HomeದಿಟನಾಗರFact Check : ರಾಹುಲ್ ಗಾಂಧಿಯ ಭಾಷಣದ ವಿಡಿಯೋ ಎಡಿಟ್ ಮಾಡಿ ತಪ್ಪಾಗಿ ಹಂಚಿಕೆ

Fact Check : ರಾಹುಲ್ ಗಾಂಧಿಯ ಭಾಷಣದ ವಿಡಿಯೋ ಎಡಿಟ್ ಮಾಡಿ ತಪ್ಪಾಗಿ ಹಂಚಿಕೆ

- Advertisement -
- Advertisement -

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾಷಣದ ವಿಡಿಯೋ ಕ್ಲಿಪ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಒಟ್ಟು ಎರಡು ಕ್ಲಿಪ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಒಂದರಲ್ಲಿ ರಾಹುಲ್ ಗಾಂಧಿ “ಚಪ್ಪಾಳೆ ತಟ್ಟಿ, ಚಪ್ಪಾಳೆ ತಟ್ಟಿ, ಮೊಬೈಲ್ ಫ್ಲ್ಯಾಶ್ ಲೈಟ್ ಆನ್ ಮಾಡಿ” ಎಂದು ಹೇಳುತ್ತಿರುವುದು ಕಾಣಬಹುದು. ಮತ್ತೊಂದರಲ್ಲಿ “ರಿಮೋಟ್ ಕಂಟ್ರೋಲ್ ಅನ್ನು ಹಿಂಬದಿಯಿಂದ ಒತ್ತಲಾಗುತ್ತಿದೆ” ಎಂದು ಹೇಳಿದ್ದಾರೆ.

ಫ್ಯಾಕ್ಟ್‌ಚೆಕ್ : ರಾಹುಲ್ ಗಾಂಧಿಯವರ ಭಾಷಣದ ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ‘ನಾನುಗೌರಿ.ಕಾಂ’ ಪರಿಶೀಲನೆ ನಡೆಸಿದೆ. ಇದಕ್ಕಾಗಿ ನಾವು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಡಿದ್ದೇವೆ. ಈ ವೇಳೆ 16 ನವೆಂಬರ್ 2023ರಂದು ಅಪ್ಲೋಡ್ ಮಾಡಲಾದ ಭಾಷಣದ ಮೂಲ ವಿಡಿಯೋ ಯೂಟ್ಯೂಬ್‌ನಲ್ಲಿ ನಮಗೆ ಲಭ್ಯವಾಗಿದೆ.

ಒಟ್ಟು 25 ನಿಮಿಷ 37 ಸೆಕೆಂಡ್‌ನ ಯೂಟ್ಯೂಬ್‌ ವಿಡಿಯೋದಲ್ಲಿ 5 ನಿಮಿಷ 41 ಸೆಕೆಂಡ್‌ನಿಂದ ವೈರಲ್ ವಿಡಿಯೋದಲ್ಲಿರುವ ರಾಹುಲ್ ಗಾಂಧಿಯವರ ಮಾತುಗಳಿವೆ. ವಿಡಿಯೋದಲ್ಲಿ ರಾಹುಲ್ ಗಾಂಧಿ ” ಕೋವಿಡ್ ಬಂದಾಗ ಕಾಂಗ್ರೆಸ್ ಪಕ್ಷ ಅಥವಾ ಯುವ ಕಾಂಗ್ರೆಸ್ ಆಕ್ಸಿಜನ್ ಸಿಲಿಂಡರ್‌ಗಳು ಸೇರಿದಂತೆ ಇತರ ಅಗತ್ಯ ವಸ್ತುಗಳನ್ನು ಜನರಿಗೆ ಒದಗಿಸಿತ್ತು. ಆದರೆ, ಪ್ರಧಾನಿ ಮೋದಿ ಚಪ್ಪಾಳೆ ತಟ್ಟಿ, ಮೊಬೈಲ್ ಲೈಟ್ ಆನ್ ಮಾಡಿ ಎಂದಿದ್ದರು” ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿರುವುದು ಇದೆ.

ಕಾಂಗ್ರೆಸ್‌ನ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ರಾಹುಲ್ ಗಾಂಧಿ ರಾಜಸ್ಥಾನಲ್ಲಿ ಮಾಡಿರುವ ಭಾಷಣ ಎನ್ನಲಾಗಿದೆ.

ಮತ್ತೊಂದು ವಿಡಿಯೋ ಕುರಿತು ಗೂಗಲ್‌ನಲ್ಲಿ ಹುಡುಕಾಡಿದಾಗ 30 ಸೆಪ್ಟೆಂಬರ್ 2023ರಂದು ಕಾಂಗ್ರೆಸ್‌ನ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಮೂಲ ವಿಡಿಯೋ ಅಪ್ಲೋಡ್‌ ಆಗಿರುವುದು ಗೊತ್ತಾಗಿದೆ.

ಒಟ್ಟು 59 ನಿಮಿಷ 40 ಸೆಕೆಂಡ್‌ನ ಈ ವಿಡಿಯೋದಲ್ಲಿ 41 ನಿಮಿಷ 19 ಸೆಕೆಂಡ್‌ನಿಂದ ವೈರಲ್ ಕ್ಲಿಪ್ ಇದೆ. ಈ ವಿಡಿಯೋದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ” ಅವರು (ಮಾಧ್ಯಮ) ಮೋದಿಯವರ ಮುಖವನ್ನು 24 ಗಂಟೆ ತೋರಿಸುತ್ತಾರೆ. ಶಿವರಾಜ್ ಸಿಂಗ್ ಚೌಹಾಣ್ ಅವರ ಮುಖವನ್ನು 24 ಗಂಟೆ ತೋರಿಸುತ್ತಾರೆ. ಕಾರಣ ಅವರ (ಮಾಧ್ಯಮ) ನಿಯಂತ್ರಣ ಅದಾನಿ ಕೈಯ್ಯಲ್ಲಿದೆ. ನೋಡಿ ಮಾಧ್ಯಮವರು ಹೇಗೆ ನಗುತ್ತಿದ್ದಾರೆ ಎಂದು. ಇದು ಅವರ ತಪ್ಪಲ್ಲ. ರಿಮೋಟ್ ಕಂಟ್ರೋಲ್ ಹಿಂಬಂದಿಯಿಂದ ಮಾಡಲಾಗುತ್ತಿದೆ ಎಂಬುವುದು ಎಂಬ ಸತ್ಯ ಅವರಿಗೂ ಗೊತ್ತು” ಎಂದು ಎಂದಿದ್ದಾರೆ.

ನಾವು ನಡೆಸಿದ ಪರಿಶೀಲನೆಯಲ್ಲಿ ರಾಹುಲ್ ಗಾಂಧಿಯವರ ಭಾಷಣಗಳನ್ನು ಎಡಿಟ್ ಮಾಡಿ ಹಂಚಿರುವುದು ಖಚಿತವಾಗಿದೆ

ಇದನ್ನೂ ಓದಿ : Fact Check: ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್‌ರನ್ನು ಸೋನಿಯಾ ಗಾಂಧಿ ಅವಮಾನಿಸಿದ್ದರು ಎಂಬುವುದು ಸುಳ್ಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...