Homeಮುಖಪುಟವರದಿಯಲ್ಲಿ ಸುಳ್ಳು ಹೇಳಿಕೆ ನೀಡುವುದು ಅಪರಾಧವಲ್ಲ: ಎಡಿಟರ್ಸ್ ಗಿಲ್ಡ್ ಪ್ರಕರಣದಲ್ಲಿ ಸುಪ್ರೀಂ ಹೇಳಿಕೆ

ವರದಿಯಲ್ಲಿ ಸುಳ್ಳು ಹೇಳಿಕೆ ನೀಡುವುದು ಅಪರಾಧವಲ್ಲ: ಎಡಿಟರ್ಸ್ ಗಿಲ್ಡ್ ಪ್ರಕರಣದಲ್ಲಿ ಸುಪ್ರೀಂ ಹೇಳಿಕೆ

- Advertisement -
- Advertisement -

ಮಣಿಪುರ ಹಿಂಸಾಚಾರದ ಸತ್ಯಶೋಧನಾ ವರದಿಯನ್ನು ಪ್ರಕಟಿಸಿದ್ದಕ್ಕೆ ಎಡಿಟರ್ಸ್ ಗಿಲ್ಡ್‌ನ ನಾಲ್ವರು ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಅವರ ಬಂಧನದಿಂದ ಮಧ್ಯಂತರ ರಕ್ಷಣೆಯನ್ನು ಎರಡು ವಾರದವರೆಗೆ ಸುಪ್ರೀಂ ಕೋರ್ಟ್ ವಿಸ್ತರಿಸಿದೆ.

”ವರದಿಯಲ್ಲಿ ಸುಳ್ಳು ಹೇಳಿಕೆ ನೀಡುವುದು 153ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಪರಾಧವಲ್ಲ, ಅದು ತಪ್ಪು ಹೇಳಿಕೆಗಳಾಗಿರಬಹುದು” ಎಂದು ಸುಪ್ರೀಂ ಕೋರ್ಟ್ ಹೇಳಿದೆ.

”ದೇಶದಾದ್ಯಂತ ಪತ್ರಕರ್ತರು ತಪ್ಪು ಹೇಳಿಕೆಗಳನ್ನು ನೀಡುತ್ತಾರೆ, ನೀವು ಎಲ್ಲರನ್ನೂ ವಿಚಾರಣೆಗೆ ಒಳಪಡಿಸುತ್ತೀರಾ?” ಎಂದು ನ್ಯಾಯಾಲಯ ಕೇಳಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು, ಮೇಲ್ನೋಟಕ್ಕೆ ತೋರುವಂತೆ, ಪತ್ರಕರ್ತರ ವಿರುದ್ಧ ಯಾವುದೇ ಅಪರಾಧಗಳನ್ನು ಮಾಡಲಾಗಿಲ್ಲ. ನಾಲ್ವರು ಪತ್ರಕರ್ತರ ವಿರುದ್ಧದ ಎಫ್‌ಐಆರ್‌ ಏಕೆ ರದ್ದುಗೊಳಿಸಬಾರದು ಎಂದು ಪ್ರಶ್ನಿಸಿದರು.

”ಪತ್ರಕರ್ತರು ವಿಷಯವನ್ನು ಪ್ರಸ್ತುತಪಡಿಸಲು ಮಾತ್ರ ಮುಂದಾಗಿದ್ದಾರೆ. ಈ ಅಪರಾಧಗಳನ್ನು (ಎಫ್‌ಐಆರ್‌ಗಳಲ್ಲಿ ಉಲ್ಲೇಖಿಸಿದಂತೆ) ಹೇಗೆ ಮಾಡಲಾಗಿದೆ ಎಂಬುದನ್ನು ನಮಗೆ ತೋರಿಸಿ. ಇದು ಕೇವಲ ವರದಿಯಾಗಿದೆ. ನೀವು ಅಪರಾಧಗಳನ್ನು ಮಾಡದಿರುವ ಸೆಕ್ಷನ್‌ಗಳನ್ನು ಸೇರಿಸಿದ್ದೀರಿ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಈ ವೇಳೆ ಎಡಿಟರ್ಸ್ ಗಿಲ್ಡ್‌ನ ನಾಲ್ವರು ಸದಸ್ಯರಿಗೆ ಇನ್ನೂ ಎರಡು ವಾರಗಳವರೆಗೆ ಬಂಧನದಿಂದ ರಕ್ಷಣೆಯನ್ನು ವಿಸ್ತರಿಸಿದೆ.

ಇದನ್ನೂ ಓದಿ: ಮಣಿಪುರ ಸಂಘರ್ಷ: ಎಡಿಟರ್ಸ್ ಗಿಲ್ಡ್ ವಿರುದ್ಧ ಎಫ್ಐಆರ್ ದಾಖಲಿಸಿದ ಪೊಲೀಸರು

ಮಣಿಪುರ ಹಿಂಸಾಚಾರದ ಕುರಿತು ಅಲ್ಲಿಯ ಕೆಲವು ಪತ್ರಕರ್ತರು ಏಕಪಕ್ಷೀಯವಾಗಿ ವರದಿ ಮಾಡಿದ್ದಾರೆ ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಸತ್ಯಶೋಧನಾ ತಂಡ ಶನಿವಾರ ವರದಿ ಬಿಡುಗಡೆ ಮಾಡಿದೆ. ಈ ವರದಿಗೆ ಸಂಬಂಧಿಸಿದಂತೆ ಸತ್ಯಶೋಧನಾ ತಂಡದ ಮೂವರ ವಿರುದ್ಧ ಮಣಿಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66Aಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದರೂ ಸಹ ಪೊಲೀಸರು ಜಾರಿಯಲ್ಲಿಟ್ಟಿದ್ದಾರೆ. ಅನೇಕ ಸಂದರ್ಭಗಳಲ್ಲಿ, ಈ ನಿಬಂಧನೆಯ ಅಡಿಯಲ್ಲಿ ಯಾರನ್ನೂ ವಿಚಾರಣೆಗೆ ಒಳಪಡಿಸಬಾರದು ಎಂದು ನ್ಯಾಯಾಲಯವು ನಿರ್ದೇಶಿಸಿದೆ.

”ಆಕ್ಷೇಪಾರ್ಹ ಮತ್ತು ಬೆದರಿಕೆಯ” ಪೋಸ್ಟಗಳನ್ನು ಆನ್‌ಲೈನ್ ಬರೆಯುವ ವ್ಯಕ್ತಿಗಳನ್ನು ಬಂಧಿಸಲು ಮತ್ತು ಜೈಲಿನಲ್ಲಿಡಲು ಸರ್ಕಾರಕ್ಕೆ ಸೆಕ್ಷನ್ 66A ಅಡಿಯಲ್ಲಿ ಅಧಿಕಾರವನ್ನು ನೀಡಿದೆ.

ಸತ್ಯಶೋಧನಾ ತಂಡದ ಮೂವರ ವಿರುದ್ಧ ”ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು, ಧಾರ್ಮಿಕ ಕಟ್ಟಡಗಳನ್ನು ಧ್ವಂಸಗೊಳಿಸುವುದು  ಅಥವಾ ಅಪವಿತ್ರಗೊಳಿಸುವುದು, ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುವ ಉದ್ದೇಶಪೂರ್ವಕವಾಗಿ ಮಾತನಾಡುವುದು ಮತ್ತು ಸಾರ್ವಜನಿಕವಾಗಿ ಗಲಭೆಗೆ ಪ್ರಚೋದಿಸುವ ಹೇಳಿಕೆಗಳಿಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವರದಿಯ ಲೇಖಕರಾದ ಸೀಮಾ ಗುಹಾ, ಭರತ್ ಭೂಷಣ್, ಸಂಜಯ್ ಕಪೂರ್ ಮತ್ತು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಅಧ್ಯಕ್ಷೆ ಸೀಮಾ ಮುಸ್ತಫಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ವರದಿಯು “ಸುಳ್ಳು, ಮತ್ತು ಪ್ರಾಯೋಜಿತ” ಎಂದು ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ. ವರದಿಯಲ್ಲಿನ ಫೋಟೋವು ಕುಕಿ ಮನೆಯಿಂದ ಹೊಗೆ ಏರುತ್ತಿದೆ ಎಂದು ತಪ್ಪಾಗಿ ಹೇಳಲಾಗಿದೆ, ಆದರೆ ಅದು ವಾಸ್ತವವಾಗಿ ಅರಣ್ಯ ಅಧಿಕಾರಿಯ ಕಚೇರಿಯಾಗಿದೆ. ವರದಿಯು ಸುಳ್ಳು ಮತ್ತು ಕುಕಿ ಉಗ್ರಗಾಮಿಗಳಿಂದ ಪ್ರಾಯೋಜಿತವಾಗಿದೆ” ಎಂದು ಪೊಲೀಸರು ಹೇಳಿದ್ದಾರೆ.

ವರದಿ ಏನು ಹೇಳಿದೆ?

ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಕುರಿತು ವರದಿಗಾರಿಕೆ ಮಾಡುವಾಗ ಅಲ್ಲಿಯ ಪತ್ರಕರ್ತರು ಏಕಪಕ್ಷೀಯ ವರದಿಗಳನ್ನು ಬರೆದಿದ್ದರು ಎಂದು ಶನಿವಾರ ಬಿಡುಗಡೆಗೊಂಡ ಎಡಿಟರ್ಸ್ ಗಿಲ್ಡ್‌ನ ಸತ್ಯಶೋಧನಾ ತಂಡವು ತನ್ನ ವರದಿಯಲ್ಲಿ ಹೇಳಿದೆ.

ಸಾಮಾನ್ಯ ಸಂದರ್ಭಗಳಲ್ಲಿ ಪತ್ರಿಕೆಗಳ ಸಂಪಾದಕರು ಅಥವಾ ಸ್ಥಳೀಯಾಡಳಿತದ ಸ್ಥಳೀಯ ಬ್ಯೂರೊಗಳ ಮುಖ್ಯಸ್ಥರು, ಪೊಲೀಸರು ಮತ್ತು ಭದ್ರತಾ ಪಡೆಗಳು ಈ ವರದಿಗಳನ್ನು ಪುನರ್‌ಪರಿಶೀಲಿಸುತ್ತಾರೆ. ಆದರೆ ಸಂಘರ್ಷದ ಸಮಯದಲ್ಲಿ ಇದು ಸಾಧ್ಯವಾಗಿರಲಿಲ್ಲ ಎನ್ನುವುದನ್ನು ವರದಿಯು ಗಮನಿಸಿದೆ.

ಮೈತಿಗಳು ಮತ್ತು ಕುಕಿಗಳ ನಡುವೆ ಘರ್ಷಣೆಗಳು ಆರಂಭಗೊಂಡಿದ್ದ ಮೇ ಮೊದಲ ವಾರದಲ್ಲಿ ರಾಜ್ಯದಲ್ಲಿ ಇಂಟರ್ನೆಟ್ ನಿಷೇಧ ಹೇರಲಾಗಿದ್ದರಿಂದ ಮಣಿಪುರದಿಂದ ವರದಿಗಾರಿಕೆ ಕಷ್ಟವಾಗಿತ್ತು. ಯಾವುದೇ ಸಂವಹನ ಸೌಲಭ್ಯಗಳಿಲ್ಲದೆ ಸಂಗ್ರಹಿಸಲಾಗಿದ್ದ ಸ್ಥಳೀಯ ಸುದ್ಧಿಗಳು ಪರಿಸ್ಥಿತಿಯ ಸಮತೋಲಿತ ನೋಟವನ್ನು ನೀಡುವಷ್ಟಿರಲಿಲ್ಲ ಎನ್ನುವುದನ್ನು ಎಡಿಟರ್ಸ್ ಗಿಲ್ಡ್ ಕಂಡುಕೊಂಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...