Homeಮುಖಪುಟನೋಬೆಲ್ ಪುರಸ್ಕೃತ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸ್ಸಿಂಜರ್ ನಿಧನ

ನೋಬೆಲ್ ಪುರಸ್ಕೃತ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸ್ಸಿಂಜರ್ ನಿಧನ

- Advertisement -
- Advertisement -

ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ, ರಾಜತಾಂತ್ರಿಕ, ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಹೆನ್ರಿ ಕಿಸ್ಸಿಂಜರ್ ತನ್ನ 100ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಜರ್ಮನ್ ಮೂಲದವರಾದ ಕಿಸ್ಸಿಂಜರ್ ಕನೆಕ್ಟಿಕಟ್‌ನಲ್ಲಿರುವ ಅವರ ಮನೆಯಲ್ಲಿ ಬುಧವಾರ ನಿಧನರಾಗಿದ್ದಾರೆ ಎಂದು ಅವರ ರಾಜಕೀಯ ಸಲಹಾ ಸಂಸ್ಥೆ ಕಿಸ್ಸಿಂಜರ್ ಅಸೋಸಿಯೇಟ್ಸ್ ತಿಳಿಸಿದೆ.

1923ರಲ್ಲಿ ಜರ್ಮನಿಯಲ್ಲಿ ಜನಿಸಿದ ಕಿಸ್ಸಿಂಜರ್, 1938 ರಲ್ಲಿ ಕುಟುಂಬದೊಂದಿಗೆ ಅಮೆರಿಕಕ್ಕೆ ಬಂದು ನೆಲೆಸಿದರು. 1943ರಲ್ಲಿ ಅವರು ಅಮೆರಿಕದ ಪೌರತ್ವ ಪಡೆದ ಕಿಸ್ಸಿಂಜರ್, ಯುಎಸ್ ಸೇನೆಯಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಬಳಿಕ ಇಂಟಲಿಜೆನ್ಸ್ ಕಾರ್ಪ್‌ನಲ್ಲಿ ಕೆಲಸ ಮಾಡಿದ್ದರು. 1969ರಲ್ಲಿ ಆಗಿನ ಯುಎಸ್ ಅಧ್ಯಕ್ಷ ಡಿಚರ್ಡ್ ನಿಕ್ಸನ್, ಕಿಸ್ಸಿಂಜರ್ ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ ನೇಮಿಸಿದ್ದರು. ತನ್ನ ಅಧಿಕಾರವಧಿಯಲ್ಲಿ ಕಿಸ್ಸಿಂಜರ್ ಯುಎಸ್ ವಿದೇಶಾಂಗ ನೀತಿಗಳ ಮಾರ್ಪಾಡು, ಹೊಸ ಪರಿಚಯ ಮಾಡಿದ್ದರು.

ವಿವಾದಕ್ಕೆ ಕಾರಣವಾಗಿತ್ತು ಕಿಸ್ಸಿಂಜರ್ ನೋಬೆಲ್ ಪುರಸ್ಕಾರ :

ಹೆನ್ರಿ ಕಿಸ್ಸಿಂಜರ್ ಎಂದಾಕ್ಷಣ ಅವರಿಗೆ ದೊರೆತ ನೋಬೆಲ್ ಪುರಸ್ಕಾರದ ವಿಚಾರ ಮುನ್ನಲೆಗೆ ಬರುತ್ತದೆ. 1973ರಲ್ಲಿ ವಿಯೆಟ್ನಾಂನ ಲೇ ಡುಕ್ ಥೋ ಅವರೊಂದಿಗೆ ಕಿಸ್ಸಿಂಜರ್ ಜಂಟಿಯಾಗಿ ನೋಬೆಲ್ ಶಾಂತಿ ಪುರಸ್ಕಾರ ಪಡೆದರು. ಕಿಸ್ಸಿಂಜರ್ ನೋಬೆಲ್ ಪಡೆಯುವುದಕ್ಕೆ ಜಾಗತಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಕಾಂಬೋಡಿಯಾದಲ್ಲಿ ಗೌಪ್ಯವಾಗಿ ಬಾಂಬ್ ದಾಳಿ ನಡೆಸಿದ್ದರ ಹಿಂದೆ ಕಿಸ್ಸಿಂಜರ್ ಕೈವಾಡ ಇದೆ ಎಂದು ನೋಬೆಲ್ ಸಮಿತಿಯ ಇಬ್ಬರು ಸದಸ್ಯರು ರಾಜೀನಾಮೆ ಕೂಡ ನೀಡಿದ್ದರು.

100 ನೇ ವರ್ಷಕ್ಕೆ ಕಾಲಿಟ್ಟ ನಂತರವೂ, ಕಿಸ್ಸಿಂಜರ್ ಶ್ವೇತಭವನದಲ್ಲಿ ಸಭೆಗಳಿಗೆ ಹಾಜರಾಗುತ್ತಿದ್ದರು. ನಾಯಕತ್ವದ ಶೈಲಿಗಳ ಬಗ್ಗೆ ಪುಸ್ತಕವನ್ನು ಪ್ರಕಟಿಸಿದ್ದರು. ಉತ್ತರ ಕೊರಿಯಾ ಒಡ್ಡಿದ ಪರಮಾಣು ಬೆದರಿಕೆಯ ಬಗ್ಗೆ ಅವರು ಸೆನೆಟ್ ಸಮಿತಿಯ ಮುಂದೆ ಸಾಕ್ಷ್ಯ ನೀಡಿದ್ದರು. ಈ ವರ್ಷದ ಜುಲೈನಲ್ಲಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡುವ ಮೂಲಕ ಕಿಸ್ಸಿಂಜರ್ ಅಚ್ಚರಿ ಮೂಡಿಸಿದ್ದರು.

ಸೆಪ್ಟೆಂಬರ್ 11, 2001 ರ ಯುಎಸ್ ವಿಶ್ವ ವಾಣಿಜ್ಯ ಕಟ್ಟಡಗಳ ಮೇಲಿನ ಅಲ್‌ ಖೈದಾ ದಾಳಿಯ ನಂತರ, ಆಗಿನ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಕಿಸ್ಸಿಂಜರ್ ಅವರನ್ನು ತನಿಖಾ ಸಮಿತಿಯ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿದ್ದರು. ಆದರೆ, ಡೆಮಾಕ್ರಟಿಕ್ ಪಕ್ಷದ ತೀವ್ರ ವಿರೋಧವು ಕಿಸ್ಸಿಂಜರ್ ಅವರನ್ನು ಆ ಸ್ಥಾನದಿಂದ ರಾಜೀನಾಮೆ ನೀಡುವಂತೆ ಮಾಡಿಸಿತ್ತು.

1964 ರಲ್ಲಿ ತನ್ನ ಮೊದಲ ಪತ್ನಿ ಆನ್ ಫ್ಲೀಶರ್‌ಗೆ ವಿಚ್ಛೇದನ ನೀಡಿದ ನಂತರ, ಕಿಸ್ಸಿಂಜರ್ 1974 ರಲ್ಲಿ ನ್ಯೂಯಾರ್ಕ್ ಗವರ್ನರ್ ನೆಲ್ಸನ್ ರಾಕ್‌ಫೆಲ್ಲರ್ ಅವರ ಸಹಾಯಕಿ ನ್ಯಾನ್ಸಿ ಮ್ಯಾಗಿನ್ನೆಸ್ ಅವರನ್ನು ವಿವಾಹವಾದರು. ತಮ್ಮ ಮೊದಲ ಪತ್ನಿಯಿಂದ ಕಿಸ್ಸಿಂಜರ್ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...