Homeಮುಖಪುಟಬಿಜೆಪಿಯೊಂದಿಗಿನ ಸಚಿನ್ ಪೈಲಟ್ ಬೆಂಬಲಿಗ ಶಾಸಕನ ಸಂಭಾಷಣೆಯ ಆಡಿಯೋ ಬಿಡುಗಡೆ ಮಾಡಿದ ಗೆಹ್ಲೋಟ್ ಬಣ

ಬಿಜೆಪಿಯೊಂದಿಗಿನ ಸಚಿನ್ ಪೈಲಟ್ ಬೆಂಬಲಿಗ ಶಾಸಕನ ಸಂಭಾಷಣೆಯ ಆಡಿಯೋ ಬಿಡುಗಡೆ ಮಾಡಿದ ಗೆಹ್ಲೋಟ್ ಬಣ

ಈ ನಡುವೆ ರಾಜಸ್ಥಾನದ ಬಿಜೆಪಿ ಮಿತ್ರಪಕ್ಷದ ಹನುಮಾನ್ ಬೆನಿವಾಲ್ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಸರ್ಕಾರವನ್ನು ಉಳಿಸಲು ಗೆಹ್ಲೋಟ್‌ಗೆ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

- Advertisement -
- Advertisement -

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಬಣವು ಗುರುವಾರ ರಾತ್ರಿ ಕೇಂದ್ರ ಸಚಿವರ ಪ್ರತಿನಿಧಿ ಮತ್ತು ಸಚಿನ್ ಪೈಲಟ್ ಬೆಂಬಲಿಗ ಶಾಸಕನ ನಡುವಿನ ಸಂಭಾಷಣೆಯ ಆಡಿಯೋ ರೆಕಾರ್ಡಿಂಗ್ ಅನ್ನು ಬಿಡುಗಡೆ ಮಾಡಿದೆ.

ಮೂರು ಕಿರು ಆಡಿಯೊ ತುಣುಕುಗಳು ಇಂಗ್ಲಿಷ್, ಹಿಂದಿ ಮತ್ತು ಮಾರ್ವಾಡಿಯಲ್ಲಿ ಸಂಭಾಷಣೆಗಳನ್ನು ಹೊಂದಿದ್ದು, ಶಾಸಕರ ಹಿರಿತನಕ್ಕೆ ಸಂಬಂಧಿಸಿದಂತೆ ನೀಡಲಾದ ಮೊತ್ತದ ಕಂತು ಪಾವತಿ ಹಾಗೂ ಸಚಿನ್ ಪೈಲಟ್ ಬೆಂಬಲಿಗ ಕೆಲವು ಶಾಸಕರ ಹೆಸರನ್ನು ಅದರಲ್ಲಿ ಉಲ್ಲೇಖಿಸಲಾಗಿದೆ.

ಆದರೆ ಆ ಸಂಭಾಷಣೆಯ ರೆಕಾರ್ಡಿಂಗ್ ನ ನಿಖರತೆಯ ಬಗ್ಗೆ ಇನ್ನೂ ಸ್ಫಷ್ಟತೆಯಿಲ್ಲ ಎಂದು ಡೆಕ್ಕನ್ ಹೆರಾಲ್ಡ್ ತನ್ನ ವರದಿಯಲ್ಲಿ ಹೇಳಿದೆ.

ರಾಜಸ್ಥಾನ್ ಸರ್ಕಾರವನ್ನು ಉರುಳಿಸಲು ಬಿಜೆಪಿ ನಾಯಕರೊಂದಿಗೆ ಪೈಲಟ್ ಮಾತುಕತೆ ನಡೆಸಿದ್ದಕ್ಕೆ ತನ್ನ ಬಳಿ ಪುರಾವೆ ಇದೆ ಎಂದು ಮುಖ್ಯಮಂತ್ರಿ ಹೇಳಿಕೊಂಡ ಒಂದು ದಿನದ ನಂತರ ಗೆಹ್ಲೋಟ್ ಬೆಂಬಲಿಗರು ಈ ಧ್ವನಿಮುದ್ರಣಗಳನ್ನು ಬಿಡುಗಡೆ ಮಾಡಿದ್ದಾರೆ.

ಈ ನಡುವೆ ರಾಜಸ್ಥಾನದ ಬಿಜೆಪಿ ಮಿತ್ರಪಕ್ಷದ ಹನುಮಾನ್ ಬೆನಿವಾಲ್ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಸರ್ಕಾರವನ್ನು ಉಳಿಸಲು ಗೆಹ್ಲೋಟ್‌ಗೆ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

“ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ತಮ್ಮ ಹತ್ತಿರದ ಕಾಂಗ್ರೆಸ್ ಶಾಸಕರನ್ನು ಕರೆದು ಅಶೋಕ್ ಗೆಹ್ಲೋಟ್ ಅವರನ್ನು ಬೆಂಬಲಿಸುವಂತೆ ಕೇಳಿಕೊಂಡಿದ್ದಾರೆ. ಸಿಕಾರ್ ಮತ್ತು ನಾಗೌರ್‌ನಲ್ಲಿರುವ ಪ್ರತಿಯೊಬ್ಬ ಜಾಟ್ ಶಾಸಕರನ್ನು ಕರೆದು ಸಚಿನ್ ಪೈಲಟ್‌ನಿಂದ ದೂರವಿರಲು ಕೇಳಿಕೊಂಡಿದ್ದಾರೆ, ಇದಕ್ಕೆ ನನ್ನ ಬಳಿ ಪುರಾವೆಗಳಿವೆ” ಎಂದು ಲೋಕಸಭಾದಲ್ಲಿ ನಾಗೌರ್ ಪ್ರತಿನಿಧಿಸುವ ಬೆನಿವಾಲ್ ಹೇಳಿದ್ದಾರೆ.


ಓದಿ:ಸಚಿನ್ ಪೈಲಟ್ ಕಾಂಗ್ರೆಸ್ ತೊರೆಯಲು ಕಾರಣವಾದ ಮೂರು ಪ್ರಮುಖ ಬೇಡಿಕೆಗಳಿವು…!!


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...