Homeಮುಖಪುಟಬಿಜೆಪಿ ಆಡಳಿತದ ಅಸ್ಸಾಂನ ಮುಖ್ಯಮಂತ್ರಿ ವಿರುದ್ದ ಎಫ್‌ಐಆರ್‌ ದಾಖಲು!

ಬಿಜೆಪಿ ಆಡಳಿತದ ಅಸ್ಸಾಂನ ಮುಖ್ಯಮಂತ್ರಿ ವಿರುದ್ದ ಎಫ್‌ಐಆರ್‌ ದಾಖಲು!

- Advertisement -
- Advertisement -

ಅಸ್ಸಾಂ-ಮಿಜೋರಾಂ ಅಂತಾರಾಜ್ಯ ಗಡಿಯಲ್ಲಿ ಜುಲೈ 26 ರಂದು ನಡೆದ ಹಿಂಸಾಚಾರ ಸಂಬಂಧಿಸಿ ಮಿಜೋರಾಂ ಪೊಲೀಸರು ಬಿಜೆಪಿ ಆಡಳಿತವಿರುವ ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೇರಿದಂತೆ ಆರು ಹಿರಿಯ ಅಧಿಕಾರಿಗಳು ಮತ್ತು 200 ಅಪರಿಚಿತ ಪೊಲೀಸರನ್ನು ಘಟನೆಗೆ ಜವಾಬ್ದಾರರನ್ನಾಗಿಸಿ ಅವರ ವಿರುದ್ದ ಎಫ್‌ಐಆರ್‌‌ ದಾಖಲಿಸಿದ್ದಾರೆ. ಮಿಜೋರಾಂನಲ್ಲಿ ಕೂಡಾ ಬಿಜೆಪಿ ಆಡಳಿತವಿದೆ.

ಅಧಿಕಾರಿಗಳಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಅನುರಾಗ್ ಅಗರ್ವಾಲ್, ಉಪ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ದೇವಜ್ಯೋತಿ ಮುಖರ್ಜಿ, ಕ್ಯಾಚಾರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೀರ್ತಿ ಜಲ್ಲಿ, ಕ್ಯಾಚಾರ್ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ಚಂದ್ರಕಾಂತ್ ನಿಂಬಾಳ್ಕರ್, ಡಿವಿಷನಲ್ ಫಾರೆಸ್ಟ್ ಆಫೀಸರ್ ಸನ್ನಿಡಿಯೋ ಚೌಧರಿ ಮತ್ತು ಧೋಲೈ ಪೊಲೀಸ್ ಠಾಣೆಯ ಪ್ರಭಾರಿ ಸಾಹಬ್ ಉದ್ದೀನ್ ಸೇರಿದ್ದಾರೆ.

ಇದನ್ನೂ ಓದಿ: ಗಡಿ ಸಂಘರ್ಷ: ಮಿಜೋರಾಂಗೆ ಪ್ರಯಾಣಿಸದಂತೆ ರಾಜ್ಯಕ್ಕೆ ಸಲಹೆ ನೀಡಿದ ಅಸ್ಸಾಂ ಸರ್ಕಾರ

ಅಸ್ಸಾಂ ಮುಖ್ಯ ಕಾರ್ಯದರ್ಶಿಗೆ ನೀಡಲಾದ ಪ್ರಮುಖ ಮಾರ್ಗಸೂಚಿ ಸಂದೇಶದಲ್ಲಿ, ಆಗಸ್ಟ್ 1 ರಂದು ಮಿಜೋರಾಂನ ಕೊಲಾಸಿಬ್ ಜಿಲ್ಲೆಯ‌ ವೈರೆಂಗ್ಟೆ ಉಪ ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ) ಮುಂದೆ ಅಧಿಕಾರಿಗಳನ್ನು ಒಪ್ಪಿಸುವಂತೆ ಕೇಳಲಾಗಿದೆ.

ವಿವಾದಿತ ಅಸ್ಸಾಂ-ಮಿಜೋರಾಂ ಗಡಿಯಲ್ಲಿ ಸೋಮವಾರ ಉಲ್ಭಣಿಸಿದ ಹಿಂಸಾಚಾರದಲ್ಲಿ ಆರು ಅಸ್ಸಾಂ ಪೊಲೀಸ್ ಸಿಬ್ಬಂದಿಗಳು ಸಾವನ್ನಪ್ಪಿದ್ದು ಮತ್ತು ಹಲವಾರು ಜನರು ಗಾಯಗೊಂಡಿದ್ದರು. ಇನ್ನೊಂದೆಡೆ ಕೊಲಸಿಬ್ ಗಡಿಯನ್ನು ದಾಟಿದ ಅಸ್ಸಾಂ ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿನ ವಾಹನಗಳನ್ನು ಧ್ವಂಸಗೊಳಿಸಿ ಗುಂಡು ಹಾರಿಸಿದರು ಎಂದು ಮಿಜೋರಾಂ ಪೊಲೀಸರು ಆರೋಪಿಸಿದ್ದಾರೆ.

ಇದನ್ನೂ ಓದಿ: ಗಡಿ ಸಂಘರ್ಷಯಲ್ಲಿ ಮಿಜೋರಾಂ ಸಂಸದನ ಕೈವಾಡ: ಅಸ್ಸಾಂ ಪೊಲೀಸರ ಆರೋಪ

ಅಸ್ಸಾಂನ ಕ್ಯಾಚಾರ್, ಹೈಲಕಂಡಿ ಮತ್ತು ಕರಿಮಗಂಜ್ ಜಿಲ್ಲೆಗಳ ಮಿಜೋರಾಂ ಗಡಿಯ ಬಳಿ ಇತ್ತೀಚಿನ ಕೆಲವು ಘರ್ಷಣೆಗಳನ್ನು ಸೂಚಿಸಿರುವ ಅಸ್ಸಾಂ ಸರ್ಕಾರ, ಗುರುವಾರದಂದು ರಾಜ್ಯದ ಜನತೆ ‘ಪ್ರವಾಸ ಸಲಹೆ’ ನೀಡಿದೆ. ಈ ಸಲಹೆಯಲ್ಲಿ ರಾಜ್ಯದ ಜನರು ಮಿಜೋರಾಂಗೆ ಪ್ರಯಾಣಿಸದಂತೆ ಅದು ಕೇಳಿಕೊಂಡಿದೆ.

“ಘಟನೆಯ ನಂತರವೂ, ಕೆಲವು ಮಿಜೋ ನಾಗರಿಕ ಸಮಾಜ ಹಾಗೂ ವಿದ್ಯಾರ್ಥಿ ಮತ್ತು ಯುವ ಸಂಘಟನೆಗಳು ನಿರಂತರವಾಗಿ ಅಸ್ಸಾಂ ಮತ್ತು ಅದರ ಜನರ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿವೆ …ಅನೇಕ ನಾಗರಿಕರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆಂದು ಅಸ್ಸಾಂ ಪೊಲೀಸರ ಬಳಿಯಿರುವ ವೀಡಿಯೊ ತುಣುಕಿನಿಂದ ತಿಳಿದುಬಂದಿದೆ. ಅದರಂತೆ, ಅಸ್ಸಾಂ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಈ ಮೂಲಕ ಪ್ರಯಾಣ ಸಲಹೆಯನ್ನು ನೀಡಲಾಗುತ್ತದೆ” ಎಂದು ಸಲಹೆಯು ತಿಳಿಸಿತ್ತು.

ಇದನ್ನೂ ಓದಿ: ಅಸ್ಸಾಂ-ಮಿಜೋರಾಂ ವಿವಾದಿತ ಗಡಿಯಲ್ಲಿ ಹಿಂಸಾಚಾರ: ಅಸ್ಸಾಂನ 6 ಪೊಲೀಸರ ಹತ್ಯೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...