Homeಮುಖಪುಟಇವಿಎಂ ತಯಾರಿಸುವ BEL ಬೋರ್ಡ್‌ಗೆ ಬಿಜೆಪಿ ನಾಯಕರ ನಾಮನಿರ್ದೇಶನ!

ಇವಿಎಂ ತಯಾರಿಸುವ BEL ಬೋರ್ಡ್‌ಗೆ ಬಿಜೆಪಿ ನಾಯಕರ ನಾಮನಿರ್ದೇಶನ!

- Advertisement -
- Advertisement -

ಭಾರತ ಸರ್ಕಾರದ ಮಾಜಿ ಕಾರ್ಯದರ್ಶಿ ಇಎಎಸ್ ಶರ್ಮಾ ಅವರು ಬಿಜೆಪಿಗೆ ಆಪ್ತರಾಗಿರುವ ನಿರ್ದೇಶಕರನ್ನು ಇವಿಎಂ ತಯಾರಿಸುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್)ನ ಬೋರ್ಡ್‌ನಿಂದ ತೆಗೆದುಹಾಕುವಂತೆ ಒತ್ತಾಯಿಸಿ ಭಾರತ ಚುನಾವಣಾ ಆಯೋಗಕ್ಕೆ (ಇಸಿಐ) ಪತ್ರ ಬರೆದಿದ್ದಾರೆ.

ಚುನಾವಣೆಯಲ್ಲಿ ಬಳಸಲಾಗುವ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು (ಇವಿಎಂಗಳು) ಚುನವಣಾ ಆಯೋಗದ ತಾಂತ್ರಿಕ ತಜ್ಞರ ಸಮಿತಿಯ ಮಾರ್ಗದರ್ಶನದಲ್ಲಿ ಬಿಇಎಲ್ ಮತ್ತು ಇಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನಿಂದ ದೇಶೀಯವಾಗಿ ತಯಾರಿಸುತ್ತದೆ. ಇವಿಎಂಗಳಿಗಾಗಿ ಸಾಫ್ಟ್‌ವೇರ್‌ನ್ನು ಅಭಿವೃದ್ಧಿಪಡಿಸುವ ಬಿಇಎಲ್‌ ಮಂಡಳಿಯ ಸ್ವತಂತ್ರ ನಿರ್ದೇಶಕರ ಹುದ್ದೆಗೆ ಕನಿಷ್ಠ ನಾಲ್ವರು ಬಿಜೆಪಿ ನಾಮನಿರ್ದೇಶಿತರನ್ನು ಹೇಗೆ ಆಯ್ಕೆ ಮಾಡಲಾಗಿದೆ ಎಂಬುದನ್ನು ಆಯೋಗದ ಗಮನಕ್ಕೆ ತಂದಿದ್ದೇನೆ ಎಂದು ಶರ್ಮಾ ಹೇಳಿದರು.

ಅವರ ಪತ್ರದಲ್ಲಿ, ಬಿಇಎಲ್‌ನ ವ್ಯವಹಾರಗಳನ್ನು ನಡೆಸುವಲ್ಲಿ ರಾಜಕೀಯ ಪಕ್ಷವಾಗಿ ಬಿಜೆಪಿ ಪ್ರಮುಖ ಪಾತ್ರವನ್ನು ಹೊಂದಿದೆ. ಇದು ಬಿಜೆಪಿ ಬಿಇಎಲ್‌ನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಈ ಎಂಟರ್‌ಪ್ರೈಸಸ್‌ಗಳು (CPSE) ಇವಿಎಂಗಳ ತಯಾರಿಕೆ ಮತ್ತು ಪೂರೈಕೆಯಲ್ಲಿ ತೊಡಗಿಸಿಕೊಂಡಿದೆ. ಈ ಹಿಂದೆ ನಾನು ಈ ಗೊಂದಲದ ಸಂಗತಿಯನ್ನು ECIಯ ಗಮನಕ್ಕೆ ತಂದಿದ್ದರೂ, ECI ಈ ಬಗ್ಗೆ ಸರಿಯಾಗಿ ಪ್ರತಿಕ್ರಿಯಿಸಿಲ್ಲ ಎಂದು ನಾನು ಕಂಡುಕೊಂಡಿದ್ದೇನೆ. ಕಂಪನಿಯ ವ್ಯವಹಾರಗಳನ್ನು ನಿರ್ವಹಿಸುವಲ್ಲಿ ಸ್ವತಂತ್ರ ನಿರ್ದೇಶಕರು ಪ್ರಮುಖ ಪಾತ್ರ ವಹಿಸಬೇಕೆಂದು ಕಂಪನಿಗಳ ಕಾಯಿದೆ ಕಡ್ಡಾಯಗೊಳಿಸುತ್ತದೆ. ಒಟ್ಟು 7 ಸ್ವತಂತ್ರ ನಿರ್ದೇಶಕರಲ್ಲಿ ಕನಿಷ್ಠ ನಾಲ್ವರು ಅಂದರೆ ಮನ್ಸುಖ್ಭಾಯ್ ಶಮ್ಜಿಭಾಯಿ ಖಚರಿಯಾ, ಡಾ ಶಿವನಾಥ್ ಯಾದವ್, ಶ್ಯಾಮ ಸಿಂಗ್ ಮತ್ತು ಪಿವಿ ಪಾರ್ಥಸಾರಥಿ ಬಿಜೆಪಿ ಪಕ್ಷದ ಜೊತೆ ಸಂಪರ್ಕ ಹೊಂದಿದವಾರಾಗಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಖಚರಿಯಾ ಅವರು ರಾಜ್‌ಕೋಟ್ ಜಿಲ್ಲೆಯಲ್ಲಿ ಬಿಜೆಪಿ ಅಧ್ಯಕ್ಷ ಹುದ್ದೆಯನ್ನು ಹೊಂದಿದ್ದರೆ, ಶಿವನಾಥ್ ಯಾದವ್ ಅವರು ಉತ್ತರ ಪ್ರದೇಶ ಬಿಜೆಪಿಯ ಮಾಜಿ ಉಪಾಧ್ಯಕ್ಷರಾಗಿದ್ದರು. ಶ್ಯಾಮ ಸಿಂಗ್ ಬಿಹಾರದಲ್ಲಿ ಬಿಜೆಪಿಯ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ ಮತ್ತು ಪಿವಿ ಪಾರ್ಥಸಾರಥಿ ಬಿಜೆಪಿಯ ಒಬಿಸಿ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದಾರೆ. ಪಾರ್ಥಸಾರಥಿ ಆಂಧ್ರಪ್ರದೇಶ ಬಿಜೆಪಿ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ ಮತ್ತು ತಿರುಪತಿ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯ ಉಸ್ತುವಾರಿಯಾಗಿದ್ದರು. ಬಿಜೆಪಿಯ ಪ್ರಮುಖ ಪದಾಧಿಕಾರಿಯೊಬ್ಬರು ‘ಸ್ವತಂತ್ರ’ ನಿರ್ದೇಶಕರಾಗಿ ಬಿಇಎಲ್‌ನ ಮಂಡಳಿಗೆ ನಾಮನಿರ್ದೇಶನಗೊಂಡಿರುವುದು ಆಯೋಗಕ್ಕೆ ಹೆಚ್ಚು ಆಕ್ಷೇಪಾರ್ಹವಲ್ಲವೇ? ಖಂಚಾರಿಯಾ ಅವರ ಜೊತೆಗೆ BELನ ಕನಿಷ್ಠ ಮೂರು ಸ್ವತಂತ್ರ ನಿರ್ದೇಶಕರು ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದಾರೆ. ಇವಿಎಂಗಳ ವಿರುದ್ಧ ಎತ್ತಿರುವ ಪ್ರಶ್ನೆಗಳನ್ನು ಪರಿಹರಿಸಲು ಇಸಿಐ ವಿಫಲವಾಗಿದೆ. ECI ಅದನ್ನು ಮೊಂಡುತನದಿಂದ ಸಮರ್ಥಿಸಿಕೊಳ್ಳುತ್ತಿದೆ. ಅನೇಕ ದೇಶಗಳು EVM ಗಳನ್ನು ಬಳಸುವುದನ್ನು ನಿಲ್ಲಿಸಿವೆ ಎಂದು ಶರ್ಮಾ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು ಇವಿಎಂ ಯಂತ್ರಗಳನ್ನು ಹ್ಯಾಕ್‌ ಮಾಡುವ ಸಾಧ್ಯತೆ ಇದೆ ಎಂದು  ಡೆಮೊವನ್ನು ತೊರಿಸಿದ್ದರು. ಅವರು ತಾಂತ್ರಿಕ ತಜ್ಞ ಅತುಲ್ ಪಟೇಲ್ ಅವರ ಸಹಾಯದಿಂದ ಇವಿಎಂಗಳನ್ನು ಹೇಗೆ ಟ್ಯಾಂಪರಿಂಗ್ ಮಾಡಬಹುದು ಎಂಬುದರ ಡೆಮೊವನ್ನು ನಡೆಸಿದ್ದಾರೆ. ಯಂತ್ರದ ಅಸಮರ್ಪಕ ಕಾರ್ಯವನ್ನು ತೋರಿಸಲು ಪಟೇಲ್ ಒಂದು ಕಲ್ಲಂಗಡಿ ಚಿಹ್ನೆಗೆ ಎರಡು ಮತಗಳನ್ನು ಹಾಕಿದರು. ಯಂತ್ರದಲ್ಲಿ ಕಲ್ಲಂಗಡಿ ಗುಂಡಿಯನ್ನು ಒತ್ತಿದರೂ, VVPAT ಸ್ಲಿಪ್ ಸೇಬಿನ ಚಿಹ್ನೆಯನ್ನು ಹೊಂದಿತ್ತು. ECI ಈ ಆರೋಪಗಳನ್ನು ತಳ್ಳಿಹಾಕಿದೆ ಮತ್ತು EVMನ್ನು ಕಂಪ್ಯೂಟರ್‌ನಿಂದ ನಿಯಂತ್ರಿಸಲಾಗುವುದಿಲ್ಲ ಮತ್ತು ಬೇರೆ ಯಾವುದೇ ನೆಟ್‌ವರ್ಕ್‌ಗೆ ಸಂಪರ್ಕ ಹೊಂದಿಲ್ಲ, ಅದು ಹ್ಯಾಕ್ ಆಗುವುದನ್ನು ತಡೆಯುತ್ತದೆ ಎಂದು ಹೇಳಿಕೊಂಡಿದೆ.

ಇದನ್ನು ಓದಿ: ‘ದಲಿತರು’ ದೇವಾಲಯ ಪ್ರವೇಶಿಸಿದ್ದಕ್ಕೆ ಪ್ರತ್ಯೇಕ ಸ್ಥಳದಲ್ಲಿ ‘ಹೊಸ ವಿಗ್ರಹ’ ಪ್ರತಿಷ್ಠಾಪನೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...