Homeಮುಖಪುಟಮಹಾರಾಷ್ಟ್ರ: ಆಸ್ಪತ್ರೆಯೊಂದರಲ್ಲಿ 3 ತಿಂಗಳಲ್ಲಿ 179 ಶಿಶುಗಳ ಸಾವು

ಮಹಾರಾಷ್ಟ್ರ: ಆಸ್ಪತ್ರೆಯೊಂದರಲ್ಲಿ 3 ತಿಂಗಳಲ್ಲಿ 179 ಶಿಶುಗಳ ಸಾವು

- Advertisement -
- Advertisement -

ಮಹಾರಾಷ್ಟ್ರದ ನಂದೂರ್ಬಾರ್ ಸಿವಿಲ್ ಆಸ್ಪತ್ರೆಯಲ್ಲಿ ಆಘಾತಕಾರಿ ಬೆಳವಣಿಗೆ ನಡೆದಿದ್ದು, ಕಳೆದ 3 ತಿಂಗಳಲ್ಲಿ 179 ಶಿಶುಗಳು ಪ್ರಾಣ ಕಳೆದುಕೊಂಡಿದ್ದಾರೆ.

ಮಕ್ಕಳ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಇದು ಆಸ್ಪತ್ರೆಯಲ್ಲಿನ ವೈದ್ಯಕೀಯ ಸವಾಲನ್ನು ಒತ್ತಿ ಹೇಳಿದೆ.

ನಂದೂರ್‌ಬಾರ್‌ನ ಮುಖ್ಯ ವೈದ್ಯಾಧಿಕಾರಿ ಎಂ ಸಾವನ್ ಕುಮಾರ್ ಈ ಕುರಿತು ಆಘಾತಕಾರಿ ಮಾಹಿತಿಯನ್ನು ನೀಡಿದ್ದು, ಜುಲೈನಲ್ಲಿ ನಂದೂರ್ಬಾರ್ ಸಿವಿಲ್ ಆಸ್ಪತ್ರೆಯಲ್ಲಿ 75 ಮಕ್ಕಳು ಮೃತಪಟ್ಟಿದ್ದಾರೆ. ಇದು ಆಗಸ್ಟ್‌ನಲ್ಲಿ 86ಕ್ಕೆ ಏರಿದೆ ಮತ್ತು ಸೆಪ್ಟೆಂಬರ್‌ನಲ್ಲಿ ಇಲ್ಲಿಯವರೆಗೆ ಹೆಚ್ಚುವರಿ 18 ಸಾವುಗಳು ಸಂಭವಿಸಿದೆ ಎಂದು ಹೇಳಿದ್ದಾರೆ.

ಈ ರೀತಿಯಾಗಿ ಮಕ್ಕಳ ಸರಣಿ ಸಾವಿಗೆ ಹಲವಾರು ಅಂಶಗಳು ಕಾರಣವಾಗಿವೆ. ಕಡಿಮೆ ಜನನ ತೂಕ, ಉಸಿರುಕಟ್ಟುವಿಕೆ, ಉಸಿರಾಟದ ಕಾಯಿಲೆಗಳು ಪ್ರಾಥಮಿಕ ಕಾರಣವಾಗಿದೆ. ಈ ಸಾವುಗಳಲ್ಲಿ 0-28 ದಿನಗಳ ವಯಸ್ಸಿನ ಶಿಶುಗಳ ಸಂಖ್ಯೆ ಗಣನೀಯ ಎಂದರೆ 70% ಇದೆ ಎಂದು ತಿಳಿದು ಬಂದಿದೆ.

ಈ  ಪ್ರದೇಶದಲ್ಲಿ ಗರ್ಭಿಣಿಯರಲ್ಲಿ ಕೆಲ ಕಾಯಿಲೆಗಳು ಕಂಡು ಬಂದಿದೆ. ಇದು ಹೆರಿಗೆಯ ಸಮಯದಲ್ಲಿ ತೊಡಕುಗಳಿಗೆ ಕಾರಣವಾಗಿರಬಹುದು ಮತ್ತು ಆರೋಗ್ಯ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ ಎಂದು ವೈದ್ಯಾಧಿಕಾರಿ ಎಂ ಸಾವನ್ ಕುಮಾರ್ ಹೇಳಿದ್ದಾರೆ.

ಶಿಶುಗಳ ಸಾವುಗಳನ್ನು ತಡೆಯಲು ಕ್ರಮವನ್ನು ಕೈಗೊಳ್ಳಲಾಗಿದೆ. ಮಕ್ಕಳ ಮರಣದ ಮೂಲ ಕಾರಣಗಳನ್ನು ತಿಳಿಯುವುದು ಮತ್ತು ಅದಕ್ಕೆ ತಕ್ಕಂತೆ ಅಗತ್ಯ ಔಷಧಿಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು  ಸಾವನ್ ಕುಮಾರ್ ಹೇಳಿದ್ದಾರೆ.

ಇದನ್ನು ಓದಿ: ಅಂಬೇಡ್ಕರ್, ತಿರುವಳ್ಳುವರ್ ಬಗ್ಗೆ ಅವಹೇಳನ: ವಿಹೆಚ್‌ಪಿಯ ಮಾಜಿ ನಾಯಕನ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...