತು.

ಆದರೇ, ಇದೇ ಮಾನದಂಡವನ್ನು ತಮ್ಮ ಘನನ್ಯಾಯಾಲಯಗಳು ಕೇವಲ ವಿಚಾರಣಾಧೀನ ಆರೋಪಿಗಳಾಗಿದ್ದ, ಜನಪರ ಹೋರಾಟಗಾರರಿಗೆ ಮಾತ್ರ ವಿಸ್ತರಿಸಲಿಲ್ಲ…

ಯುವರ್ ಆನರ್

2014 ರ ನಂತರದ ನ್ಯಾಯಾಲಯಗಳ ತಾರತಮ್ಯ ನೀತಿಯ ಕೆಲವು ಸ್ಯಾಂಪಲ್ ಗಳು:

– ಶೇ. 90ರಷ್ಟು ಅಂಗವೈಕಲ್ಯದಿಂದ ನರಳುತ್ತಾ ಕೋವಿಡ್ ಅನ್ನು ಕೂಡಾ ಅನುಭವಿಸುತ್ತಿರುವ ದೆಹಲಿ ವಿಶ್ವವಿದ್ಯಾಲಯದ ಅಧ್ಯಾಪಕ ಜಿ.ಎನ್ ಸಾಯಿಬಾಬಾ ಅವರು 2020ರಲ್ಲಿ ಅನಾರೋಗ್ಯದಿಂದ ಸಾವಿನ ದವಡೆಯಲ್ಲಿರುವ ತನ್ನ ತಾಯಿಯ ಕೊನೆಯ ದರ್ಶನ ಮಾಡಲು ಹಾಕಿಕೊಂಡ ತಾತ್ಕಾಲಿನ ಜಾಮೀನನ್ನು ಅರ್ಜಿಯನ್ನು ಮಹಾರಾಷ್ಟ್ರ ಹೈಕೋರ್ಟು ತಿರಸ್ಕರಿಸಿತು.

ಅದಾದ ನಾಲ್ಕೇ ದಿನಗಳಲ್ಲಿ ಅವರ ತಾಯಿ ಮೃತರಾದರು. ಈಗ ಸಾಯಿಬಾಬಾ ಅವರೂ ಜೈಲಿನಲ್ಲಿ ಸಾವಿನ ದವಡೆಯಲ್ಲಿದ್ದಾರೆ.

ಕೊಡ್ನಾನಿಗೆ ಭಜರಂಗಿಗೆ ಜಾಮೀನು ಕೊಡುವ ಕೋರ್ಟುಗಳು ಸಾಯಿಬಾಬಾ ಅವರಿಗೆ ಮೆಡಿಕಲ್ ಬೇಲ್ ಅನ್ನು ನಿರಾಕರಿಸುತ್ತಿರುವುದೇಕೆ…. ಯುವರ್ ಆನರ್?

– ಅಪರಾಧವು ಸಾಬೀತಾದ ನಂತರವೂ ಕೊಡ್ನಾನಿ ಮತ್ತು ಭಜರಂಗಿಗಳನ್ನು ಆರೋಗ್ಯದ ಕಾರಣದಿಂದ ‘ಕರುಣೆ ತೋರಿ’ ಬಿಡುಗಡೆ ಮಾಡಿದ ಕೋರ್ಟುಗಳು…..

ಭೀಮ ಕೋರೆಗಾಂವ್ ಪ್ರಕರಣದಲ್ಲಿ ಮಾತ್ರ, ಅಪರಾಧ ಸಾಬೀತಾಗುವುದಿರಲೀ, ವಿಚಾರಣೆಯೂ ಇಲ್ಲದೆ ಜೈಲಿನಲ್ಲಿ ಕೊಳೆಯುತ್ತಿರುದ್ದ ಸಾವಿನ ದವಡೆಯಲ್ಲಿದ್ದ 82 ವಯಸ್ಸಿನ ಖ್ಯಾತ ಕ್ರಾಂತಿಕಾರಿ ಕವಿ ವರವರರಾವ್ ಅವರಿಗೆ ನಿರಂತರವಾಗಿ ಜಾಮೀನು ನಿರಾಕರಿಸಿದ್ದಕ್ಕೆ ಭಿನ್ನ ಮಾನದಂಡಗಳನ್ನು ಅನುಸರಿಸಿದ್ದೇಕೆ?

ಹಲವು ಮಾರಣಾಂತಿಕ ಖಾಯಿಲೆಗಳಿಂದ ನರಳುತ್ತಿರುವ ಅವರಿಗೆ ಕೇವಲ ಆರು ತಿಂಗಳ ಮೆಡಿಕಲ್ ಜಾಮೀನು ನೀಡಿದೆ. ಆ ನಂತರ..ಯುವರ್ ಆನರ್?

– ಅನಾರೋಗ್ಯ ಪೀಡಿತ ಹೆಂಡತಿಯನ್ನು ನೋಡಿಬರಲು ಬಾಬು ಭಜರಂಗಿಗೆ ಎರಡು ವರ್ಷಗಳಲ್ಲಿ 14 ಬಾರಿ ಜಾಮೀನು ನೀಡಿದ ಭಾರತದ ಕೋರ್ಟುಗಳು, ಪಿಂಜರಾ ತೋಡ್ ಹಾಗೂ CAA-NRC ಹೋರಾಟದ ವಿದ್ಯಾರ್ಥಿ ನಾಯಕಿ ನತಾಶಾ ನರ್ವಾಲ್ ಗೆ ಕೋವಿಡ್ ಇಂದ ಕೊನೆ ಉಸಿರು ಎಳೆಯುತ್ತಿದ್ದ ತಂದೆಯನ್ನು ಬದುಕಿರುವಾಗಲೇ ಒಮ್ಮೆಯಾದರೂ ನೋಡಿ ಬರಲು ಕೂಡ ಕೋರ್ಟುಗಳು ಜಾಮೀನು ನೀಡಲಿಲ್ಲ.

ಬಾಬು ಭಜರಂಗಿಗೆ ಒಂದು ಕಾನೂನು.., ನತಾಶಾ ನರ್ವಾಲ್ ಗೆ ಒಂದು ಕಾನೂನೇ… ಯುವರ್ ಆನರ್?

– 84 ವಯಸ್ಸಿನ, ಇತರರ ಸಹಾಯವಿಲ್ಲದೆ ನಡೆಯಲು ಆಗದ ಸ್ಟಾನ್ ಸ್ವಾಮಿಯವರಿಗೆ ಮೆಡಿಕಲ್ ಜಾಮೀನು ನೀಡಿದರೆ ದೇಶದ ಭದ್ರತೆಗೆ ಅಪಾಯ ಎಂಬ ಸರ್ಕಾರದ ವಾದವನ್ನು ಕಣ್ಣುಮುಚ್ಚಿ ಒಪ್ಪಿಕೊಂಡು ಸ್ವಾಮಿಯವರ ಹತ್ಯೆಗೆ ಕಾರಣವಾದ ನ್ಯಾಯಾಲಯ ಮತ್ತು ಸರ್ಕಾರ ರಕ್ಷಿಸುತ್ತಾ ಬಂದಿರುವುದು…

“ಯಾವ ಸಮುದಾಯದ ಯಾವ ಹಿತಾಸಕ್ತಿಯನ್ನು ರಕ್ಷಿಸಲು….ಯುವರ್ ಆನರ್?

ಯುವರ್ ಆನರ್,

ಈ ದೇಶದಲ್ಲಿ ಮೋದಿವಾದಿಗಳಿಗೆ ಒಂದು ಕಾನೂನು? ಜನವಾದಿಗಳಿಗೆ ಒಂದು ಕಾನೂನೇ? ….

ಸ್ಟಾನ್ ಸ್ವಾಮಿಯವರ ಈ ಸಾಂಸ್ಥಿಕ ಹತ್ಯೆಯಿಂದಲಾದರೂ ನ್ಯಾಯಾಂಗದ ಆತ್ಮಾವಲೋಕನ ಪ್ರಾರಂಭವಾಗುವುದೇ?

UAPA ಕಾಯಿದೆಯು ಸಂವಿಧಾನ ದ ಮೂಲರಚನೆಗೆ ವಿರುದ್ದವಾದದ್ದೆಂದು ಈಗಲಾದರೂ ನ್ಯಾಯಾಲಯ ಭಾವಿಸುವುದೇ?

ಸರ್ವಾಧಿಕಾರಿ ಸರ್ಕಾರದ ದಾಳಿಯಿಂದ ಸಂವಿಧಾನವನ್ನು ಉಳಿಸಲು ಪ್ರಯತ್ನವನ್ನಾದರೂ ಮಾಡಬಹುದೇ?

ಯುವರ್ ಆನರ್…..

  • ಶಿವಸುಂದರ್

(ಲೇಖಕರು ಖ್ಯಾತ ಚಿಂತಕರು, ಸಾಮಾಜಿಕ ಹೋರಾಟಗಾರರು. ಅಭಿಪ್ರಾಯಗಳು ವೈಯಕ್ತಿಕವಾದವು)


ಇದನ್ನೂ ಓದಿ: ಸ್ಟ್ಯಾನ್‌ ಸ್ವಾಮಿ ನಿಧನಕ್ಕೆ ಕಾರಣರಾದವರನ್ನು ಇತಿಹಾಸ ಕ್ಷಮಿಸುವುದಿಲ್ಲ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...