Homeಮುಖಪುಟಎಲ್ಲಾ ಬೆಳೆಗಳಿಗೆ ಎಂಎಸ್‌ಪಿ ನೀಡುವುದು 'ಕಾರ್ಯಸಾಧು'ವಲ್ಲ: ಕೃಷಿ ಅರ್ಥಶಾಸ್ತ್ರಜ್ಞ ಜೋಲ್

ಎಲ್ಲಾ ಬೆಳೆಗಳಿಗೆ ಎಂಎಸ್‌ಪಿ ನೀಡುವುದು ‘ಕಾರ್ಯಸಾಧು’ವಲ್ಲ: ಕೃಷಿ ಅರ್ಥಶಾಸ್ತ್ರಜ್ಞ ಜೋಲ್

- Advertisement -
- Advertisement -

ರೈತರ ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ಮತ್ತು ಬೆಲೆ ವ್ಯವಸ್ಥೆ ಸೇರಿದಂತೆ ಸ್ವಾಮಿನಾಥನ್ ಸಮಿತಿಯ ವರದಿಯ ಅನುಷ್ಠಾನಕ್ಕೆ ಆಗ್ರಹಿಸಿ ರೈತರು ನಡೆಸುತ್ತಿರುವ ಆಂದೋಲನದ ನಡುವೆ, ಪ್ರಮುಖ ಕೃಷಿ ಅರ್ಥಶಾಸ್ತ್ರಜ್ಞ ಡಾ.ಸರ್ದಾರಾ ಸಿಂಗ್ ಜೋಲ್ ಅವರು, ಎಲ್ಲ ಬೆಳೆಗಳಿಗೆ ಎಂಎಸ್‌ಪಿ ನೀಡುವುದು ‘ಕಾರ್ಯಸಾಧು’ವಲ್ಲ’ ಎಂದು ಹೇಳಿದ್ದಾರೆ.

ಪಂಜಾಬ್ ಕೃಷಿ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿಯಾದ ಡಾ.ಜೋಲ್, ‘ರೈತರು ತಮ್ಮ ಬೇಡಿಕೆಗಳ ಬಗ್ಗೆ ಸಂಧಾನದ ಮಾರ್ಗವನ್ನು ಅಳವಡಿಸಿಕೊಳ್ಳಬೇಕು ಮತ್ತು ದೆಹಲಿಗೆ ಹೋಗಲು ಅವರಿಗೆ ಅವಕಾಶ ನೀಡಬೇಕು. ರೈತರ ಸಮಸ್ಯೆಗಳ ಪರಿಹಾರಕ್ಕೆ ಮಾತುಕತೆಗೆ ನಡೆಸಬೇಕು’ ಎಂದು ಹೇಳಿದ್ದಾರೆ.

ಹರಿಯಾಣ- ಪಂಜಾಬ್‌ನ ಗಡಿಯಲ್ಲಿನ ಪರಿಸ್ಥಿತಿಯ ಬಗ್ಗೆ  ಕಳವಳ ವ್ಯಕ್ತಪಡಿಸಿದ ಅವರು, ‘ಎಂಎಸ್‌ಪಿ ಮಾರುಕಟ್ಟೆ ದರಕ್ಕಿಂತ ಹೆಚ್ಚಾದಾಗ ಮಾತ್ರ ರೈತರಿಗೆ ಅನುಕೂಲವಾಗುತ್ತದೆ. ಎಂದು ಹೇಳಿದ ಡಾ.ಜೊಹ್ಲ್, ಸಣ್ಣ ರೈತರಿಗೆ ಅನುಕೂಲ ಮಾಡಿಕೊಡುವ ಅಗತ್ಯವನ್ನು ಒತ್ತಿ ಹೇಳಿದರು.

‘ರೈತರು ಹೆಚ್ಚಾಗಿ ಗೋಧಿ ಮತ್ತು ಭತ್ತದ ಮೇಲೆ ಎಂಎಸ್‌ಪಿ ಪಡೆಯುತ್ತಾರೆ; ಸರ್ಕಾರವು ಅನೇಕ ಬೆಳೆಗಳನ್ನು ಖರೀದಿಸುವುದಿಲ್ಲ. ಸರ್ಕಾರವು ಎಲ್ಲ 23 ಬೆಳೆಗಳಿಗೆ ಎಂಎಸ್‌ಪಿ ನೀಡಲು ಸಾಧ್ಯವಿಲ್ಲ…. ಸರ್ಕಾರವು ಹಣ ಉಳಿಸಿ ಎಲ್ಲಾ ಬೆಳೆಗಳನ್ನು ಖರೀದಿಸಿದರೂ ಅದನ್ನು ಜಾರಿಗೆ ತರಲು ಸಾಧ್ಯವಿಲ್ಲ’ ಎಂದು ಡಾ.ಜೋಲ್ ಹೇಳಿದರು.

‘ಪ್ರಪಂಚದ ಸುಮಾರು 60 ದೇಶಗಳು ರೈತರಿಗೆ ನೇರ ಸಬ್ಸಿಡಿಗಳನ್ನು ನೀಡುತ್ತವೆ. 2021-22 ರಲ್ಲಿ ಯುನೈಟೆಡ್ ಸ್ಟೇಟ್ಸ್ ರೈತರಿಗೆ 42 ಶತಕೋಟಿ ಡಾಲರ್‌ಗಿಂತ ಹೆಚ್ಚಿನದನ್ನು ನೀಡಿದೆ. ಚೀನಾ ಮತ್ತು ಜಪಾನ್ ಕೂಡ ತಮ್ಮ ರೈತರಿಗೆ ಸಬ್ಸಿಡಿ ನೀಡುತ್ತವೆ’ ಎಂದು ಅವರು ಹೇಳಿದರು.

ಸ್ವಾಮಿನಾಥನ್ ಸಮಿತಿ ವರದಿ ಕುರಿತು ಮಾತನಾಡಿದ ಅವರು, ‘ರೈತನಿಗೆ ವ್ಯಾಪಾರ ಕೊರತೆಯಾಗಬಾರದು ಎಂಬುದು ಎಂಎಸ್‌ಪಿಯ ಉದ್ದೇಶವಾಗಿದೆ. ಎಲ್ಲಿಯವರೆಗೆ ವಿದ್ಯುತ್ ಮತ್ತು ನೀರು ಮುಕ್ತವಾಗಿರುವುದಿಲ್ಲವೋ ಅಲ್ಲಿಯವರೆಗೆ ಅದು ಸಾಧ್ಯವಿಲ್ಲ’ ಎಂದರು.

ಇದನ್ನೂ ಓದಿ; ದೆಹಲಿ ಚಲೋ ಮೆರವಣಿಗೆ: ರೈತ ಮುಖಂಡರೊಂದಿಗೆ ಇಂದು ಕೇಂದ್ರ ಸಚಿವರ 4 ಸುತ್ತಿನ ಮಾತುಕತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...