HomeದಿಟನಾಗರFact Check: ರಾಮ ಮಂದಿರ ಉದ್ಘಾಟನೆಯಂದು ರಾಜ್ಯಾದ್ಯಂತ ವಿದ್ಯುತ್ ಕಡಿತ ಮಾಡಲು ಕೇರಳ ಸರ್ಕಾರ ನಿರ್ಧರಿಸಿದೆಯಾ?

Fact Check: ರಾಮ ಮಂದಿರ ಉದ್ಘಾಟನೆಯಂದು ರಾಜ್ಯಾದ್ಯಂತ ವಿದ್ಯುತ್ ಕಡಿತ ಮಾಡಲು ಕೇರಳ ಸರ್ಕಾರ ನಿರ್ಧರಿಸಿದೆಯಾ?

- Advertisement -
- Advertisement -

ಅಯೋಧ್ಯೆಯ ರಾಮ ಮಂದಿರದ ಉದ್ಘಾಟನೆಯ ದಿನವಾದ ಜನವರಿ 22ರಂದು ರಾಜ್ಯಾದ್ಯಂತ ವಿದ್ಯುತ್ ಕಡಿತ ಮಾಡಲು ಕೇರಳದ ಕಮ್ಯುನಿಸ್ಟ್ ಸರ್ಕಾರ ನಿರ್ಧರಿಸಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಹಬ್ಬಿದೆ.

ರಾಮ ಮಂದಿರ ಉದ್ಘಾಟನಾ ಸಮಾರಂಭವನ್ನು ಜನರು ನೋಡದಂತೆ ತಡೆಯಲು ಕೇರಳ ಸರ್ಕಾರ ಹುನ್ನಾರ ಮಾಡಿದೆ ಎಂಬ ಅರ್ಥದಲ್ಲಿ ಸುದ್ದಿ ಹಂಚಿಕೊಳ್ಳಲಾಗ್ತಿದೆ.

ಪೋಸ್ಟ್ ಲಿಂಕ್‌ಗೆ ಇಲ್ಲಿ ಕ್ಲಿಕ್ ಮಾಡಿ

ಪೋಸ್ಟ್‌ ಲಿಂಕ್‌ಗೆ ಇಲ್ಲಿ ಕ್ಲಿಕ್ ಮಾಡಿ 

ಜನವರಿ 22ರಂದು ಕೇರಳ ಶಾಲಾ ಶಿಕ್ಷಕರ ಸಂಘದ (ಕೆಎಸ್‌ಟಿಎ) ಎರ್ನಾಕುಲಂ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ್ದ ಸಿಪಿಎಂ ರಾಜ್ಯ ಕಾರ್ಯದರ್ಶಿ ಪಿ ಕೆ ಬಿಜು ‘ಜನವರಿಯಲ್ಲಿ ಟಿವಿ ಆನ್ ಮಾಡಬೇಡಿ’ ಎಂದು ಹೇಳಿದ್ದರು. ಆ ಬಳಿಕ ಈ ರೀತಿಯ ಸುದ್ದಿ ಹಂಚಿಕೊಳ್ಳಲಾಗ್ತಿದೆ ಎಂದು ನ್ಯೂಸ್ ಚೆಕ್ಕರ್ ಡಾಟ್ ಇನ್ ಎಂಬ ವೆಬ್‌ಸೈಟ್ ತಿಳಿಸಿದೆ.

ನ್ಯೂಸ್‌ ಚೆಕ್ಕರ್ ಡಾಟ್ ಇನ್ ಸುದ್ದಿ ಲಿಂಕ್‌

ಕೇರಳ ರಾಜ್ಯ ವಿದ್ಯುತ್ ಮಂಡಳಿ (ಕೆಎಸ್‌ಇಬಿ) ಜನವರಿ 22ರಂದು ಪ್ರಮುಖ ನಿರ್ವಹಣಾ ಕಾರ್ಯ ಕೈಗೊಂಡಿದೆ. ಈ ಕಾರಣದಿಂದ ರಾಜ್ಯಾದ್ಯಂತ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು ಎಂದು ಸುದ್ದಿಯಾಗಿದೆ.

ವಾಸ್ತವ : ಮೇಲಿನ ಸುದ್ದಿಯ ಸತ್ಯಾಸತ್ಯತೆ ತಿಳಿದುಕೊಳ್ಳಲು ನಾನು ಗೌರಿ.ಕಾಂ “Electricity supply will remain closed in entire Kerala on January 22” ಎಂದು ಗೂಗಲ್‌ನಲ್ಲಿ ಕೀ ವರ್ಡ್‌ ಸರ್ಚ್ ಮಾಡಿದೆ. ಈ ವೇಳೆ ಕೇರಳ ಸರ್ಕಾರ ಜನವರಿ 22ರಂದು ರಾಜ್ಯಾದ್ಯಂತ ವಿದ್ಯುತ್ ಕಡಿತ ಮಾಡಲು ನಿರ್ಧರಿಸಿದೆ ಎಂಬುವುದರ ಕುರಿತು ಯಾವುದೇ ಮುಖ್ಯ ವಾಹಿನಿ ಮಾಧ್ಯಮ ವರದಿಗಳು ದೊರೆತಿಲ್ಲ.

ಬಲಪಂಥೀಯ ಡಿಜಿಟಲ್ ಮಾಧ್ಯಮಗಳಾದ Opindia (ಓಪ್ ಇಂಡಿಯಾ), Organiser (ಆರ್ಗನೈಸರ್) ಜನವರಿ 22ರಂದು ಟಿವಿ ಆನ್‌ ಮಾಡಬೇಡಿ ಎಂದು ಪಿಕೆ ಬಿಜು ಅವರು ಹೇಳಿರುವುದಾಗಿ ಸುದ್ದಿ ಪ್ರಕಟಿಸಿವೆ. ಅವುಗಳು ಕೂಡ ಜನವರಿ 22ರಂದು ರಾಜ್ಯಾದ್ಯಂತ ವಿದ್ಯುತ್ ಕಡಿತವಾಗಲಿದೆ ಎಂದು ಸ್ಪಷ್ಟವಾಗಿ ಹೇಳಿಲ್ಲ.

ನಾವು ಕೇರಳ ರಾಜ್ಯ ವಿದ್ಯುತ್ ಮಂಡಳಿಯ ಅಧಿಕೃತ ಫೇಸ್‌ಬುಕ್ ಖಾತೆಯನ್ನು ಪರಿಶೀಲಿಸಿದ್ದೇವೆ. ಅದರಲ್ಲಿ ಜನವರಿ 22ರಂದು ವಿದ್ಯುತ್ ಕಡಿತದ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ.

ಕೇರಳ ರಾಜ್ಯ ವಿದ್ಯುತ್ ಮಂಡಳಿಯ ಅಧಿಕೃತ ಫೇಸ್‌ಬುಕ್ ಖಾತೆ ಲಿಂಕ್ 

“ನಾವು ಕೇರಳ ರಾಜ್ಯ ವಿದ್ಯುತ್ ಮಂಡಳಿಯ ಸಾಮಾಜಿಕ ಮಾಧ್ಯಮ ತಂಡವನ್ನು ಸಂಪರ್ಕಿಸಿದ್ದೇವೆ. ಅವರು ಜನವರಿ 22ರಂದು ವಿದ್ಯುತ್ ಕಡಿತವಾಗಲಿದೆ ಎಂಬುವುದನ್ನು ನಿರಾಕರಿಸಿದ್ದಾರೆ. ಅಂದು ಯಾವುದೇ ನಿರ್ವಹಣಾ ಕಾರ್ಯ ಕೈಗೊಂಡಿಲ್ಲ ಎಂದು ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ” ಎಂದು ಇಂಗ್ಲಿಷ್ ಫ್ಯಾಕ್ಟ್ ಚೆಕ್ ವೆಬ್‌ಸೈಟ್ ನ್ಯೂಸ್ ಚೆಕ್ಕರ್ ಡಾಟ್ ಇನ್ ತಿಳಿಸಿದೆ.

ನಾವು ಕೇರಳ ಮುಖ್ಯಮಂತ್ರಿಯವರ ಮಾಧ್ಯಮ ಕಾರ್ಯದರ್ಶಿ ಪಿ ಎಂ ಮನೋಜ್ ಅವರನ್ನೂ ಸಂಪರ್ಕಿಸಿದ್ದೇವೆ. ಅವರೂ ಈ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ ಎಂದು ನ್ಯೂಸ್ ಚೆಕ್ಕರ್ ಹೇಳಿದೆ.

ನ್ಯೂಸ್‌ ಚೆಕ್ಕರ್ ಡಾಟ್ ಇನ್ ಸುದ್ದಿ ಲಿಂಕ್‌

ಒಟ್ಟಿನಲ್ಲಿ, ಲಭ್ಯವಾದ ಮೂಲಗಳನ್ನು ಬಳಸಿಕೊಂಡು ನಾನುಗೌರಿ.ಕಾಂ ನಡೆಸಿದ ಪರಿಶೀಲನೆಯ ಪ್ರಕಾರ ಜನವರಿ 22ರಂದು ರಾಮ ಮಂದಿರದ ಉದ್ಘಾಟನೆಯ ದಿನ ವಿದ್ಯುತ್ ಕಡಿತ ಮಾಡಲು ಕೇರಳ ಸರ್ಕಾರ ನಿರ್ಧರಿಸಿದೆ ಎಂಬ ಸುದ್ದಿ ಸುಳ್ಳು ಎಂದು ತಿಳಿದು ಬಂದಿದೆ.

Fact Check: ರಾಮ ಮಂದಿರ ಉದ್ಘಾಟನೆಯಂದು ಇಸ್ರೇಲ್ ರಾಷ್ಟ್ರೀಯ ರಜಾದಿನ ಘೋಷಿಸಿದೆಯಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ರೋಹಿತ್ ವೇಮುಲಾ’ ದಲಿತ ಸಮುದಾಯಕ್ಕೆ ಸೇರಿಲ್ಲ!: ಪ್ರಕರಣದ ಫೈಲ್ ಕ್ಲೋಸ್ ಮಾಡಿದ ಪೊಲೀಸರು

0
ದೇಶದಾದ್ಯಂತ ಭಾರೀ ಸದ್ದು ಮಾಡಿದ್ದ ಹೈದರಾಬಾದ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವಿನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ತೆಲಂಗಾಣ ಪೊಲೀಸರು ಪ್ರಕರಣದ ಮುಕ್ತಾಯದ ವರದಿಯನ್ನು ಸಲ್ಲಿಸಿದ್ದಾರೆ. 2016ರ ಜನವರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ...