Homeಮುಖಪುಟಬಿಜೆಪಿ, ಆರೆಸ್ಸೆಸ್ಸ್‌ ಕಾರ್ಯಚಟುವಟಿಕೆಯಲ್ಲಿ ಹಿಂದೂ ಎಂಬುದೇನೂ ಇಲ್ಲ: ರಾಹುಲ್ ಗಾಂಧಿ

ಬಿಜೆಪಿ, ಆರೆಸ್ಸೆಸ್ಸ್‌ ಕಾರ್ಯಚಟುವಟಿಕೆಯಲ್ಲಿ ಹಿಂದೂ ಎಂಬುದೇನೂ ಇಲ್ಲ: ರಾಹುಲ್ ಗಾಂಧಿ

- Advertisement -
- Advertisement -

ಭಾರತೀಯ ಜನತಾ ಪಕ್ಷ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಭಾನುವಾರ ವಾಗ್ದಾಳಿ ನಡೆಸಿದ್ದು, ಬಿಜೆಪಿ, ಆರೆಸ್ಸೆಸ್ಸ್‌ ಕಾರ್ಯಚಟುವಟಿಕೆಯಲ್ಲಿ ಹಿಂದೂ ಎಂಬುದೇನೂ ಇಲ್ಲ ಎಂದು ಹೇಳಿದ್ದಾರೆ.

ಭಾನುವಾರ ಫ್ರಾನ್ಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ನಾನು ಗೀತೆ, ಹಲವಾರು ಉಪನಿಷತ್ತುಗಳು ಮತ್ತು ಅನೇಕ ಹಿಂದೂ ಪುಸ್ತಕಗಳನ್ನು ಓದಿದ್ದೇನೆ. ಅದರಲ್ಲಿ ಬಿಜೆಪಿ ಏನು ಮಾಡುತ್ತದೆ ಅದು ಏನೂ ಇಲ್ಲ ಎಂದು ಹೇಳಿದ್ದಾರೆ.

ನಿಮಗಿಂತ ದುರ್ಬಲರನ್ನು ನೀವು ಭಯಭೀತಗೊಳಿಸಬೇಕು ಅಥವಾ ಹಾನಿಗೊಳಿಸಬೇಕು ಎಂದು ನಾನು ಯಾವುದೇ ಹಿಂದೂ ಪುಸ್ತಕದಲ್ಲಿ ಎಲ್ಲಿಯೂ ಓದಿಲ್ಲ ಅಥವಾ ಯಾವುದೇ ಕಲಿತ ಹಿಂದೂ ವ್ಯಕ್ತಿಯಿಂದ ಕೇಳಿಲ್ಲ. ಹಿಂದೂ ರಾಷ್ಟ್ರೀಯವಾದಿ ಎಂಬ ಪದ ತಪ್ಪು. ಅವರು ಹಿಂದೂ ರಾಷ್ಟ್ರೀಯವಾದಿಗಳಲ್ಲ ಎಂದು ಗಾಂಧಿ ಒತ್ತಿ ಹೇಳಿದರು.

ಅವರು ದೇಶದೊಳಗಿನ ವಿರೋಧ ಪಕ್ಷದ ನಾಯಕರ ಧ್ವನಿಯನ್ನು ಹತ್ತಿಕ್ಕುತ್ತಿದ್ದಾರೆ. ಅವರು ಯಾವುದೇ ಬೆಲೆ ತೆತ್ತಾದರೂ ಅಧಿಕಾರ ಪಡೆಯಲು ಹೊರಟಿದ್ದಾರೆ. ಅವರು ನನ್ನ ದೇಶದ ಜಾತಿ ರಚನೆ ಮತ್ತು ಸಾಮಾಜಿಕ ರಚನೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಏನು ಬೇಕಾದರೂ ಮಾಡುತ್ತಾರೆ ಎಂದು ರಾಹುಲ್ ಹೇಳಿದ್ದಾರೆ.

ದಲಿತ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧದ ಹಿಂಸಾಚಾರದ ಸಮಸ್ಯೆಯನ್ನು ಎದುರಿಸಲು ರಾಜಕೀಯ ಕಲ್ಪನೆಯ ಅಗತ್ಯವಿದೆ ಮತ್ತು ಪ್ರತಿಪಕ್ಷಗಳು ಆ ಹೋರಾಟಕ್ಕೆ ಬದ್ಧವಾಗಿವೆ ಎಂದು ಭಾರತದಲ್ಲಿ ದಲಿತರ ಮೇಲಿನ ದೌರ್ಜನ್ಯದ ವಿಷಯದ ಬಗ್ಗೆ ಕೇಳಿದಾಗ ರಾಹುಲ್‌ ಗಾಂಧಿ ಹೇಳಿದರು.

ಬಿಜೆಪಿ ಮತ್ತು ಆರೆಸ್ಸೆಸ್ ಏನು ಮಾಡಲು ಪ್ರಯತ್ನಿಸುತ್ತಿದೆ? ಅವರು ಅಭಿವ್ಯಕ್ತಿಯನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಕೆಳ ಜಾತಿಗಳು, ಇತರ ಹಿಂದುಳಿದ ಜಾತಿಗಳು, ಬುಡಕಟ್ಟು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಭಾಗವಹಿಸುವಿಕೆ ತಡೆಯಲು ಪ್ರಯತ್ನಿಸುತ್ತಾರೆ. ನನ್ನ ಮಟ್ಟಿಗೆ, ದಲಿತ ವ್ಯಕ್ತಿ ಅಥವಾ ಮುಸ್ಲಿಂ ವ್ಯಕ್ತಿ, ಬುಡಕಟ್ಟು ವ್ಯಕ್ತಿ, ಮೇಲ್ಜಾತಿ ವ್ಯಕ್ತಿ, ಯಾರನ್ನಾದರೂ ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವ, ಹಲ್ಲೆ ನಡೆಸುತ್ತಿರುವ ಭಾರತ ನಾನು ಬಯಸುವ ಭಾರತವಲ್ಲ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಇದನ್ನು ಓದಿ: ಬೆಂಗಳೂರು ಬಂದ್‌’ ವಾಪಸ್‌ ಪಡೆದ ಖಾಸಗಿ ವಾಹನ ಸಂಘಟನೆಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...