Homeಅಂತರಾಷ್ಟ್ರೀಯಇಸ್ರೇಲ್- ಪ್ಯಾಲೆಸ್ತೀನ್ ಸಂಘರ್ಷ: UN ಜನರಲ್ ಅಸೆಂಬ್ಲಿಯಲ್ಲಿ ನಾಗರಿಕರ ರಕ್ಷಣೆಯ ಕುರಿತ ನಿರ್ಣಯ ಅಂಗೀಕಾರ: ದೂರ...

ಇಸ್ರೇಲ್- ಪ್ಯಾಲೆಸ್ತೀನ್ ಸಂಘರ್ಷ: UN ಜನರಲ್ ಅಸೆಂಬ್ಲಿಯಲ್ಲಿ ನಾಗರಿಕರ ರಕ್ಷಣೆಯ ಕುರಿತ ನಿರ್ಣಯ ಅಂಗೀಕಾರ: ದೂರ ಉಳಿದ ಭಾರತ

- Advertisement -
- Advertisement -

ಗಾಝಾದಲ್ಲಿನ ಬಿಕ್ಕಟ್ಟಿನ ಹಿನ್ನೆಲೆ ನಾಗರಿಕರ ರಕ್ಷಣೆ ಮತ್ತು ಕಾನೂನು ಮತ್ತು ಮಾನವೀಯ ಜವಾಬ್ದಾರಿಗಳನ್ನು ಎತ್ತಿಹಿಡಿಯುವ ಕುರಿತು ಯುಎನ್ ಜನರಲ್ ಅಸೆಂಬ್ಲಿ ನಿರ್ಣಯವನ್ನು ಅಂಗೀಕರಿಸಿದೆ. ಆದರೆ ಮಾನವೀಯ ಒಪ್ಪಂದಕ್ಕೆ ಕುರಿತ ಜೋರ್ಡಾನ್ ಮಂಡಿಸಿದ ನಿರ್ಣಯಕ್ಕೆ ಮತಚಲಾಯಿಸದೆ ಭಾರತ ದೂರ ಉಳಿದಿದೆ.

ಮಾನವೀಯ ನೆಲೆಯಲ್ಲಿ ಕದನ ವಿರಾಮ ಘೋಷಿಸಬೇಕು ಹಾಗೂ ಅಂತರಾಷ್ಟ್ರೀಯ ಮಾನವೀಯ ಕಾನೂನುಗಳಿಗೆ ಬದ್ಧವಾಗಿರಬೇಕು ಎಂಬ ಗೊತ್ತುವಳಿಯನ್ನು ಜೋರ್ಡಾನ್ ರಾಷ್ಟ್ರವು ಮಂಡಿಸಿದೆ. ಅದು ತನ್ನ ಪ್ರಸ್ತಾವನೆಯಲ್ಲಿ ಎಲ್ಲ ಒತ್ತೆಯಾಳು ನಾಗರಿಕರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು ಹಾಗೂ ಗಾಝಾಗೆ ಯಾವುದೇ ಅಡೆತಡೆಯಿಲ್ಲದಂತೆ ಮಾನವೀಯ ನೆರವನ್ನು ಒದಗಿಸಬೇಕು ಎಂದು ಮನವಿ ಮಾಡಿತ್ತು.

ನಾಗರಿಕರ ರಕ್ಷಣೆ, ಕಾನೂನು ಮತ್ತು ಮಾನವೀಯ ಹೊಣೆಗಾರಿಕೆಗಳನ್ನು ಎತ್ತಿಹಿಡಿಯುವುದು ಎಂಬ ಶೀರ್ಷಿಕೆಯ ನಿರ್ಣಯವನ್ನು ಬಹುಮತದಿಂದ ಅಂಗೀಕರಿಸಲಾಯಿತು. ನಿರ್ಣಯದ ಪರವಾಗಿ 120 ರಾಷ್ಟ್ರಗಳು ಮತ ಚಲಾಯಿಸಿದೆ. ಅದರ ವಿರುದ್ಧ 14 ರಾಷ್ಟ್ರಗಳು ಮತಚಲಾಯಿಸಿದರೆ 45 ದೇಶಗಳು ಗೈರುಹಾಜರಾಗಿದ್ದವು. ಅದರಲ್ಲಿ ಭಾರತ, ಆಸ್ಟ್ರೇಲಿಯಾ, ಕೆನಡಾ, ಜರ್ಮನಿ, ಜಪಾನ್, ಉಕ್ರೇನ್ ಮತ್ತು ಯುಕೆ ದೇಶಗಳು ಸೇರಿದೆ.

193 ಸದಸ್ಯ ರಾಷ್ಟ್ರಗಳ UN ಜನರಲ್ ಅಸೆಂಬ್ಲಿಯ(UNGA) 10ನೇ ತುರ್ತು ವಿಶೇಷ ಅಧಿವೇಶನದಲ್ಲಿ ಜೋರ್ಡಾನ್ ಸಲ್ಲಿಸಿದ ಕರಡು ನಿರ್ಣಯನ್ನು ಬಾಂಗ್ಲಾದೇಶ, ಮಾಲ್ಡೀವ್ಸ್, ಪಾಕಿಸ್ತಾನ, ರಷ್ಯಾ ದಕ್ಷಿಣ ಆಫ್ರಿಕಾ ಸೇರಿದಂತೆ 40 ಕ್ಕೂ ಹೆಚ್ಚು ರಾಷ್ಟ್ರಗಳು ಬೆಂಬಲಿಸಿದೆ.

ಜೋರ್ಡಾನ್‌ ಮಂಡಿಸಿದ ಕರಡು ನಿರ್ಣಯವು ನೀರು, ಆಹಾರ, ವೈದ್ಯಕೀಯ ಸಹಾಯ, ಇಂಧನ ಮತ್ತು ವಿದ್ಯುತ್ ಸೇರಿದಂತೆ ಗಾಜಾ ಪಟ್ಟಿಯಾದ್ಯಂತ ನಾಗರಿಕರಿಗೆ ಅಗತ್ಯ ಸರಕುಗಳು ಮತ್ತು ಸೇವೆಗಳನ್ನು ತಕ್ಷಣಕ್ಕೆ ಒದಗಿಸುವಂತೆ ಆಗ್ರಹಿಸಿದೆ.

ನಿರ್ಣಯದಲ್ಲಿ ಹಮಾಸ್ ಮತ್ತು ಒತ್ತೆಯಾಳು ಎಂಬ ಪದಗಳು ಕಾಣೆಯಾಗಿವೆ ಎಂದು ಹೇಳಿದ್ದ ಶ್ವಸಂಸ್ಥೆಯಲ್ಲಿನ ಅಮೆರಿಕದ ರಾಯಭಾರಿ ಲಿಂಡಾ ಥಾಮಸ್-ಗ್ರೀನ್‌ಫೀಲ್ಡ್, ನಿರ್ಣಯವನ್ನು ವಿರೋಧಿಸಿದ್ದಾರೆ.

ಅ.7 ರಂದು ಹಮಾಸ್ ನಡೆಸಿದ ದಾಳಿಯ ನಂತರ 1,400 ಕ್ಕೂ ಹೆಚ್ಚು ಜನರು ಇಸ್ರೇಲ್‌ ನಲ್ಲಿ ಮೃತಪಟ್ಟಿದ್ದಾರೆ. ಇಸ್ರೇಲ್ ಬಾಂಬ್ ದಾಳಿಯಲ್ಲಿ 6,700ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ.

ಜೋರ್ಡಾನ್ ಕರಡು ನಿರ್ಣಯವು ಹಮಾಸ್ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಿಲ್ಲ. ಸಾಮಾನ್ಯ ಸಭೆಯು ನಿರ್ಣಯದ ಮೇಲೆ ಮತ ಚಲಾಯಿಸುವ ಮೊದಲು ಕೆನಡಾ ತಿದ್ದುಪಡಿ ನಿರ್ಣಯವನ್ನು ಪ್ರಸ್ತಾಪಿಸಿದೆ.

ಕೆನಡಾ ಪ್ರಸ್ತಾಪಿಸಿದ ತಿದ್ದುಪಡಿ ನಿರ್ಣಯದಲ್ಲಿ ಒಂದು ಪ್ಯಾರಾವನ್ನು ಸೇರಿಸಲು ಕೇಳಿದೆ. ಸಾಮಾನ್ಯ ಸಭೆಯು ಅ.7ರಂದು ಇಸ್ರೇಲ್‌ ಮೇಲೆ ನಡೆಸಿದ ಹಮಾಸ್‌ನ ದಾಳಿಯನ್ನು ಖಂಡಿಸಿದೆ. ಒತ್ತೆಯಳುಗಳ ರಕ್ಷಣೆ, ಯೋಗಕ್ಷೇಮ ಮತ್ತು ಮಾನವೀಯ ಚಿಕಿತ್ಸೆಗಾಗಿ ಒತ್ತಾಯಿಸಿದೆ ಮತ್ತು ತಕ್ಷಣದ ಬಿಡುಗಡೆಗೆ ಒತ್ತಾಯಿಸಿದೆ.

ಭಾರತ ಸೇರಿ 87 ಇತರ ರಾಷ್ಟ್ರಗಳು ತಿದ್ದುಪಡಿಯ ಪರವಾಗಿ ಮತ ಚಲಾಯಿಸಿದರೆ, 55 ಸದಸ್ಯ ರಾಷ್ಟ್ರಗಳು ಅದರ ವಿರುದ್ಧ ಮತ ಚಲಾಯಿಸಿದವು ಮತ್ತು 23 ದೇಶಗಳು ಮತ ಚಲಾವಣೆಯಿಂದ ದೂರ ಉಳಿದಿವೆ. ಹಾಜರಿರುವ ಮತ್ತು ಮತ ಚಲಾಯಿಸುವ ಸದಸ್ಯರ ಮೂರನೇ ಎರಡರಷ್ಟು ಬಹುಮತವನ್ನು ಪಡೆಯಲು ವಿಫಲವಾದ ಕಾರಣ ಕರಡು ತಿದ್ದುಪಡಿಯನ್ನು ಅಂಗೀಕರಿಸಲಾಗಲಿಲ್ಲ.

UNGAಯ 78 ನೇ ಅಧಿವೇಶನದ ಅಧ್ಯಕ್ಷ ಡೆನ್ನಿಸ್ ಫ್ರಾನ್ಸಿಸ್ ಕರಡು ತಿದ್ದುಪಡಿಯನ್ನು ಅಂಗೀಕರಿಸಲಾಗುವುದಿಲ್ಲ ಎಂದು ಘೋಷಿಸಿದರು.

ಇದನ್ನು ಓದಿ: ಬೆಂಗಳೂರು: ಪೊಲೀಸ್‌ ಅಧಿಕಾರಿಗೆ ‘ಮುಸ್ಲಿಂ’ ಎಂದು ನಿಂದಿಸಿದ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಆರೋಪ| ತಾನು ನಿರ್ದೋಷಿ ಎಂದ ಬ್ರಿಜ್ ಭೂಷಣ್ ಸಿಂಗ್: ವಿಚಾರಣಾ ಹಂತ...

0
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣದಲ್ಲಿ ತಾನು ನಿರ್ದೋಷಿ ಎಂದು ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ)ದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮಂಗಳವಾರ...