Homeಮುಖಪುಟಇಂಧನ ದರಗಳು ಮತ್ತೆ ಏರಿಕೆ: ಮುಂಬೈಯಲ್ಲಿ ಪೆಟ್ರೋಲ್‌‌ ₹ 99

ಇಂಧನ ದರಗಳು ಮತ್ತೆ ಏರಿಕೆ: ಮುಂಬೈಯಲ್ಲಿ ಪೆಟ್ರೋಲ್‌‌ ₹ 99

ಬೆಲೆ ಹೆಚ್ಚುತ್ತಿರುವುದು ಈ ತಿಂಗಳಲ್ಲಿ ಇದು ಹತ್ತನೇ ಬಾರಿಯಾಗಿದ್ದು, ದೇಶದಲ್ಲಿ ಇಂಧನ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಯಾಗಿದೆ.

- Advertisement -
- Advertisement -

ಅಂತರರಾಷ್ಟ್ರೀಯ ತೈಲ ಬೆಲೆಯನ್ನು ತೈಲ ಕಂಪನಿಗಳು ಹೆಚ್ಚಿಸಿದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಮತ್ತೆ ಹೆಚ್ಚಾಗಿದೆ. ಮುಂಬೈನಲ್ಲಿ ಮಂಗಳವಾರ ಪೆಟ್ರೋಲ್ ಬೆಲೆ 99 ರೂ.ಗೆ ಏರಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ಚಿಲ್ಲರೆ ಇಂಧನ ಔಟ್‌ಲೆಟ್‌ಗಳು ಬೆಲೆ ಅಧಿಸೂಚನೆಯ ಪ್ರಕಾರ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 27 ಪೈಸೆ ಮತ್ತು ಡೀಸೆಲ್ ಅನ್ನು 29 ಪೈಸೆ ಹೆಚ್ಚಿಸಿದೆ.

ಇಂಧನದ ಬೆಲೆಯು ಹೆಚ್ಚುತ್ತಿರುವುದು ಈ ತಿಂಗಳಲ್ಲಿ ಇದು ಹತ್ತನೇ ಬಾರಿಯಾಗಿದ್ದು, ಪರಿಣಾಮವಾಗಿ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಯಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 2 ದಿನ ಭಾರಿ ಮಳೆ, ಕೆಲವೆಡೆ ಯೆಲ್ಲೋ ಅಲರ್ಟ್ ಘೋಷಣೆ

ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಹಲವಾರು ನಗರಗಳಲ್ಲಿ ಇಂಧನದ ದರಗಳು ಈಗಾಗಲೇ 100 ರೂ.ಗಳನ್ನು ದಾಟಿದ್ದವು. ಇಂದಿನ ಹೆಚ್ಚಳದೊಂದಿಗೆ, ಮುಂಬೈಯ ಬೆಲೆಯೂ ಕೂಡಾ ಆ ಮಟ್ಟಕ್ಕೆ ತಲುಪಿದೆ.

ಕಚ್ಚಾ ತೈಲ ಬೆಲೆ ಏರಿಕೆ

ಮಂಗಳವಾರ ಬೆಳಿಗ್ಗೆ ಕಚ್ಚಾ ತೈಲ ಬೆಲೆ ಹೆಚ್ಚಾಗಿದೆ. ಯುಎಸ್ ಡಬ್ಲ್ಯುಟಿಐ ಕಚ್ಚಾ ತೈಲ ಬೆಲೆಯು ಬ್ಯಾರೆಲ್‌ಗೆ 1.4% ಏರಿಕೆ ಕಂಡು 66.27 ಡಾಲರ್‌ಗೆ ತಲುಪಿದ್ದರೆ, ಬ್ರೆಂಟ್ ಕಚ್ಚಾ ತೈಲದ ಬೆಲೆಯು 1.1% ರಷ್ಟು ಏರಿಕೆ ಕಂಡಿದ್ದು, ಪ್ರತಿ ಬ್ಯಾರೆಲ್‌ಗೆ. 69.46 ರಂತೆ ವಹಿವಾಟು ನಡೆಸಿದೆ ಎಂದು ರಾಯಿಟರ್ಸ್ ತಿಳಿಸಿದೆ.

ಚೆನ್ನೈ, ಕೋಲ್ಕತಾ, ಬೆಂಗಳೂರು, ಹೈದರಾಬಾದ್, ಯುಪಿ, ಪಂಜಾಬ್, ಹರಿಯಾಣ, ಪುಣೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ

  • ಬೆಂಗಳೂರು: ಪೆಟ್ರೋಲ್ ಬೆಲೆ – ಪ್ರತಿ ಲೀಟರ್‌ಗೆ 95.94 ರೂ; ಡೀಸೆಲ್ ಬೆಲೆ – ಪ್ರತಿ ಲೀಟರ್‌ಗೆ 88.53 ರೂ
  • ಚೆನ್ನೈ: ಪೆಟ್ರೋಲ್ ಬೆಲೆ – ಪ್ರತಿ ಲೀಟರ್‌ಗೆ 94.54 ರೂ; ಡೀಸೆಲ್ ಬೆಲೆ – ಪ್ರತಿ ಲೀಟರ್‌ಗೆ 88.34 ರೂ

ಇದನ್ನೂ ಓದಿ: ಕೋವಿಡ್ ದುರಂತದ ಮೂಲ ಮೋದಿಯವರ ನೋಟು ಅಮಾನ್ಯೀಕರಣದಲ್ಲಿದೆ!

  • ಕೋಲ್ಕತಾ: ಪೆಟ್ರೋಲ್ ಬೆಲೆ – 92.692 ಪರ್ ಲೀಟರ್; ಡೀಸೆಲ್ ಬೆಲೆ – ಪ್ರತಿ ಲೀಟರ್‌ಗೆ 86.35 ರೂ
  • ಪುಣೆ: ಪೆಟ್ರೋಲ್ ಬೆಲೆ – ಪ್ರತಿ ಲೀಟರ್‌ಗೆ 98.77 ರೂ; ಡೀಸೆಲ್ ಬೆಲೆ – ಪ್ರತಿ ಲೀಟರ್‌ಗೆ 88.96 ರೂ
  • ಹೈದರಾಬಾದ್: ಪೆಟ್ರೋಲ್ ಬೆಲೆ – ಪ್ರತಿ ಲೀಟರ್‌ಗೆ 96.50 ರೂ. ಡೀಸೆಲ್ ಬೆಲೆ – ಪ್ರತಿ ಲೀಟರ್‌ಗೆ 91.04 ರೂ
  • ನೋಯ್ಡಾ (ಯುಪಿ): ಪೆಟ್ರೋಲ್ ಬೆಲೆ – ಪ್ರತಿ ಲೀಟರ್‌ಗೆ 90.66; ಡೀಸೆಲ್ ಬೆಲೆ – ಪ್ರತಿ ಲೀಟರ್‌ಗೆ 83.97 ರೂ
  • ಮೊಹಾಲಿ (ಪಂಜಾಬ್): ಪೆಟ್ರೋಲ್ ಬೆಲೆ – ಪ್ರತಿ ಲೀಟರ್‌ಗೆ 95.05 ರೂ; ಡೀಸೆಲ್ ಬೆಲೆ – ಪ್ರತಿ ಲೀಟರ್‌ಗೆ 86.41
  • ಚಂಡೀಗಡ: ಪೆಟ್ರೋಲ್ ಬೆಲೆ ಲೀಟರ್‌ಗೆ 89.31; ಡೀಸೆಲ್ ಬೆಲೆ – ಪ್ರತಿ ಲೀಟರ್‌ಗೆ 83.17 ರೂ
  • ಗುರುಗ್ರಾಮ್ (ಹರಿಯಾಣ): ಪೆಟ್ರೋಲ್ ಬೆಲೆ – ಪ್ರತಿ ಲೀಟರ್‌ಗೆ 90.73 ರೂ; ಡೀಸೆಲ್ ಬೆಲೆ – ಪ್ರತಿ ಲೀಟರ್‌ಗೆ 84.09 ರೂ

ಇದನ್ನೂ ಓದಿ: ‘ದೇವರೇ ಕಾಪಾಡಬೇಕು’: ಉತ್ತರಪ್ರದೇಶದ ಗ್ರಾಮೀಣ ಆರೋಗ್ಯ ವ್ಯವಸ್ಥೆಯ ಕುರಿತು ಹೈಕೋರ್ಟ್ ಕಳವಳ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಷ್ಟ್ರಧ್ವಜ ಹಾರಿಸದ ಮನೆಗಳ ಫೋಟೋ ತೆಗೆದುಕೊಳ್ಳಿ: ಉತ್ತರಾಖಾಂಡ್‌ ಬಿಜೆಪಿ ರಾಜ್ಯಾಧ್ಯಕ್ಷ ಹೇಳಿಕೆ

0
“75ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಯಾರ ಮನೆಯ ಮೇಲೆ ತಿರಂಗ ಧ್ವಜಗಳಿರುವುದಿಲ್ಲವೋ ಆ ಮನೆಯ ಫೋಟೋಗಳನ್ನು ತೆಗೆದುಕೊಳ್ಳಿ” ಎಂದು ಉತ್ತರಾಖಂಡ ಬಿಜೆಪಿ ಘಟಕದ ಮುಖ್ಯಸ್ಥ ತನ್ನ ಬೆಂಬಲಿಗರಿಗೆ ಸೂಚನೆ ನೀಡಿರುವುದಾಗಿ ‘ಟೈಮ್ಸ್ ಆಫ್...