Homeಮುಖಪುಟಮೌನವಾಗಿರಲ್ಲ, ಪ್ಯಾಲೆಸ್ತೀನಿಯರ ಪರ ಹೋರಾಡುತ್ತೇನೆ: ಅಮೆರಿಕ ಸಂಸದೆ ರಶೀದಾ

ಮೌನವಾಗಿರಲ್ಲ, ಪ್ಯಾಲೆಸ್ತೀನಿಯರ ಪರ ಹೋರಾಡುತ್ತೇನೆ: ಅಮೆರಿಕ ಸಂಸದೆ ರಶೀದಾ

- Advertisement -
- Advertisement -

”ನಾನು ಮೌನವಾಗಿರಲು ಸಾಧ್ಯವಿಲ್ಲ. ನನ್ನ ಮಾತುಗಳಿಂದ ವಿಮುಖವಾಗುವ ಪ್ರಶ್ನೆಯೇ ಇಲ್ಲ. ಪ್ಯಾಲೆಸ್ತೀನ್ ಜನರ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸುತ್ತೇನೆ” ಎಂದು ಅಮೆರಿಕ ಕಾಂಗ್ರೆಸ್‌ನಲ್ಲಿ ಏಕೈಕ ಪ್ಯಾಲೆಸ್ತೀನಿ ಅಮೆರಿಕನ್ ಸದಸ್ಯೆಯಾಗಿರುವ ರಶೀದಾ ತೈಬ್ ಹೇಳಿದ್ದಾರೆ.

ತಮ್ಮವಿರುದ್ಧದ ವಾಗ್ದಂಡನೆ ನಿರ್ಣಯ ವಿರುದ್ಧ ಮಾತನಾಡಿದ ಅವರು, ”ಇಸ್ರೇಲ್- ಹಮಾಸ್ ಯುದ್ಧ ಬಗೆಗಿನ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಾನು ಇದನ್ನು ಹೇಳಬೇಕು ಎನ್ನುವುದು ನನಗೇ ನಂಬಲಾಗುತ್ತಿಲ್ಲ ಆದರೆ ಪ್ಯಾಲೆಸ್ತೀನ್ ಜನರನ್ನು ಬಳಸಿ ಬಿಸಾಕಲು ಸಾಧ್ಯವಿಲ್ಲ” ಎಂದು ಗದ್ಗದಿತರಾದರು.

ಪ್ಯಾಲೆಸ್ತೀನ್‌ರ ಅಳಲು ಮತ್ತು ಇಸ್ರೇಲಿ ಮಕ್ಕಳ ಧ್ವನಿ ನಡುವೆ ನನಗೆ ಯಾವುದೇ ಭಿನ್ನತೆ ಇಲ್ಲ ಎಂದು ರಶೀದಾ ಸ್ಪಷ್ಟಪಡಿಸಿದರು.

ಆ ದಿನ ತಡರಾತ್ರಿ ಡೆಮಾಕ್ರಟಿಕ್ ಪಕ್ಷದ 22 ಮಂದಿ ತ್ರೈಬ್ ಅವರಿಗೆ ವಾಗ್ದಂಡನೆ ವಿಧಿಸುವ ನಿರ್ಣಯದ ಬಗ್ಗೆ ಬಹುತೇಕ ಎಲ್ಲ ರಿಪಬ್ಲಿಕನ್ನರ ಜತೆಯಾದರು. ಈ ಹಂತದಲ್ಲಿ ಡೆಮಾಕ್ರೆಟಿಕ್ ಪಕ್ಷದ ಅವರ ಆಪ್ತ ಬಳಗ, ಅಂದರೆ ಪ್ರಗತಿಪರ ಗುಂಪು ಅವರ ರಕ್ಷಣೆಗೆ ಮುಂದಾಯಿತು.

ಕಾಂಗ್ರೆಸ್ ಸದಸ್ಯರ ಉಚ್ಚಾಟನೆಗಿಂತ ಒಂದು ಹಂತ ಕಡಿಮೆ ಎನಿಸಿದ ವಾಗ್ದಂಡನೆ ನಿರ್ಣಯವನ್ನು ತ್ರೈಬ್ ವಿರುದ್ಧ ಜಾರ್ಜಿಯಾದ ರಿಪಬ್ಲಿಕನ್ ಸದಸ್ಯ ರಿಚ್ ಮೆಕ್ರಾಮಿಕ್ ಮಂಡಿಸಿದ್ದರು.

ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯ ಬಗ್ಗೆ ತಪ್ಪಾಗಿ ವಿವರಣೆ ನೀಡಿದ್ದಾರೆ ಮತ್ತು ಇಸ್ರೇಲ್ ದೇಶದ ಧ್ವಂಸಕ್ಕೆ ಕರೆ ನೀಡಿದ್ದಾರೆ ಎಂದು ಆಪಾದಿಸಿ ಈ ನಿರ್ಣಯ ಮಂಡಿಸಿದ್ದರು. ಇದು ಆಂಗೀಕಾರವಾಗುವ ಮೂಲಕ ರಶೀದಾ 1789ರ ಬಳಿಕ ಈ ಜನಪ್ರತಿನಿಧಿ ಸಭೆಯಲ್ಲಿ ವಾಗ್ದಂಡನೆಗೆ ಗುರಿಯಾದ 26ನೇ ಸದಸ್ಯೆ ಎನಿಸಿಕೊಂಡರು.

ಈ ಹಿಂದೆ ಅವರು ಜೋ ಬಿಡೆನ್ “ನರಮೇಧ”ವನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಆನಂತರ ಗಾಜಾದಲ್ಲಿ ಇಸ್ರೇಲ್‌ನ ಮಿಲಿಟರಿ ಆಕ್ರಮಣದ ಮಧ್ಯೆ ತಕ್ಷಣದ ಕದನ ವಿರಾಮಕ್ಕೆ ಬೈಡನ್ ಕರೆ ನೀಡಿದರು.

ಇದನ್ನೂ ಓದಿ: ಗಾಝಾ ಮೇಲಿನ ದಾಳಿಗೆ US ಬೆಂಬಲ: ಅಮೆರಿಕದ ದೀಪಾವಳಿ ಪಾರ್ಟಿ ಆಹ್ವಾನ ತಿರಸ್ಕರಿಸಿದ ಕವಯಿತ್ರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...