Homeಮುಖಪುಟಪಾಳು ಬಿದ್ದ ಅಲ್‌-ಶಿಫಾ: ಇಸ್ರೇಲ್ ಆಕ್ರಮಣಕ್ಕೆ ಧ್ವಂಸಗೊಂಡ ಗಾಝಾದ ಅತಿ ದೊಡ್ಡ ಆಸ್ಪತ್ರೆ

ಪಾಳು ಬಿದ್ದ ಅಲ್‌-ಶಿಫಾ: ಇಸ್ರೇಲ್ ಆಕ್ರಮಣಕ್ಕೆ ಧ್ವಂಸಗೊಂಡ ಗಾಝಾದ ಅತಿ ದೊಡ್ಡ ಆಸ್ಪತ್ರೆ

ಎರಡು ವಾರಗಳ ಆಕ್ರಮಣದ ಬಳಿಕ ಆಸ್ಪತ್ರೆ ತೊರೆದ ಇಸ್ರೇಲ್ ಸೇನೆ

- Advertisement -
- Advertisement -

ಗಾಝಾದ ಪ್ರಮುಖ ಆಸ್ಪತ್ರೆಯಾಗಿರುವ ಅಲ್- ಶಿಫಾದಲ್ಲಿ ಸತತ ಎರಡು ವಾರಗಳ ಕಾಲ ಆಕ್ರಮಣ ನಡೆಸಿದ ಇಸ್ರೇಲ್ ಸೇನೆ, ಆಸ್ಪತ್ರೆಯನ್ನು ಸಂಪೂರ್ಣ ಧ್ವಂಸಗೊಳಿಸಿ ಬಿಟ್ಟು ತೆರಳಿದೆ.

ಬಿಬಿಸಿ ವರದಿಯ ಪ್ರಕಾರ, ಇಸ್ರೇಲ್ ಸೇನೆ ಅಲ್-ಶಿಫಾ ಆಸ್ಪತ್ರೆ ತೊರೆದ ಬಳಿಕ ಅಲ್ಲಿ ನೂರಾರು ಮೃತದೇಹಗಳು ದೊರೆತಿವೆ ಎಂದು ಹಮಾಸ್‌ ಆಡಳಿತದ ಆರೋಗ್ಯ ಸಚಿವಾಲಯ ತಿಳಿಸಿದೆ.

“ನಾವು 200 ಜನರನ್ನು ಹತ್ಯೆಗೈದಿದ್ದೇವೆ ಮತ್ತು 500 ಮಂದಿಯನ್ನು ಬಂಧಿಸಿದ್ದೇವೆ” ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಹೇಳಿದೆ. “ಹಮಾಸ್ ಬಂಡುಕೋರರು ಅಲ್‌-ಶಿಫಾದಲ್ಲಿ ಅಡಗಿ ಕುಳಿತಿದ್ದ ಕಾರಣ ದಾಳಿ ನಡೆಸಿದ್ದೇವೆ” ಎಂದು ಸಮರ್ಥಿಸಿಕೊಂಡಿದೆ.

ಇಸ್ರೇಲ್ ಸೇನೆ ಎರಡು ವಾರಗಳ ಕಾಲ ನಡೆಸಿದ ಆಕ್ರಮಣದಲ್ಲಿ ಸಾವಿರಾರು ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿದ್ದ ಅತಿ ದೊಡ್ಡ ಅಲ್-ಶಿಫಾ ಆಸ್ಪತ್ರೆ ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಪಾಲು ಬಿದ್ದ ಕಟ್ಟಡದಂತಾಗಿದೆ.

“ಹಮಾಸ್ ಮತ್ತು ಇತರ ಇಸ್ಲಾಮಿಕ್ ಜಿಹಾದಿಸ್ಟ್‌ಗಳು ಅಸ್ಪತ್ರೆಯೊಳಗೆ ಅಡಗಿ ಕುಳಿತಿದ್ದರು. ಅಲ್ಲಿಂದಲೇ ದಾಳಿಗೆ ಸಂಚು ರೂಪಿಸುತ್ತಿದ್ದರು. ಆಸ್ಪತ್ರೆಯಲ್ಲಿ ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟಿದ್ದರು. ಹಾಗಾಗಿ, ವಾರ್ಡ್‌ಗಳ ಮೇಲೆ ದಾಳಿ ನಡೆಸಿದ್ದೇವೆ” ಎಂದು ಇಸ್ರೇಲ್ ತನ್ನ ಆಕ್ರಮಣವನ್ನು ಸಮರ್ಥಿಸಿಕೊಂಡಿದೆ.

ಇಸ್ರೇಲ್ ಸೇನೆ ಅಲ್ ಶಿಫಾ ತೊರೆದ ಬಳಿಕ ಪ್ಯಾಲೆಸ್ತೀನ್ ನಾಗರಿಕರು ಆಸ್ಪತ್ರೆಯ ಸುತ್ತ ಜಮಾಯಿಸಿರುವುದು. ಮೃತದೇಹಗಳನ್ನು ಸಾಗಿಸುತ್ತಿರುವ ವಿಡಿಯೋ, ಪೋಟೋಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡಿವೆ.

“ಆಸ್ಪತ್ರೆಯ ಒಳಗೆ ಮತ್ತು ಹೊರಗೆ ನೂರಾರು ಕೊಳೆತ ಮೃತದೇಹಗಳು ಪತ್ತೆಯಾಗಿವೆ ಎಂದು ಗಾಝಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಆಸ್ಪತ್ರೆ ಬಳಿ 20ಕ್ಕೂ ಹೆಚ್ಚು ಮೃತದೇಹಗಳು ಪತ್ತೆಯಾಗಿವೆ. ಕೆಲವನ್ನು ಇಸ್ರೇಲಿ ಸೇನೆ ಜೆಸಿಬಿಯಂತಹ ಯಂತ್ರ ಬಳಸಿ ನಜ್ಜು ಗುಜ್ಜಾಗಿಸಿವೆ” ಎಂದು ವೈದ್ಯರೊಬ್ಬರನ್ನು ಉಲ್ಲೇಖಿಸಿ ಎಎಫ್‌ಫಿ ವರದಿ ಮಾಡಿದೆ.

ಅಲ್-ಶಿಫಾ ಆಸ್ಪತ್ರೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಇಸ್ರೇಲಿ ಪಡೆಗಳು 400 ಪ್ಯಾಲೆಸ್ತೀನಿಯರನ್ನು ಕೊಂದಿವೆ ಇದರಲ್ಲಿ ಒಬ್ಬ ಮಹಿಳಾ ವೈದ್ಯೆ ಮತ್ತು ವೈದ್ಯರಾಗಿರುವ ಅವರ ಮಗ ಸೇರಿದ್ದಾರೆ ಎಂದು ಎಂದು ಹಮಾಸ್ ಸರ್ಕಾರಿ ಮಾಧ್ಯಮ ಕಚೇರಿ ತಿಳಿಸಿದೆ.

ಅಕ್ಟೋಬರ್ 7, 2023ರಿಂದ ಇಸ್ರೇಲ್ ಸೇನೆ ಗಾಝಾದಲ್ಲಿ ನಡೆಸುತ್ತಿರುವ ಆಕ್ರಮಣದಿಂದ ಇದುವರೆಗೆ 32,800 ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ ಮತ್ತು 75 ಸಾವಿರಕ್ಕೂ ಅಧಿಕರ ಜನರು ಗಾಯಗೊಂಡಿದ್ದಾರೆ. ಕೊಲ್ಲಲ್ಪಟ್ಟವರಲ್ಲಿ ಶೇ.70ರಷ್ಟು ಮಹಿಳೆಯರು ಮತ್ತು ಮಕ್ಕಳು ಎಂದು ಹಮಾಸ್ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ : ಇಸ್ರೇಲ್‌ನಿಂದ ವೈಮಾನಿಕ ದಾಳಿ: ಇರಾನ್‌ನ ಇಬ್ಬರು ಉನ್ನತ ಕಮಾಂಡರ್‌ಗಳು ಸೇರಿ 7 ಜನರ ಹತ್ಯೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಟಿಕೆಟ್‌ ಕೈತಪ್ಪಿದಕ್ಕೆ ‘ಮತದಾನ’ ಮಾಡದ ಬಿಜೆಪಿ ಸಂಸದ: ಶೋಕಾಸ್ ನೋಟಿಸ್ ಜಾರಿ

0
ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ಜಯಂತ್ ಸಿನ್ಹಾ ಮತದಾನ ಮಾಡಲು ವಿಫಲರಾದ ಹಿನ್ನೆಲೆಯಲ್ಲಿ ಬಿಜೆಪಿ ಅವರ ವಿರುದ್ಧ ಕ್ರಮ ಕೈಗೊಂಡಿದ್ದು, ಎರಡು ದಿನಗಳಲ್ಲಿ ಉತ್ತರ ನೀಡುವಂತೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಜಾರ್ಖಂಡ್‌ನ...