HomeಮುಖಪುಟMSP ನೀಡುವಂತೆ ಒತ್ತಾಯಿಸಿ ಕುರುಕ್ಷೇತ್ರದಲ್ಲಿ NH-44 ಬಂದ್ ಮಾಡಿ ರೈತರ ಪ್ರತಿಭಟನೆ: ಕಿಸಾನ್ ಯೂನಿಯನ್ ಬೆಂಬಲ

MSP ನೀಡುವಂತೆ ಒತ್ತಾಯಿಸಿ ಕುರುಕ್ಷೇತ್ರದಲ್ಲಿ NH-44 ಬಂದ್ ಮಾಡಿ ರೈತರ ಪ್ರತಿಭಟನೆ: ಕಿಸಾನ್ ಯೂನಿಯನ್ ಬೆಂಬಲ

- Advertisement -
- Advertisement -

ಸೂರ್ಯಕಾಂತಿ ಬೀಜಕ್ಕೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡುವಂತೆ ಒತ್ತಾಯಿಸಿ ಪ್ರತಿಭಟನಾ ನಿರತ ರೈತರು ಕುರುಕ್ಷೇತ್ರದ ಶಹಾಬಾದ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ-44 ಅನ್ನು ಬಂದ್ ಮಾಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ಪ್ರಕಟಿಸಿದ ವರದಿ ತಿಳಿಸಿದೆ.

ರೈತರ ಪ್ರತಿಭಟನೆಯಿಂದ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅಸ್ತವ್ಯಸ್ತವಾಗಿದೆ. ಸಧ್ಯ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

ಸೂರ್ಯಕಾಂತಿ ಬೀಜವನ್ನು ಎಂಎಸ್‌ಪಿ ಮೇಲೆ ಖರೀದಿಸದ ಸರ್ಕಾರದ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಭಾರತೀಯ ಕಿಸಾನ್ ಯೂನಿಯನ್ ಬೆಂಬಲ ನೀಡುತ್ತಿದೆ. ಸರ್ಕಾರವು ಸಮಸ್ಯೆಯನ್ನು ಪರಿಹರಿಸಲು ವಿಫಲವಾದರೆ ಆಂದೋಲನವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ಹರಿಯಾಣ ಸರ್ಕಾರವು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಪ್ರಕಟಣೆ ಹೊರಡಿಸಿದ್ದಾರೆ.

ಇದನ್ನೂ ಓದಿ: ಪ್ರತಿಭಟನೆಯಿಂದ ನಾನು ಹಿಂದೆ ಸರಿದಿಲ್ಲ, ಮಾಧ್ಯಮಗಳೇ ಸುಳ್ಳು ಸುದ್ದಿ ಹಬ್ಬಿಸಬೇಡಿ: ಸಾಕ್ಷಿ ಮಲಿಕ್ ಟ್ವೀಟ್

ಕುರುಕ್ಷೇತ್ರದ ಜಿಲ್ಲಾಧಿಕಾರಿ ಶಾಂತನು ಶರ್ಮಾ ಅಧಿಕೃತ ಹೇಳಿಕೆ ನೀಡಿದ್ದು, ”144 ಕ್ವಿಂಟಾಲ್ ಸೂರ್ಯಕಾಂತಿ ಬೀಜವನ್ನು ಖರೀದಿಸಲಾಗಿದ್ದು, ಪ್ರತಿ ಕ್ವಿಂಟಲ್‌ಗೆ ಹೆಚ್ಚುವರಿಯಾಗಿ 1,000ರೂ. ರೈತರಿಗೆ ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ.

ಇದರೊಂದಿಗೆ, ಪ್ರತಿ ಕ್ವಿಂಟಲ್‌ಗೆ 4,800ರೂ. ಬದಲಿಗೆ ಎಂಎಸ್‌ಪಿ ಸೇರಿಸಿ ರೈತರಿಗೆ ಒಟ್ಟು 5,800 ರೂ. ಪಾವತಿ ಮಾಡಲಾಗುತ್ತದೆ.

”ಸೂರ್ಯಕಾಂತಿ ಬೀಜವನ್ನು 4,800 ರೂ.ಗೆ ವಾಣಿಜ್ಯ ಖರೀದಿಗೆ ಆಮಿಷವೊಡ್ಡುವ ಮೂಲಕ ರೈತರನ್ನು ಒಡೆಯಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಬಿಕೆಯು ಮುಖಂಡ ರಾಕೇಶ್ ಬೈನ್ಸ್ ಅವರು ಕಿಡಿಕಾರಿದರು.

ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದು ರೈತನ ಹಕ್ಕು ಆದ್ದರಿಂದ ಮಂಗಳವಾರದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಸುಗ್ಗಿಯ ಕಾಲಕ್ಕೆ ಮುಂಚಿತವಾಗಿ, MSP ನೀಡಲು ಸರ್ಕಾರದ ನಿರಾಕರಣೆ ಉತ್ತರ ಹರಿಯಾಣದ ಸಾವಿರಾರು ಸೂರ್ಯಕಾಂತಿ ಬೆಳೆಗಾರರಿಗೆ ಆಘಾತವನ್ನುಂಟು ಮಾಡಿದೆ ಎಂದು ವರದಿಯಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...