Homeಮುಖಪುಟಚುನಾವಣಾ ಬಾಂಡ್ ಮೂಲಕ ಅತಿ ಹೆಚ್ಚು ದೇಣಿಗೆ ಪಡೆದ ಬಿಜೆಪಿ: ಚು.ಆಯೋಗದಿಂದ ಹೊಸ ಮಾಹಿತಿ ಪ್ರಕಟ

ಚುನಾವಣಾ ಬಾಂಡ್ ಮೂಲಕ ಅತಿ ಹೆಚ್ಚು ದೇಣಿಗೆ ಪಡೆದ ಬಿಜೆಪಿ: ಚು.ಆಯೋಗದಿಂದ ಹೊಸ ಮಾಹಿತಿ ಪ್ರಕಟ

- Advertisement -
- Advertisement -

ಚುನಾವಣಾ ಬಾಂಡ್‌ಗಳ ಕುರಿತು ರಾಜಕೀಯ ಪಕ್ಷಗಳಿಂದ ಪಡೆದ ಅಂಕಿ-ಅಂಶಗಳನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದು, ಈ ಅಂಕಿ-ಅಂಶಗಳ ಪ್ರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಚುನಾವಣಾ ಬಾಂಡ್‌ ಮೂಲಕ ಅತ್ಯಧಿಕ ದೇಣಿಗೆಯನ್ನು ಪಡೆದುಕೊಂಡಿದೆ ಎನ್ನುವುದು ಬಯಲಾಗಿದೆ.

ಈ ವಿವರಗಳು ಏಪ್ರಿಲ್ 12, 2019ರ ಹಿಂದಿನ ಅವಧಿಯದ್ದು ಎಂದು ಹೇಳಲಾಗಿದ್ದು, ಈ ದಿನಾಂಕದ ನಂತರದ ಚುನಾವಣಾ ಬಾಂಡ್ ವಿವರಗಳನ್ನು ಚುನಾವಣಾ ಆಯೋಗ ಕಳೆದ ವಾರ ಸಾರ್ವಜನಿಕಗೊಳಿಸಿದೆ.

ಸುಪ್ರೀಂಕೋರ್ಟ್‌ನ ಆದೇಶದ  ಪ್ರಕಾರ, ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ಭೌತಿಕ ಪ್ರತಿಗಳು, ಡಿಜಿಟಲೀಕರಣಗೊಂಡ ದಾಖಲೆಯನ್ನು ಪೆನ್ ಡ್ರೈವ್‌ ಮೂಲಕ ಹಿಂದಿರುಗಿಸಿದ್ದಾರೆ. ಅದರನ್ವಯ, ಡಿಜಿಟಲೀಕರಣಗೊಂಡ ಅಂಕಿ ಅಂಶವನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

ಏಪ್ರಿಲ್ 19ರಿಂದ ಜೂನ್ 1ರವರೆಗೆ 7 ಹಂತಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ದಿನಾಂಕಗಳನ್ನು ಘೋಷಿಸಿದ ಒಂದು ದಿನದ ನಂತರ ಚುನಾವಣಾ ಆಯೋಗ ಈ ಮಹತ್ವದ ಮಾಹಿತಿಯನ್ನು  ಬಿಡುಗಡೆ ಮಾಡಿದೆ. ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ದಾಖಲೆಗಳು ಬಾಂಡ್‌ಗಳ ದಿನಾಂಕ, ಮುಖಬೆಲೆಗಳು, ಬಾಂಡ್‌ಗಳ ಸಂಖ್ಯೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆ, ರಶೀದಿಯ ದಿನಾಂಕ ಮತ್ತು ಕ್ರೆಡಿಟ್ ದಿನಾಂಕದ ಮಾತ್ರ ಉಲ್ಲೇಖಿತವಾಗಿದೆ.

ಈ ಹೊಸ ಅಂಕಿ ಅಂಶಗಳ ಪ್ರಕಾರ ಬಿಜೆಪಿ ಚುನಾವಣಾ ಬಾಂಡ್‌ಗಳ ಮೂಲಕ ಅತಿ ಹೆಚ್ಚು ಎಂದರೆ 6,986.5 ಕೋಟಿ ಪಡೆದುಕೊಂಡಿದೆ. 2019–20ರ ಅವಧಿಯಲ್ಲಿ ಅತ್ಯಧಿಕ 2,555 ಕೋಟಿ ಪಡೆದುಕೊಂಡಿದೆ ಎಂದು ಚುನಾವಣಾ ಅಯೋಗದ ಅಂಕಿ ಅಂಶದಿಂದ ತಿಳಿದುಬಂದಿದೆ. ತೃಣಮೂಲ ಕಾಂಗ್ರೆಸ್ ಪಕ್ಷವು 2ನೇ ಸ್ಥಾನದಲ್ಲಿದ್ದು, ಚುನಾವಣಾ ಬಾಂಡ್ ಮೂಲಕ 1,397 ಕೋಟಿ ಪಡೆದುಕೊಂಡಿದೆ. ಕಾಂಗ್ರೆಸ್ 1,334.35 ಕೋಟಿ ಪಡೆದಿದೆ.

ತಮಿಳುನಾಡಿನ ಆಡಳಿತಾರೂಢ ಡಿಎಂಕೆಯು ಲಾಟರಿ ಕಿಂಗ್ ಸ್ಯಾಂಟಿಯಾಗೊ ಮಾರ್ಟಿನ್ ಅವರ ಫ್ಯೂಚರ್ ಗೇಮಿಂಗ್‌ನಿಂದ 509 ಕೋಟಿ ಸೇರಿದಂತೆ ಚುನಾವಣಾ ಬಾಂಡ್‌ಗಳ ಮೂಲಕ  656.5 ಕೋಟಿಗಳನ್ನು ಸ್ವೀಕರಿಸಿದೆ ಎಂದು ಚುನಾವಣಾ ಆಯೋಗದ ಮಾಹಿತಿಯು ತೋರಿಸುತ್ತದೆ ಎಂದು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ.

ಬಿಜೆಡಿಗೆ 944.5 ಕೋಟಿ, ವೈಎಸ್‌ಆರ್ ಕಾಂಗ್ರೆಸ್‌ಗೆ 442.8 ಕೋಟಿ, ಟಿಡಿಪಿಗೆ 181.35 ಕೋಟಿ ಚುನಾವಣಾ ಬಾಂಡ್‌ ಮೂಲಕ ದೇಣಿಗೆ ಬಂದಿದೆ ಎಂದು ಇತ್ತೀಚಿನ ಮಾಹಿತಿಯು ತಿಳಿಸಿದೆ. 6 ಕೋಟಿ ಪಡೆದಿರುವ ಎಐಎಡಿಎಂಕೆಗೆ ಐಪಿಎಲ್‌ನ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಿಂದಲೂ ದೇಣಿಗೆ ಪಡೆದುಕೊಂಡಿದೆ ಎನ್ನುವುದು ಮಾಹಿತಿಯಲ್ಲಿ ಬಯಲಾಗಿದೆ.

ಬಿಜೆಪಿಯು ಚುನಾವಣಾ ಬಾಂಡ್‌ ಮೂಲಕ ಅತಿಹೆಚ್ಚು ದೇಣಿಗೆ ಪಡೆದ ಪಕ್ಷವಾಗಿದೆ. 2019–20ರ ಅವಧಿಯಲ್ಲಿ ಪಕ್ಷಕ್ಕೆ ದೇಣಿಗೆ ರೂಪದಲ್ಲಿ 2,555 ಕೋಟಿ ಹರಿದು ಬಂದಿದೆ. 2023ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಬಿಜೆಪಿಗೆ 421.27 ಕೋಟಿ ದೇಣಿಗೆ ದೊರೆತಿದೆ.

ಇತ್ತೀಚೆಗೆ ಎಡಿಆರ್‌(ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌) ಈ ಕುರಿತು ವರದಿಯನ್ನು ಬಿಡುಗಡೆ ಮಾಡಿತ್ತು ಅದರಲ್ಲಿ ಬಿಜೆಪಿ ಚುನಾವಣಾ ಬಾಂಡ್‌ ಯೋಜನೆ ಜಾರಿಯಲ್ಲಿದ್ದ ಮಾರ್ಚ್‌ 2018ರಿಂದ ಜನವರಿ 2024ರವೆರೆಗೆ ಒಟ್ಟು 7,800 ಕೋಟಿ ದೇಣಿಗೆ ಪಡೆದಿದೆ ಎಂದು ಉಲ್ಲೇಖಿಸಿತ್ತು.

ಚುನಾವಣಾ ಬಾಂಡ್‌ಗಳ ಮೂಲಕ ಯಾವುದೇ ದೇಣಿಗೆ ಪಡೆದಿಲ್ಲ ಎಂದು ಮಾಯಾವತಿಯವರ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಹೇಳಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ), ಅಥವಾ ಸಿಪಿಐ(ಎಂ), ತಾನು ಕೂಡ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಪಡೆದಿಲ್ಲ ಎಂದು ಹೇಳಿದೆ.

ಸುಪ್ರೀಂಕೋರ್ಟ್‌ ಖಡಕ್ ನಿರ್ದೇಶನದ ಬಳಿಕ ಎಸ್‌ಬಿಐ ಕೇಂದ್ರ ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್‌ ಕುರಿತು ಮಾಹಿತಿಯನ್ನು ನೀಡಿತ್ತು. ಗುರುವಾರ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಖರೀದಿದಾರರ ಪಟ್ಟಿಯಲ್ಲಿ ಕೇವಲ 18,871 ಬಾಂಡ್‌ಗಳ ಮಾರಾಟ ಮಾಡಿರುವ ಬಗ್ಗೆ ಮಾತ್ರ ಮಾಹಿತಿ ನೀಡಲಾಗಿತ್ತು.

ಇದನ್ನು ಓದಿ: ಗಾಝಾ ಹತ್ಯಾಕಾಂಡದ ಬಗ್ಗೆ ಮೌನ: ಅಮೆರಿಕದಲ್ಲಿ ನಡೆಯುವ ವಿಶ್ವದ ಪ್ರತಿಷ್ಠಿತ ‘ಸಾಹಿತ್ಯ ಉತ್ಸವ’ಕ್ಕೆ ಬಹಿಷ್ಕಾರ ಹಾಕಿದ ಖ್ಯಾತ ಸಾಹಿತಿಗಳು

 

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...