Homeಮುಖಪುಟಮುಜಾಫರ್‌ನಗರ ಪ್ರಕರಣ: ಮುಸ್ಲಿಂ ಬಾಲಕನ ಗುರುತು ಬಹಿರಂಗಪಡಿಸಿದ ಆರೋಪದ ಮೇಲೆ ಪತ್ರಕರ್ತ ಜುಬೇರ್ ವಿರುದ್ಧ FIR

ಮುಜಾಫರ್‌ನಗರ ಪ್ರಕರಣ: ಮುಸ್ಲಿಂ ಬಾಲಕನ ಗುರುತು ಬಹಿರಂಗಪಡಿಸಿದ ಆರೋಪದ ಮೇಲೆ ಪತ್ರಕರ್ತ ಜುಬೇರ್ ವಿರುದ್ಧ FIR

- Advertisement -
- Advertisement -

ಉತ್ತರ ಪ್ರದೇಶದ ಮುಜಫರ್ ನಗರದ ಶಿಕ್ಷಕಿಯೊಬ್ಬರು ಏಳು ವರ್ಷದ ಮುಸ್ಲಿ ವಿದ್ಯಾರ್ಥಿಗೆ ಆತನ ಸಹಪಾಠಿಗಳಿಂದ ಕಪಾಳಮೋಕ್ಷ ಮಾಡಿದ ಘಟನೆ ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು. ಈ ಪ್ರಕರಣದ ಸಂತ್ರಸ್ತ ಬಾಲಕನ ಗುರುತನ್ನು ಬಹಿರಂಗಪಡಿಸಿದ ಆರೋಪದ ಮೇಲೆ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ವಿರುದ್ಧ ಮುಜಫರ್ ನಗರ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿದ್ದಾರೆ.

ವಿಷ್ಣುದತ್ ಎಂಬ ವ್ಯಕ್ತಿ ನೀಡಿದ ದೂರಿನ ಮೇರೆಗೆ ಜುಬೈರ್ ವಿರುದ್ಧ ಬಾಲಾಪರಾಧಿ ಕಾಯ್ದೆಯ ಸೆಕ್ಷನ್ 74 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆ ಮಗುವಿನ ಗುರುತನ್ನು ಬಹಿರಂಗಪಡಿಸುವುದು ಕಾನೂನು ಶಿಕ್ಷಾರ್ಹಗೊಳಿಸುತ್ತದೆ. ತಪ್ಪಿತಸ್ಥರಿಗೆ ಆರು ತಿಂಗಳ ಜೈಲು ಶಿಕ್ಷೆ ಅಥವಾ ರೂ 2 ಲಕ್ಷದವರೆಗೆ ದಂಡವನ್ನು ಪಾವತಿಸಲು ಹೇಳಬಹುದು.

ಆಗಸ್ಟ್ 24ರಂದು ಮುಸ್ಲಿಂ ಬಾಲಕನಿಗೆ ಶಿಕ್ಷಕಿಯ ಆದೇಶದ ಮೇರೆಗೆ ಸಹಪಾಠಿಗಳು ಕಪಾಳಮೋಕ್ಷ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮುಜಾಫರ್‌ನಗರದ ನೇಹಾ ಪಬ್ಲಿಕ್ ಸ್ಕೂಲ್‌ನಲ್ಲಿ ಈ ಘಟನೆ ನಡೆದಿದ್ದು, ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಶಿಕ್ಷಕಿ ಬಾಲಕನ ಸಹಪಾಠಿಗಳಿಗೆ ಹೊಡೆಯುವಂತೆ ಹೇಳುತ್ತಾರೆ.

ಒಬ್ಬ ವಿದ್ಯಾರ್ಥಿ ಆತನ ಕಪಾಳಕ್ಕೆ ಹೊಡೆದ ನಂತರ, ಶಿಕ್ಷಕಿಯು ಇನ್ನೊಬ್ಬ ವಿದ್ಯಾರ್ಥಿಯನ್ನು ಕರೆದು, ”ನಾನು ಹೇಳುತ್ತಿದ್ದೇನೆ, ಈ ಮುಸ್ಲಿಂ ವಿದ್ಯಾರ್ಥಿಯ ಬೆನ್ನಿನ ಮೇಲೆ ಹೊಡೆಯಬೇಕು… ಮತ್ತೆ ಬೇರೆ ವಿಧ್ಯಾರ್ಥಿಗಳನ್ನು ಕರೆದು, ಅವನ ಸೊಂಟದ ಮೇಲೆ ಹೊಡೆಯಲು ಪ್ರಾರಂಭಿಸಿ… ಅವನ ಮುಖವು ಕೆಂಪಾಗುತ್ತಿದೆ, ಅವನ ಸೊಂಟದ ಮೇಲೆ ಎಲ್ಲರೂ ಹೊಡೆಯಿರಿ” ಎಂದು ಆದೇಶಿಸಿದ್ದಾರೆ.

ಶಿಕ್ಷಕಿ ತ್ರಿಪ್ತಾ ತ್ಯಾಗಿ ವಿರುದ್ಧ ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡಿದ್ದಕ್ಕಾಗಿ ಶಿಕ್ಷೆ) ಮತ್ತು 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ, ಆಕೆಯ ವಿರುದ್ಧ ನಾನ್ ಕಾಗ್ನೈಸಬಲ್ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಅಂದರೆ ವಾರಂಟ್ ಇಲ್ಲದೆ ಪೊಲೀಸರು ಆಕೆಯನ್ನು ಬಂಧಿಸುವಂತಿಲ್ಲ. ತನಿಖೆ ಆರಂಭಿಸಲು ಪೊಲೀಸರಿಗೆ ನ್ಯಾಯಾಲಯದ ಅನುಮತಿಯೂ ಬೇಕು.

ಘಟನೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಪತ್ರಕರ್ತ ಮೊಹಮ್ಮದ್ ಜುಬೈರ್ ಅವರು ಬಾಲಕನ ಗುರುತನ್ನು ಬಹಿರಂಗಪಡಿಸಿದ್ದಾರೆ ಎಂದು ಎಫ್‌ಐಆರ್ ದಾಖಲಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ಜುಬೈರ್, ”ಇದರಲ್ಲಿ ತನ್ನನ್ನು ಗುರಿಯಾಗಿಸಿದ್ದಾರೆ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗದ ಮುಖ್ಯಸ್ಥ ಪ್ರಿಯಾಂಕ್ ಕನೂಂಗೊ ಅವರು ಕ್ಲಿಪ್ಪಿಂಗ್‌ನ್ನು ಹಂಚಿಕೊಳ್ಳದಂತೆ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಕೇಳಿಕೊಂಡ ನಂತರ ವೀಡಿಯೊವನ್ನು ಡಿಲೀಟ್ ಮಾಡಿದ್ದೇನೆ” ಎಂದು ಅವರು ಹೇಳಿದ್ದಾರೆ.

”ಮಾಧ್ಯಮಗಳು ಸೇರಿದಂತೆ ಅನೇಕರು ವೀಡಿಯೊವನ್ನು ಪೋಸ್ಟ್ ಮಾಡಿದರೂ ಸಹ ಎಫ್‌ಐಆರ್‌ನಲ್ಲಿ ನನ್ನ ಹೆಸರು ಮಾತ್ರ ಇದೆ. ವಾಸ್ತವವಾಗಿ ಮಗುವಿನ ಗುರುತನ್ನು ಬಹಿರಂಗಪಡಿಸುವ ಇತರ ವೀಡಿಯೊಗಳಿವೆ.. ಘಟನೆಯ ವಿವಾದದ ಬಳಿಕ ಆ ಮಗು ತನ್ನ ಸಹಪಾಠಿಗಳನ್ನು ತಬ್ಬಿಕೊಳ್ಳುತ್ತಿರುವ ವೀಡಿಯೊ ಕೂಡ ಸಾಕಷ್ಟು ಹಂಚಿಕೊಳ್ಳಲಾಗಿದೆ” ಎಂದು ಜುಬೈರ್ ಹೇಳಿದ್ದಾರೆ.

ಈ ಬಗ್ಗೆ ಪೊಲೀಸರು ಇನ್ನೂ ತನ್ನನ್ನು ಸಂಪರ್ಕಿಸಿಲ್ಲ ಎಂದು ಜುಬೇರ್ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ ಇಡಿ; ಎಎಪಿ ಆರೋಪಿ

0
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ಚಾರ್ಜ್ ಶೀಟ್ ಸಲ್ಲಿಸಿದೆ; ಅವರ ಆಮ್ ಆದ್ಮಿ ಪಕ್ಷವನ್ನು...