ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್‌ಸಿಂಗ್ ಎಫ್‌ಐಆರ್‌ ದಾಖಲು | Naanu gauri

ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್‌ಸಿಂಗ್ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪ ಹೊರಿಸಿ ಅವರ ವಿರುದ್ದ ಮಹಾರಾಷ್ಟ್ರ ಪೊಲೀಸರು ಗುರುವಾರ ಎಫ್‌ಐಆರ್‌ ದಾಖಲಿಸಿದ್ದಾರೆ.

ಪೊಲೀಸ್ ಇನ್‌ಸ್ಪೆಕ್ಟರ್ ಭೀಮರಾವ್ ಘಡ್ಜ್ ಅವರು ಪರಮ್ ಬೀರ್‌ಸಿಂಗ್, ಡಿಸಿಪಿ ಪರಾಗ್ ಮಾನೆರೆ ಮತ್ತು ಇತರ 26 ಪೊಲೀಸರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಹೀಗಾಗಿ ಈ ಎಲ್ಲಾ ಪೊಲೀಸ್‌ ಅಧಿಕಾರಿಗಳ ವಿರುದ್ದ ಅಕೋಲಾ ಕೊಟ್ವಾಲಿ ನಗರದ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಜನರ ಗಮನ ಬೇರೆಡೆ ಸೆಳೆಯಲು ರೋಮ್‌ ಚಕ್ರವರ್ತಿಗಳು ಗ್ಲಾಡಿಯೇಟರ್‌‌ಗಳನ್ನು ಆಡಿಸುತ್ತಿದ್ದರು, ನಮಗೆ ಐಪಿಎಲ್ ಇದೆ!

ಅಪರಾಧಕ್ಕೆ ಪಿತೂರಿ, ಸಾಕ್ಷ್ಯಗಳ ನಾಶ ಮತ್ತು 1989 ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ ಕಾಯ್ದೆ) ಸೇರಿ ವಿವಿಧ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಎಫ್‌ಐಆರ್‌ ಅನ್ನು ಶೂನ್ಯ ಎಫ್‌ಐಆರ್ (ಆ ಪ್ರದೇಶದಲ್ಲಿ ಅಥವಾ ಇನ್ನಾವುದೇ ಪ್ರದೇಶದಲ್ಲಿ ಮಾಡಿದ ಅಪರಾಧವನ್ನು ಲೆಕ್ಕಿಸದೆ ಯಾವುದೇ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸುವ ವಿಧಾನ) ನಿಯಮದಲ್ಲಿ ದಾಖಲಿಸಲಾಗಿದೆ. ಅದನ್ನು ಥಾಣೆ ನಗರ ಪೊಲೀಸರಿಗೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆಂದು ಪಿಟಿಐ ವರದಿ ಮಾಡಿದೆ.

2015-2018 ರ ಅವಧಿಯಲ್ಲಿ ಠಾಣೆ ನಗರ ಪೊಲೀಸ್ ಕಮಿಷನರೇಟ್‌ನಲ್ಲಿ ನೇಮಕಗೊಂಡಿದ್ದ ಭೀಮರಾವ್ ಘಡ್ಜ್ ಅವರ ಅಧಿಕಾರಾವಧಿಯಲ್ಲಿ ಪರಮ್ ಬೀರ್‌ಸಿಂಗ್ ನೇತೃತ್ವದ ಹಲವಾರು ಅಧಿಕಾರಿಗಳು ವಿವಿಧ ಭ್ರಷ್ಟಾಚಾರ ಕೃತ್ಯಗಳಲ್ಲಿ ತೊಡಗಿದ್ದರು ಎಂದು ಆರೋಪಿಸಿದ್ದಾರೆ. ಎಫ್‌ಐಆರ್ ದಾಖಲಾಗಿರುವ ಕೆಲವು ವ್ಯಕ್ತಿಗಳ ವಿರುದ್ಧ ಚಾರ್ಜ್‌ಶೀಟ್ ಹಾಕದಂತೆ ಸಿಂಗ್ ಕೇಳಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಈಗ ಅಕೋಲಾ ಪೊಲೀಸ್ ನಿಯಂತ್ರಣ ಕೊಠಡಿಯಲ್ಲಿ ನಿಯೋಜನೆಗೊಂಡಿರುವ ಭೀಮರಾವ್ ಘಡ್ಜ್, ಪರಮ್ ಬೀರ್‌ಸಿಂಗ್ ಅವರ ಸೂಚನೆಗಳನ್ನು ಪಾಲಿಸಲು ನಿರಾಕರಿಸಿದ ನಂತರ, ಅವರ ವಿರುದ್ಧ ಐದು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಮತ್ತು ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ‘ಮೌನವಾಗಿರಲ್ಲ, ನೀವು ಪ್ರಯತ್ನಿಸುತ್ತಲೇ ಇರಿ’: ತನ್ನ ನಂಬರ್‌ ಲೀಕ್‌ ಮಾಡಿದ ಬಿಜೆಪಿಗೆ ಸಿದ್ದಾರ್ಥ್

LEAVE A REPLY

Please enter your comment!
Please enter your name here