Homeಮುಖಪುಟಹಿಂಸಾಚಾರದಿಂದ ನಲುಗಿದ ಮಣಿಪುರ; ಅಸಡ್ಡೆಯ ಮೌನ ತಾಳಿರುವ ಪ್ರಧಾನಿ ಮೋದಿ: ವಿಪಕ್ಷಗಳ ಆರೋಪ

ಹಿಂಸಾಚಾರದಿಂದ ನಲುಗಿದ ಮಣಿಪುರ; ಅಸಡ್ಡೆಯ ಮೌನ ತಾಳಿರುವ ಪ್ರಧಾನಿ ಮೋದಿ: ವಿಪಕ್ಷಗಳ ಆರೋಪ

- Advertisement -
- Advertisement -

ಮಣಿಪುರದಲ್ಲಿ ಕಳೆದ ಹಲವು ದಿನಗಳಿಂದ ಹಿಂಸಾಚಾರ, ಜನರ ಸಾವು-ನೋವಿನಿಂದ ನಲುಗಿಹೋಗಿದೆ. ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ, ಸಾವಿರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಈವರೆಗೂ ಈ ಬಗ್ಗೆ ಪ್ರಧಾನಿ ಮೋದಿ ಮಾತ್ರ ಒಂದೇ ಒಂದು ಮಾತು ಆಡಿಲ್ಲ, ಅಸಡ್ಡೆಯಿಂದ ಕೂಡಿದ ಮೌನ ತಾಳಿದ್ದಾರೆ. ಇದು ಮಣಿಪುರದ ಜನರ ಬಗ್ಗೆ ಮೋದಿ ಅವರಲ್ಲಿರುವ ಉದಾಸೀನತೆಯನ್ನು ಸ್ಪಷ್ಟವಾಗಿ ಹೇಳುತ್ತದೆ.. ಎಂದು 10 ವಿರೋಧ ಪಕ್ಷಗಳ ನಾಯಕರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆರೋಪ ಮಾಡಿದ್ದಾರೆ.

ಈ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಣಿಪುರ ಮಾಜಿ ಮುಖ್ಯಮಂತ್ರಿ ಇಬೋಬಿ ಸಿಂಗ್ ನವದೆಹಲಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಈ ಹಿಂಸಾಚಾರ ಕುರಿತ ಮನವಿ ಪತ್ರವನ್ನು ವಿರೋಧ ಪಕ್ಷಗಳ ನಾಯಕರು ಮಂಗಳವಾರ ಬಿಡುಗಡೆ ಮಾಡಿದರು. ಕಾಂಗ್ರೆಸ್, ಎಎಪಿ, ಟಿಎಂಸಿ, ಜೆಡಿಯು, ಸಿಪಿಎಂ, ಸಿಪಿಐ, ಶಿವಸೇನಾ (ಯುಬಿಟಿ), ಎನ್‌ಸಿಪಿ, ಆರ್‌ಎಸ್‌ಪಿ ಹಾಗೂ ಫಾರ್ವಡ್್ರ ಬ್ಲಾಕ್ ನಾಯಕರು ಈ ಮನವಿಪತ್ರಕ್ಕೆ ಸಹಿ ಹಾಕಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ”ಮಣಿಪುರದಲ್ಲಿನ ಹಿಂಸಾಚಾರ ಕುರಿತ ಈ ಮನವಿಪತ್ರವನ್ನು ಅಮೆರಿಕ ಮತ್ತು ಈಜಿಪ್ಟ್ ಪ್ರವಾಸಕ್ಕೆ ತೆರಳುವ ಮುನ್ನವೇ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಲು ಮುಂದಾಗಿದ್ದೆವು. ಆದರೆ, ಪ್ರಧಾನಿಯ ಭೇಟಿಗೆ ಅವಕಾಶ ನೀಡದ ಕಾರಣ ಈ ಮನವಿಪತ್ರವನ್ನು ಬಿಡುಗಡೆ ಮಾಡಿದ್ದೇವೆ” ಎಂದು ಹೇಳಿದರು.

”ಪ್ರಧಾನಿ ಅವರನ್ನು ಭೇಟಿ ಮಾಡುವುದಕ್ಕಾಗಿ ನಾವು ಜೂನ್ 10ರಿಂದ ಕಾಯುತ್ತಿದ್ದೆವು. ತಮ್ಮನ್ನು ಭೇಟಿ ಮಾಡಲು ಅವರು 10 ನಿಮಿಷ ಸಮಯ ಕೊಡಬಹುದು ಎಂಬ ನಿರೀಕ್ಷೆ ಹೊಂದಿದ್ದೆವು. ಆದರೆ ಅವರು ನಮಗೆ ಅವಕಾಶ ನೀಡಲಿಲ್ಲ. ನಾವು ಸಣ್ಣ ರಾಜ್ಯಕ್ಕೆ ಸೇರಿದವರಾಗಿದ್ದು, ಏನೋ ಬೇಡಲು ಬಂದಿದ್ದಾರೆ ಎಂದು ಅವರು ಭಾವಿಸಿದ್ದಿರಬಹುದು. ಆದರೆ, ನಾವು ಭಿಕ್ಷುಕರಲ್ಲ. ಏನನ್ನೋ ಬೇಡುವುದಕ್ಕಾಗಿ ನಾವು ಇಲ್ಲಿಗೆ ಬಂದಿಲ್ಲ” ಎಂದು ಸಿಂಗ್ ಹೇಳಿದರು.

”ಮಣಿಪುರವನ್ನು ಭಾರತದ ಒಂದು ಭಾಗ ಎಂಬುದಾಗಿ ಅವರು ತಿಳಿದುಕೊಂಡಿದ್ದರೆ, ಆ ರಾಜ್ಯದಲ್ಲಿನ ಹಿಂಸಾಚಾರವನ್ನು ರಾಷ್ಟ್ರೀಯ ಸಮಸ್ಯೆ ಎಂಬುದಾಗಿ ಪರಿಗಣಿಸಬೇಕು” ಎಂದು ಆಗ್ರಹಿಸಿದರು.

‘ಮೇ 3ರಿಂದ ಮಣಿಪುರ ಹೊತ್ತಿ ಉರಿಯುತ್ತಿದೆ. ಹಿಂಸಾಚಾರ ತಡೆಗಟ್ಟುವಲ್ಲಿ ಡಬಲ್ ಎಂಜಿನ್ ಸರ್ಕಾರ ಅಸಮರ್ಥ ಎಂಬುದನ್ನು ಇದು ತೋರಿಸುತ್ತದೆ. ಮಾಹಿತಿ ಕೊರತೆಯೇ ಹಿಂಸಾಚಾರಕ್ಕೆ ಕಾರಣ ಎಂಬುದನ್ನು ಮುಖ್ಯಮಂತ್ರಿ ಎನ್.ಬಿರೇನ್‌ ಸಿಂಗ್‌ ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಹೀಗಾಗಿ ಈ ವಿಷಯವಾಗಿ ಮೋದಿ ನೇತೃತ್ವದ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದರು.

ಮಣಿಪುರದಲ್ಲಿನ ಈ ಹಿಂಸಾಚಾರಕ್ಕೆ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರೇ ಕಾರಣರಾಗಿದ್ದಾರೆ. ಅವರು ಮನಬಂದಂತೆ ತೆಗೆದುಕೊಂಡ ಕ್ರಮಗಳಿಂದಾಗಿ ರಾಜ್ಯವೇ ಹೊತ್ತಿ ಉರಿಯುತ್ತಿದೆ ಎಂದು ಇಬೋಬಿ ಸಿಂಗ್ ಆರೋಪಿಸಿದರು.

ಇದನ್ನೂ ಓದಿ: ಪ್ರಧಾನಿಯ ‘ಮನ್ ಕಿ ಬಾತ್‌’ನಲ್ಲಿ ಮಣಿಪುರ ಹಿಂಸಾಚಾರದ ಮಾತೇ ಇರಲಿಲ್ಲ: ಕಾಂಗ್ರೆಸ್ ಖಂಡನೆ

ಮನವಿ ಪತ್ರದಲ್ಲಿ ಏನಿದೆ?

* ಕುಕಿ ಬುಡಕಟ್ಟು ಸಮುದಾಯಕ್ಕೆ ಪ್ರತ್ಯೇಕ ಆಡಳಿತ ವ್ಯವಸ್ಥೆ ಕಲ್ಪಿಸಬೇಕು ಎಂಬ 10 ಮಂದಿ ಕುಕಿ ಶಾಸಕರ ಬೇಡಿಕೆಗೆ ವಿರೋಧ.

* ಮಣಿಪುರದ ಪ್ರತಿಯೊಂದು ಸಮುದಾಯದ ಅಹವಾಲು ಆಲಿಸಿ, ಪರಿಹಾರ ನೀಡಬೇಕು.

* ತಕ್ಷಣವೇ ಎಲ್ಲ ಸಶಸ್ತ್ರ ಗುಂಪುಗಳು ಆಯುಧಗಳನ್ನು ತೊರೆಯುವಂತೆ ಕ್ರಮ ತೆಗೆದುಕೊಳ್ಳಬೇಕು.

* ಈಗ ಘೋಷಿಸಿರುವ 101.75 ಕೋಟಿ ರೂ. ಮೊತ್ತದ ಪ್ಯಾಕೇಜ್ ಸಾಕಾಗುವುದಿಲ್ಲ. ಸಂತ್ರಸ್ತರ ಪುನರ್ವಸತಿ ಮತ್ತು ಜೀವನೋಪಾಯಕ್ಕಾಗಿ ಸೂಕ್ತ ಪ್ಯಾಕೇಜ್‌ ಘೋಷಿಸಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...