Homeಮುಖಪುಟಚುನಾವಣಾ ಬಾಂಡ್ ಕುರಿತು ತಪ್ಪು ಮಾಹಿತಿ ನೀಡಿದ ಎಸ್‌ಬಿಐ? ಬಾಂಡ್‌ ಖರೀದಿಸಿದ್ದ ಪತ್ರಕರ್ತೆಯಿಂದ ಗಂಭೀರ ಆರೋಪ

ಚುನಾವಣಾ ಬಾಂಡ್ ಕುರಿತು ತಪ್ಪು ಮಾಹಿತಿ ನೀಡಿದ ಎಸ್‌ಬಿಐ? ಬಾಂಡ್‌ ಖರೀದಿಸಿದ್ದ ಪತ್ರಕರ್ತೆಯಿಂದ ಗಂಭೀರ ಆರೋಪ

- Advertisement -
- Advertisement -

ಚುನಾವಣಾ ಬಾಂಡ್‌ ಕುರಿತು ಎಸ್‌ಬಿಐ ತಪ್ಪು ಮಾಹಿತಿಯನ್ನು ನೀಡಿದೆ ಎಂದು ಪತ್ರಕರ್ತೆ ಪೂನಂ ಅಗರ್ವಾಲ್ ಆರೋಪಿಸಿದ್ದಾರೆ. 2018ರಲ್ಲಿ ನಾನು 1,000ರೂ. ಎಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿಸಿದ್ದೆ, ಆದರೆ 2020ರ ಖರೀದಿದಾರರ ಪಟ್ಟಿಯಲ್ಲಿ ತನ್ನ ಹೆಸರು ಕಾಣಿಸಿಕೊಂಡಿದೆ ಎಂದು ಹೇಳಿದ್ದು, ಈ ಕುರಿತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ದಿಂದ ವಿವರಣೆಯನ್ನು ಕೇಳಿದ್ದಾರೆ.

ಪತ್ರಕರ್ತೆ ಪೂನಂ ಅಗರ್ವಾಲ್ ಅವರು ಈ ಕುರಿತು ಪೋಸ್ಟ್‌ ಮಾಡಿದ್ದು, 2018ರಿಂದ ಮಾರ್ಚ್ 2019ರವರೆಗಿನ ಪಟ್ಟಿಯನ್ನು ಪ್ರಕಟಿಸದ ಕಾರಣ ನಾನು ಎರಡನೇ ಸುತ್ತಿನ ಮಾಹಿತಿ ಪ್ರಕಟಣೆಗಾಗಿ ಕಾಯುತ್ತಿದ್ದೆ. ನಾನು ಏಪ್ರಿಲ್ 2018ರಲ್ಲಿ ತಲಾ 1,000 ರೂಪಾಯಿಗಳ 2 ಎಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿಸಿದೆ. ಆದರೆ ಡೇಟಾವು ನನ್ನ ಹೆಸರನ್ನು 20 ಅಕ್ಟೋಬರ್ 2020ರಲ್ಲಿ ಖರೀದಿ ಮಾಡಿರುವುದಾಗಿ ತೋರಿಸುತ್ತಿದೆ. ಇದು ತಪ್ಪಾಗಿದೆ ಅಥವಾ ಪೂನಂ ಅಗರ್ವಾಲ್ ಹೆಸರಿರುವ ಬೇರೆಯಾರದೂ ಬಾಂಡ್ ಖರೀದಿಸಿದ್ದಾರೆಯೇ? ಇದು ಕಾಕತಾಳಿಯವಾಗಿದೆ ಎಂದು ಹೇಳಿದ್ದಾರೆ.

 

ಈ ಕುರಿತು ಪ್ರತಿಕ್ರಿಯಿಸಿದ ತಮಿಳುನಾಡಿನ ಸಚಿವ  ಡಾ ಪಿ ತ್ಯಾಗ ರಾಜನ್, ಅನುಪಮ್‌ ಅಗರ್ವಾಲ್‌ ಅವರ ಪೋಸ್ಟ್‌ನ್ನು ಹಂಚಿಕೊಂಡಿದ್ದು, ಇದು ತೀವ್ರ ಕಳವಳವನ್ನು ಉಂಟುಮಾಡುತ್ತದೆ, ಎಸ್‌ಬಿಐ ಸಲ್ಲಿಸಿದ ಡೇಟಾದ ಸತ್ಯಾಸತ್ಯತೆಯ ಬಗ್ಗೆ ಮಾತ್ರವಲ್ಲ, (ಸುಪ್ರೀಂಕೋರ್ಟ್‌ಗೆ ಸುಳ್ಳು ಅಫಿಡವಿಟ್ ಅಥವಾ ಡೇಟಾವನ್ನು ಸಲ್ಲಿಸುವುದು ಕಾನೂನು ಕ್ರಮ ಕೈಗೊಳ್ಳಬಹುದಾದ ಕ್ರಿಮಿನಲ್ ಅಪರಾಧ), ಅದು ಎಸ್‌ಬಿಐನ ವ್ಯವಸ್ಥೆ ಬಗ್ಗೆ ಗಮನಹರಿಸುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.

 

ಫೆಬ್ರವರಿ 15ರಂದು, ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಯೋಜನೆಯನ್ನು ಅಸಂವಿಧಾನಿಕ ಎಂದು ಘೋಷಿಸಿತ್ತು. ಮಾರ್ಚ್ 6 ರೊಳಗೆ ಚುನಾವಣಾ ಆಯೋಗಕ್ಕೆ ಬಾಂಡ್‌ಗಳಿಗೆ ಸಂಬಂಧಿಸಿದ ವಿವರವಾದ ಮಾಹಿತಿಯನ್ನು ಬಹಿರಂಗಪಡಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸುಪ್ರೀಂಕೋರ್ಟ್‌ ನಿರ್ದೇಶಿಸಿತ್ತು. ಮಾರ್ಚ್ 4ರಂದು SBI ಚುನಾವಣಾ ಬಾಂಡ್‌ ಕುರಿತ ಡೇಟಾವನ್ನು ನೀಡಲು ಮಾರ್ಚ್ 6ರ ಗಡುವಿನ ಬದಲಿಗೆ ಜೂನ್ 30ರವರೆಗೆ ಕಾಲಾವಕಾಶವನ್ನು ವಿಸ್ತರಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಭಾರೀ ಆಕ್ಷೇಪ ವ್ಯಕ್ತವಾಗಿತ್ತು. ಈ ಕುರಿತ ಅರ್ಜಿ ವಿಚಾರಣೆ ವೇಳೆ ಮಾ.12ರೊಳಗೆ ಮಾಹಿತಿಯನ್ನು ನೀಡುವಂತೆ ಎಸ್‌ಬಿಐಗೆ ಸುಪ್ರೀಂಕೋರ್ಟ್‌ ಖಡಕ್‌ ನಿರ್ದೇಶನವನ್ನು ನೀಡಿತ್ತು.ಸುಪ್ರೀಂಕೋರ್ಟ್‌ ಖಡಕ್ ನಿರ್ದೇಶನದ ಬಳಿಕ ಎಸ್‌ಬಿಐ ಕೇಂದ್ರ ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್‌ ಕುರಿತು ಮಾಹಿತಿಯನ್ನು ನೀಡಿತ್ತು. ಗುರುವಾರ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಖರೀದಿದಾರರ ಪಟ್ಟಿಯಲ್ಲಿ ಕೇವಲ 18,871 ಬಾಂಡ್‌ಗಳ ಮಾರಾಟ ಮಾಡಿರುವ ಬಗ್ಗೆ ಮಾತ್ರ ಮಾಹಿತಿ ನೀಡಲಾಗಿತ್ತು. ನಿನ್ನೆ ಚುನಾವಣಾ ಬಾಂಡ್‌ಗಳ ಕುರಿತು ರಾಜಕೀಯ ಪಕ್ಷಗಳಿಂದ ಪಡೆದ ಅಂಕಿ-ಅಂಶಗಳನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿತ್ತು.

ಇದನ್ನು ಓದಿ: ಚುನಾವಣಾ ಬಾಂಡ್ ಮೂಲಕ ಅತಿ ಹೆಚ್ಚು ದೇಣಿಗೆ ಪಡೆದ ಬಿಜೆಪಿ: ಚು.ಆಯೋಗದಿಂದ ಹೊಸ ಮಾಹಿತಿ ಪ್ರಕಟ

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...