Homeಮುಖಪುಟಗ್ರಾಮಸ್ಥನಿಗೆ ಕಚೇರಿಯಲ್ಲಿ ಮಂಡಿಯೂರಿ ಕೂರಿಸಿ ಅವಮಾನಿಸಿದ ಅಧಿಕಾರಿ

ಗ್ರಾಮಸ್ಥನಿಗೆ ಕಚೇರಿಯಲ್ಲಿ ಮಂಡಿಯೂರಿ ಕೂರಿಸಿ ಅವಮಾನಿಸಿದ ಅಧಿಕಾರಿ

- Advertisement -
- Advertisement -

ಬರೇಲಿಯಲ್ಲಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಗ್ರಾಮಸ್ಥನನ್ನು ಅವಮಾನಕರವಾಗಿ ಮಂಡಿಯೂರಿ ಕೂರಿಸಿರುವ ವಿಡಿಯೋ ವೈರಲ್ ಆಗಿದೆ.

ಉತ್ತರ ಪ್ರದೇಶದ ಬರೇಲಿಯಲ್ಲಿರುವ ಮಿರ್‌ಗಂಜ್‌ನ ಎಸ್‌ಡಿಎಂ ಉದಿತ್ ಪವಾರ್ ದೂರು ನೀಡಲು ಬಂದ  ಯುವಕನಿಗೆ ಮಂಡಿಯೂರಿ ಕೂರಿಸಿದ್ದಾರೆ ಎನ್ನಲಾಗಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗಿದೆ.

ಸ್ಮಶಾನ ಭೂಮಿಯಾಗಿ ಬಳಸಲಾಗುತ್ತಿದ್ದ ತಮ್ಮ ಗ್ರಾಮದ ಜಮೀನನ್ನು ಒತ್ತುವರಿಯಿಂದ ಮುಕ್ತಗೊಳಿಸುವಂತೆ ಆಗ್ರಹಿಸಿ ಮಂದನ್‌ಪುರ ಗ್ರಾಮದ ಗ್ರಾಮಸ್ಥರು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಕಚೇರಿಗೆ ಬಂದಿದ್ದರು.

SDM ಉದಿತ್ ಪವಾರ್ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ಈ ವಿಷಯವು ಕಟ್ಟುಕಥೆಯಾಗಿದೆ ಮತ್ತು ಅವಮಾನಕರವಾದ ರೀತಿಯಲ್ಲಿ  ತನ್ನ ಮುಂದೆ ಮಂಡಿಯೂರಿ ಎಂದು ಯಾರನ್ನೂ ಕೇಳಿಲ್ಲ ಎಂದು ಹೇಳಿದ್ದಾರೆ.  ತಮ್ಮ ಗ್ರಾಮದಲ್ಲಿನ ಶವಸಂಸ್ಕಾರ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗ್ರಾಮಸ್ಥರೇ ಅವರ ಮುಂದೆ  ಆ ರೀತಿ ಕುಳಿತುಕೊಂಡಿದ್ದಾರೆ. ಈ ವೇಳೆ ನಾನು ಅತಿಕ್ರಮಣ ಸಾಬೀತಾದರೆ ಮಾತ್ರ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಹೇಳಿದ್ದೆ. ಜಮೀನು ಒತ್ತುವರಿ ಮಾಡಿಕೊಂಡಿರುವ ಕುರಿತು ವಿಚಾರಣೆ ಪೂರ್ಣಗೊಳ್ಳುವವರೆಗೆ ಕಾಯುವಂತೆ ಗ್ರಾಮಸ್ಥರಿಗೆ ಸೂಚಿಸಿದ್ದೇನೆ ಎಂದು ಉದಿತ್ ಪವಾರ್ ಹೇಳಿದ್ದಾರೆ.

ಗ್ರಾಮಸ್ಥರು ಸ್ವಯಂ ಮಂಡಿಯೂರಿದರು ಮತ್ತು ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಲು ಪ್ರಾರಂಭಿಸಿದರು. ವಿಚಾರಣೆ ನಂತರವೇ ಕ್ರಮ ಕೈಗೊಳ್ಳುವುದಾಗಿ ಗ್ರಾಮಸ್ಥರಿಗೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

ಮಿರ್‌ಗಂಜ್‌ನಲ್ಲಿರುವ ಕಚೇರಿಯಲ್ಲಿ ಗ್ರಾಮಸ್ಥರನ್ನು ಅವಮಾನಿಸಿದ ಘಟನೆಯ ಕುರಿತು ವಿಡಿಯೋ ವೈರಲ್‌ ಆಗುತ್ತಿದ್ದಂತೆ ಹಿರಿಯ ಅಧಿಕಾರಿಗಳು ಅವರಲ್ಲಿ ವಿವರವನ್ನು ಕೇಳಿದ್ದಾರೆ ಎಂದು ವರದಿಯಾಗಿದೆ.

 

ಇದನ್ನು ಓದಿ: ಅಂಬೇಡ್ಕರ್, ತಿರುವಳ್ಳುವರ್ ಬಗ್ಗೆ ಅವಹೇಳನ: ವಿಹೆಚ್‌ಪಿಯ ಮಾಜಿ ನಾಯಕನ ಬಂಧನ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಜಗನ್ನಾಥ ನರೇಂದ್ರ ಮೋದಿಯ ಭಕ್ತ’ ಎಂದ ಸಂಬಿತ್ ಪಾತ್ರ; ವಿರೋಧದ ನಂತರ ಕ್ಷಮೆಯಾಚನೆ

0
ಸದಾ ತನ್ನ ವಿವಾದಾತ್ಮಕ ಹೇಳಿಕೆಗಳಿಂದಲೇ ದೇಶದಾದ್ಯಂತ ಟ್ರೋಲ್‌ಗೆ ಗುರಿಯಾಗುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪುರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಂಬಿತ್ ಪಾತ್ರ, ಒಡಿಶಾದ ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡುವಾಗ "ಜಗನ್ನಾಥ ಪ್ರಧಾನಿ ನರೇಂದ್ರ...