Homeಮುಖಪುಟಶ್ರೀನಗರ: ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಗೆ ಅನುಮತಿ ನಿರಾಕರಣೆ

ಶ್ರೀನಗರ: ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಗೆ ಅನುಮತಿ ನಿರಾಕರಣೆ

- Advertisement -
- Advertisement -

ಗಾಝಾದ ಮೇಲೆ ಇಸ್ರೇಲ್ ಆಕ್ರಮದ ವಿರುದ್ಧದ ಪ್ರತಿಭಟನೆಯ ಆತಂಕದ ನಡುವೆ ಶ್ರೀನಗರದ ಐತಿಹಾಸಿಕ ಜಾಮಿಯಾ ಮಸೀದಿಯಲ್ಲಿ ಪ್ರಾರ್ಥನೆಯನ್ನು ಸತತ ಮೂರನೇ ಶುಕ್ರವಾರವು ನಿರ್ಬಂಧಿಸಲಾಗಿದೆ.

ನಗರದ ನೌಹಟ್ಟಾ ಪ್ರದೇಶದಲ್ಲಿರುವ ಭವ್ಯ ಮಸೀದಿಗೆ ಬೀಗ ಹಾಕಲಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸುತ್ತಲೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಶ್ಮೀರದ ಮಿರ್ವೈಜ್ ಉಮರ್ ಫಾರೂಕ್ ನೇತೃತ್ವದ ಹುರಿಯತ್ ಕಾನ್ಫರೆನ್ಸ್, ಐತಿಹಾಸಿಕ ಜಾಮಿಯಾ ಮಸೀದಿಯನ್ನು ಪದೇ ಪದೇ ಮುಚ್ಚುವುದು ಮತ್ತು ಮಿರ್ವೈಜ್ ಅವರ ಗೃಹ ಬಂಧನವು ಜಮ್ಮು- ಕಾಶ್ಮೀರದ ಪರಿಸ್ಥಿತಿಯನ್ನು ನೆನಪಿಸುತ್ತದೆ. ತಮ್ಮ ಮೇಲಿನ ನಿಷೇಧ ಹಾಗೂ ನಿರ್ಬಂಧದ ನಡುವೆಯೂ ಕಾಶ್ಮೀರದ ಜನರು ಫೆಲಸ್ತೀನ್ ಜನರೊಂದಿಗೆ ನಿಲ್ಲುತ್ತಾರೆ. ಯುದ್ಧದ ಮೂಲಕ ಎಂದಿಗೂ ಶಾಂತಿಯನ್ನು ಸ್ಥಾಪಿಸಲು ಸಾಧ್ಯವಿಲ್ಲ. ಅದು ಕೇವಲ ನಾಶವಾಗಿದೆ. ಯುದ್ಧದಿಂದ ಹೆಚ್ಚು ಅಪನಂಬಿಕೆ, ಕ್ರೂರತೆ ಸೃಷ್ಟಿಯಾಗುತ್ತದೆ ಎಂದು ಹೇಳಿದೆ.

ಗಾಝಾದಲ್ಲಿ ಸಾವಿರಾರು ಮಕ್ಕಳು ಬಾಂಬ್ ದಾಳಿಗೆ ಬಲಿಯಾಗುತ್ತಿದ್ದಾರೆ. ಆಸ್ಪತ್ರೆಗಳು ಮತ್ತು ಮನೆಗಳು ನೆಲಸಮವಾಗುತ್ತಿವೆ. ಪ್ಯಾಲೆಸ್ತೀನಿಯಾದವರ ಮೇಲಿನ ಯುದ್ಧ ಮಾನವೀಯತೆಯ ಮೇಲೆ ಕಳಂಕ. ಇದು ಅಡೆತಡೆಯಿಲ್ಲದೆ ಮುಂದುವರಿಯುತ್ತದೆ. ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳು ನಮ್ಮ ಆಶಯ ಎನ್ನುವವರು ಯುದ್ಧವನ್ನು ಬೆಂಬಲಿಸುತ್ತಿದ್ದಾರೆ ಅಥವಾ ಈ ವಿಚಾರದಲ್ಲಿ ಮೌನವಾಗಿರುವುದು ಕಂಡು ಬಂದಿದೆ ಎಂದು ಹುರಿಯತ್ ಕಾನ್ಫರೆನ್ಸ್ ಹೇಳಿದೆ.

ಅ.7 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯಲ್ಲಿ 1,400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಹಮಾಸ್ ಗಾಝಾದಲ್ಲಿ 220ಕ್ಕೂ ಹೆಚ್ಚು ಇಸ್ರೇಲ್ ಜನರನ್ನು ಒತ್ತೆಯಾಳಾಗಿ ಇರಿಸಿದೆ. ಇದರ ಬೆನ್ನಲ್ಲೇ ಇಸ್ರೇಲ್ ಯುದ್ಧ ಘೋಷಣೆ ಬಳಿಕ ನಡೆಸಿದ ಬಾಂಬ್‌ ದಾಳಿಯಲ್ಲಿ 6747ಕ್ಕೂ ಅಧಿಕ ಜನರು ಗಾಝಾದಲ್ಲಿ ಮೃತಪಟ್ಟಿದ್ದಾರೆ. ಮೃತರಲ್ಲಿ ಮಕ್ಕಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಹಮಾಸ್ ಅಧೀನದ ಗಾಝಾದ ಆರೋಗ್ಯ ಸಚಿವಾಲಯವು ತಿಳಿಸಿದೆ.

ಇಸ್ರೇಲ್‌ ದಾಳಿಯಲ್ಲಿ ಗಾಝಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ಹತ್ಯೆ ನಡೆದಿದೆ. ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಇಸ್ರೇಲ್ ದಾಳಿಗೆ 2,665 ಮಕ್ಕಳು ಗಾಝಾದಲ್ಲಿ ಮೃತಪಟ್ಟಿದ್ದಾರೆ.

ಇದನ್ನು ಓದಿ: ಬೆಂಗಳೂರು: ಪೊಲೀಸ್‌ ಅಧಿಕಾರಿಗೆ ‘ಮುಸ್ಲಿಂ’ ಎಂದು ನಿಂದಿಸಿದ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...