Homeಕರ್ನಾಟಕಎಲೆಮರೆ 1: ಗಡಿನಾಡಲ್ಲಿ ಹರ್ಷಿಯಾ ಬಾನುವಿನ ಕನ್ನಡ ಕಲರವ..

ಎಲೆಮರೆ 1: ಗಡಿನಾಡಲ್ಲಿ ಹರ್ಷಿಯಾ ಬಾನುವಿನ ಕನ್ನಡ ಕಲರವ..

- Advertisement -
- Advertisement -

ಆರೋಗ್ಯಕರವಾಗಿ ಚಿಂತಿಸುವ, ಬರೆವ, ಜೀವಪರ ಆಶಯಗಳನ್ನಿಟ್ಟುಕೊಂಡು ಬದ್ಧತೆಯಿಂದ ದುಡಿಯುವ ಎಲೆಮರೆಯ ವ್ಯಕ್ತಿಗಳನ್ನು ಗುರುತಿಸುವ ಮತ್ತು ಹೊಸ ತಲೆಮಾರಿಗೆ ಪ್ರೇರಕವಾಗುವಂತಹ ಮಾದರಿಗಳನ್ನು ಪರಿಚಯಿಸುವ ಸಣ್ಣ ಪ್ರಯತ್ನ `ಎಲೆಮರೆ’. ಇಲ್ಲಿ ಸಾಹಿತಿಗಳು, ಚಳವಳಿಗಾರರು, ಪತ್ರಕರ್ತರು, ಪ್ರಗತಿಪರ ಯುವ ರೈತರು, ಸಾರ್ವಜನಿಕ ಸೇವೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ನೌಕರರು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸದ್ದಿಲ್ಲದೇ ಕೆಲಸ ಮಾಡುತ್ತಿರುವ ಬೆಳಕಿಗೆ ಬಾರದ ಎಲ್ಲ ವಯೋಮಾನದವರನ್ನು ಒಳಗೊಳ್ಳಲಾಗುವುದು. ಎಲೆಮರೆಯಲ್ಲಿರುವ ಹಲವರನ್ನು ಪರಿಚಯಿಸಲು ಸಂಶೋಧಕರಾದ ಅರುಣ್ ಜೋಳದಕೂಡ್ಲಿಗಿಯವರ ಜೊತೆಗೆ ರಾಜ್ಯದ ವಿವಿಧ ಭಾಗಗಳ ಸ್ನೇಹಿತರು ಕೈಜೋಡಿಸಲಿದ್ದಾರೆ.

ಫೇಸ್‍ಬುಕ್‍ನಲ್ಲಿ ಕಳೆದ ಐದಾರು ವರ್ಷದಿಂದ ಸೂಕ್ಷ್ಮವಾಗಿ ಗಮನಿಸುವ ಪ್ರೊಫೈಲುಗಳಲ್ಲಿ ಹರ್ಷಿಯಾ ಬಾನುಳ ಪೇಜ್ ಕೂಡ ಒಂದು. ಕಣ್ಣಗೊಂಬೆಗಳು ಮೇಲೆ ಸರಿದ ಹರ್ಷಿಯಾ ಡಿಪಿ ನೋಡಿದಾಗಲೆಲ್ಲಾ ಇವರು ಹೇಗೆ ಫೇಸ್‍ಬುಕ್ ಬಳಸಬಹುದು ಎಂದುಕೊಂಡೆ. ನಂತರ ಟೀಚರ್ ಎನ್ನುವುದು ತಿಳಿದಾಗಲೂ ಹರ್ಷಿಯಾ ಹೇಗೆ ಪಾಠ ಮಾಡುತ್ತಾರೆ, ಮಕ್ಕಳು ಹೇಗೆ ರಿಯಾಕ್ಟ್ ಮಾಡಬಹುದೆಂಬ ಪ್ರಶ್ನೆಯೊಂದು ಸುಳಿಯಿತು. ಈಚೆಗೆ ಹರ್ಷಿಯಾ ಮಾದರಿ ಶಿಕ್ಷಕಿ ಎನ್ನುವ ಪತ್ರಿಕಾ ವರದಿಗಳು ಬಂದಾಗ ನಿಜಕ್ಕೂ ಖುಷಿಯಾಯಿತು. ಹರ್ಷಿಯಾ ಜತೆ ಮಾತನಾಡಿದಾಗ ಅವಳ ಕಠಿಣ ದಾರಿಯನ್ನು ನೆನಪಿಸಿಕೊಂಡರು.

ಅರಸೀಕೆರೆಯ ಕರೀಂಸಾಬ್ ಗೌರ್ನಮೆಂಟ್ ಹಾಸ್ಪಿಟಲ್‍ನಲ್ಲಿ ಕೆಲಸ ಮಾಡುತ್ತಿದ್ದಾಗ, ಪುಟ್ಟ ಹರ್ಷಿಯಾ ಅಪ್ಪನ ಜತೆಗೆ ಆಸ್ಪತ್ರೆಗೆ ಹೋಗುತ್ತಿದ್ದಳು. ಚೀಟಿ ಬರೆಯುವವರು ಇಲ್ಲದೆ ಇದ್ದಾಗ ಅವಳೇ ಕೌಂಟರಲ್ಲಿ ರೋಗಿಗಳಿಗೆ ಚೀಟಿ ಬರೆಯುತ್ತಿದ್ದಳು. ಎಷ್ಟೋ ಜನರಿಗೆ ಚೀಟಿ ಬರೆಸೋದಕ್ಕೆ ಎರಡು ರೂಪಾಯಿಯೂ ಇರುತ್ತಿರಲಿಲ್ಲ. ಇದು ಹರ್ಷಿಯಾ ಮನಸ್ಸಿನ ಮೇಲೆ ಪರಿಣಾಮ ಬೀರಿತು. ಮುಂದೆ ವೈದ್ಯೆಯಾಗಿ ಬಡವರ ಸೇವೆ ಮಾಡಬೇಕೆಂಬ ಕನಸು ಕಟ್ಟಿದಳು. ಆದರೆ ಎಸ್‍ಎಸ್‍ಎಲ್‍ಸಿ ನಂತರ ಸೈನ್ಸ್ ತೆಗೆದುಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ದೃಷ್ಟಿದೋಶದ ಕಾರಣ ಸೈನ್ಸ್ ಸಿಗಲಿಲ್ಲ. ಪದವಿ ನಂತರವೂ ಕೆಎಎಸ್ ಪ್ರಿಲಿಮ್ಸ್ ಮೇನ್ಸ್ ಎಗ್ಜಾಮ್ ನಂತರ ಸಂದರ್ಶನಕ್ಕೆ ಹೋಗಬೇಕಾಗಿತ್ತು. ಆಡಳಿತದ ಹುದ್ದೆಯನ್ನು ನಿಭಾಯಿಸಲು ನಿನ್ನಿಂದ ಆಗದು ಎನ್ನುವ ಅಪ್ಪಅಮ್ಮನ ಒತ್ತಾಯಕ್ಕೆ ಈ ಕನಸೂ ಈಡೇರಲಿಲ್ಲ. ಆದರೆ ಬಿಇಡಿ ಮಾಡಿ ಇದೀಗ ಬಂಗಾರಪೇಟೆಯ ಆದರ್ಶ ಶಾಲೆಯಲ್ಲಿ ಆದರ್ಶ ಶಿಕ್ಷಕಿಯಾಗಿ ಗಮನ ಸೆಳೆದಿದ್ದಾಳೆ.

ಕನ್ನಡ ಶಾಲೆಗಳ ಅಳಿವುಉಳಿವಿನ ಚರ್ಚೆಗಳು ನಡೆಯುತ್ತಿರುವಾಗ ಶೇ.75ರಷ್ಟು ಅಂಧತ್ವವಿರುವ ಹರ್ಷಿಯಾ ಭಾನುವಿನ ಕನ್ನಡ ಪಾಠಗಳು ವಿಶೇಷವಾಗಿವೆ. ಪ್ರತೀ ಪಾಠವನ್ನು ಕಂಠಪಾಟ ಮಾಡಿ ಮರುದಿನ ಪುಸ್ತಕ ಹಿಡಿದು ಸಾಮಾನ್ಯ ಶಿಕ್ಷಕರು ಓದುವ ಹಾಗೆ ನೆನಪಿನಿಂದ ಪಾಠ ಓದುತ್ತಾಳೆ. ಇದರಿಂದ ಮಕ್ಕಳ ಗಮನ ಬೇರೆಡೆ ಹರಿಯುವುದಿಲ್ಲ. ಅಂತೆಯೇ ವ್ಯಾಕರಣಕ್ಕೆ ಸಂಬಂಧಿಸಿದ ಸರಳ ಕಲಿಕೆಗೆ ಅನುವಾಗುವಂತೆ ಹರ್ಷಿಯಾ ಮಾಡಿದ ಚಾರ್ಟ್‍ಗಳು ವಿಶೇಷವಾಗಿವೆ. ಪ್ರಾಥಮಿಕ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿದ್ದ ಶಾಲಿನಿ ರಜನೀಶ್ ಹರ್ಷಿಯಾ ವ್ಯಾಕರಣ ಮಾದರಿಯನ್ನು ಎಲ್ಲಾ ಶಿಕ್ಷಕರು ಅನುಸರಿಸಲೆಂದು ಇಲಾಖೆಯ ಶಿಕ್ಷಣ ವಾರ್ತೆಯಲ್ಲಿ ಲೇಖನ ಪ್ರಕಟಿಸಿದ್ದರು.

ಪದವಿಯಲ್ಲಿ ಮೊದಲು ಪರಿಚಯವಾದ ಕನ್ನಡದ ಪ್ರೊಫೆಸರ್ ಮತ್ತು ಲೇಖಕಿ ಸ.ಉಷಾ ಅವರ ಒಡನಾಟದಿಂದ ಹರ್ಷಿಯಾ ಓದು ಮತ್ತು ತಿಳಿವಿನ ದಿಕ್ಕು ಬದಲಾಯಿತು. ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ನೆನಪಿನ ದೋಣಿ, ಮಾಸ್ತಿಯವರ ಕತೆ ಕಾದಂಬರಿಗಳು, ನಿಸಾರ್ ಅಹಮದ್‍ರ ಕವಿತೆ, ರಹಮತ್ ತರೀಕೆರೆಯವರ ಅಂಕಣ ಬರಹ, ಆನ್‍ಲೈನ್‍ನ ಅವಧಿ, ಕೆಂಡಸಂಪಿಗೆ ಹೀಗೆ ಸಾಹಿತ್ಯದ ಓದು ಕೂಡ ಹರ್ಷಿಯಾಳನ್ನು ವೈಚಾರಿಕವಾಗಿ ಸೂಕ್ಷ್ಮವಾಗಿಸಿದೆ. ಹರ್ಷಿಯಾ ಒಳ್ಳೆಯ ಕವಯಿತ್ರಿ ಕೂಡ. ಕವನ ಸಂಕಲನ ಇನ್ನಷ್ಟೇ ಪ್ರಕಟವಾಗಬೇಕಿದೆ. ಕಳೆದ ನಾಲ್ಕೂ ಎಸ್‍ಎಸ್‍ಎಲ್‍ಸಿ ಬ್ಯಾಚ್‍ಗಳಲ್ಲಿ ಎರಡು ಬ್ಯಾಚ್ ಕನ್ನಡದಲ್ಲಿ ಶೇಕಡ ನೂರರಷ್ಟು ಫಲಿತಾಂಶ ಬಂದಿದೆ. ಉಳಿದೆರಡು ಬ್ಯಾಚ್ 98.5. ಶೇ ಫಲಿತಾಂಶ ಬಂದಿದೆ. ಕಳೆದ ಬಾರಿ ಮೂರು ವಿದ್ಯಾರ್ಥಿನಿಯರು ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ಅವರಿಗೆ ಹರ್ಷಿಯಾ ಸ್ವಂತ ಖಾತೆಯಿಂದ ಒಂದು ಸಾವಿರ ರೂ ನಗದು ಹಾಗು ಪದಕವನ್ನು ಶಾಲಾ ಮುಖ್ಯಸ್ಥರಿಂದ ಕೊಡಿಸಿ ಗೌರವಿಸಿ ಪ್ರೋತ್ಸಾಹಿಸಿದ್ದಾರೆ.

ಹರ್ಷಿಯಾ ವ್ಯಕ್ತಿತ್ವ ಮಾನವೀಯ ಮೌಲ್ಯಗಳ ನೆಲೆಗಳಲ್ಲಿ ರೂಪುಗೊಂಡಿದೆ. ಅಂತೆಯೇ ಸಮಾನತೆಯ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತುವ ಹೊಣೆಗಾರಿಕೆಯನ್ನು ತುಂಬಾ ಎಚ್ಚರದಿಂದ ನಿರ್ವಹಿಸುತ್ತಿದ್ದಾರೆ. ಬಾಲ್ಯದಿಂದಲೂ ಹಂತಹಂತವಾಗಿ ತನಗಿರುವ ದೃಷ್ಟಿದೋಶದ ಸಮಸ್ಯೆಯನ್ನೂ, ಲೋಕದ ಕಣ್ಣಿನ ಅನುಕಂಪವನ್ನೂ ಮೀರಿದ ಛಲದಿಂದ ಬದುಕನ್ನು ಕಟ್ಟಿಕೊಂಡವರು. `ನನಗೆ ದೂರದೃಷ್ಟಿ ದೋಶವಿದೆ. ತೀರಾ ಹತ್ತಿರದಿಂದ ಓದಕೋಬೇಕು. ನನ್ನ ಐಬಾಲ್ ಶೇಕ್ ಆಗೋದ್ರಿಂದ ಅದು ಆಪರೇಷನ್‍ಗೂ ಸಪೋರ್ಟ್ ಮಾಡಲ್ಲ, ಮತ್ತೆ ಯಾವ ಗ್ಲಾಸ್ ಕೂಡ ನನ್ನ ಕಣ್ ಮೇಲೆ ವರ್ಕ್ ಆಗೋಲ್ಲ. ಈ ತರಹದ ಸಮಸ್ಯೆ ಆಗಿರೋದ್ರಿಂದ ನನ್ನ ಅಂಧತ್ವದ ಸ್ಥಿತಿಯನ್ನು ಸರ್ಜರಿಯಿಂದಲೋ, ಟ್ರೀಟ್‍ಮೆಂಟಿಂದಲೋ ವಾಸಿ ಮಾಡ್ಕೊಳ್ಳೋಕೆ ಆಗಲ್ಲ. ಹೀಗಾಗಿ ನನ್ನದೇ ಕೆಲಸಗಳಲ್ಲಿ ತೊಡಗಿಕೊಂಡು ಅಂಧತ್ವವನ್ನೂ ಮರೆತ್ತಿದ್ದೇನೆ’ ಎಂದು ಹರ್ಷಿಯಾ ಆತ್ಮವಿಶ್ವಾಸದಿಂದ ಮಾತನಾಡುತ್ತಾಳೆ.

ಹೀಗೆ ಅರಸೀಕೆರೆಯ ಕರೀಂಸಾಬ್ ಮತ್ತು ರಿಹಾನ್ ಭಾನು ದಂಪತಿಗಳ ಹಿರಿಯ ಮಗಳಾದ ಹರ್ಷಿಯಾ ಸಾಮಾನ್ಯ ಸ್ಕೂಲುಗಳಲ್ಲೆ ವಿದ್ಯಾಭ್ಯಾಸ ಪಡೆದು ಶಿಕ್ಷಕಿಯಾಗಿ ತನ್ನದೇ ಆದ ವಿಶಿಷ್ಟ ಬೋಧನೆಯ ಮೂಲಕ ಜಡಶಿಕ್ಷಕ ವರ್ಗಕ್ಕೆ ಮಾದರಿಯಾಗಿದ್ದಾಳೆ. ಇದನ್ನು ಗುರುತಿಸಿ ಕರ್ನಾಟಕ ಕಾವಲು ಪಡೆಯ `ಆದರ್ಶ ಶಿಕ್ಷಕಿ’ ಪ್ರಶಸ್ತಿ, ದೆಹಲಿಯ ಆವಂತಿಕಾ ಸಂಸ್ಥೆಯ `ಡಾ.ಅಬ್ದುಲ್ ಕಲಾಂ’ ಪ್ರಶಸ್ತಿಯನ್ನು ಒಳಗೊಂಡಂತೆ ಹಲವು ಖಾಸಗಿ ಸಂಸ್ಥೆಗಳು ಗೌರವಿಸಿವೆ. ಹರ್ಷಿಯಾಳ ಕನಸುಗಳು ಮತ್ತಷ್ಟು ದೃಢವಾಗಲಿ. ತನ್ನ ಸುತ್ತಮುತ್ತಣ ಪರಿಸರದಲ್ಲಿ ಹರ್ಷಿಯಾಳ ಒಳಗಣ್ಣಿನ ಬೆಳಕು ಬದಲಾವಣೆಗೆ ನೆರವಾಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉಪಚುನಾವಣೆ : ಬಿಹಾರದ ಬಂಕಿಪುರದಲ್ಲಿ ಪ್ರಶಾಂತ್ ಕಿಶೋರ್‌ಗೆ ಐತಿಹಾಸಿಕ ಗೆಲುವು; ಇನ್ನೆರಡು ಕ್ಷೇತ್ರಗಳು ಕಾಂಗ್ರೆಸ್-ಬಿಜೆಪಿ ಪಾಲು

ಬಿಹಾರದ ಬಂಕಿಪುರ, ಗುಜರಾತ್‌ನ ಮಂಜಲ್‌ಪುರ ಮತ್ತು ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರಗಳಿಗೆ ಜುಲೈ 30ರಂದು ನಡೆದ ಉಪಚುನಾವಣೆಯ ಫಲಿತಾಂಶ ಸೋಮವಾರ (ಆ.3) ಹೊರಬಿದ್ದಿದ್ದಿದೆ. ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿದ್ದ, ಕಳೆದ 31 ವರ್ಷಗಳಿಂದ ಬಿಜೆಪಿಯೇ...

‘ಪಂಕ್ಚರ್-ತಲಾ ಬನಾನೆ ವಾಲೆಗಳೇ ಹೆಚ್ಚು’: ನೀಟ್ ಅಕ್ರಮಗಳ ವಿರುದ್ಧ ಪ್ರತಿಭಟಿಸಿದವರ ವಿರುದ್ಧ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕ ರಮೇಶ್ ಬಿಧು

ದೆಹಲಿಯ ಜಂತರ್ ಮಂತರ್‌ನಲ್ಲಿ ‘ನೀಟ್’ (NEET) ಪರೀಕ್ಷೆಯ ಅಕ್ರಮಗಳ ವಿರುದ್ಧ ಧ್ವನಿಯೆತ್ತಿದ ಯುವಜನತೆ ಮತ್ತು ವಿದ್ಯಾರ್ಥಿಗಳ ಹೋರಾಟವನ್ನು ದಮನ ಮಾಡಲು ಯತ್ನಿಸುತ್ತಿರುವ ಬಿಜೆಪಿ, ಈಗ ಅವರ ವಿರುದ್ಧವೇ ಅತ್ಯಂತ ಕೀಳುಮಟ್ಟದ ಇಸ್ಲಾಮೋಫೋಬಿಕ್ ಮತ್ತು...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಖುಲಾಸೆ : ಇಡೀ ವ್ಯವಸ್ಥೆಯೇ ಬ್ರಿಜ್ ಭೂಷಣ್‌ರನ್ನು ರಕ್ಷಿಸಿತು ಎಂದ ವಿನೇಶ್ ಫೋಗಟ್; ಮೇಲ್ಮನವಿ ಸಲ್ಲಿಸಲು ಮಹಿಳಾ ಕುಸ್ತಿಪಟುಗಳ ನಿರ್ಧಾರ

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ದೆಹಲಿಯ ರೋಸ್...

ಕರ್ನಾಟಕದಲ್ಲಿ SIR ಬಿಹಾರ-ಬಂಗಾಳಕ್ಕಿಂತ ಭೀಕರ: ಆಗಸ್ಟ್ 4 ರಂದು ಜನಪರ ಸಂಘಟನೆಗಳಿಂದ ಮಹತ್ವದ ಮಾಧ್ಯಮಗೋಷ್ಠಿ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್‌ಐಆರ್ (SIR) ಪ್ರಕ್ರಿಯೆಯು ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗಿಂತಲೂ ಅತ್ಯಂತ ಭೀಕರ ರೂಪ ಪಡೆದುಕೊಳ್ಳುತ್ತಿದೆ ಎಂದು 'SIR ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟ'...

“ನೈರ್ಮಲ್ಯ ಕಾರ್ಮಿಕರು ಕೆಲಸ ಬಿಡಲು ಸಾಧ್ಯವಿಲ್ಲ”: ದೇಶಾದ್ಯಂತ ಪ್ರತಿಭಟನೆಗೆ DASAM ಬೆಂಬಲ, ಉದ್ಯೋಗ ಖಾಯಂಗೊಳಿಸಲು ತೀವ್ರ ಒತ್ತಾಯ

ನವದೆಹಲಿ: ಉದ್ಯೋಗ ಕ್ರಮಬದ್ಧಗೊಳಿಸುವಿಕೆ (ಖಾಯಂಗೊಳಿಸುವುದು), ನ್ಯಾಯಯುತ ವೇತನ, ಸಾಮಾಜಿಕ ಭದ್ರತೆ, ಸುರಕ್ಷಿತ ಕೆಲಸದ ವಾತಾವರಣ ಮತ್ತು ಕೆಲಸದ ಸ್ಥಳದಲ್ಲಿ ಮಾನವ ಘನತೆಯನ್ನು ಎತ್ತಿಹಿಡಿಯುವಂತೆ ಒತ್ತಾಯಿಸಿ ದೇಶದ ನಾನಾ ಭಾಗಗಳಲ್ಲಿ ನೈರ್ಮಲ್ಯ ಕಾರ್ಮಿಕರು ನಡೆಸುತ್ತಿರುವ...

ದ್ವೇಷ ಭಾಷಣ ಪ್ರಕರಣ: ಬಿಜೆಪಿ ನಾಯಕರಾದ ಅನುರಾಗ್‌ ಠಾಕೂರ್‌, ಪರ್ವೇಶ್‌ ವರ್ಮಾಗೆ ಕ್ಲೀನ್ ಚೀಟ್: ಪುನರ್ ಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ

ನವದೆಹಲಿ: 2020ರ ದೆಹಲಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಉದ್ರೇಕಕಾರಿ ಹಾಗೂ ದ್ವೇಷಪೂರಿತ ಭಾಷಣ ಮಾಡಿದ ಆರೋಪ ಹೊತ್ತಿದ್ದ ಬಿಜೆಪಿ ನಾಯಕರಾದ ಅನುರಾಗ್ ಠಾಕೂರ್ ಮತ್ತು ಪರ್ವೇಶ್‌...

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ನೂತನ ಸಚಿವರ ಪಟ್ಟಿಗೆ ವರಿಷ್ಠರ ಅನುಮೋದನೆ: ಇಂದು ಸಂಜೆ 4:05 ಕ್ಕೆ ಪ್ರಮಾಣ ವಚನ

ಬಹುನಿರೀಕ್ಷಿತ ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ನೂತನ ಸಚಿವರ ಪಟ್ಟಿಗೆ ಅಧಿಕೃತ ಅನುಮೋದನೆ ನೀಡಿದೆ. ಇದರೊಂದಿಗೆ ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ತೀವ್ರ...

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ : WFI ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್‌ ಸಿಂಗ್‌ ಖುಲಾಸೆ

ದೆಹಲಿ ನ್ಯಾಯಾಲಯವು ಸೋಮವಾರ (ಆ.3) ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ನಾಯಕ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣದಿಂದ...

ಪ್ರಶ್ನೆ ಪತ್ರಿಕೆ ಸೋರಿಕೆ : ಫಾಸ್ಟ್‌ ಟ್ರ್ಯಾಕ್ ಕೋರ್ಟ್ ನ್ಯಾಯಾಧೀಶೆ ಒಂದೇ ವಾರದಲ್ಲಿ ವರ್ಗಾವಣೆ

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲಾದ ತ್ವರಿತಗತಿ (ಫಾಸ್ಟ್‌ ಟ್ರ್ಯಾಕ್) ನ್ಯಾಯಾಲಯದ ನೇತೃತ್ವ ವಹಿಸಲು ನೇಮಕಗೊಂಡ ಕೇವಲ ಒಂದು ವಾರದ ನಂತರ, ದೆಹಲಿ ಹೈಕೋರ್ಟ್ ಶನಿವಾರ (ಆಗಸ್ಟ್ 1) ವಿಶೇಷ ನ್ಯಾಯಾಧೀಶರಾದ...

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...