Homeಮುಖಪುಟಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಂದವನಿಗೆ ಮರಣದಂಡನೆ ವಿಧಿಸಿದ ಘಾಜಿಯಾಬಾದ್ ಪೋಕ್ಸೋ ಕೋರ್ಟ್

ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಂದವನಿಗೆ ಮರಣದಂಡನೆ ವಿಧಿಸಿದ ಘಾಜಿಯಾಬಾದ್ ಪೋಕ್ಸೋ ಕೋರ್ಟ್

- Advertisement -
- Advertisement -

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಘಾಜಿಯಾಬಾದ್ ವಿಶೇಷ ನ್ಯಾಯಾಲಯು ಬುಧವಾರ ಮರಣದಂಡನೆ ಶಿಕ್ಷೆ ವಿಧಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿಗೆ ಮರಣದಂಡನೆ ವಿಧಿಸಲಾಗಿದೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಗಾಜಿಯಾಬಾದ್ ಗ್ರಾಮಾಂತರ ಡಿಸಿಪಿ ರವಿ ಕುಮಾರ್, ”ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯ ಮರಣದಂಡನೆ ವಿಧಿಸಲಾಗಿದೆ. ಸುಮಾರು 6 ತಿಂಗಳ ನಂತರ, ಘಾಜಿಯಾಬಾದ್ ಪೋಕ್ಸೋ ನ್ಯಾಯಾಲಯವು ಆರೋಪಿಗಳಿಗೆ ಐಪಿಸಿ ಸೆಕ್ಷನ್ 302, 363 ಮತ್ತು 376 ರ ಅಡಿಯಲ್ಲಿ ಶಿಕ್ಷೆಯನ್ನು ಪ್ರಕಟಿಸಿದೆ” ಎಂದು ಅವರು ಹೇಳಿದರು.

2022ರ ಆಗಸ್ಟ್ 18ರಂದು ಮೋದಿನಗರ ಪ್ರದೇಶದ ಹಳ್ಳಿಯೊಂದರಲ್ಲಿ 9 ವರ್ಷದ ಅಪ್ರಾಪ್ತ ಬಾಲಕಿ ಶವವಾಗಿ ಪತ್ತೆಯಾಗಿದ್ದಳು. ಅದೇ ಗ್ರಾಮದವರಾದ ಆರೋಪಿಗೆ ಆಗಸ್ಟ್ 13ರಂದು ನ್ಯಾಯಾಲಯವು ಶಿಕ್ಷೆ ವಿಧಿಸಿತ್ತು” ಎಂದು ಅವರು ಹೇಳಿದರು.

ಇದನ್ನೂ ಓದಿ: ಹತ್ರಾಸ್ ದಲಿತ ಯುವತಿಯ ಬರ್ಬರ ಅತ್ಯಾಚಾರ-ಕೊಲೆ: ಪ್ರಕರಣ ನಡೆದುಬಂದು ಹಾದಿ

ಇದಕ್ಕೂ ಮೊದಲು, ಫೆಬ್ರವರಿ 9ರಂದು, ಉತ್ತರ ಪ್ರದೇಶದ ಗಾಜಿಯಾಬಾದ್‌ನ ಪೋಕ್ಸೊ ನ್ಯಾಯಾಲಯವು ಆರು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಂದ ವ್ಯಕ್ತಿಯನ್ನು ಅಪರಾಧಿ ಎಂದು ಘೋಷಿಸಿ, ಅವನಿಗೂ ಮರಣದಂಡನೆ ವಿಧಿಸಿತ್ತು.

ಲೈಂಗಿಕ ಅಪರಾಧಗಳಿಂದ ಮಕ್ಕಳ ವಿಶೇಷ ರಕ್ಷಣೆ (ಪೋಕ್ಸೊ) ನ್ಯಾಯಾಲಯವು ಆರೋಪಿಗೆ ಶಿಕ್ಷೆ ವಿಧಿಸಿದೆ.

ಈ ಘಟನೆಯು ಡಿಸೆಂಬರ್ 1, 2022ರಂದು ನಡೆದಿತ್ತು. ಶಾಹಿಬಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಸಿಟಿ ಫಾರೆಸ್ಟ್‌ನಲ್ಲಿ ಅಪ್ರಾಪ್ತ ಬಾಲಕಿ ಶವವಾಗಿ ಪತ್ತೆಯಾಗಿತ್ತು. ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಮೃತಳ ಪೋಷಕರು ದೂರು ನೀಡಿದ್ದರು.

ಪ್ರಕರಣದ ಪಬ್ಲಿಕ್ ಪ್ರಾಸಿಕ್ಯೂಟರ್, ವಕೀಲ ಸಂಜೀವ್ ಬಖರ್ವಾ, ”ಬಾಲಕಿಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ ನಂತರ ಡಿಸೆಂಬರ್ 15ರಂದು ಈ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಲಾಯಿತು. ನಂತರ ಪ್ರಕರಣವನ್ನು ಮುಖ್ಯ POCSO ನಿಂದ POCSO 1 ಗೆ ಜನವರಿ 9, 2023 ರಂದು ವರ್ಗಾಯಿಸಲಾಯಿತು” ಎಂದು ಅವರು ಹೇಳಿದರು.

”ಘಟನೆಯ ದಿನದಂದು ಆರೋಪಿಯನ್ನು ಬಾಲಕಿಯ ಮನೆಯ ಬಳಿ ನೋಡಿದ್ದೇನೆ ಎಂದು ನ್ಯಾಯಾಲಯದಲ್ಲಿ ಹೇಳಿದವರು ಸೇರಿದಂತೆ ಒಟ್ಟು 15 ಸಾಕ್ಷಿಗಳನ್ನು ಹಾಜರುಪಡಿಸಿದ್ದೇನೆ. ನಾವು ನ್ಯಾಯಾಲಯದಲ್ಲಿ ಸಾಕ್ಷ್ಯವನ್ನು ಸಹ ಒದಗಿಸಿದ್ದೇವೆ” ಎಂದು ಅವರು ಎಎನ್ಐಗೆ ಹೇಳಿದ್ದಾರೆ.

”ಫೆಬ್ರವರಿ 9ರಂದು, ಗಾಜಿಯಾಬಾದ್‌ನ ಪೋಕ್ಸೊ ನ್ಯಾಯಾಲಯವು ಆರು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಂದ ವ್ಯಕ್ತಿಯನ್ನು ಅಪರಾಧಿ ಎಂದು ಘೋಷಿಸಿತು ಮತ್ತು ಅವನಿಗೆ ಮರಣದಂಡನೆ ವಿಧಿಸಿತು” ಎಂದು ವಕೀಲ ಸಂಜೀವ್ ಬಖರ್ವಾ ತೀಳಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...