Homeದಿಟನಾಗರಫ್ಯಾಕ್ಟ್‌ಚೆಕ್‌: ಕೆ.ಎಸ್ ಈಶ್ವರಪ್ಪನವರಿಗೆ ಬೈದಿದ್ದನ್ನು ಸಿದ್ದರಾಮಯ್ಯನವರಿಗೆ ಸಿ.ಎಂ. ಇಬ್ರಾಹಿಂ ಏಕವಚನದಲ್ಲಿ ಬೈಗುಳ ಎಂದು ತಿರುಚಲಾಗಿದೆ

ಫ್ಯಾಕ್ಟ್‌ಚೆಕ್‌: ಕೆ.ಎಸ್ ಈಶ್ವರಪ್ಪನವರಿಗೆ ಬೈದಿದ್ದನ್ನು ಸಿದ್ದರಾಮಯ್ಯನವರಿಗೆ ಸಿ.ಎಂ. ಇಬ್ರಾಹಿಂ ಏಕವಚನದಲ್ಲಿ ಬೈಗುಳ ಎಂದು ತಿರುಚಲಾಗಿದೆ

- Advertisement -
- Advertisement -

“ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ನಡುವೆ ಜಟಾಪಟಿ ನಡೆದಿದೆ” ಎಂಬ ಪ್ರತಿಪಾದನೆಯೊಂದಿಗೆ ವಿಡಿಯೊ ತುಣುಕ್ಕೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಸಿದ್ದರಾಮಯ್ಯನವರಿಗೆ ಸಿ.ಎಂ. ಇಬ್ರಾಹಿಂ ಏಕವಚನದಲ್ಲಿ ಬೈದರು ಎಂದು ವೈರಲ್ ಮಾಡಲಾಗುತ್ತಿದೆ.

“ಹೇಯ್‌ ಕೂತ್ಕೊಳಲೇ ಕೂಲಿ ಕೆಲ್ಸಕ್ಕೆ ಬಂದೋನು ನೀನು” ಎಂದು ಸಿ.ಎಂ. ಇಬ್ರಾಹಿಂ ಸಿದ್ದರಾಮಯ್ಯ ಅವರಿಗೆ ಹೇಳುತ್ತಿರುವಂತೆ ಈ ವಿಡಿಯೊದಲ್ಲಿ ಭಾಸವಾಗುತ್ತದೆ. ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸುತ್ತಾ, “ನಾನು ರಾಜಕಾರಣಕ್ಕೆ ಬಂದಾಗ ನೀನು ನೀನು ಚಡ್ಡಿನೇ ಹಾಕಿಲ್ಲ” ಎಂದು ಹೇಳಿದಂತೆ ಭಾಸವಾಗುತ್ತದೆ. ಹೀಗೆ ಈ ಇಬ್ಬರು ಕಾಂಗ್ರೆಸ್ ನಾಯಕರು ಜಗಳ ಆಡಿಕೊಂಡಿದ್ದಾರೆ ಎಂದು ಹಲವರು ಬಿಂಬಿಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಇದು ತಿರುಚಿದ (ಎಡಿಟ್ ಮಾಡಿದ) ವಿಡಿಯೋವಾಗಿದೆ. ಇದನ್ನು ಹಲವಾರು ಜನ ಹಂಚಿಕೊಂಡಿರುವುದನ್ನು ಕೆಳಗೆ ಕಾಣಬಹುದು.

ತಕ್ಷಣಕ್ಕೆ ನೋಡಿದರೆ ಕಾಂಗ್ರೆಸ್‌ ನಾಯಕರು ಜಗಳ ಆಡಿದ್ದಾರೆಂದೇ ಅನಿಸುತ್ತದೆ. ಆದರೆ ವಾಸ್ತವ ಬೇರೆ ಇದೆ. ಇಬ್ಬರು ಕಾಂಗ್ರೆಸ್‌ ನಾಯಕರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರ ಕುರಿತು ಮಾತನಾಡುತ್ತಿದ್ದಾರೆ ಎಂಬುದು ಮಾಧ್ಯಮಗಳ ವರದಿಗಳಿಂದ ಸ್ಪಷ್ಟವಾಗುತ್ತದೆ.

ಇಬ್ರಾಹಿಂ ಹಾಗೂ ಸಿದ್ದರಾಮಯ್ಯ ಅವರ ಮಾತಿನ ಹಿನ್ನೆಲೆಯನ್ನು ಸುವರ್ಣ ಸುದ್ದಿವಾಹಿನಿ ಪ್ರಸಾರ ಮಾಡಿದೆ. ಹಂಚಿಕೊಂಡಿರುವ ವಿಡಿಯೊದಲ್ಲಿ ಕೆಲವು ಪದಗಳನ್ನು ಮ್ಯೂಟ್ ಮಾಡಿರುವುದನ್ನು ಗುರುತಿಸಬಹುದು.

ಸುವರ್ಣ ವರದಿ ಹೇಳುವುದೇನು?

“ಸಿದ್ದರಾಮಯ್ಯ ಮತ್ತು ಇಬ್ರಾಹಿಂ ಆತ್ಮೀಯ ಸ್ನೇಹಿತರು. ಇವರಿಬ್ಬರ ನಡುವೆ ಚರ್ಚೆ ಸಾಮಾನ್ಯ. ಮತ್ತೆ ಇವರಿಬ್ಬರ ನಡುವೆ ಸ್ವಾರಸ್ಯಕರ ಚರ್ಚೆ ನಡೆದಿದೆ. ಪರಿಷತ್‌ನಲ್ಲಿ ಸರ್ಕಾರವನ್ನು ಝಾಡಿಸುವಂತೆ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಪರಿಷತ್‌ನಲ್ಲಾದ ಈಶ್ವರಪ್ಪ ಅವರೊಂದಿಗಿನ ಜಗಳವನ್ನು ಇಬ್ರಾಹಿಂ ಪ್ರಸ್ತಾಪಿಸಿದ್ದಾರೆ. ಪರಿಷತ್‌ನಲ್ಲಿ ಸಚಿವ ಈಶ್ವರಪ್ಪ ಅವರು ರೋಲೆಕ್ಸ್‌ ವಾಚ್ ಪ್ರಕರಣದ ಕುರಿತು ಪ್ರಸ್ತಾಪ ಮಾಡಿದರು. ಈ ವೇಳೆ ಈಶ್ವರಪ್ಪನವರಿಗೆ ಝಾಡಿಸಿದೆ ಎಂದು ಸಿ.ಎಂ. ಇಬ್ರಾಹಿಂ ಅವರು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಚರ್ಚಿಸಿದರು” ಎಂದು ವರದಿ ಹೇಳುತ್ತದೆ.

ಕೆ.ಎಸ್‌.ಈಶ್ವರಪ್ಪ ಹಾಗೂ ಸಿ.ಎಂ.ಇಬ್ರಾಹಿಂ ಅವರು ವಿಧಾನಪರಿಷತ್‌ನಲ್ಲಿ ಚರ್ಚೆ ಮಾಡಿರುವುದನ್ನೂ ದೃಶ್ಯ ಮಾಧ್ಯಮಗಳು ವರದಿ ಮಾಡಿವೆ. ಟಿ.ವಿ.9 ಕನ್ನಡ ಸುದ್ದಿ ವಾಹಿನಿ ಮಾಡಿರುವ ವರದಿಯನ್ನು ಈ ನಿಟ್ಟಿನಲ್ಲಿ ಗಮನಿಸಬಹುದು. ಪರಿಷತ್‌ನಲ್ಲಿ ನಡೆದ ಚರ್ಚೆಯನ್ನು ಇಬ್ರಾಹಿಂ ಅವರು ಸಿದ್ದರಾಮಯ್ಯನವರಿಗೆ ತಿಳಿಸುತ್ತಿದ್ದರು ಎಂಬುದು ವಾಸ್ತವವಾಗಿದೆ. ಆದರೆ ಇದೇ ವಿಡಿಯೋವನ್ನು ಕಾಂಗ್ರೆಸ್ ನಾಯಕರ ಏಕವಚನದ ಜಗಳ ಎಂದು ತಿರುಚಿ ಹಂಚಿಕೊಳ್ಳಲಾಗುತ್ತಿದೆ.


ಇದನ್ನೂ ಓದಿರಿ: ಮತಾಂತರ ನಿಷೇಧ ಮಸೂದೆಗೆ ಕಾಂಗ್ರೆಸ್‌ ವಿರೋಧ ಇರಲಿದೆ: ಡಿ.ಕೆ.ಶಿವಕುಮಾರ್‌‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮುಡಾ ಪ್ರಕರಣ : ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

0
ಆಪಾದಿತ ಮುಡಾ ಹಗರಣ ಪ್ರಕರಣದಲ್ಲಿ ತನ್ನ ವಿರುದ್ದ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೆಪ್ಟೆಂಬರ್ 12ಕ್ಕೆ ಮುಂದೂಡಿದೆ. ಇಂದು ಅರ್ಜಿ ವಿಚಾರಣೆ ನಡೆಯಿತು. ವಾದ...