Homeನಿಜವೋ ಸುಳ್ಳೋFact Check: ಭಾರತ-ಚೀನಾ ಗಡಿಯಲ್ಲಿ 158 ಭಾರತೀಯ ಸೈನಿಕರ ಹತ್ಯೆ?

Fact Check: ಭಾರತ-ಚೀನಾ ಗಡಿಯಲ್ಲಿ 158 ಭಾರತೀಯ ಸೈನಿಕರ ಹತ್ಯೆ?

- Advertisement -
- Advertisement -

ಲಡಾಕ್‌ನಲ್ಲಿ ಭಾರತ ಚೀನಾ ಸೇನಾಪಡೆಗಳ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಎರಡೂ ದೇಶಗಳು ತಮ್ಮ ಹೆಚ್ಚಿನ ಸೇನೆಯನ್ನು ನಿಯೋಜಿಸುತ್ತಿವೆ. ಇಂತಹ ಸಂದರ್ಭದಲ್ಲಿ ಗಡಿಯಲ್ಲಿ 158 ಭಾರತೀಯ ಸೈನಿಕರ ಹತ್ಯೆಯಾಗಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಫೇಸ್‌ಬುಕ್‌ನಲ್ಲಿ ಈ ರೀತಿಯ ಸಂದೇಶಗಳು ಹರಿದಾಡುತ್ತಿವೆ. ನಾರ್ಥ್ ಸಿಕ್ಕಿಂನಲ್ಲಿ ನಡೆದ ಘರ್ಷಣೆಯಲ್ಲಿ ಚೀನಾದ ಸೈನಿಕರಿಂದ 158 ಭಾರತೀಯ ಸೈನಿಕರು ಹತರಾಗಿದ್ದಾರೆ ಎಂದು ಫೋಟೊ ಜೊತೆಗೆ ಷೇರ್ ಮಾಡಲಾಗಿದೆ.

ಫ್ಯಾಕ್ಟ್‌ಚೆಕ್‌

ವೈರಲ್‌ ಚಿತ್ರವನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಜುಲೈ 2017 ರಿಂದ ಹಲವಾರು ಪಾಕಿಸ್ತಾನಿ ಮತ್ತು ಚೀನೀ ಮಾಧ್ಯಮಗಳು ಈ ಚಿತ್ರವನ್ನು ಹಲವಾರು ಬಾರಿ ಬಳಸಿದೆ ಎಂದು ತಿಳಿದುಬಂದಿದೆ.

2017 ರಲ್ಲಿ ಭಾರತ ಮತ್ತು ಚೀನಾ ನಡುವಿನ ಡೋಕ್ಲಾಮ್ ಉದ್ವಿಗ್ನತೆಯ ಸಮಯದಲ್ಲಿ ಹಲವಾರು ಪಾಕಿಸ್ತಾನಿ ಮಾಧ್ಯಮಗಳು ಈ ಚಿತ್ರವನ್ನು ಪ್ರಕಟಿಸಿದ್ದು ‌ಆಗ “158 ಭಾರತೀಯ ಸೈನಿಕರನ್ನು ಚೀನಾದ ಸೇನೆಯು ಹತ್ಯೆಗೈದಿದೆ” ಎಂದು ವರದಿ ಮಾಡಲಾಗಿತ್ತು.

ಆದರೆ ಆಗಲೇ ಭಾರತ ಮತ್ತು ಚೀನಾ ಎರಡೂ ದೇಶಗಳು ಸಹ ಪಾಕಿಸ್ತಾನದ ವರದಿಗಳನ್ನು ನಕಲಿ ಸುದ್ದಿ ಎಂದು ತಳ್ಳಿಹಾಕಿದ್ದವು. ವೈರಲ್ ಚಿತ್ರವು ಸಿಕ್ಕಿಂ ಬಳಿಯದಲ್ಲ ಎಂದು ಭಾರತ ಸರ್ಕಾರ ಸ್ಪಷ್ಟವಾಗಿ ಹೇಳಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು.

ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿರುವ ಸೇನಾ ಶಿಬಿರದಲ್ಲಿ ಆಕಸ್ಮಿಕ ಸ್ಫೋಟ ಸಂಭವಿಸಿ ಒಬ್ಬರು ಮೃತರಾಗಿದ್ದು, ಆರು ಜನ ಗಾಯಗೊಂಡಿದ್ದರು ಎಂದು ಮೇ 2017 ರಿಂದ ಹಲವಾರು ಮಾಧ್ಯಮಗಳ ವರದಿಗಳು ತಿಳಿಸಿವೆ.

ಸ್ಥಳೀಯ ಸೇನಾ ಮೂಲಗಳ ಪ್ರಕಾರ, ಈಗ ವೈರಲ್ ಆಗಿರುವ ಚಿತ್ರವು ಅದೇ ಘಟನೆಯಾಗಿದೆ. ಅಲ್ಲಿಗೆ ಭಾರತ ಚೀನಾದ ಸೇನಾ ಸಮರಕ್ಕೂ ಈ ಚಿತ್ರಕ್ಕೂ ಸಂಬಂಧವಿಲ್ಲ ಮತ್ತು ಈ ಚಿತ್ರವು ಮೂರು ವರ್ಷದಷ್ಟು ಹಳೆಯದು ಎಂಬುದು ಸ್ಪಷ್ಟವಾಗುತ್ತದೆ.

ಅಲ್ಲದೇ ಭಾರತೀಯ ಅಥವಾ ಚೀನಾದ ಕಡೆಯಿಂದ ಇತ್ತೀಚಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಯಾವುದೇ ಭಾರತೀಯ ಸೈನಿಕನು ಪ್ರಾಣ ಕಳೆದುಕೊಂಡಿದ್ದಾನೆ ಎಂಬ ವರದಿಗಳು ಬಂದಿಲ್ಲ. ಹಾಗಾಗಿ ಚೀನಾದ ಸೇನೆಯಿಂದ 158 ಭಾರತೀಯ ಸೈನಿಕರನ್ನು ಹತ್ಯೆ ಎಂಬುದು ಸಂಪೂರ್ಣ ಸುಳ್ಳು ಸುದ್ದಿಯಾಗಿದೆ.

ಸತ್ಯ: ಈ ಫೋಟೊ ಮೂರು ವರ್ಷ ಹಳೆಯದಾಗಿದ್ದು, 2017ರಲ್ಲಿ ಪಾಕಿಸ್ತಾನದ ಕೆಲವು ಮಾಧ್ಯಮಗಳು ಚೀನಾ ಗಡಿಯಲ್ಲಿ ಭಾರತೀಯ ಸೈನಿಕರ ಹತ್ಯೆ ಎಂದು ಪ್ರಕಟಿಸಿದ್ದವು. ಆದರೆ ಇದನ್ನು ಭಾರತ ಮತ್ತು ಚೀನಾ ಎರಡು ದೇಶಗಳು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದವು.


ಇದನ್ನೂ ಓದಿ: Fact Check: ಕೊರೊನಾ ರೋಗಿಯನ್ನೇ ಪ್ರೇಮಿಸಿ, ನಿಶ್ಚಿತಾರ್ಥವಾದ ಡಾಕ್ಟರ್?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...