Homeಮುಖಪುಟಉದ್ಯೋಗದಲ್ಲಿ 75% ಸ್ಥಳೀಯರಿಗೆ ಆದ್ಯತೆ: ಹರಿಯಾಣ ಸರ್ಕಾರದ ನಿರ್ಧಾರಕ್ಕೆ ವಿರೋಧ..

ಉದ್ಯೋಗದಲ್ಲಿ 75% ಸ್ಥಳೀಯರಿಗೆ ಆದ್ಯತೆ: ಹರಿಯಾಣ ಸರ್ಕಾರದ ನಿರ್ಧಾರಕ್ಕೆ ವಿರೋಧ..

ಖಾಸಗಿ ವಲಯದಲ್ಲಿನ ನೇಮಕಾತಿಗಳಲ್ಲಿ 75% ಸ್ಥಳೀಯ ಆದ್ಯತೆ ಮತ್ತು 50,000 ಕ್ಕೆ ಕಡಿಮೆ ಇಲ್ಲದಂತೆ ವೇತನ ನೀಡುವ ‘ಸ್ಥಳೀಯ ಅಭ್ಯರ್ಥಿಗಳ ಹರಿಯಾಣ ರಾಜ್ಯ ಉದ್ಯೋಗ 2020’ನ್ನು ರೂಪಿಸಲು ರಾಜ್ಯ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ.

- Advertisement -
- Advertisement -

ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಹರಿಯಾಣದ ಬಿಜೆಪಿ ಸರ್ಕಾರದ ಸ್ಥಳೀಯರಿಗೆ 75% ಹೊಸ ಉದ್ಯೋಗಗಳನ್ನು ಕಾಯ್ದಿರಿಸುವ ಪ್ರಸ್ತಾಪಕ್ಕೆ ಕೈಗಾರಿಕಾ ಸಂಸ್ಥೆಗಳು, ಟ್ರೇಡ್ ಯೂನಿಯನ್ ಕಾರ್ಯಕರ್ತರು ಮತ್ತು ಶಿಕ್ಷಣ ತಜ್ಞರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಖಾಸಗಿ ವಲಯದಲ್ಲಿನ ನೇಮಕಾತಿಗಳಲ್ಲಿ 75% ಸ್ಥಳೀಯರಿಗೆ ಆದ್ಯತೆ ಮತ್ತು 50,000 ಕ್ಕೆ ಕಡಿಮೆ ಇಲ್ಲದಂತೆ ವೇತನ ನೀಡುವ ‘ಸ್ಥಳೀಯ ಅಭ್ಯರ್ಥಿಗಳ ಹರಿಯಾಣ ರಾಜ್ಯ ಉದ್ಯೋಗ ನೀತಿ 2020’ನ್ನು ರೂಪಿಸಲು ರಾಜ್ಯ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ.

ಸುಗ್ರೀವಾಜ್ಞೆಯ ಕರಡನ್ನು ಅದರ ಮುಂದಿನ ಸಭೆಯಲ್ಲಿ ಸಚಿವರ ಪರಿಷತ್ತಿನ ಮುಂದೆ ಇಡಲು ನಿರ್ಧರಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದಕ್ಕೆ ರಾಷ್ಟ್ರಪತಿಗಳ ಒಪ್ಪಿಗೆ ಅಗತ್ಯವಾಗಿರುತ್ತದೆ.

ಕಳೆದ ವರ್ಷ ಆಂಧ್ರಪ್ರದೇಶ ಸರ್ಕಾರವು ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಮತ್ತು ಮುಂಬರುವ ಕೈಗಾರಿಕೆಗಳು ಸ್ಥಳೀಯರಿಗೆ ಉದ್ಯೋಗವನ್ನು ಕಾಯ್ದಿರಿಸುವುದನ್ನು ಕಡ್ಡಾಯಗೊಳಿಸಿತು. ಅಂತೆಯೇ, ಮಧ್ಯಪ್ರದೇಶದ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವೂ ಕೈಗಾರಿಕೆಗಳಲ್ಲಿ ಇದೇ ರೀತಿಯ ಸ್ಥಳೀಯರಿಗೆ ಆದ್ಯತೆ ನೀಡುವ ಕಾಯ್ದೆಯನ್ನು ಘೋಷಿಸಿತ್ತು.

“ಇಂತಹ ನೀತಿಗಳು ಹಲವಾರು ರಾಜ್ಯಗಳಲ್ಲಿನ ಕಾರ್ಮಿಕರ ಪೂರೈಕೆ ಮತ್ತು ಬೇಡಿಕೆಯ ನಡುವೆ ಕಂದಕವನ್ನು ಉಂಟು ಮಾಡುತ್ತವೆ” ಎಂದು ಐಐಟಿ-ದೆಹಲಿಯ ಸಹಾಯಕ ಪ್ರಾಧ್ಯಾಪಕ ಜೈನ್ ಜೋಸ್ ಥಾಮಸ್ ಹೇಳಿದರು. “ಕಾರ್ಮಿಕರು ಮತ್ತು ಕೈಗಾರಿಕೀಕರಣ” ಎಂಬುದು ಇವರ ಸಂಶೋಧನಾ ವಿಷಯವಾಗಿದೆ.

ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಮಾನೇಸರ್ ಘಟಕದ ಪ್ರಧಾನ ಕಾರ್ಯದರ್ಶಿ ಸತ್‌ಬಿರ್ ಸಿಂಗ್ ಹರಿಯಾಣ ಸರ್ಕಾರದ ಕ್ರಮವನ್ನು “ಪೊಲಿಟಿಕಲ್ ಗಿಮಿಕ್” ಎಂದು ಕರೆದಿದ್ದಾರೆ. “ರಾಜ್ಯದಲ್ಲಿ ಸಾಕಷ್ಟು ಉದ್ಯೋಗಗಳು ಇಲ್ಲದಿದ್ದಾಗ ಮೀಸಲಾತಿಯನ್ನು ಘೋಷಿಸುವ ಮೂಲಕ ಸ್ಥಳೀಯರನ್ನು ಮರುಳು ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ” ಎಂದು ಅವರು ಹೇಳಿದ್ದಾರೆ. ಸ್ಥಳೀಯರು ಮತ್ತು ವಲಸೆ ಕಾರ್ಮಿಕರ ನಡುವೆ ಬಿರುಕು ಮೂಡಿಸುವುದು ಮತ್ತು ಕಾರ್ಮಿಕ ವರ್ಗವನ್ನು ವಿಭಜಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಮಾನೇಸರ್ ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ಮನಮೋಹನ್ ಗೇನ್ಡ್ ಇದನ್ನು ಕಠಿಣ ನಡೆ ಎಂದು ಕರೆದಿದ್ದಾರೆ. ಇದು ಲಂಚ ಮತ್ತು ದಂಡಕ್ಕೆ ಆಹ್ವಾನ ನೀಡುತ್ತದೆ. ಮಾನೇಸರ್ ನಲ್ಲಿ 80% ಕಾರ್ಮಿಕರು ವಲಸಿಗರು. ಇವರನ್ನು ತೆಗೆದು ಹಾಕಿ ಈಗ ಸ್ಥಳೀಯರಿಗೆ ಅವಕಾಶ ನೀಡುವುದು ಅಸಾಧ್ಯವಾಗಿದೆ. ಈಗಾಗಲೇ ಕೈಗಾರಿಕೆಗಳು ಹಿನ್ನಡೆಯುತ್ತಿರುವಾಗ, ಇಂತಹ ಕ್ರಮವನ್ನು ತರುತ್ತಿರುವುದು ಆಶ್ಚರ್ಯಕರವಾಗಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: ಕೊರೊನಾ ಲಾಕ್‌ಡೌನ್: 6 ರಾಜ್ಯಗಳ 67 ಲಕ್ಷ ವಲಸೆ ಕಾರ್ಮಿಕರು ತವರಿಗೆ ಮರಳಿದ್ದಾರೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...