Homeಮುಖಪುಟಬಿಜೆಪಿ ಮುಖಂಡನ ಸೆಕ್ಸ್ ಟೇಪ್ ಸುದ್ದಿ ಪ್ರಸಾರ: 'ಲೋಕಶಾಹಿ' ಮರಾಠಿ ಚಾನೆಲ್‌ ಲೈಸೆನ್ಸ್ ಅಮಾನತು

ಬಿಜೆಪಿ ಮುಖಂಡನ ಸೆಕ್ಸ್ ಟೇಪ್ ಸುದ್ದಿ ಪ್ರಸಾರ: ‘ಲೋಕಶಾಹಿ’ ಮರಾಠಿ ಚಾನೆಲ್‌ ಲೈಸೆನ್ಸ್ ಅಮಾನತು

- Advertisement -
- Advertisement -

ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖಂಡ ಕಿರಿತ್ ಸೋಮಯ್ಯ ಅವರ ಕುರಿತಾದ ಸೆಕ್ಸ್ ಟೇಪ್ ಸುದ್ದಿ ಪ್ರಸಾರ ಮಾಡಿದ ನಂತರ, ‘ಲೋಕಶಾಹಿ’ ಮರಾಠಿ ಸುದ್ದಿವಾಹಿನಿಯ ಪರವಾನಗಿಯನ್ನು ಎರಡನೇ ಬಾರಿಗೆ ಕೇಂದ್ರ ಸರ್ಕಾರ 30 ದಿನಗಳವರೆಗೆ ಅಮಾನತುಗೊಳಿಸಿದೆ.

ಜುಲೈ 17, 2023ರಂದು ಪ್ರಸಾರವಾದ ವರದಿಯ ಮೇಲೆ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಕಳೆದ ವರ್ಷ ಚಾನೆಲ್ ಅಮಾನತು ಸೂಚನೆಯನ್ನು ಸ್ವೀಕರಿಸಿತ್ತು. ಈಗ ಸರ್ಕಾರ ಚಾನೆಲ್‌ನ ಪರವಾನಗಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಹಿಂದಿನ ಸೂಚನೆಯು 72 ಗಂಟೆಗಳ ಕಾಲ ಇತ್ತು. ಇದರ ವಿರುದ್ಧ ವಾಹಿನಿ ದೆಹಲಿ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಕೇಂದ್ರದ ಆದೇಶವನ್ನು ಕೋರ್ಟ್ ರದ್ದುಗೊಳಿಸಿದೆ.

ಚಾನೆಲ್‌ನ ಪ್ರೈಮ್‌ ಟೈಮ್‌ ಸುದ್ದಿಯಲ್ಲಿ ಬಿಜೆಪಿ ನಾಯಕನ ಲೈಂಗಿಕ ವೀಡಿಯೊವನ್ನು ಆಧರಿಸಿದೆ ಎಂಬ ಆರೋಪವಿದೆ. ಚಾನೆಲ್‌ನ ಮುಖ್ಯ ಸಂಪಾದಕ ಕಮಲೇಶ್ ಸುತಾರ್ ಅವರು ಎಡಿಟ್ ಮಾಡಿದ ವೀಡಿಯೊದ ವಿಷಯವನ್ನು ಪ್ರಸ್ತುತಪಡಿಸಿ, ‘ಕಿರಿತ್ ಸೋಮಯ್ಯ ಹನಿ ಟ್ರಾಪ್ ಆಗಿದ್ದಾರೆಯೇ’ ಎಂದು ಪ್ರಶ್ನಿಸಿದ್ದರು. ವಿರೋಧ ಪಕ್ಷದ ನಾಯಕರು ಅವರ ಮೇಲೆ ಲೈಂಗಿಕ ದುರ್ನಡತೆ ಮತ್ತು ಸುಲಿಗೆ ಆರೋಪವನ್ನು ಮಾಡಿದರು. ಸುದ್ದಿ ಪ್ರಸಾರವಾದ ನಂತರ ಸೋಮಯ್ಯ ಅವರು, ಮುಂಬೈ ಪೊಲೀಸ್, ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಗೆ ದೂರು ಸಲ್ಲಿಸಿದ್ದರು. ‘ನನ್ನ ಸಾರ್ವಜನಿಕ ಪ್ರತಿಷ್ಠೆಗೆ ಕಳಂಕ ತಂದಿದ್ದಾರೆ’ ಎಂದು ಆರೋಪಿಸಿ ಬಾಂಬೆ ಹೈಕೋರ್ಟಿಗೆ ಅರ್ಜಿ ಕೂಡ ಸಲ್ಲಿಸಿದ್ದಾರೆ.

ಯಾರ ಹೆಸರಿನಲ್ಲಿ ಪರವಾನಗಿ ನೀಡಲಾಗಿದೆಯೋ ಹಾಗೂ ಚಾನೆಲ್‌ನ ನಿರ್ವಾಹಕರ ಹೆಸರು ಒಂದೇ ಆಗಿಲ್ಲ ಎಂಬ ಕಾರಣಕ್ಕಾಗಿ ಸರ್ಕಾರವು ಈಗ ವಾಹಿನಿಯ ಪರವಾನಗಿಯನ್ನು ಅಮಾನತುಗೊಳಿಸಿದೆ ಎಂದು ಸಚಿವಾಲಯದ ಹೆಸರಿಸದ ಮೂಲಗಳು ಪತ್ರಿಕೆಗೆ ತಿಳಿಸಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಆರು ತಿಂಗಳಲ್ಲಿ ಎರಡನೇ ಬಾರಿಗೆ ಚಾನೆಲ್ ವಿರುದ್ಧ ಕ್ರಮ ಕೈಗೊಂಡ ನಂತರ ಜನಪ್ರಿಯ ಮರಾಠಿ ಸುದ್ದಿ ವಾಹಿನಿ ಲೋಕಶಾಹಿ ಪ್ರಸಾರ ಸ್ಥಗಿತಗೊಳಿಸಲಾಗಿದೆ. ಚಾನೆಲ್‌ನ ಮುಖ್ಯ ಸಂಪಾದಕ ಕಮಲೇಶ್ ಸುತಾರ್ ಅವರು ಅಮಾನತಿನ ವಿರುದ್ಧ ಮಾತನಾಡಿ, “ಕಾನೂನು ಬದ್ಧವಾಗಿ ಹೋರಾಡುತ್ತೇವೆ” ಎಂದು ಹೇಳಿದ್ದಾರೆ.

‘ಚಾನೆಲ್ ತನ್ನ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಸಲ್ಲಿಸಲು ವಿಫಲವಾದ ನಂತರ ಮಂಗಳವಾರ 30 ದಿನಗಳ ಕಾಲ ಪ್ರಸಾರವನ್ನು ಅಮಾನತು ಮಾಡಲಾಗಿದೆ. ಮಂಗಳವಾರ ಸಂಜೆ 5.30ರ ಸುಮಾರಿಗೆ ನಮಗೆ ಆದೇಶ ಬಂದಿದ್ದು, ಸಂಜೆ 6 ಗಂಟೆ ವೇಳೆಗೆ ಚಾನೆಲ್ ಪ್ರಸಾರ ಸ್ಥಗಿತಗೊಂಡಿದೆ. ಮಾಹಿ ಮತ್ತು ಪ್ರಸಾರ ಸಚಿವಾಲಯವು ನಮ್ಮ ಪರವಾನಗಿಯನ್ನು ಅಮಾನತುಗೊಳಿಸಿದೆ. ನಾವು ಅದರ ವಿರುದ್ಧ ಕಾನೂನಾತ್ಮಕವಾಗಿ ಹೋರಾಡಲಿದ್ದೇವೆ. ಇದು ಇತಿಹಾಸದಲ್ಲಿ 30 ದಿನಗಳ ಕಾಲ ಚಾನೆಲ್ ಅನ್ನು ಮುಚ್ಚುವಂತೆ ಕೇಳಲಾದ ಮೊದಲ ನಿದರ್ಶನವಾಗಿದ್ದು, ನಾವು ಹೆದರುವುದಿಲ್ಲ’ ಎಂದು ಮುಖ್ಯ ಸಂಪಾದಕ ಕಮಲೇಶ್ ಸುತಾರ್ ಬುಧವಾರ ತಿಳಿಸಿದ್ದಾರೆ.

ಜುಲೈ 2023 ರಲ್ಲಿ, ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಅವರ “ಸೆಕ್ಸ್ ವೀಡಿಯೋ” ದ ಸುದ್ದಿಯನ್ನು ಲೋಕಶಾಹಿಯನ್ನು ಪ್ರಸಾರ ಮಾಡಿತ್ತು. ಆ ನಂತರ, ಕಂಪನಿಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಸಲ್ಲಿಸದ ಕಾರಣ ಸಚಿವಾಲಯವು ವಾಹಿನಿಗೆ ನೀಡಿದ್ದ ಪರವಾನಗಿಯನ್ನು ಅಮಾನತು ಮಾಡಿದೆ.

‘ಲೋಕಾಹಿ ಯಾವಾಗಲೂ ಸುದ್ದಿ ಮತ್ತು ಸತ್ಯಗಳನ್ನು ನ್ಯಾಯಯುತ, ಸ್ವತಂತ್ರ ಮತ್ತು ನಿಷ್ಪಕ್ಷಪಾತ ರೀತಿಯಲ್ಲಿ ಪ್ರಸ್ತುತಪಡಿಸಿದೆ. ನಾವು ಸರ್ಕಾರದ ಉತ್ತಮ ಪುಸ್ತಕಗಳಲ್ಲಿ ಇಲ್ಲದಿರಬಹುದು. ಆದರೆ ನಮ್ಮ ವಾಸ್ತವಿಕ ವರದಿಯನ್ನು ಮೆಚ್ಚುವ ಜನರ ಹೃದಯದಲ್ಲಿ ನಾವು ವಾಸಿಸುತ್ತೇವೆ. ಅಧಿಕಾರದಲ್ಲಿ ಇರುವವರ ತಪ್ಪು ಕೆಲಸಗಳ ಬಗ್ಗೆ ಬಲವಾದ ಅಭಿಪ್ರಾಯಗಳನ್ನು ಹೊಂದಿದ್ದೇವೆ’ ಸುತಾರ್ ಹೇಳಿದ್ದಾರೆ.

‘ವಾಹಿನಿಯು ಗುಜರಾತ್ ಸಮಾಚಾರ್ ಮತ್ತು ಸ್ವರಾಜ್ ಮರಾಠಿ ಬ್ರಾಡ್‌ಕಾಸ್ಟಿಂಗ್ ಎಲ್ಎಲ್‌ಪಿ ನಡುವಿನ ಪಾಲುದಾರಿಕೆಯ ಉದ್ಯಮವಾಗಿದೆ’ ಎಂದು ಅವರು ಹೇಳಿದರು. ‘ಪರವಾನಗಿಯು ಒಬ್ಬ ಪಾಲುದಾರನ ಹೆಸರಿನಲ್ಲಿದೆ ಮತ್ತು ಇನ್ನೊಬ್ಬರು ಕಾರ್ಯಾಚರಣೆಯನ್ನು ನಡೆಸುತ್ತಾರೆ. ಸಚಿವಾಲಯವು ಇದನ್ನು ಆಕ್ಷೇಪಿಸಿದೆ. ಪರವಾನಗಿಯನ್ನು ನೀಡಿದ ಸಂಸ್ಥೆಯಿಂದ ಎಲ್ಲವನ್ನೂ ಮಾಡುವಂತೆ ನೋಡಿಕೊಳ್ಳಲು ಕೇಳಿದೆ. ನಾವು ತಿದ್ದುಪಡಿ ಮಾಡುತ್ತೇವೆ ಎಂದು ಹೇಳಿದ್ದೆವು. ನಾವು ಅದನ್ನು ಮಾಡುವ ಮೊದಲೇ, ಅವರು ಚಾನಲ್ ಅನ್ನು ಮುಚ್ಚಿದ್ದಾರೆ; ಇದು ಕಠಿಣ ನಿರ್ಧಾರ. ನಮ್ಮ ರೀತಿ ಅರವತ್ತು ಸಂಸ್ಥೆಗಳು ಬೇರೆ ಬೇರೆ ಪಾಲುದಾರರನ್ನು ಹೊಂದಿದ್ದರೂ ನಮ್ಮ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಲಾಗಿದೆ’ ಎಂದು ಸುತಾರ್ ಆರೋಪಿಸಿದ್ದಾರೆ.

‘ಸೋಮಯ್ಯ ವಿಡಿಯೋಗಳನ್ನು ಪ್ರಸಾರ ಮಾಡಿದ ನಂತರ 72 ಗಂಟೆಗಳ ಕಾಲ ಚಾನೆಲ್ ಅನ್ನು ಸ್ಥಗಿತಗೊಳಿಸಲಾಯಿತು. ಆದರೆ, ದೆಹಲಿ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದೆ. ಚಾನೆಲ್ ಸ್ಥಗಿತಗೊಂಡಿದ್ದರೂ ಡಿಜಿಟಲ್ ಕಾರ್ಯಾಚರಣೆ ಮುಂದುವರಿಯಲಿದೆ. ಇದಲ್ಲದೆ, ನಾವು ಯೂಟ್ಯೂಬ್ ನಲ್ಲಿ ಸುದ್ದಿಗಳನ್ನು ಪ್ರಸ್ತುತಪಡಿಸುವುದನ್ನು ಮುಂದುವರಿಸುತ್ತೇವೆ’ ಎಂದು ಅವರು ಹೇಳಿದರು.

ಇದನ್ನೂ ಓದಿ; ಸಚಿವಾಲಯ ಮುತ್ತಿಗೆ ಹಿಂಸಾಚಾರ ಪ್ರಕರಣ: ಕೇರಳ ಯುವ ಕಾಂಗ್ರೆಸ್ ಮುಖ್ಯಸ್ಥನ ಬಂಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...

ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಚಾಲಕ, ಕಂಡಕ್ಟರ್ ಬಂಧನ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಪ್ರಕರಣವನ್ನು ನೆನಪಿಸುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಸ್ಲೀಪರ್‌ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. indiatoday.in ವರದಿಯ ಪ್ರಕಾರ, ಈ ಘಟನೆಯು ಆಗಸ್ಟ್ 4ರ...

ಜಗತ್ತಿನ ಪ್ರತಿಯೊಬ್ಬರಿಗೂ ಲ್ಯಾಪ್‌ಟಾಪ್ ಕೊಳ್ಳುವಷ್ಟು ಕಪ್ಪು ಹಣ ಪ್ರಪಂಚದಲ್ಲಿದೆ: ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್

ಅಕ್ರಮ ಹಣ ವರ್ಗಾವಣೆ (Money Laundering) ಮತ್ತು 'ಡಿಜಿಟಲ್ ಅರೆಸ್ಟ್' ನಂತಹ ಆನ್‌ಲೈನ್ ವಂಚನೆಗಳ ಪ್ರಮಾಣದ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ರೀತಿಯ...

ಪೆಟ್ರೋಲ್‌ನಲ್ಲಿ ಎಥನಾಲ್ ಪ್ರಮಾಣ ಬಹಿರಂಗಪಡಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಪೆಟ್ರೋಲ್‌ನಲ್ಲಿ ಬೆರೆಸಲಾಗುವ ಎಥನಾಲ್ ಪ್ರಮಾಣವನ್ನು ಕಡ್ಡಾಯವಾಗಿ ನಮೂದಿಸಬೇಕು ಮತ್ತು ವಾಹನಗಳಿಗೆ ಎಥನಾಲ್ ಮಿಶ್ರಿತ ಇಂಧನದ ಹೊಂದಾಣಿಕೆಯ ಬಗ್ಗೆ ಹೆಚ್ಚಿನ ಪಾರದರ್ಶಕತೆ ತರಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆ...

ದೆಹಲಿ| ಜಮಾ ಮಸೀದಿ ಸುತ್ತಮುತ್ತಲಿನ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ ಎಂಸಿಡಿ

ದೆಹಲಿ ಹೈಕೋರ್ಟ್ ನಿರ್ದೇಶನದಂತೆ, ಮೊಘಲರ ಕಾಲದ ಐತಿಹಾಸಿಕ ಜಮಾ ಮಸೀದಿ ಸುತ್ತಮುತ್ತಲಿನ ಅಕ್ರಮ ನಿರ್ಮಾಣಗಳನ್ನು ಸಮೀಕ್ಷೆ ಮಾಡಿ, ಒತ್ತುವರಿಯನ್ನು ತೆರವುಗೊಳಿಸುವ ಬೃಹತ್ ಕಾರ್ಯಾಚರಣೆಯನ್ನು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಸೋಮವಾರ (ಆ.31) ಪ್ರಾರಂಭಿಸಿದೆ...

ವೆನೆಜುವೆಲಾ ಮತ್ತೆ ಎದ್ದು ನಿಲ್ಲಲಿದೆ: ಬಂಧನದಲ್ಲಿರುವ ವೆನೆಜುವೆಲಾ ಮಾಜಿ ಅಧ್ಯಕ್ಷ ಮಡುರೊ ಮೊದಲ ಫೋಟೋ ಹಂಚಿಕೆ

ಜನವರಿಯಲ್ಲಿ ಅಮೆರಿಕ ಪಡೆಗಳಿಂದ ಬಂಧನಕ್ಕೊಳಗಾಗಿದ್ದ ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲಸ್ ಮಡುರೊ, ಅಮೆರಿಕದ ಬಂಧನ ಕೇಂದ್ರದಿಂದ ತಮ್ಮ ಎರಡು ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಬಂಧನದ ಬಳಿಕ ಮಡುರೊ ಅವರ ಫೋಟೋಗಳು ಹೊರಬಂದಿರುವುದು...

‘ಮಹಿಳೆಯರು ಆಭರಣದಂತೆ ಮನೆಯಲ್ಲೇ ಇರಬೇಕು’ ಮುಸ್ಲಿಂ ಧರ್ಮಗುರು ವಿವಾದಾತ್ಮಕ ಹೇಳಿಕೆ

ಮಹಿಳೆಯರು ಮನೆಯಲ್ಲೇ ಇರಬೇಕು ಮತ್ತು ಸಾರ್ವಜನಿಕ ಕ್ಷೇತ್ರಕ್ಕೆ ಪ್ರವೇಶಿಸಬಾರದು ಎಂದು ಕೇರಳದ ಪ್ರಭಾವಿ ಮುಸ್ಲಿಂ ಧರ್ಮಗುರು ಶೇಖ್ ಅಬೂಬಕರ್ ಅಹ್ಮದ್ ನೀಡಿದ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ...

ಹಲ್ದ್ವಾನಿ ‘ಶುದ್ಧೀಕರಣ’ ವಿವಾದ : ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್

ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರ್‍ಯಾಲಿ ನಡೆದ ಸ್ಥಳದಲ್ಲಿ ಬಿಜೆಪಿ ಬೆಂಬಲಿಗರು 'ಶುದ್ಧೀಕರಣ' ನಡೆಸಿದ ವಿವಾದ ಹೊಸ ರಾಜಕೀಯ ಮತ್ತು ಕಾನೂನು ತಿರುವು ಪಡೆದುಕೊಂಡಿದೆ. ಜಾತಿ ನಿಂದನೆಗೆ ಸಂಬಂಧಿಸಿದಂತೆ...

ಜೈಲಿನಲ್ಲಿದ್ದ KPSC ಅಧ್ಯಕ್ಷರ ಭೇಟಿಯಾಗಿದ್ದೇಕೆ HDK? ಪ್ರಿಯಾಂಕ್ ಖರ್ಗೆ ಪ್ರಶ್ನೆ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ಅವರು ತಾರ್ಕಿಕ ಸ್ಪಷ್ಟನೆ ನೀಡುವ ಬದಲು, ಜಾರಿಕೊಳ್ಳುವ ರೀತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದು...

ನೇಪಾಳ: ಶಿಕ್ಷಕನ ಸಮಯಪ್ರಜ್ಞೆಯಿಂದ ಉಳಿಯಿತು 1643 ಮಕ್ಕಳ ಪ್ರಾಣ

ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಜಲಪ್ರಳಯಕ್ಕೆ ಬಲಿಯಾದವರ ಸಂಖ್ಯೆ 700ರ ಗಡಿ ದಾಟಿದೆ. 2,000ಕ್ಕೂ ಹೆಚ್ಚು ಜನರು ಇಂದಿಗೂ ನಾಪತ್ತೆಯಾಗಿದ್ದು, ರಕ್ಷಣಾ ಪಡೆಗಳು ಅವಿಶ್ರಾಂತವಾಗಿ ಶೋಧ ಕಾರ್ಯ ನಡೆಸುತ್ತಿವೆ. ಪ್ರಕೃತಿ ತನ್ನ...