Homeಅಂತರಾಷ್ಟ್ರೀಯBRICS ರಾಷ್ಟ್ರಗಳ ಒಕ್ಕೂಟಕ್ಕೆ ಸೌದಿ ಅರೇಬಿಯಾ ಸೇರಿ ಐದು ರಾಷ್ಟ್ರಗಳ ಸೇರ್ಪಡೆ

BRICS ರಾಷ್ಟ್ರಗಳ ಒಕ್ಕೂಟಕ್ಕೆ ಸೌದಿ ಅರೇಬಿಯಾ ಸೇರಿ ಐದು ರಾಷ್ಟ್ರಗಳ ಸೇರ್ಪಡೆ

- Advertisement -
- Advertisement -

ಭಾರತ, ರಷ್ಯಾ ಮತ್ತು ಚೀನಾ, ಬ್ರೆಜಿಲ್‌, ದಕ್ಷಿಣ ಆಫ್ರಿಕಾ ದೇಶಗಳ ಒಕ್ಕೂಟ ಬ್ರಿಕ್ಸ್‌ಗೆ (BRICS) ಹೊಸದಾಗಿ ಐದು ರಾಷ್ಟ್ರಗಳನ್ನು ಸೇರಿಸಲಾಗಿದ್ದು, ಹೊಸದಾಗಿ ಸೇರ್ಪಡೆಗೊಂಡ ರಾಷ್ಟ್ರಗಳಿಗೆ ಬ್ರಿಕ್ಸ್‌ ಪೂರ್ಣ ಸದಸ್ಯತ್ವವನ್ನು ನೀಡಲಾಗಿದೆ.

BRICS ಒಕ್ಕೂಟಕ್ಕೆ ಹೊಸದಾಗಿ ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳನ್ನು ಸೇರ್ಪಡೆಗೊಳಿಸಲಾಗಿದೆ.

ಬ್ರಿಕ್ಸ್‌ನ ಅಧ್ಯಕ್ಷ ಸ್ಥಾನವನ್ನು ಮಾಸ್ಕೋ ವಹಿಸಿಕೊಂಡ ಬಳಿಕ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು  ಈ ಗುಂಪು 10-ರಾಷ್ಟ್ರಗಳ ಸಂಸ್ಥೆಯಾಗಿ ಮಾರ್ಪಟ್ಟಿದ್ದು, ಹೊಸ ಸದಸ್ಯರಾಗಿ ಐದು ರಾಷ್ಟ್ರಗಳು ಸೇರ್ಪಡೆಗೊಂಡಿವೆ ಎಂದು ಘೋಷಿಸಿದ್ದಾರೆ.

ಆಗಸ್ಟ್‌ನಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಬ್ರಿಕ್ಸ್‌ ಶೃಂಗಸಭೆಯಲ್ಲಿ ಬ್ರಿಕ್ಸ್‌ ನಾಯಕರು ಅರ್ಜೆಂಟೀನಾ ಸೇರಿದಂತೆ ಆರು ದೇಶಗಳನ್ನು ಜ.1ರಿಂದ ಜಾರಿಗೆ ಬರುವಂತೆ ಒಕ್ಕೂಟಕ್ಕೆ ಸೇರಿಸುವ ಪ್ರಸ್ತಾಪವನ್ನು ಅನುಮೋದಿಸಿದ್ದರು. ದಕ್ಷಿಣ ಆಫ್ರಿಕಾದ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ 15ನೇ ಬ್ರಿಕ್ಸ್‌ ಶೃಂಗ ಸಭೆಯಲ್ಲಿ ಒಕ್ಕೂಟದ ವಿಸ್ತರಣೆಯ ಅಗತ್ಯತೆಯನ್ನು ಪ್ರತಿಪಾದಿಸಲಾಗಿತ್ತು. ಒಕ್ಕೂಟದ ವಿಸ್ತರಣೆಯ ಭಾಗವಾಗಿ ಅರ್ಜೆಂಟೀನಾ, ಈಜಿಪ್ಟ್, ಇಥಿಯೋಪಿಯಾ, ಇರಾನ್‌, ಸೌದಿ ಅರೇಬಿಯಾ ಮತ್ತು ಯುಎಇಯನ್ನು ಬ್ರಿಕ್ಸ್‌ ಒಕ್ಕೂಟವನ್ನು ಸೇರಿಸಿಕೊಳ್ಳಲು ಒಮ್ಮತದ ನಿರ್ಧಾರ ಕೈಗೊಳ್ಳಲಾಗಿತ್ತು.

ಆದರೆ ಅರ್ಜೆಂಟೀನಾದ ಹೊಸ ಅಧ್ಯಕ್ಷ ಜೇವಿಯರ್ ಮಿಲೀ ಅವರು ತಮ್ಮ ದೇಶವನ್ನು ಬ್ರಿಕ್ಸ್ ಸದಸ್ಯತ್ವದಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದರು. ಹೀಗಾಗಿ ಉಳಿದ ಐದು ದೇಶಗಳಿಗೆ ಸದಸ್ಯತ್ವ ನೀಡಲಾಗಿದೆ. ಹೊಸ ಸದಸ್ಯ ರಾಷ್ಟ್ರಗಳು ಒಕ್ಕೂಟಕ್ಕೆ ಬರುವುದರಿಂದ ಜಾಗತಿಕ ತೈಲ ರಫ್ತು ವಹಿವಾಟಿನ 80 ಪ್ರತಿಶತ ಬ್ರಿಕ್ಸ್ ಒಕ್ಕೂಟದ ತೆಕ್ಕೆಗೆ ಬರಲಿದೆ ಎನ್ನಲಾಗಿದೆ.

ಬ್ರಿಕ್ಸ್ ಅಥವಾ ಬ್ರಿಕ್ಸ್ ಸಂಘಟನೆ ಭಾರತ, ರಷ್ಯಾ ಮತ್ತು ಚೀನಾ, ಬ್ರೆಜಿಲ್‌, ದಕ್ಷಿಣ ಆಫ್ರಿಕಾ ಮತ್ತು ಐದು ರಾಷ್ಟ್ರಗಳನ್ನು ಒಳಗೊಂಡ ಒಂದು ಒಕ್ಕೂಟವಾಗಿದೆ. ಈ ದೇಶಗಳ ಮೊದಲಕ್ಷರಗಳಾದ B –ಬ್ರೆಜಿಲ್, R-ರಷ್ಯಾ, I –ಇಂಡಿಯಾ, C- ಚೀನಾ ಮತ್ತು S- ದಕ್ಷಿಣ ಆಫ್ರಿಕ (ಸೌತ್ ಆಫ್ರಿಕಾ) ಸೇರಿಸಿ  BRICS ಎಂದು ಹೆಸರಿಡಲಾಗಿತ್ತು.  2001ರಲ್ಲಿ ನಾಲ್ಕು ದೇಶಗಳನ್ನು ಒಳಗೊಂಡ ಬ್ರಿಕ್ ಆಗಿತ್ತು. 2010ರಲ್ಲಿ ದಕ್ಷಿಣ ಆಫ್ರಿಕವೂ ಸೇರಿದ ನಂತರ ಬ್ರಿಕ್ಸ್ ಆಯಿತು. 2009ರಿಂದಲೂ ಈ ಸಂಘಟನೆ ವಾರ್ಷಿಕವಾಗಿ ಶೃಂಗಸಭೆ ಸೇರುತ್ತಾ ಬಂದಿದೆ.

2015ರ ಮಾಹಿತಿಯಂತೆ ಬ್ರಿಕ್ಸ್‌ನ ಜನಸಂಖ್ಯೆ 3.6 ಲಕ್ಷ ಕೋಟಿ ಅಥವಾ ಜಾಗತಿಕ ಜನಸಂಖ್ಯೆಯ ಅರ್ಧದಷ್ಟು ಇದೆ. ಈ ದೇಶಗಳ ಒಟ್ಟಾರೆ ಜಿಡಿಪಿ ಅಥವಾ ಒಟ್ಟಾರೆ ಅಂತರಿಕ ಉತ್ಪಾದನೆ 16.6 ಲಕ್ಷ ಕೋಟಿ ಅಮೆರಿಕನ್ ಡಾಲರ್ ಆಗಿದ್ದು, ಇದು ಜಾಗತಿಕ ಒಟ್ಟಾರೆ ಉತ್ಪಾದನೆಯ ಶೇ 22ರಷ್ಟಾಗಿದೆ.

ಬ್ರಿಕ್‌ನ ಮೊದಲ ಶೃಂಗಸಭೆ 2009ರ ಜೂ.16 ರಂದು ರಷ್ಯಾದಲ್ಲಿ ನಡೆಯಿತು. ಮೊದಲ ಶೃಂಗ ಸಭೆಯಲ್ಲಿ  ಅಂದಿನ ಬ್ರೆಜಿಲ್ ಅಧ್ಯಕ್ಷರಾದ ಲುಯಿಜ್ ಇನಾಸಿಯೊ ಲುಲ ಡ ಸಿಲ್ವ, ರಷ್ಯಾದ ಅಂದಿನ ಅಧ್ಯಕ್ಷ ದಿಮಿತ್ರಿ ಮೆಡ್ವಡೇವ್, ಭಾರತದ ಅಂದಿನ ಪ್ರಧಾನ ಮಂತ್ರಿ ಮನಮೋಹನ್‌ ಸಿಂಗ್‌ ಮತ್ತು ಚೀನಾದ ಅಂದಿನ ಅಧ್ಯಕ್ಷ ಹು ಜಿಂಟಾವೊ ಹಾಜರಿದ್ದರು.

ಇದನ್ನು ಓದಿ: ನೂತನ ಕ್ರಿಮಿನಲ್ ಕಾನೂನುಗಳನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ ಸಲ್ಲಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...