ತೃಣಮೂಲ ಕಾಂಗ್ರೆಸ್ (TMC) ಕಾರ್ಯಕರ್ತರು 18 ವರ್ಷದ ಬಿಜೆಪಿ ಸದಸ್ಯನನ್ನು ಕೊಂದಿದ್ದಾರೆ ಎಂಬ ಹೇಳಿಕೆಯೊಂದಿಗೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿರುವ ಯುವಕನ ಚಿತ್ರವನ್ನು ಹಂಚಿಕೊಳ್ಳುತ್ತಿದ್ದಾರೆ.
ಈ ಚಿತ್ರವನ್ನು ಅರ್ಪಿತ ಜನ ಎಂಬುವವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, “ಈತ ಪಶ್ಚಿಮ ಬಂಗಾಳದ 18 ವರ್ಷದ ವ್ಯಕ್ತಿ ತ್ರಿಲೋಚನ್ ಮಹತೋ. TMC ಕಾರ್ಯಕರ್ತರು ಈತನನ್ನು ಕೊಂದು ‘ಟಿ-ಶರ್ಟ್ ಮೇಲೆ’ ಬಿಜೆಪಿಯ ಭಾಗವಾಗಿದ್ದಕ್ಕಾಗಿ ಈ ಶಿಕ್ಷೆ ‘ಎಂದು ಬರೆದಿದ್ದಾರೆ. ಆದರೆ TMC ನಾಯಕ ಡೆರೆಕ್ ಒ’ಬ್ರಿಯೆನ್, ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಮಾತನಾಡಲು ನೀಡಲು ಯುಪಿಗೆ ಹೋಗಿದ್ದಾರೆ. ಅವರ ಕರುಣಾಜನಕ ರಾಜಕಾರಣವನ್ನು ನೀವು ನೋಡುತ್ತಿದ್ದೀರಾ?” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಪ್ರಧಾನಿ ಉದ್ಘಾಟಿಸಿದ ಅಟಲ್ ಸುರಂಗ ಎಂದು ಅಮೇರಿಕಾ ಸುರಂಗದ ಚಿತ್ರ ಹಂಚಿಕೊಂಡ ಮಾಧ್ಯಮಗಳು!
ये पश्चिम बंगाल का एक 18 साल का लड़का त्रिलोचन महतो है। जिसका TMC कार्यकर्ताओं ने हत्या कर दी और उसके टीशर्ट पर लिख दिया 'ये भाजपा में शामिल होने का सज़ा है।'
और आज TMC सांसद डेरेक ओ ब्रायन यूपी गए है कानून व्यवस्था पर ज्ञान छिलने। घिनौनी राजनीति देख रहे हो इनके? pic.twitter.com/ngUylAHKfW— Arpita Jana ♓ (@arpispeaks) October 2, 2020
ಇದನ್ನೂ ಓದಿ: ನರೇಂದ್ರ ಮೋದಿ ಗುಜರಾತ್‌ನಲ್ಲಿ ಕ್ರೂಸ್ ಹಡಗು ಸೇವೆಯನ್ನು ಪ್ರಾರಂಭಿಸಿದ್ದಾರೆಯೇ? ಇಲ್ಲಿದೆ ವಿವರ
ಈ ಟ್ವೀಟ್‌ಗೆ, ಈ ವರದಿ ಬರೆಯುವ ವೇಳೆಗೆ, ಸುಮಾರು 12,000 ಟ್ವಿಟ್ಟರ್ ಬಳಕೆದಾರರು ಲೈಕ್ ನೀಡಿದ್ದು, 8,000 ಜನ ಇದನ್ನು ರೀಟ್ವೀಟ್ ಮಾಡಿದ್ದಾರೆ.
ಅಕ್ಟೋಬರ್ 5 ರಂದು ಕ್ರೆಟಿಲಿ ಎಂಬ ವೆಬ್‌ಸೈಟ್ ಇದೇ ಪ್ರತಿಪಾದನೆಯೊಂದಿಗೆ ಈ ಚಿತ್ರವನ್ನು ಬಳಸಿಕೊಂಡು ಲೇಖನವೊಂದನ್ನು ಪ್ರಕಟಿಸಿದೆ. ಈ ಲೇಖನವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಇದೇ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾವಿರಾರು ಜನ ಬಳಕೆದಾರರು ಈ ಪೋಸ್ಟನ್ನು ಹಂಚಿಕೊಂಡಿದ್ದಾರೆ. ಅದರ ಆರ್ಕೈವ್ ಪೋಸ್ಟನ್ನು ಇಲ್ಲಿ ಕಾಣಬಹುದು.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಎಡಿಟೆಡ್ ವಿಡಿಯೋ ಹಂಚಿದ ಮಧ್ಯಪ್ರದೇಶ ಕಾಂಗ್ರೆಸ್!
ಫ್ಯಾಕ್ಟ್‌ಚೆಕ್:
ಈ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಇದಕ್ಕೆ ಸಂಬಂಧಿಸಿದಂತೆ 2018 ರಲ್ಲಿ ಇಂಡಿಯಾ ಟುಡೆಯಲ್ಲಿ ಪ್ರಕಟವಾದ ಲೇಖನ ಸಿಗುತ್ತದೆ. ಈ ಲೇಖನವು ಇದೇ ಚಿತ್ರವನ್ನು ಹೊಂದಿದೆ. ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ 18 ವರ್ಷದ ಯುವಕನ ಶವ ಪತ್ತೆಯಾಗಿದೆ ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಇದಾದ ನಂತರ ಈತ ತಮ್ಮ ಪಕ್ಷದ ಸದಸ್ಯ ಎಂದು ಅಲ್ಲಿನ ಬಿಜೆಪಿ ಹೇಳಿಕೊಂಡಿತ್ತು ಎಂದು ದಿ ಕ್ವಿಂಟ್ ವರದಿ ಮಾಡಿದೆ.
ಅಷ್ಟೆ ಅಲ್ಲದೇ, ಗೃಹ ಸಚಿವ ಅಮಿತ್ ಶಾ ಅವರು ಮೇ 2018 ರಲ್ಲಿ ಚಿತ್ರವನ್ನು ಟ್ವೀಟ್ ಮಾಡಿದ್ದು, “ಯುವ ಸದಸ್ಯನನ್ನು ಮರದಲ್ಲಿ ಗಲ್ಲಿಗೇರಿಸಲಾಗಿದೆ. ಏಕೆಂದರೆ ಆತನ ಸಿದ್ಧಾಂತವು ರಾಜ್ಯ ಪ್ರಾಯೋಜಿತ ಗೂಂಡಾಗಳಿಗಿಂತ ಭಿನ್ನವಾಗಿದೆ” ಎಂದು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಕೇಂದ್ರ ಸರ್ಕಾರ ಪ್ರತಿ ಹೆಣ್ಣು ಮಕ್ಕಳಿಗೆ ಮಾಸಿಕ ತಲಾ 2000 ರೂ. ನೀಡುತ್ತಿರುವುದು…
ಕ್ವಿಂಟ್ ಕೂಡ 2018 ರಲ್ಲಿ ನಡೆದ ಘಟನೆಯ ಬಗ್ಗೆ ವರದಿ ಮಾಡಿತ್ತು. ಸಂತ್ರಸ್ತನ ಗುರುತನ್ನು ಸ್ವತಂತ್ರವಾಗಿ ಪರಿಶೀಲಿಸಲಾಗದಿದ್ದರೂ, ಅಮಿತ್ ಷಾ ಅವರ ಟ್ವೀಟ್‌ನಲ್ಲಿ ಸಂತ್ರಸ್ತನ ಹೆಸರು “ತ್ರಿಲೋಚನ್ ಮಹಾತೋ” ಎಂದು ಉಲ್ಲೇಖವಾಗಿದೆ.
18 ವರ್ಷದ ಮೃತ ಯುವಕನ ಬಟ್ಟೆಯ ಮೇಲೆ ಟಿಪ್ಪಣಿಯೊಂದು ಕಂಡುಬಂದಿದೆ. “ಬಿಜೆಪಿಯೊಂದಿಗಿನ ನಿನ್ನ ಒಡನಾಟವೇ ನಿನ್ನ ಸಾವಿಗೆ ಕಾರಣ. ಚುನಾವಣೆಯ ನಂತರ ನಾನು ನಿನ್ನನ್ನು ಕೊಲ್ಲಲ್ಲು ಯತ್ನಿಸಿದ್ದೆ. ಆದರೆ ನಾನು ಆಗ ವಿಫಲವಾಗಿದ್ದೆ. ಇಂದು ನಿನ್ನ ಜೀವನ ಕೊನೆಗೊಂಡಿದೆ” ಎಂದು ಬರೆಯಲಾಗಿತ್ತು.
ಘಟನೆಯ ಹಿಂದಿನ ದಿನ ಸಂಜೆ ಯುವಕನು ತನ್ನ ಹಳ್ಳಿಯಿಂದ ಕೇವಲ ಮೂರು ಕಿಲೋಮೀಟರ್ ದೂರದಲ್ಲಿರುವ ಸ್ಥಳಕ್ಕೆ ಹೋಗಿದ್ದು, ಮನೆಗೆ ಹಿಂದಿರುಗಿರಲಿಲ್ಲ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಯುವತಿಯನ್ನು ಅಮಾನುಷವಾಗಿ ಕೊಲ್ಲುತ್ತಿರುವ ಈ ವಿಡಿಯೋ ಭಾರತದ್ದಲ್ಲ
“ಅವರ ಕುಟುಂಬದಿಂದ ನಮಗೆ ಮಾಹಿತಿ ಬಂದ ನಂತರ, ಇಡೀ ರಾತ್ರಿ ಹುಡುಕಾಡಿದರೂ ಆತನನ್ನು ಪತ್ತೆಹಚ್ಚಲಾಗಲಿಲ್ಲ” ಎಂದು ಹಿರಿಯ ಜಿಲ್ಲಾ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದರು. ಈ ಸಾವಿನ ಹಿಂದೆ ಪಶ್ಚಿಮ ಬಂಗಾಳದ TMC ಸರ್ಕಾರವಿದೆ ಎಂದು ಅಮಿತ್ ಷಾ ಆರೋಪಿಸಿದ್ದರೆ, ಟಿಎಂಸಿ ಈ ಆರೋಪಗಳನ್ನು ಆಧಾರರಹಿತ ಮತ್ತು ಸಂಚು ಎಂದು ಹೇಳಿದೆ.
ಹಾಗಾಗಿ, ಇದರಿಂದ ತಿಳಿದುಬರುವುದೇನೆಂದರೆ 2 ವರ್ಷಗಳ ಹಿಂದಿನ ಹತ್ಯೆಯನ್ನು ಪ್ರಸ್ತುತ ನಡೆದಿರುವ ಹತ್ಯೆ ಎಂದು ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ: ಕೇರಳದ ಹಿಂದೂ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ? ಇಲ್ಲಿದೆ ಫ್ಯಾಕ್ಟ್‌ಚೆಕ್ ವಿವರ


