Homeಕರ್ನಾಟಕವಿದ್ಯುತ್ ದರ ಏರಿಕೆ: ಇಂದು ಕರ್ನಾಟಕ ಬಂದ್‌ಗೆ ವ್ಯಾಪಾರ, ಉದ್ಯಮ ಸಂಸ್ಥೆಗಳಿಂದ ಕರೆ; ಸಿಪಿಎಂ ಬೆಂಬಲ

ವಿದ್ಯುತ್ ದರ ಏರಿಕೆ: ಇಂದು ಕರ್ನಾಟಕ ಬಂದ್‌ಗೆ ವ್ಯಾಪಾರ, ಉದ್ಯಮ ಸಂಸ್ಥೆಗಳಿಂದ ಕರೆ; ಸಿಪಿಎಂ ಬೆಂಬಲ

- Advertisement -
- Advertisement -

ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಯಾಗಿದ್ದು, ಇದು ವ್ಯಾಪಾರಸ್ಥರಿಗೆ ಹೊರೆಯಾಗಿದೆ. ಹಾಗಾಗಿ ಈ ದರ ವಿರೋಧಿಸಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಇಂದು (ಜೂ.22)  ರಾಜ್ಯಾದ್ಯಂತ ಮುಷ್ಕರ ನಡೆಸುವುದಾಗಿ ಘೋಷಿಸಿತ್ತು. ಅದರಂತೆ ಎಲ್ಲಾ ವ್ಯಾಪಾರ ಮತ್ತು ಉದ್ಯಮ ಸಂಸ್ಥೆಗಳಿಗೆ ಗುರುವಾರ ಕರ್ನಾಟಕ ಬಂದ್ ​ಗೆ ಕರೆ ಕೊಡಲಾಗಿದೆ. ಈ ಕರ್ನಾಟಕ ಬಂದ್‌ಗೆ ಸಿಪಿಎಂ ಕೂಡ ಬೆಂಬಲ ನೀಡಿದೆ.

ಕರ್ನಾಟಕ ಬಂದ್​ ಕುರಿತು ಕೆಸಿಸಿಐ ಅಧ್ಯಕ್ಷ ವಿನಯ್ ಜವಳಿ ಮಾತನಾಡಿ, ”ಬಂದ್ ಕರೆ ಕೇವಲ ವ್ಯಾಪಾರ ಸಂಸ್ಥೆಗಳಿಗೆ ಮತ್ತು ಸ್ವಯಂಪ್ರೇರಿತವಾಗಿದೆ. ಅಗತ್ಯ ಸೇವೆಗಳಿಗೆ, ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಒಂದು ದಿನದ ಬಂದ್‌ನಿಂದ ವ್ಯಾಪಾರ ಸಂಸ್ಥೆಗಳು ನಷ್ಟವನ್ನು ಅನುಭವಿಸುತ್ತವೆ. ಆದರೆ, ವಿದ್ಯುತ್ ದರದ ಹೆಚ್ಚಳದಿಂದ ಮುಂದೆ ಕೈಗಾರಿಕೆಗಳು ಉಳಿಯುವುದಿಲ್ಲ” ಎಂದು ಹೇಳಿದರು.

”ವಿದ್ಯುತ್ ಶುಲ್ಕದಲ್ಲಿ ಅಸಹಜ ಬೆಲೆ ಏರಿಕೆಯನ್ನು ಖಂಡಿಸಿ, ಇಂದು ಎಲ್ಲಾ ವ್ಯಾಪಾರ ಮತ್ತು ಕೈಗಾರಿಕೆಗಳು ಮುಚ್ಚಲು ನಾವು ವಿನಂತಿಸಿದ್ದೇವೆ. ಕಳೆದ ಎಂಟು ದಿನಗಳಿಂದ ನಾವು ಇದರ ಅನಾನುಕೂಲತೆಯ ಗಂಭೀರತೆಯನ್ನು ತಿಳಿಸಲು ಪ್ರಯತ್ನಿಸಿದ್ದೇವೆ. ಇನ್ನು ವಿದ್ಯುತ್ ಶುಲ್ಕದಲ್ಲಿ ಹೆಚ್ಚಳ ಆದರೂ ಅಧಿಕಾರಿಗಳು ಅಥವಾ ಸರ್ಕಾರದ ಪ್ರತಿನಿಧಿಗಳಿಂದ ಯಾವುದೇ ಪರಿಹಾರ ದೊರೆಯುತ್ತಿಲ್ಲ” ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಶನಿವಾರ ಹೇಳಿದೆ.

ಇಂದು ರಾಜ್ಯದ ಗದಗ, ಬಿಜಾಪುರ, ರಾಣೆಬೆನ್ನೂರು, ರಾಯಚೂರು, ತಾಳಿಕೋಟಿ, ವಿಜಯನಗರ, ಮೈಸೂರು, ದಾವಣಗೆರೆ, ಕೊಪ್ಪಳ, ಬಾಗಲಕೋಟೆ, ಧಾರವಾಡ, ಶಿರಸಿ, ಕಾರವಾರ, ಬೀದರ್, ಶಿವಮೊಗ್ಗ, ಕೋಲಾರ, ಮಂಡ್ಯ, ಚಿಕ್ಕಮಂಗಳೂರು, ಯಾದಗಿರಿ, ಚಿತ್ರದುರ್ಗ, ಕಲ್ಯಾಣ್ ಕಾಮತಕ, ಹಾವೇರಿ, ಕಾಮತಕ ಜಿಲ್ಲಾ ಚೇಂಬರ್‌ಗಳು ಮತ್ತು ಇತರೆ ಉದ್ಯಮ ಸಂಘಗಳು ಬಂದ್‌ನಲ್ಲಿ ಪಾಲ್ಗೊಳ್ಳಲಿವೆ.

ಇದನ್ನೂ ಓದಿ: ಬೊಮ್ಮಾಯಿ ಸರ್ಕಾರದ ವಿದ್ಯುತ್ ಬೆಲೆ ಏರಿಕೆ ಆದೇಶ ವಾಪಸ್ ಪಡೆಯಿರಿ: ಸಿಎಂಗೆ ಶಾಸಕ ತನ್ವೀರ್ ಸೇಠ್ ಪತ್ರ

ಏನಿದು ಸಮಸ್ಯೆ?

ಮೇ 12 ರಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ತನ್ನ ಸುಂಕದ ಆದೇಶದಲ್ಲಿ ಶುಲ್ಕವನ್ನು ಪ್ರತಿ ಯೂನಿಟ್‌ಗೆ 70 ಪೈಸೆ ಹೆಚ್ಚಳಕ್ಕೆ ಅನುಮೋದಿಸಿದೆ. ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವುದಾಗಿ ತಮ್ಮ ಚುನಾವಣಾ ಭರವಸೆಯನ್ನು ಈಡೇರಿಸಲು, ಕಾಂಗ್ರೆಸ್ ಸರ್ಕಾರ ಹೊಸ ದರವನ್ನು ಹೆಚ್ಚಿಸಿದೆ ಎಂದು ಬಿಜೆಪಿ ಆರೋಪಿಸಿತ್ತು. ಇದು ರಾಜಕೀಯ ಗದ್ದಲಕ್ಕೆ ಕಾರಣವಾಗಿದೆ.

ಈ ತಿಂಗಳಿನಲ್ಲಿ ರಾಜ್ಯದ ಸಾಕಷ್ಟು ಜನರಿಗೆ ವಿಪರೀತ ಬಿಲ್ ಬಂದಿದೆ. ಈ ಕುರಿತು ಅದು ಕೆಲವು ದೋಷದಿಂದಾಗಿದೆ ಎಂದು ಬೆಸ್ಕಾಂ (ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್) ತಿಳಿಸಿತ್ತು.

”ಸರಾಸರಿ ವಿದ್ಯುತ್ ಬಳಕೆ ಮತ್ತು ಶೇಕಡ10 ರಷ್ಟು 200 ಯೂನಿಟ್‌ಗಳಿಗಿಂತ ಕಡಿಮೆಯಿದ್ದರೆ, ಅದಕ್ಕೆ ಸಬ್ಸಿಡಿ ನೀಡಲಾಗುತ್ತದೆ. ಅದಕ್ಕಿಂತ ಹೆಚ್ಚಿನದನ್ನು ಪಾವತಿಸಬೇಕಾಗುತ್ತದೆ. ನಿಗದಿಪಡಿಸಿದ ಘಟಕಗಳಿಗಿಂತ ಹೆಚ್ಚು ಬಳಸುವ ಗ್ರಾಹಕರು ಬಳಸಿದ ಹೆಚ್ಚುವರಿ ಘಟಕಗಳಿಗೆ ಪಾವತಿಸಬೇಕಾಗುತ್ತದೆ. 9 ಶೇಕಡ ತೆರಿಗೆಯನ್ನು ಇದರಲ್ಲಿ ಸೇರಿಸಲಾಗುವುದು ಎಂದು ಕರ್ನಾಟಕ ವಿದ್ಯುತ್ ಸಚಿವ ಕೆಜೆ ಜಾರ್ಜ್ ಹೇಳಿದ್ದರು.

ವಿದ್ಯುತ್‌ ದರ ಹೆಚ್ಚಳದಿಂದ ಬಿಲ್ ವಿಳಂಬ: ಬೆಸ್ಕಾಂ ಅಧಿಕಾರಿಗಳ ಸ್ಪಷ್ಟನೆ

ಕಳೆದ ತಿಂಗಳ ವಿದ್ಯುತ್ ಬಿಲ್ 1-15ನೇ ತಾರೀಖಿನೊಳಗೆ ಗ್ರಾಹಕರ ಕೈ ಸೇರಬೇಕಿತ್ತು. ಆದರೆ ಈ ವರೆಗೂ ವಿದ್ಯುತ್ ಬಿಲ್ ನೀಡಲಾಗಿಲ್ಲ. ಈ ಬಗ್ಗೆ ಜನಸಾಮಾನ್ಯರಲ್ಲಿ ಗೊಂದಲ ಮೂಡಿತ್ತು. ಇದೀಗ ಬೆಸ್ಕಾಂ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

”ವಿದ್ಯುತ್‌ ದರ ಹೆಚ್ಚಳ, ಗೃಹ ಜ್ಯೋತಿ ಯೋಜನೆ ಅನುಷ್ಠಾನ ಪ್ರಕ್ರಿಯೆಯಿಂದ ಮೀಟರ್ ರೀಡಿಂಗ್ ಐದು ದಿನ ತಡವಾಗಿದೆ. ಫ್ಲ್ಯಾಬ್‌ಗಳ ಬದಲಾವಣೆ, ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ (ಎಫ್‌ಪಿಪಿಸಿಎ) ಶುಲ್ಕ ಹೆಚ್ಚಳದಿಂದ ಜೂನ್ ತಿಂಗಳ ಬಿಲ್‌ನಲ್ಲಿ ವ್ಯತ್ಯಾಸವಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

”ಬುಧವಾರ ಸಂಜೆಯೊಳಗೆ ಎಲ್ಲ ತಾಂತ್ರಿಕ ಸಮಸ್ಯೆ ಬಗೆಹರಿದಿದೆ. ಇನ್ನು ಮುಂದೆ ಮುದ್ರಣ ಮತ್ತು ಆನ್‌ಲೈನ್ ಬಿಲ್‌ನಲ್ಲಿ ವ್ಯತ್ಯಾಸ ಕಾಣಿಸುವುದಿಲ್ಲ. ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲಾಗಿದ್ದು, ಎರಡೂ ಒಂದೇ ರೀತಿಯಲ್ಲಿರುತ್ತವೆ” ಎಂದು ಅವರು ಹೇಳಿದರು.

”ಸಾಮಾನ್ಯವಾಗಿ ಪ್ರತಿ ತಿಂಗಳು 1ರಿಂದ 15ರವರೆಗೆ ಮೀಟರ್ ರೀಡಿಂಗ್ ಮಾಡಲಾಗುತ್ತದೆ. ಆದರೆ, ಗೃಹ ಜ್ಯೋತಿ ಯೋಜನೆ ಕುರಿತು ಈ ತಿಂಗಳ 5ರಂದು ಸರ್ಕಾರ ಆದೇಶ ಹೊರಡಿಸಿದ ಬಳಿಕ 6ನೇ ತಾರೀಕಿನಿಂದ ಮೀಟ‌ರ್ ರೀಡಿಂಗ್ ಕೈಗೊಳ್ಳಲಾಯಿತು. ಹೀಗಾಗಿ, ವಿಳಂಬವಾಗಿದೆ. ಈ ಐದು ದಿನಗಳ ಮೀಟರ್ ರೀಡಿಂಗ್ ಸಹ ಪಡೆದುಕೊಂಡಿದ್ದರಿಂದ ಬಿಲ್ ಮೊತ್ತದಲ್ಲಿ ಹೆಚ್ಚಳವಾಯಿತು. ಮುಂದಿನ ತಿಂಗಳ ಬಿಲ್‌ನಲ್ಲಿ ಐದು ದಿನಗಳ ಇಂಧನ ಬಳಕೆ ಶುಲ್ಕ ಕಡಿಮೆಯಾಗಲಿದೆ” ಎಂದು ಅಧಿಕಾರಿಗಳು ವಿವರಿಸಿದ್ದಾರೆ.

”ಮೇ 12ರಂದು ಪ್ರತಿ ಯೂನಿಟ್‌ಗೆ 70 ಪೈಸೆಯಷ್ಟು ವಿದ್ಯುತ್ ದರ ಹೆಚ್ಚಿಸಿ ಆದೇಶ ನೀಡಿದ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಏಪ್ರಿಲ್‌ನಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಲು ಸೂಚಿಸಿತು. ಕೆಇಆರ್‌ಸಿ ನಿರ್ದೇಶನದಂತೆ ಇದೇ ಸಂದರ್ಭದಲ್ಲಿ 4 ಸ್ಪ್ಯಾಬ್‌ಗಳ ಬದಲಾಗಿ ಕೇವಲ ಎರಡು ಸ್ಪ್ಯಾಬ್‌ಗಳನ್ನು ಮಾತ್ರ ಉಳಿಸಿಕೊಳ್ಳಲಾಯಿತು. ನಂತರ ಇಂಧನ ಹೊಂದಾಣಿಕೆ ದರ ಹೆಚ್ಚಿಸಲಾಯಿತು. ಇದರಿಂದಾಗಿ, ದರ ಹೆಚ್ಚಳದ ಬಾಕಿಯನ್ನು ಏಪ್ರಿಲ್, ಮೇ ತಿಂಗಳಿಂದಲೇ ಗ್ರಾಹಕರಿಂದ ವಸೂಲಿ ಮಾಡಿದ್ದರಿಂದ ಬಿಲ್ ಮೊತ್ತದಲ್ಲಿ ಹೆಚ್ಚಳವಾಯಿತು. ಜತೆಗೆ, ಈ ಎಲ್ಲ ಹೊಸ ಬದಲಾವಣೆಗಳನ್ನು ತಂತ್ರಾಂಶದಲ್ಲಿ ಅಳವಡಿಸಲು ಕಾಲಾವಕಾಶ ಬೇಕಾಗಿದ್ದರಿಂದ ಬಿಲ್‌ ನೀಡುವುದು ವಿಳಂಬವಾಯಿತು” ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಬಿಜೆಪಿ ಮಾತ್ರ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದೆ ಎಂಬ ಮೋದಿ...

0
ಮೇ 1, 2024 ರಂದು ಗುಜರಾತ್‌ನ ಬನಸ್ಕಾಂತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, "ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದ ಏಕೈಕ ಪಕ್ಷ ಬಿಜೆಪಿ"...