Homeಮುಖಪುಟಮಣಿಪುರ ಹಿಂಸಾಚಾರವು ಭಾರತದ ಆತ್ಮಸಾಕ್ಷಿಗಾದ ಆಳವಾದ ಗಾಯ: ಸೋನಿಯಾ ಗಾಂಧಿ

ಮಣಿಪುರ ಹಿಂಸಾಚಾರವು ಭಾರತದ ಆತ್ಮಸಾಕ್ಷಿಗಾದ ಆಳವಾದ ಗಾಯ: ಸೋನಿಯಾ ಗಾಂಧಿ

- Advertisement -
- Advertisement -

ಮಣಿಪುರದಲ್ಲಿ ಶಾಂತಿ ಕಾಪಾಡುವಂತೆ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬುಧವಾರ ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ಮಣಿಪುರದ ಜನರು ನಂಬಿಕೆಯನ್ನು ಮರಳಿ ಪಡೆದು ಪುಟಿದೇಳಬೇಕು ಎಂದು ಮಣಿಪುರದ ಜನತೆಗೆ ಮನವಿ ಮಾಡಿದ್ದಾರೆ.

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು 2.5 ನಿಮಿಷಗಳ ವಿಡಿಯೊ ಸಂದೇಶದಲ್ಲಿ ”ಒಬ್ಬ ತಾಯಿಯಾಗಿ ನಾನು ನಿಮ್ಮ ನೋವನ್ನು ಅರ್ಥಮಾಡಿಕೊಂಡಿದ್ದು, ಶಾಂತಿ ಸೌಹಾರ್ದತೆಗೆ ದಾರಿ ಮಾಡಿಕೊಡುವಂತೆ ಮನವಿ ಮಾಡುತ್ತೇನೆ” ಎಂದು ಹೇಳಿದ್ದಾರೆ.

”ಮಣಿಪುರದ ಇತಿಹಾಸವು ಎಲ್ಲಾ ಜನಾಂಗಗಳು, ಧರ್ಮಗಳು ಮತ್ತು ಹಿನ್ನೆಲೆಗಳ ಜನರನ್ನು ಅಪ್ಪಿಕೊಳ್ಳುವ ಸಾಮರ್ಥ್ಯ ಮತ್ತು ವೈವಿಧ್ಯಮಯ ಸಮಾಜದ ಅಸಂಖ್ಯಾತ ಸಾಧ್ಯತೆಗಳಿಗೆ ಸಾಕ್ಷಿಯಾಗಿದೆ. ಭ್ರಾತೃತ್ವದ ಮನೋಭಾವವನ್ನು ಪೋಷಿಸಲು ಅಪಾರವಾದ ನಂಬಿಕೆ ಬೇಕು. ಆದರೆ ದ್ವೇಷ ಮತ್ತು ವಿಭಜನೆಯ ಬೆಂಕಿ ಉಂಟುಮಾಡಲು ಒಂದೇ ತಪ್ಪು ಹೆಜ್ಜೆ ಸಾಕು” ಎಂದಿದ್ದಾರೆ.

”ಇಂದು, ನಾವು ಪ್ರಮುಖ ಕವಲುದಾರಿಯಲ್ಲಿದ್ದೇವೆ. ಪರಿಸ್ಥಿತಿ ಸುಧಾರಿಸುವ ಹಾದಿಯನ್ನು ಪ್ರಾರಂಭಿಸುವ ನಮ್ಮ ಆಯ್ಕೆಯು ನಮ್ಮ ಮಕ್ಕಳು ಆನುವಂಶಿಕವಾಗಿ ಪಡೆಯುವ ರೀತಿಯ ಭವಿಷ್ಯವನ್ನು ರೂಪಿಸುತ್ತದೆ. ನಾನು ಮಣಿಪುರದ ಜನರಿಗೆ, ವಿಶೇಷವಾಗಿ ನನ್ನ ಧೈರ್ಯಶಾಲಿ ಸಹೋದರಿಯರಲ್ಲಿ ಈ ಸುಂದರ ಭೂಮಿಗೆ ಸಾಮರಸ್ಯ ಮತ್ತು ಶಾಂತಿಯನ್ನು ತರಲು ದಾರಿ ಮಾಡಿಕೊಡುವಂತೆ ಮನವಿ ಮಾಡುತ್ತೇನೆ” ಎಂದು ಹೇಳಿದರು.

”ಮುಂಬರುವ ವಾರಗಳು ಮತ್ತು ತಿಂಗಳುಗಳಲ್ಲಿ, ನಾವು ನಂಬಿಕೆಯನ್ನು ಪುನರ್ನಿರ್ಮಿಸುವ ದೀರ್ಘ ಪ್ರಯಾಣವನ್ನು ಪ್ರಾರಂಭಿಸುತ್ತೇವೆ .ಈ ಪ್ರಯೋಗದಿಂದ ಮತ್ತೆ ಎದ್ದು ನಿಲ್ಲುತ್ತೇವೆ ಎಂಬುದು ನನ್ನ ಪ್ರಾಮಾಣಿಕ ಆಶಯವಾಗಿದೆ. ಮಣಿಪುರದ ಜನರಲ್ಲಿ ನನಗೆ ಅಪಾರ ಭರವಸೆ ಮತ್ತು ನಂಬಿಕೆ ಇದೆ. ನಾವು ಜತೆಯಾಗಿ ಈ ಅಗ್ನಿಪರೀಕ್ಷೆಯನ್ನು ಜಯಿಸುತ್ತೇವೆ” ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

”ಮಣಿಪುರದಲ್ಲಿ ಜನರ ಜೀವನವನ್ನು ಧ್ವಂಸಗೊಳಿಸಿದ ಈ ಹಿಂಸಾಚಾರವು ನಮ್ಮ ರಾಷ್ಟ್ರದ ಆತ್ಮಸಾಕ್ಷಿಗಾದ ಆಳವಾದ ಗಾಯವಾಗಿದೆ. ಅಸಂಖ್ಯಾತ ಜನರು ತಮ್ಮ ಮನೆಗಳಿಂದಲೇ ಪಲಾಯನ ಮಾಡಲು ಒತ್ತಾಯಿಸುವುದನ್ನು ನೋಡಿ ನನಗೆ ತುಂಬಾ ದುಃಖವಾಗಿದೆ” ಎಂದರು.

ಮಣಿಪುರದಲ್ಲಿ ಬಿಜೆಪಿ ವಿಭಜಕ ರಾಜಕೀಯ ನಡೆಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದ್ದು ಈಶಾನ್ಯ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ರಾಜ್ಯ ಮತ್ತು ಕೇಂದ್ರದ ಸರ್ಕಾರಗಳು ತಮ್ಮ ಕರ್ತವ್ಯದಲ್ಲಿ ವಿಫಲವಾಗಿವೆ ಎಂದಿದೆ.

ಅಂದ ಹಾಗೆ ಮಣಿಪುರ ಹಿಂಸಾಚಾರ ಬಗ್ಗೆ ಕಾಂಗ್ರೆಸ್ ಬುಧವಾರ ಹೆಚ್ಚು ದನಿಯೆತ್ತಿರುವುದು ಕಾಣುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮಣಿಪುರ ಹಿಂಸಾಚಾರವನ್ನು ಕಡೆಗಣಿಸಿ ಅಮೆರಿಕ ಪ್ರವಾಸಕ್ಕೆ ಹೋಗಿದ್ದಾರೆ ಎಂದು ವಿಪಕ್ಷಗಳು ವಾಗ್ದಾಳಿ ನಡೆಸಿವೆ. ಮೋದಿ ಅಮೆರಿಕ ಭೇಟಿ ಬಗ್ಗೆ ವಿದೇಶಿ ಮಾಧ್ಯಮಗಳು ಕೂಡಾ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದರಿಂದ ಮೋದಿಗೆ ನೀಡಿರುವ ಗಮನವನ್ನು ಕಡಿಮೆ ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿರುವಂತೆ ಕಾಣುತ್ತದೆ.

ಇದನ್ನೂ ಓದಿ: ಹಿಂಸಾಚಾರದಿಂದ ನಲುಗಿದ ಮಣಿಪುರ; ಅಸಡ್ಡೆಯ ಮೌನ ತಾಳಿರುವ ಪ್ರಧಾನಿ ಮೋದಿ: ವಿಪಕ್ಷಗಳ ಆರೋಪ

ಕೊನೆಗೂ ಸರ್ವಪಕ್ಷಗಳ ಸಭೆ ಕರೆದ ಕೇಂದ್ರ ಗೃಹ ಸಚಿವ ಅಮಿತ್ ಶಾ

ಈ ಹಿಂಸಾಚಾರದಿಂದ ಮಣಿಪುರ ನಲುಗಿಹೋದರೂ ಪ್ರಧಾನಿ ನರೇಂದ್ರ ಮೋದಿ ಅವರು ಅಸಡ್ಡೆಯಿಂದ ಕೂಡಿದ ಮೌನ ತಾಳಿದ್ದಾರೆ ಎಂದು ವಿಪಕ್ಷಗಳು ವಾಗ್ದಾಳಿ ನಡೆಸಿದ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಮಣಿಪುರದ ಸದ್ಯದ ಸ್ಥಿತಿಗತಿ ಬಗ್ಗೆ ಚರ್ಚಿಸಿ ಪರಿಹಾರ ಹುಡುಕಲು ಜೂನ್ 24ರಂದು ಸರ್ವಪಕ್ಷಗಳ ಸಭೆ ಕರೆದಿದ್ದಾರೆ.

ದೆಹಲಿಯಲ್ಲಿ ಜೂನ್ 24ರ ಮಧ್ಯಾಹ್ನ 3ಗಂಟೆಗೆ ಸಭೆ ನಡೆಯಲಿದೆ ಎಂದು ಗೃಹ ಸಚಿವಾಲಯದ ವಕ್ತಾರರು ಟ್ವಿಟ್ ಮಾಡಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ಈ ಪ್ರಕಟಣೆ ಹೊರಬಿದ್ದಿದೆ.

ಮುಂದುವರೆದ ಹಿಂಸಾಚಾರ:

ಮಣಿಪುರ ಪೂರ್ವ ಭಾಗದ ತಂಗ್ಲಿಂಗ್, ಕಾಂಗ್ಟುಪ್ ಭಾಗಕ್ಕೆ ಸೇರಿದ ಗೆಲ್ಲಾಂಗ್ ಮತ್ತು ಸಿಂಗ್ಲಾ ಹಳ್ಳಿಗಳಲ್ಲಿ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಮಂಗಳವಾರ ಮಧ್ಯರಾತ್ರಿ ಮತ್ತೆ ಗುಂಡಿನ ದಾಳಿ ನಡೆಸಿದ್ದಾರೆ. ಅಸ್ಸಾಂ ರೈಫಲ್ಸ್ ಪಡೆಯ ಯೋಧರು ಘಟನಾ ಸ್ಥಳಕ್ಕೆ ತೆರಳಿದ್ದು, ಅನಾಹುತಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಿಷ್ಣುಪುರ ಜಿಲ್ಲೆಯ ಕ್ವಾಕ್ಕಾ ಪಟ್ಟಣದ ಮೋರಿ ಯೊಂದರ ಬಳಿ ನಿಲ್ಲಿಸಿದ್ದ ಕಾರಿನಲ್ಲಿದ್ದ ಬಾಂಬ್ ಸ್ಫೋಟಗೊಂಡು ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಬಿಜೆಪಿ ಮಾತ್ರ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದೆ ಎಂಬ ಮೋದಿ...

0
ಮೇ 1, 2024 ರಂದು ಗುಜರಾತ್‌ನ ಬನಸ್ಕಾಂತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, "ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದ ಏಕೈಕ ಪಕ್ಷ ಬಿಜೆಪಿ"...