Homeಮುಖಪುಟಜಿ20 ಶೃಂಗಸಭೆ ಮುಗಿದಿದ್ದು, ಈಗಲಾದರೂ ಮೋದಿ ಸರ್ಕಾರ ದೇಶೀಯ ಸಮಸ್ಯೆಗಳತ್ತ ಗಮನ ಹರಿಸಬೇಕು: ಖರ್ಗೆ

ಜಿ20 ಶೃಂಗಸಭೆ ಮುಗಿದಿದ್ದು, ಈಗಲಾದರೂ ಮೋದಿ ಸರ್ಕಾರ ದೇಶೀಯ ಸಮಸ್ಯೆಗಳತ್ತ ಗಮನ ಹರಿಸಬೇಕು: ಖರ್ಗೆ

- Advertisement -
- Advertisement -

ಜಿ20 ಶೃಂಗಸಭೆ ಮುಗಿದಿದೆ ಈಗಲಾದರೂ ಮೋದಿ ಸರ್ಕಾರ ಹಣದುಬ್ಬರ, ನಿರುದ್ಯೋಗ ಮತ್ತು ಮಣಿಪುರ ಹಿಂಸಾಚಾರದಂತಹ ದೇಶೀಯ ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಹೇಳಿದ್ದಾರೆ.

”2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ನಿರ್ಗಮನಕ್ಕೆ ಜನರು ದಾರಿ ಮಾಡಿಕೊಡಲಿದ್ದಾರೆ” ಎಂದು ಅವರು ಹೇಳಿದ್ದಾರೆ.

ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ನಿರುದ್ಯೋಗದ ಹೆಚ್ಚಳದ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಖರ್ಗೆ ಅವರು ಹಿಂದೆಯಲ್ಲಿ ಟ್ವೀಟ್ ಮಾಡಿದ್ದಾರೆ.

”ಪ್ರಧಾನಿ ನರೇಂದ್ರ ಮೋದಿಯವರು ಸತ್ಯವನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ, ಆದರೆ ಸಾರ್ವಜನಿಕರು ವಿಚಲಿತ ವಿಷಯಗಳತ್ತ ಗಮನ ಹರಿಸುವ ಬದಲು ಸತ್ಯವನ್ನು ಕೇಳಲು ಮತ್ತು ನೋಡಲು ಬಯಸುತ್ತಾರೆ” ಎಂದು ಹೇಳಿದ್ದಾರೆ.

”ಈಗ ಜಿ-20 ಸಭೆ ಮುಗಿದಿದೆ, ಮೋದಿ ಸರ್ಕಾರವು ದೇಶೀಯ ಸಮಸ್ಯೆಗಳತ್ತ ಗಮನ ಹರಿಸಬೇಕು. ಹಣದುಬ್ಬರ: ಸಾಮಾನ್ಯ ‘ಥಾಲಿ’ ಬೆಲೆ ಆಗಸ್ಟ್‌ನಲ್ಲಿ 24% ಹೆಚ್ಚಾಗಿದೆ. ನಿರುದ್ಯೋಗ: ದೇಶದಲ್ಲಿ ನಿರುದ್ಯೋಗ ದರ 8% ಯುವಕರ ಭವಿಷ್ಯ ಮಂಕಾಗಿದೆ” ಎಂದು ಖರ್ಗೆ ಹೇಳಿದರು.

”ಮೋದಿ ಸರಕಾರದ ದುರಾಡಳಿತದಲ್ಲಿ ಭ್ರಷ್ಟಾಚಾರದ ಮಹಾಪೂರವೇ ಹರಿಯುತ್ತಿದೆ” ಎಂದು ಆರೋಪಿಸಿದರು.

”ಸಿಎಜಿ ಹಲವು ವರದಿಗಳಲ್ಲಿ ಬಿಜೆಪಿಯ ಭ್ರಷ್ಟಾಚಾರದ ಮಾಹಿತಿಯನ್ನು ಬಹಿರಂಗಪಡಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 13,000 ಕೋಟಿ ರೂ. ಜಲ ಜೀವನ್ ಹಗರಣ ಬೆಳಕಿಗೆ ಬಂದಿದೆ. ಇದರಲ್ಲಿ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ ದಲಿತ ಐಎಎಸ್ ಅಧಿಕಾರಿಯೊಬ್ಬರಿಗೆ ಕಿರುಕುಳ ನೀಡಲಾಗಿದೆ” ಎಂದು ಅವರು ಪ್ರತಿಪಾದಿಸಿದರು.

”ಪ್ರಧಾನಿಯವರ ಆತ್ಮೀಯ ಗೆಳೆಯನ ಲೂಟಿ ಇತ್ತೀಚೆಗೆ ಮತ್ತೆ ಬೆಳಕಿಗೆ ಬಂದಿದೆ, ಆರ್‌ಬಿಐನ ಮಾಜಿ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ ಅವರು ಆರ್‌ಬಿಐ ಖಜಾನೆಯಿಂದ ಮೋದಿ ಸರ್ಕಾರಕ್ಕೆ 3 ಲಕ್ಷ ಕೋಟಿ ರೂಪಾಯಿಗಳನ್ನು ವರ್ಗಾಯಿಸಲು ಸರ್ಕಾರದ ಒತ್ತಡವನ್ನು ವಿರೋಧಿಸಿದ್ದರು ಎಂಬುದು ಈಗ ಬಹಿರಂಗವಾಗಿದೆ” ಎಂದು ತಮ್ಮ ಸುದೀರ್ಘ ಪೋಸ್ಟ್‌ನಲ್ಲಿ ಖರ್ಗೆ ಆರೋಪಿಸಿದ್ದಾರೆ.

”ಕಳೆದ ಕೆಲವು ದಿನಗಳಿಂದ ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಆರಂಭವಾಗಿದೆ. ಹಿಮಾಚಲ ಪ್ರದೇಶ ಪ್ರಕೃತಿ ವಿಕೋಪದಿಂದ ತತ್ತರಿಸುತ್ತಿದೆ. ಆದರೆ ದುರಹಂಕಾರಿ ಮೋದಿ ಸರ್ಕಾರ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುತ್ತಿಲ್ಲ” ಎಂದು ಖರ್ಗೆ ಕಿಡಿಕಾರಿದ್ದಾರೆ.

”ಇದೆಲ್ಲದರ ನಡುವೆ ಮೋದಿಯವರು ಸತ್ಯವನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸಾರ್ವಜನಿಕರು ಸತ್ಯವನ್ನು ಕೇಳಲು ಮತ್ತು ನೋಡಲು ಬಯಸುತ್ತಾರೆ. ಮೋದಿ ಸರ್ಕಾರ ಎಚ್ಚರಿಕೆಯಿಂದ ಆಲಿಸಬೇಕು. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ನಿರ್ಗಮನಕ್ಕೆ ಜನರು ದಾರಿ ಮಾಡಿಕೊಡಲಿದ್ದಾರೆ” ಎಂದು ಹೇಳಿದ್ದಾರೆ.

G20 ನಾಯಕರ ಶೃಂಗಸಭೆಯು ಭಾರತ್ ಮಂಟಪಂ ಇಂಟರ್ನ್ಯಾಷನಲ್ ಎಕ್ಸಿಬಿಷನ್-ಕಮ್-ಕನ್ವೆನ್ಷನ್ ಸೆಂಟರ್ನಲ್ಲಿ ಸೆಪ್ಟೆಂಬರ್ 9-10 ರಂದು ನಡೆಯಿತು.

”ಶೃಂಗಸಭೆಗೂ ಮುನ್ನ ನೈಜ ಸಮಸ್ಯೆಗಳಿಂದ ಬೇರೆಡೆಗೆ ತಿರುಗಿಸಲು ಈ ಜಿ 20 ಸಭೆಯನ್ನು ಕೂಡ ಬಳಸಿಕೊಂಡು ಚುನಾವಣಾ ಪ್ರಚಾರ ನಡೆಸಿದೆ” ಎಂದು ಕಾಂಗ್ರೆಸ್ ಆರೋಪಿಸಿದೆ.

ಇದನ್ನೂ ಓದಿ: ‘ಒಂದು ರಾಷ್ಟ್ರ ಒಂದು ಚುನಾವಣೆ’ಯ ಉದ್ದೇಶವೇ 5 ರಾಜ್ಯಗಳ ಚುನಾವಣೆ ಮುಂದೂಡುವುದಾಗಿದೆ: ಪ್ರಶಾಂತ್ ಭೂಷಣ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ; ರಾಜ್ಯಪಾಲರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ರಾಜಭವನದ ಸಿಬ್ಬಂದಿಯನ್ನು ಅಕ್ರಮವಾಗಿ ತಡೆದ ಆರೋಪದ ಮೇಲೆ ರಾಜಭವನದ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು...