Homeಮುಖಪುಟಫರ್ಜಿ: ರಾಜ್ ಮತ್ತು ಡಿಕೆ ಜೋಡಿಯ ಮತ್ತೊಂದು ಥ್ರಿಲ್ಲರ್ ವೆಬ್ ಸಿರೀಸ್

ಫರ್ಜಿ: ರಾಜ್ ಮತ್ತು ಡಿಕೆ ಜೋಡಿಯ ಮತ್ತೊಂದು ಥ್ರಿಲ್ಲರ್ ವೆಬ್ ಸಿರೀಸ್

- Advertisement -
- Advertisement -

ನಾವು ಪ್ರಪಂಚದ ಅತಿ ಪ್ರಾಮಾಣಿಕ ವ್ಯಕ್ತಿಯ ಫೋಟೊನಾ ಅತ್ಯಂತ ಭ್ರಷ್ಟ ವಸ್ತುವಿನ ಮೇಲೆ ಹಾಕಿದ್ದೀವಿ. ದುಡ್ಡನ್ನು ಉಳಿಸಿ ಯಾರಾದ್ರೂ ಶ್ರೀಮಂತರಾಗಿದ್ದಾರ? ಮರ್ಯಾದೆ ಅನ್ನುವುದು ಮಿಡಲ್ ಕ್ಲಾಸ್ ಜನರ ಕೈಗೆಟುಕದ ವಸ್ತು. ಅವರು ಇಡೀ ಜೀವನ ಸಾಲದಲ್ಲಿಯೇ ಮುಳುಗಿ ಸಾಲದಲ್ಲಿಯೇ ಸತ್ತು ಹೋಗುತ್ತದೆ. ಎಜುಕೇಶನ್ ಲೋನ್, ಕೆಲಸ ಸಿಕ್ಕರೆ ಬೈಕ್ ಲೋನ್, ಪ್ರಮೋಷನ್ ಸಿಕ್ಕರೆ ಕಾರ್ ಲೋನ್, ಮದುವೆ ಆದರೆ ಅದಕ್ಕೂ ಲೋನ್, ಆನಂತರ ಮಕ್ಕಳ ಎಜುಕೇಶನ್ ಲೋನ್, ಹೋಮ್ ಲೋನ್ ಹೀಗೆ… ಮದುವೆ ಮುರಿದು ಹೋದ್ರು ಲೋನ್ ಮಾತ್ರ ಮುಂದುವರೆಯುತ್ತಿರುತ್ತದೆ… ಒಟ್ನಲ್ಲಿ ನಾವು ಮಿಡಲ್ ಕ್ಲಾಸ್ ಅಲ್ಲ, ಬದಲಿಗೆ ಮಿಡಲ್ ಫಿಂಗರ್ ಕ್ಲಾಸ್…

ಹೀಗೆ ಬಹುತೇಕ ಜನರಿಗೆ ಅಪೀಲ್ ಆಗುವ ಡೈಲಾಗ್‌ಗಳ ಮೂಲಕ ಗಮನ ಸೆಳೆದ ವೆಬ್ ಸೀರಿಸ್ ಫರ್ಜಿ. ಫ್ಯಾಮಿಲಿ ಮ್ಯಾನ್ ಖ್ಯಾತಿಯ ರಾಜ್ ಮತ್ತು ಡಿಕೆ ಜೋಡಿಯ ಮತ್ತೊಂದು ಥ್ರಿಲ್ಲರ್ ವೆಬ್ ಸಿರೀಸ್ ಇದಾಗಿದ್ದು, ಈ ಮೂಲಕ ವಿಜಯ್ ಸೇತುಪತಿ ಮತ್ತು ಶಾಹಿದ್ ಕಪೂರ್ ಭರ್ಜರಿಯಾಗಿ ಓಟಿಟಿ ಪ್ರವೇಶಿಸಿದ್ದಾರೆ. Raj & DK ಜೋಡಿ ಫ್ಯಾಮಿಲಿ ಮ್ಯಾನ್-1 ರಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ತಡೆಯುವ ಕಥಹಂದರ ಹೊಂದಿತ್ತು. ಫ್ಯಾಮಿಲಿ ಮ್ಯಾನ್ -2ರಲ್ಲಿ ಎಲ್‌ಟಿಟಿಇ ಸಂಘಟನೆಯ ಕುರಿತು ಚಿತ್ರಿಸಲಾಗಿತ್ತು. ಈಗ ಫರ್ಜಿಯಲ್ಲಿ ಖೋಟಾ ನೋಟುಗಳ ಕರಾಳ ಲೋಕ ತೆರೆದಿಡಲು ರಾಜ್ ಮತ್ತು ಡಿಕೆ ಜೋಡಿ ಯತ್ನಿಸಿದೆ.

ಅತ್ಯುತ್ತಮ ಚಿತ್ರ ಕಲಾವಿದ್ ಸನ್ನಿ (ಶಾಹಿದ್ ಕಪೂರ್) ಅವರ ಸ್ನೇಹಿತ ಕಂ ಸಹೋದರ ಫಿರೋಜ್ (ಭುವನ್ ಅರೋರಾ) ಜೊತೆ ಸೇರಿ ತನ್ನ ತಾತ ಮಾಧವ್‌ (ಅಮೋಲ್ ಪಾಲೇಕರ್) ರವರ ‘ಕ್ರಾಂತಿ ಪತ್ರಿಕೆ’ ಮತ್ತು ಪ್ರಿಂಟಿಂಗ್ ಪ್ರೆಸ್ ಅನ್ನು ಉಳಿಸಿಕೊಳ್ಳಲು ದಾರಿ ಕಾಣದಿದ್ದಾಗ ತನ್ನ ಪ್ರತಿಭೆ ಬಳಸಿ ಖೋಟಾ ನೋಟು ಮುದ್ರಿಸಲು ಮುಂದಾಗುತ್ತಾನೆ. ಮೊದಲು ಪ್ರೆಸ್ ಉಳಿಸಲು ಸಾಲ ತೀರಿಸುವುದಕ್ಕಾಗಿ, ಆನಂತರ ಮನೆ – ಕಾರು ಕೊಳ್ಳುವುದಕ್ಕಾಗಿ, ಆನಂತರ ಇದೇ ಕೊನೆ ಸಲ ಎಂದುಕೊಂಡು, ಆಮೇಲೆ ಸಂದರ್ಭದ ಒತ್ತಡಗಳಿಗೆ ಒಳಗಾಗಿ ಸನ್ನಿ ಮತ್ತು ಆತನ ಸ್ನೇಹಿತ ಅಂತಾರಾಷ್ಟ್ರೀಯ ಖೋಟಾ ನೋಟು ಜಾಲದ ಭಾಗವಾಗುವುದು, ಈ ಜಾಲ ಬೇಧಿಸಲು ಮೈಖಲ್ (ವಿಜಯ್ ಸೇತುಪತಿ) ಮತ್ತು ಅವರ ಸಹೋದ್ಯೋಗಿ ಮೇಘಾ (ರಾಶಿ ಖನ್ನಾ) ಮುಂದಾಗುವುದು ಇಡೀ 8 ಎಪಿಸೋಡ್‌ಗಳ ವೆಬ್‌ ಸಿರೀಸ್‌ನ ಎಳೆ. ಆದರೆ ಮನುಷ್ಯ ಕೇವಲ ಆಹಾರ-ಮೈಥುನಗಳಿಗಷ್ಟೇ ಬದುಕುವುದಿಲ್ಲವಲ್ಲ. ಹಾಗಾಗಿ ಪ್ರತಿಯೊಂದು ಪಾತ್ರಗಳಿಗೂ ಅವರದೇ ಆದ ಪ್ಯಾಷನ್‌ಗಳಿವೆ. ಮೈಖಲ್‌ಗೆ ಖೋಟಾ ನೋಟಿನ ಕಿಂಗ್ ಪಿನ್ ಮನ್ಸೂರ್ ದಲಾಲ್‌ (ಕೆ.ಕೆ ಮೆನನ್) ಮೇಲಿನ ವಯಕ್ತಿಕ ಹಗೆತನ, ಮೇಘಾಳಿಗೆ ತಾನೊಬ್ಬ ಪ್ರೊಫೆಷನಲ್ ಕೆಲಸಗಾರ್ತಿ ಎನ್ನಿಸಿಕೊಳ್ಳುವ ಹಂಬಲ, ಮಾಧವ್‌ಗೆ ಜನರನ್ನು ಕ್ರಾಂತಿಗೆ ಕರೆತರುವ ಹುಚ್ಚು. ಒಂದು ಕಡೆ ತಾತನ ಆಸೆ ಮತ್ತು ತಮ್ಮ ಜೀವನದ ಮಹತ್ವಾಕಾಂಕ್ಷೆ ಸನ್ನಿ, ಫಿರೋಜ್‌ರವರದು. ಎಲ್ಲರ ಪಾತ್ರ ಪೋಷಣೆಯಲ್ಲಿ Raj & DK ಜೋಡಿ ಎಚ್ಚರಿಕೆ ವಹಿಸಿದೆ. ಹಾಗಾಗಿಯೇ ಸಿರೀಸ್ ಎಲ್ಲಾ ಎಪಿಸೋಡ್‌ಗಳನ್ನು ನೋಡಿಸಿಕೊಳ್ಳುತ್ತದೆ.

ನಮ್ಮ ಪ್ರಧಾನಿಯವರು 2016ರಲ್ಲಿ ಖೋಟಾ ನೋಟುಗಳ ಜಾಲವನ್ನು ಮುರಿಯುತ್ತೇನೆಂದು ಮತ್ತು ಭಯೋತ್ಪಾದನೆಯನ್ನು ಮಟ್ಟ ಹಾಕುತ್ತೇನೆಂದು 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ರಾತ್ರೋರಾತ್ರಿ ಅಮಾನ್ಯೀಕರಣ ಮಾಡಿದರು. ಆದರೆ ಖೋಟಾ ನೋಟುಗಳು ನಿಂತಿವೆಯೇ? ಭಯೋತ್ಪಾದನೆ ಕಡಿಮೆಯಾಗಿದೆಯೇ ಎಂಬ ಪ್ರಶ್ನೆ ಈ ಸೀರಿಸ್ ನೋಡುವವರಿಗೆ ಎದುರಾಗುತ್ತದೆ. ಖೋಟಾ ನೋಟುಗಳ ಅಪಾಯದ ಬಗ್ಗೆ ಜನಪ್ರತಿನಿಧಿಗಳ ನಿರ್ಲಕ್ಷ್ಯ, ಒಂದು ವೇಳೆ ಖೋಟಾ ನೋಟು ವಹಿವಾಟು ನಡೆಸುವ ದೊಡ್ಡ ದಂಧೆಕೋರರು ಸಿಕ್ಕಿಬಿದ್ದರೆ ಆ ಕ್ರೆಡಿಟ್ ಅನ್ನು ತಮ್ಮ ಚುನಾವಣಾ ಲಾಭಗಳಿಗೆ ಬಳಸಿಕೊಳ್ಳುವ ಹಪಾಹಪಿಯಲ್ಲಿ ಈ ಚಿತ್ರದಲ್ಲಿ ಮೂಡಿಬಂದಿದೆ.

ಚಿತ್ರದಲ್ಲಿ ಗುಜರಾತಿನ ಶಾಸಕ ಖೋಟಾ ನೋಟಿನ ದಂಧೆ ನಡೆಸುವುದು, ಬೇರೆ ದೇಶಗಳಿಂದ ಅಲ್ಲಿನ ಬಂದರುಗಳಿಗೆ ಖೋಟಾ ನೋಟುಗಳು ಬರುವುದು, ವಿರೋಧ ಪಕ್ಷದವರ ಮೇಲೆ ಸಿಬಿಐ ದಾಳಿ ನಡೆಸುವುದು ಮುಂತಾದ ಅಂಶಗಳನ್ನು ‘ಪ್ರಜ್ಞಾಪೂರ್ವಕವಾಗಿ’ ತಂದಿದ್ದಾರೆ ಅನ್ನಿಸುತ್ತದೆ.

ಕೊನೆ ಬಾಲ್‌ನಲ್ಲಿ 6 ರನ್ ಬೇಕಿದ್ದಾಗ ಆ ಶಾಟ್‌ನಲ್ಲಿ ಸರಿ, ತಪ್ಪು ಅಂತ ಇರೋಲ್ಲ, ಬರೀ ಬಾರಿಸಬೇಕು ಅಷ್ಟೇ.. ಒಂದು ಸಿಕ್ಸ್ ಹೋಗುತ್ತೆ ಇಲ್ಲ ಸೋಲ್ತಿವಿ ಅಷ್ಟೆ ಎನ್ನುತ್ತಾ ಎಂಥದ್ದೆ ಕೆಲಸಗಳಿಗೂ ಕೈ ಹಾಕಲು ಸಿದ್ದರಿರುವ ಸನ್ನಿ ಮತ್ತು ಫಿರೋಜ್‌ ತಮಗರಿವಿರದಂತೆಯೇ ಅಂತಾರಾಷ್ಟ್ರೀಯ ಖೋಟಾ ನೋಟಿನ ಮಾಫಿಯಾದ ಭಾಗವಾಗುತ್ತಾರೆ. ಮನ್ಸೂರ್ ದಲಾಲ್ ಮತ್ತು ಅವರು ಸೇರಿ ಭಾರತಕ್ಕೆ ಸಾವಿರಾರು ಕೋಟಿ ರೂ. ಖೋಟಾ ತರುವ ಪ್ರಯತ್ನ ಮಾಡುತ್ತಾರೆ. ಈ ಯತ್ನದಲ್ಲಿ ಅವರು ಯಶಸ್ವಿಯಾಗುತ್ತಾರೆಯೇ ಅಥವಾ ಅವರನ್ನು ಹೀರೋ ಮೈಖಲ್ ಹಿಡಿದು ಎಡೆಮುರಿ ಕಟ್ಟುತ್ತಾರೆಯೇ ಎಂಬುದನ್ನು ನೀವು ಈ ವೆಬ್ ಸೀರಿಸ್ ನೋಡಿಯೇ ಅರ್ಥಮಾಡಕೊಳ್ಳಬೇಕು.

“ಬಂಡಾಯ ಮತ್ತು ಕ್ರಾಂತಿ ಪದಗಳ ನಡುವಿನ ವ್ಯತ್ಯಾಸ ಏನು ಗೊತ್ತಾ? ಸೋತವರನ್ನು ಬಂಡಾಯಗಾರರು ಅಂತ ಕರೆಯುತ್ತಾರೆ. ಗೆದ್ದವರನ್ನು ಕ್ರಾಂತಿಕಾರಿ ಅನ್ನುತ್ತಾರೆ. ಆದರೆ ಯಾವಾಗಲೂ ಗೆದ್ದವರಷ್ಟೆ ಇತಿಹಾಸ ಬರೆಯುತ್ತಾರೆ. ಹಾಗಾಗಿ ನಾವು ಒಳಗಿನ ಕ್ರಾಂತಿನ ಶಾಶ್ವತವಾಗಿ ಜೀವಂತವಾಗಿ ಉಳಿಸಿಕೊಳ್ಳಬೇಕು” ಎಂಬ ಡೈಲಾಗ್ ಮಾಧವ್ ಹೇಳುತ್ತಿದ್ದರೆ, “ಪ್ರತಿಯೊಬ್ಬರಲ್ಲಿಯೂ ದುಷ್ಟತನವಿರುತ್ತದೆ, ಅದು ಹೊರಬರಲು ಸಮಯ ಕಾಯುತ್ತಿರುತ್ತದೆ” ಎನ್ನುವ ಮೂಲಕ ಸನ್ನಿ ತನ್ನ ಕೆಲಸಗಳಿಗೆ ಸಮರ್ಥನೆ ಕೊಟ್ಟುಕೊಳ್ಳುವಂತಹ ಡೈಲಾಗ್‌ಗಳು ಮನಸ್ಸಿನಲ್ಲಿ ಉಳಿಯುತ್ತವೆ.

ಮೈಖಲ್ ಹೆಂಡತಿ ಮತ್ತು ಕುಟುಂಬಕ್ಕೆ ಸಮಯ ನೀಡದೇ ಬೇಜವಾಬ್ದಾರಿಯಿಂದ ವರ್ತಿಸುವುದು, ಅದಕ್ಕೆ ಕೆಲಸದ ಒತ್ತಡ ಮತ್ತು ದೇಶಭಕ್ತಿಯ ನೆಪ ಹೇಳುವುದು, ಸದಾ ಏನನ್ನಾದರೂ ಕುಡಿದಿರು ಎಂಬ ಬೋದಿಲೇರ್‌ರವರ ಆಶಯವನ್ನು ಅವರು ಈ ಚಿತ್ರದಲ್ಲಿ ಈಡೇರಿಸುತ್ತಾರೆ. ಒಟ್ಟಾರೆಯಾಗಿ Raj & DK ಜೋಡಿ ಒಮ್ಮೆ ನೋಡಬಹುದಾದ ವೆಬ್ ಸೀರಿಸ್ ಮೂಲಕ ಮತ್ತೆ ಓಟಿಟಿಗೆ ಎಂಟ್ರಿ ಕೊಟ್ಟಿದ್ದಾರೆ. ಎರಡನೇ ಸೀಸನ್‌ಗಾಗಿ ಕಾಯುವಂತೆ ಮಾಡಿದ್ದಾರೆ. ಈ ವೆಬ್ ಸೀರಿಸ್ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಹಿಂದಿಯಲ್ಲಿ ತೆರೆಕಂಡಿರುವ ಈ ಸೀರೀಸ್‌ ಕನ್ನಡಕ್ಕೂ ಡಬ್‌ ಆಗಿದೆ.

ಇದನ್ನೂ ಓದಿ: ‘ವಾತಿ’ ವಿಮರ್ಶೆ| ಖಾಸಗಿ ಶಿಕ್ಷಣ ಮಾಫಿಯಾ ಸುತ್ತ ಕಮರ್ಷಿಯಲ್‌ ಕತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...