Homeಕರ್ನಾಟಕಕಸ ಸಂಗ್ರಹಣೆ, ವಿಲೇವಾರಿ ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕು: ಬಿಬಿಎಂಪಿಗೆ ಕಾರ್ಮಿಕರ ಸಂಘಟನೆಯಿಂದ ಒತ್ತಾಯ

ಕಸ ಸಂಗ್ರಹಣೆ, ವಿಲೇವಾರಿ ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕು: ಬಿಬಿಎಂಪಿಗೆ ಕಾರ್ಮಿಕರ ಸಂಘಟನೆಯಿಂದ ಒತ್ತಾಯ

- Advertisement -
- Advertisement -

ಬಿಬಿಎಂಪಿ ಘನತ್ಯಾಜ್ಯ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ವಾಹನ ಚಾಲಕರು (ಅಟೋ, ಟ್ರಾಕ್ಟರ್, ಕಾಂಪ್ಟ್ರಾಕ್ಟರ್ ಮತ್ತು ಲಾರಿ) ಸಹಾಯಕರು, ಲೋಡರ್‍‌ಗಳು ಮತ್ತು ಕ್ಲೀನರ್‍‌ಗಳನ್ನು ನೇರವೇತನ ಪಾವತಿಯಡಿಯಲ್ಲಿ ತಂದು ಖಾಯಂಗೊಳಿಸಬೇಕೆಂದು ಒತ್ತಾಯಿಸಿ ಬಿಬಿಎಂಪಿ ಪೌರಕಾರ್ಮಿಕರ ಸಂಘಟನೆಯು ಬುಧವಾರ ಪತ್ರಿಕಾ ಘೋಷ್ಠಿ ನಡೆಸಿತು.

ಬಿಬಿಎಂಪಿ ಪೌರಕಾರ್ಮಿಕರ ಸಂಘಟನೆಯ ಪತ್ರಿಕಾ ಪ್ರಕಟನೆಯಲ್ಲಿ, ಬಿಬಿಎಂಪಿ ಅಧಿಕಾರಿಗಳಿಂದ ಮತ್ತು ನೆಪಮಾತ್ರ ಗುತ್ತಿಗೆದಾರರಿಂದ ಕಾರ್ಮಿಕರ ಮೇಲೆ ಆಗುತ್ತಿರುವ ಕಿರುಕುಳ, ಅನ್ಯಾಯ ನಿಲ್ಲಬೇಕು ಮತ್ತು ಈ ಕಾರ್ಮಿಕರನ್ನು ನೇರವೇತನ ಪಾವತಿಯಡಿಯಲ್ಲಿ ತಂದು ಖಾಯಂಗೊಳಿಸಬೇಕೆಂದು ಬಿಬಿಎಂಪಿಯನ್ನು ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ.

ಘನತ್ಯಾಜ್ಯ ನಿರ್ವಹಣೆಯ ಕೆಲಸವನ್ನು ಬಿಬಿಎಂಪಿಯು ಕಾನೂನು ಪ್ರಕಾರ ಕಡ್ಡಾಯವಾಗಿ ಮಾಡಲೇ ಬೇಕಾಗಿರುತ್ತದೆ ಮತ್ತು ಇದು ನಿರಂತರ ಸ್ವರೂಪದ ಕೆಲಸವಾಗಿರುತ್ತದೆ. ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆಯ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಸಗುಡಿಸುವ ಪೌರಕಾರ್ಮಿರಿಗೆ ನೇರವೇತನವನ್ನು ಪಾವತಿ ಮಾಡುತ್ತಿರುತ್ತಿದೆ. ಆದರೆ ಮನೆ ಮನೆಗಳಲ್ಲಿ ಆಟೋ ಮತ್ತು ಇತರೆ ವಾಹನಗಳ ಮೂಲಕ ಕಸ ಸಂಗ್ರಹಿಸುವ ಮತ್ತು ಕಸ ವಿಲೇವಾರಿ ಮಾಡುವ ಪೌರಕಾರ್ಮಿಕರನ್ನು ನಾಮಮಾತ್ರ ಗುತ್ತಿಗೆ ವ್ಯವಸ್ಥೆಯಡಿಯಲ್ಲಿ ನೇಮಕ ಮಾಡಿಕೊಂಡಿರುತ್ತದೆ. ನಿರಂತರ ಸ್ವರೂಪದ ಕೆಲಸವನ್ನು ಗುತ್ತಿಗೆ ನೀಡುವುದು ‘ಗುತ್ತಿಗೆ ಕಾರ್ಮಿಕ (ನಿಯಂತ್ರಣ ಮತ್ತು ನಿಷೇಧ) ಕಾಯ್ದೆಯ ಅನ್ವಯ ಕಾನೂನು ಬಾಹಿರ’ ಕ್ರಮವಾಗಿದೆ.

ಇದನ್ನೂ ಓದಿ: ಬೆಂಗಳೂರು: ಕಾರ್ಮಿಕ ಸಂಘಟನೆ ಸಿಐಟಿಯು 17ನೇ ಅಖಿಲ ಭಾರತ ಸಮ್ಮೇಳನ ಉದ್ಘಾಟನೆ

2022ರ ಜುಲೈ 1 ರಂದು ಬಿಬಿಎಎಂಪಿ ಪೌರಕಾರ್ಮಿಕರ ಸಂಘಟನೆಯು ಎಲ್ಲಾ ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕೆಂದು ರಾಜ್ಯ ಮಟ್ಟದ ಅನಿರ್ಧಿಷ್ಠಾವಧಿ ಧರಣಿ ನಡೆಸಿತ್ತು. ಈ ಸಂದರ್ಭದಲಿ ಮುಖ್ಯಮಂತ್ರಿಗಳು ಎಲ್ಲಾ ಪೌರಕಾರ್ಮಿಕರನ್ನು ಖಾಯಂಗೊಳಿಸುವುದಾಗಿ ಮತ್ತು ಗುತ್ತಿಗೆ ಅಡಿಯಲ್ಲಿ ಕೆಲಸ ನಿರ್ವಹಿಸುವ ಪೌರಕಾರ್ಮಿಕರಾದ ಕಸ ಸಾಗಿಸುವ ಸಂಗ್ರಹಿಸುವ ಮತ್ತು ಸಾಗಿಸುವ ವಾಹನಗಳ ಚಾಲಕರು, ಲೋಡರ್‍‌ಗಳು, ಸಹಾಯಕರು ಮತ್ತು ಕ್ಲೀನರ್‍‌ಗಳನ್ನು ಮೊದಲಿಗೆ ಬಿಬಿಎಂಪಿಯಿಂದ ನೇರವೇತನ ಪಾವತಿಯಡಿಯಲ್ಲಿ ತಂದು, ನಂತರ ಖಾಯಂಗೊಳಿಸುವುದಾಗಿ ಲಿಖಿತ ರೂಪದಲ್ಲಿ ಭರವಸೆ ನೀಡಿದ್ದರು. ಈ ಸಂಬಂಧ ಎಲ್ಲಾ ಪೌರಕಾರ್ಮಿಕರನ್ನು ಖಾಯಂಗೊಳಿಸುವುದಕ್ಕಾಗಿ ಸರ್ಕಾರದ ಅಧಿಕಾರಿಗಳು ಸೇರಿದಂತೆ ಕಾರ್ಮಿಕ ಸಂಘಟನೆಗಳ ಮುಖಂಡರುಗಳನ್ನೊಳಗೊಂಡ ಸಮಿತಿಯನ್ನು ಸಹ ಸರ್ಕಾರ ರಚಿಸಿತ್ತು.

ಈ ಸಮಿತಿಯು 2022 ಅಕ್ಟೋಬರ್ 28ರಂದು ನಡೆಸಿದ ಸಭೆಯಲ್ಲಿ ”ಘನತ್ಯಾಜ್ಯ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ನೆಪಮಾತ್ರ ಗುತ್ತಿಗೆ ಪೌರಕಾರ್ಮಿಕರಾದ ವಾಹನ ಚಾಲಕರು, ಲೋಡರ್‍‌ಗಳನ್ನು ಮತ್ತು ಸಹಾಯಕರನ್ನು ಮೊದಲಿಗೆ ನೇರವೇತನ ಪಾವತಿಯಡಿ ತಂದು ತಕ್ಷಣವೇ ಖಾಯಂಗೊಳಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ತೀರ್ಮಾನಿಸಿರುತ್ತದೆ” ಎಂದು ಚರ್ಚಿಸಲಾಗಿತ್ತು.

ಆದರೆ, ಬಿಬಿಎಂಪಿಯ ಅಡಿಯಲ್ಲಿ ಬರುವ ‘ಬೆಂಗಳೂರು ಸಾಲಿಡ್ ವೇಸ್ಟ್ ಮ್ಯಾನೇಜ್‍ಮೆಂಟ್ ಲೀ.’ರವರು 2023 ಜನವರಿ 21ರಂದು ಘನ ತ್ಯಾಜ್ಯ ನಿರ್ವಹಣೆ ಮಾಡಲು ಟೆಂಡರ್ ಕರೆಯಿತು. ಈ ರೀತಿ ವಾಹನ ಚಾಲಕರು, ಲೋಡರ್‍‌ಗಳು ಮತ್ತು ಸಹಾಯಕರನ್ನು ಗುತ್ತಿಗೆದಾರರ ಮೂಲಕ ದುಡಿಸಿಕೊಳ್ಳುವುದು ಆಧುನಿಕ ಜೀತ ಮತ್ತು ಗುಲಾಮಿ ಪದ್ಧತಿಯ ಪ್ರತೀಕವಾಗಿದೆ. ಬಿಬಿಎಂಪಿಯ ಈ ಕ್ರಮವನ್ನು ಎಐಸಿಸಿಟಿಯು ತೀವ್ರವಾಗಿ ಖಂಡಿಸುತ್ತದೆ ಮತ್ತು ತಕ್ಷಣದಲ್ಲೇ ಟೆಂಡರ್ ಅಧಿಸೂಚನೆಯನ್ನು ವಾಪಸ್ಸು ಪಡೆದು ಸರ್ಕಾರದ ಲಿಖಿತ ಭರವಸೆಯಂತೆ ಈ ಕಾರ್ಮಿಕರನ್ನು ಕೂಡಲೇ ನೇರವೇತನ ಪಾವತಿಯಡಿ ತಂದು, ಖಾಯಂಗೊಳಿಸಬೇಕೆಂದು ಪತಿಕಾಗೋಷ್ಠಿಯಲ್ಲಿ ಬಿಬಿಎಂಪಿ ಪೌರಕಾರ್ಮಿಕರ ಸಂಘಟನೆಯು ಒತ್ತಾಯಿಸಿದೆ.

ಪೌರಕಾರ್ಮಿಕ ಸಂಘಟನೆಯು ಪ್ರಮುಖ ಹಕ್ಕೋತ್ತಾಯಗಳನ್ನು ಬಿಬಿಎಂಪಿಗೆ ಸಲ್ಲಿಸಿದೆ.

1. ತ್ಯಾಜ್ಯ ನಿರ್ವಹಣೆ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ವಾಹನ ಚಾಲಕರು, ಸಹಾಯಕರು, ಲೋಡರ್‍‌ಗಳು ಮತ್ತು ಕ್ಲೀನರ್‍‌ಗಳನ್ನು ನೇರವೇತನ ಪಾವತಿಯಡಿಯಲ್ಲಿ ತಂದು ಖಾಯಂಗೊಳಿಸಬೇಕು.
2. ಬಿಬಿಎಂಪಿ ಅಡಿಯಲ್ಲಿರುವ ‘ಬೆಂಗಳೂರು ಸಾಲಿಡ್ ವೇಸ್ಟ್ ಮ್ಯಾನೇಜ್‍ಮೆಂಟ್ ಲೀ.’ ರವರು ಕರೆದಿರುವ ಟೆಂಡರ್ ಪ್ರಕ್ರಿಯೆಯನ್ನು ತಕ್ಷಣದಲ್ಲೇ ರದ್ಧುಗೊಳಿಸಬೇಕು.
3. ಖಾಯಂಗೊಳ್ಳುವವರೆಗೆ ಕನಿಷ್ಠ ವೇತನ ಪಾವತಿ ಮಾಡಬೇಕು.
4. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಮತ್ತು ಹೆಚ್ವುವರಿ ಅವಧಿಗೆ ಅಧಿಕವೇತನ ನೀಡಬೇಕು.
5. ಸಕಾಲಕ್ಕೆ ವೇತನ ಪಾವತಿ ಮಾಡಬೇಕು ಮತ್ತು ವೇತನ ಚೀಟಿ ನೀಡಬೇಕು.
6. 3 ರಿಂದ 8 ತಿಂಗಳ ವರಗೆ ಬಾಕಿ ಇರುವ ವೇತನವನ್ನು ತಕ್ಷಣದಲ್ಲೇ ಪಾವತಿಸಬೇಕು.
7. ವಿಶ್ರಾಂತಿ ಕೊಠಡಿ, ಶೌಚಾಲಯ, ಕುಡಿಯುವ ನೀರು ಮತ್ತು ಸಮಪರ್ಕವಾದ ಪೌಷ್ಠಿಕ ಆಹಾರವನ್ನು ಒದಗಿಸಬೇಕು.
8. ಇ.ಎಸ್.ಐ ಮತ್ತು ಪಿ.ಎಫ್ ಸೌಲಭ್ಯವನ್ನು ಕಲ್ಪಿಸಬೇಕು ಮತ್ತು ಸುರಕ್ಷತಾ ಪರಿಕರಗಳನ್ನು ನೀಡಬೇಕು.
9. ಕಸ ಸಂಗ್ರಹಿಸಲು ಮತ್ತು ಸಾಗಿಸಲು ಬಳಸುವ ಆಟೋಗಳ ದುರಸ್ಥಿ ವೆಚ್ಚ ಬಿಬಿಎಂಪಿಯೇ ಭರಿಸಬೇಕು.
10. ಸರ್ಕಾರಿ ಘೋಷಿತ ಎಲ್ಲಾ ರಾಷ್ಟ್ರೀಯ ಮತ್ತು ಹಬ್ಬ ದಿನಗಳು ಒಳಗೊಂಡಂತೆ ರಜೆ ನೀಡಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಂಸತ್ತು ಅಂಗೀಕರಿಸಿರುವ ಹೊಸ ಕ್ರಿಮಿನಲ್ ಕಾನೂನುಗಳ ವಿರುದ್ಧದ ಅರ್ಜಿ: ಸುಪ್ರೀಂ ಕೋರ್ಟಿನಲ್ಲಿ ನಾಳೆ ವಿಚಾರಣೆ

0
"ಹಲವು ದೋಷಗಳು ಮತ್ತು ವ್ಯತ್ಯಾಸಗಳಿವೆ" ಎಂದು, ಭಾರತ ದಂಡ ಸಂಹಿತೆಗಳನ್ನು (ಐಪಿಸಿ) ಕೂಲಂಕಷವಾಗಿ ಪರಿಶೀಲಿಸುವ ಮೂರು ಹೊಸ ಕಾನೂನುಗಳ ಜಾರಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆಗೆ ನಿಗದಿಪಡಿಸಿದೆ. ನ್ಯಾಯಮೂರ್ತಿಗಳಾದ ಬೇಲಾ...