Homeಮುಖಪುಟಹೆಚ್ಚು ಮಕ್ಕಳಿಗೆ ಜನ್ಮ ನೀಡಿ, ಪ್ರಧಾನಿ ಅವರಿಗಾಗಿ ಮನೆಗಳನ್ನು ನಿರ್ಮಿಸುತ್ತಾರೆ: ರಾಜಸ್ಥಾನ ಸಚಿವರ ವಿವಾದಾತ್ಮಕ ಹೇಳಿಕೆ

ಹೆಚ್ಚು ಮಕ್ಕಳಿಗೆ ಜನ್ಮ ನೀಡಿ, ಪ್ರಧಾನಿ ಅವರಿಗಾಗಿ ಮನೆಗಳನ್ನು ನಿರ್ಮಿಸುತ್ತಾರೆ: ರಾಜಸ್ಥಾನ ಸಚಿವರ ವಿವಾದಾತ್ಮಕ ಹೇಳಿಕೆ

- Advertisement -
- Advertisement -

‘ನೀವು ಸಾಕಷ್ಟು ಮಕ್ಕಳಿಗೆ ಜನ್ಮ ನೀಡುತ್ತಿರಿ, ಪ್ರಧಾನ ಮಂತ್ರಿಯವರು ನಿಮ್ಮ ಮನೆಗಳನ್ನು ನಿರ್ಮಿಸುತ್ತಾರೆ’ ಎಂದು ರಾಜಸ್ಥಾನದ ಸಚಿವ ಬಾಬುಲಾಲ್ ಖರಾಡಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬುಡಕಟ್ಟು ಪ್ರದೇಶ ಅಭಿವೃದ್ಧಿ ಸಚಿವರಾದ ಖಾರಾಡಿ ಮಾತನಾಡಿ, ‘ಯಾರೂ ಹಸಿವಿನಿಂದ ಮಲಗಬಾರದು ಮತ್ತು ತಲೆಯ ಮೇಲೆ ಸೂರು ಇಲ್ಲದೆ ಮಲಗಬಾರದು ಎಂಬುದು ಪ್ರಧಾನಿಯವರ ಕನಸು. ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲರಿಗೂ ಮನೆಗಳನ್ನು ನಿರ್ಮಿಸಿಕೊಡುವುದರಿಂದ ಯಾವುದೇ ತೊಂದರೆಯಾಗಬಾರದು’ ಎಂದು ಹೇಳಿದ ಅವರು, ಜನರಿಗೆ ಹೆಚ್ಚು ಮಕ್ಕಳನ್ನು ಹೊಂದುವಂತೆ ಒತ್ತಾಯಿಸಿದ್ದಾರೆ.

‘ತಲೆಯ ಮೇಲೆ ಸೂರು ಇಲ್ಲದೆ, ಯಾರೂ ಹಸಿವಿನಿಂದ ಮಲಗಬಾರದು ಎಂಬುದು ಪ್ರಧಾನಿಯವರ ಕನಸು. ನೀವು ಸಾಕಷ್ಟು ಮಕ್ಕಳಿಗೆ ಜನ್ಮ ನೀಡುತ್ತೀರಿ. ಪ್ರಧಾನ ಮಂತ್ರಿಯವರು ನಿಮ್ಮ ಮನೆಗಳನ್ನು ನಿರ್ಮಿಸುತ್ತಾರೆ, ಆಗ ಸಮಸ್ಯೆ ಏನು’ ಎಂದು ಮಂಗಳವಾರ ಉದಯಪುರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ.

ಖಾರಾಡಿ ಅವರಿಗೆ ಎಂಟು ಮಕ್ಕಳಿದ್ದು, ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳಿದ್ದಾರೆ. ಇಬ್ಬರು ಪತ್ನಿಯರಿರುವ ಇಡೀ ಕುಟುಂಬವು ಉದಯಪುರದ ಕೋಟ್ಡಾ ತಹಸಿಲ್‌ನಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ನೀಚಲಾ ತಾಲಾ ಗ್ರಾಮದಲ್ಲಿ ವಾಸಿಸುತ್ತಿದೆ.

ಸಚಿವರು ಹೇಳಿಕೆ ನೀಡುವಾಗ, ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರು ವೇದಿಕೆ ಮೇಲಿದ್ದರು ಉದಯಪುರದ ನೈ ಗ್ರಾಮದಲ್ಲಿ ‘ವಿಕಸಿತ್ ಭಾರತ್ ಸಂಕಲ್ಪ ಯಾತ್ರಾ ಶಿಬಿರ’ದಲ್ಲಿ ಈ ಹೇಳಿಕೆ ನೀಡಿದ್ದಾರೆ.
ಖಾರಾಡಿ ಹೇಳಿಕೆ ನೀಡುತ್ತಿದ್ದಂತೆಯೇ ಸಭಿಕರು ನಗೆಗಡಲಲ್ಲಿ ತೇಲಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜನಪ್ರತಿನಿಧಿಗಳು ಪರಸ್ಪರ ಮುಖ ನೋಡಿಕೊಂಡಿದ್ದು ಕಂಡುಬಂತು.

ಬಿಜೆಪಿ ನೇತೃತ್ವದ ಕೇಂದ್ರವು ವಿವಿಧ ಸಾರ್ವಜನಿಕ ಕಲ್ಯಾಣ ಕ್ರಮಗಳನ್ನು ಪ್ರಾರಂಭಿಸುತ್ತಿದೆ ಎಂದು ಹೇಳಿದ ಖಾರಾಡಿ ಅವರು, 2024ರ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಪ್ರಧಾನಿ ಮೋದಿಗೆ ಮತ ನೀಡುವಂತೆ ಜನರನ್ನು ಒತ್ತಾಯಿಸಿದರು. ಕೇಂದ್ರವು ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ₹200 ಕಡಿತಗೊಳಿಸಿದೆ. ರಾಜಸ್ಥಾನದ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರವು ಈಗ ಉಜ್ವಲ ಯೋಜನೆಯಡಿ ಜನರಿಗೆ ₹450 ಕ್ಕೆ ಸಿಲಿಂಡರ್‌ಗಳನ್ನು ಲಭ್ಯವಾಗುವಂತೆ ಮಾಡುತ್ತಿದೆ’ ಎಂದು ಅವರು ಹೇಳಿದರು.

‘2023ರ ವಿಧಾನಸಭಾ ಚುನಾವಣೆಯಲ್ಲಿ ಝಾಡೋಲ್‌ನಿಂದ ಖಾರಾಡಿ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 15ನೇ ರಾಜಸ್ಥಾನ ಅಸೆಂಬ್ಲಿಯಲ್ಲಿ 2022ರಲ್ಲಿ ಅತ್ಯುತ್ತಮ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಖಾರಾಡಿ ಅವರು ಇತ್ತೀಚೆಗೆ ರಾಜ್ಯದಲ್ಲಿ ಕ್ಯಾಬಿನೆಟ್ ಸಚಿವರಾಗಿ ಸೇರ್ಪಡೆಗೊಂಡಿದ್ದಾರೆ.

ಇದನ್ನೂ ಓದಿ; ಬಿಜೆಪಿ ಮುಖಂಡನ ಸೆಕ್ಸ್ ಟೇಪ್ ಸುದ್ದಿ ಪ್ರಸಾರ: ‘ಲೋಕಶಾಹಿ’ ಮರಾಠಿ ಚಾನೆಲ್‌ ಲೈಸೆನ್ಸ್ ಅಮಾನತು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read