Homeಕರ್ನಾಟಕಬೆಂಗಳೂರು: ಪೊಲೀಸ್‌ ಅಧಿಕಾರಿಗೆ 'ಮುಸ್ಲಿಂ' ಎಂದು ನಿಂದಿಸಿದ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರ

ಬೆಂಗಳೂರು: ಪೊಲೀಸ್‌ ಅಧಿಕಾರಿಗೆ ‘ಮುಸ್ಲಿಂ’ ಎಂದು ನಿಂದಿಸಿದ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರ

- Advertisement -
- Advertisement -

ಬುಧವಾರ ರಾತ್ರಿ ಬೆಂಗಳೂರಿನ ಯಲಹಂಕ ನ್ಯೂ ಟೌನ್‌ನಲ್ಲಿ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರ ಆ್ಯಡಂ ಬಿದ್ದಪ್ಪ ಪೊಲೀಸ್‌ ಅಧಿಕಾರಿಗೆ ಮುಸ್ಲಿಂ ಎಂಬ ಕಾರಣಕ್ಕೆ ನಿಂದಿಸಿ ಥೂ ಎಂದು ಉಗುಳಿದ ಘಟನೆ ನಡೆದಿದೆ.

ಘಟನೆಯ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವೀಡಿಯೊದಲ್ಲಿ ಆಡಮ್, ಹೇ, ಘೌಸ್, ಘೌಸ್ ಪಾಶಾ, ಮುಸ್ಲಿಂ, ಮುಸಲ್ಮಾನ್ ನಾ..ಎಂದು ಹೇಳುವುದು ಕೇಳಿಸುತ್ತದೆ ಇದಲ್ಲದೆ ಥೂ ಎಂದು ಉಗುಳುವುದು ಕೂಡ ಕೇಳಿಸಿದೆ.

ಏನಿದು ಘಟನೆ?

ಅ.25ರ ರಾತ್ರಿ ವಿದ್ಯಾರ್ಥಿ ರಾಹುಲ್‌ ಉಣ್ಣಿಕೃಷ್ಣನ್ ಹೆಬ್ಬಾಳದಿಂದ ಮನೆಗೆ ಮರಳುವಾಗ ಯಲಹಂಕದ ರೈಲ್ ವೀಲ್ ಫ್ಯಾಕ್ಟರಿ ಬಳಿ ಆ್ಯಡಂ ಬಿದ್ದಪ್ಪ ಅಪಾಯಕಾರಿಯಾಗಿ ಕಾರು ಚಲಾಯಿಸಿಕೊಂಡು ಬಂದು ರಾಹುಲ್‌ಗೆ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ.

ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಆತನಿಗೆ ವಿಚಾರಿಸಿದ್ದಾರೆ. ಈ ವೇಳೆ ಪೊಲೀಸರ ಜೊತೆ ಕೂಡ ಬಿದ್ದಪ್ಪ ಅಸಭ್ಯವಾಗಿ ವರ್ತಿಸಿದ್ದಾನೆ.

ಈ ಬಗ್ಗೆ ಯಲಹಂಕ ನ್ಯೂ ಟೌನ್‌ನ ರಾಹುಲ್ ಉನ್ನಿಕೃಷ್ಣನ್ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆಡಮ್‌ನನ್ನು ಬಂಧಿಸಿದ್ದಾರೆ. ಬಳಿಕ ಸ್ಟೇಷನ್ ಜಾಮೀನಿನ ಮೇಲೆ ಆತನಿಗೆ ಬಿಡುಗಡೆ ಮಾಡಲಾಗಿದೆ.

ಅ.25ರ ರಾತ್ರಿ ವಿದ್ಯಾರ್ಥಿ ಉಣ್ಣಿಕೃಷ್ಣನ್ ಎಂಬವರು ಹೆಬ್ಬಾಳದಿಂದ ಮನೆಗೆ ಮರಳುವಾಗ ಯಲಹಂಕಕ್ಕೆ ಸಮೀಪದಲ್ಲಿ ಆಡಮ್‌ ಬಿಡ್ಡಪ್ಪ ಅಪಾಯಕಾರಿಯಾಗಿ ಕಾರು ಚಲಾಯಿಸಿಕೊಂಡು ಬಂದು ಪದೇ ಪದೇ ಹಾರ್ನ್ ಮಾಡಿ ಉಣ್ಣಿಕೃಷ್ಣನ್‌ಗೆ ನಿಂದಿಸಿದ್ದಾನೆ ಮತ್ತು ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಉಣ್ಣಿಕೃಷ್ಣನ್ ದೂರು ನೀಡಿದ್ದಾರೆ. ಇದಲ್ಲದೆ ಆಲ್ಕೋಮೀಟರ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದರಿಂದ ಕುಡಿದು ವಾಹನ ಚಲಾಯಿಸಿದ ಪ್ರಕರಣವೂ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಡಮ್ ಪೊಲೀಸ್‌ ಅಧಿಕಾರಿಯ ಜೊತೆ ದುರ್ವತನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ವ್ಯಾಪಕವಾದ ಆಕ್ರೋಶ ವ್ಯಕ್ತವಾಗಿದೆ. ಕರ್ತವ್ಯ ನಿರತ ಪೊಲೀಸ್‌ ಅಧಿಕಾರಿಗೆ ಕೈ ತೋರಿಸಿ ಬೆದರಿಸುವುದು, ಮುಸ್ಲಿಂ ಎಂದು ಹೀಯಾಳಿಸಿರುವುದರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹ ವ್ಯಕ್ತವಾಗಿದೆ.

ಇದನ್ನು ಓದಿ: ಪೊಲೀಸ್‌ ಠಾಣೆ ಮೇಲೆ ದಾಳಿಗೆ ಪ್ರಚೋದನೆ: ಬಿಜೆಪಿ ಸಂಸದ ಸೇರಿ 17ಮಂದಿ ವಿರುದ್ಧ ಎಫ್‌ಐಆರ್‌

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...