Homeಮುಖಪುಟಪಡಿತರ ಚೀಲದ ಮೇಲೆ ಮೋದಿ ಪೋಟೋ ಹಾಕಲು ಸಾರ್ವಜನಿಕ ತೆರಿಗೆಯ ಕೋಟ್ಯಾಂತರ ರೂ. ವೆಚ್ಚ

ಪಡಿತರ ಚೀಲದ ಮೇಲೆ ಮೋದಿ ಪೋಟೋ ಹಾಕಲು ಸಾರ್ವಜನಿಕ ತೆರಿಗೆಯ ಕೋಟ್ಯಾಂತರ ರೂ. ವೆಚ್ಚ

- Advertisement -
- Advertisement -

2024ರ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ವಿಭಿನ್ನ ರೀತಿಯಲ್ಲಿ ಪ್ರಚಾರವನ್ನು ಮಾಡುತ್ತಿದ್ದು, ಇದೀಗ ಮೋದಿ ಬಗ್ಗೆ ಪ್ರಚಾರಕ್ಕೆ ಕೋಟ್ಯಾಂತರ ರೂ. ಸರಕಾರದ ಹಣ ದುರ್ಬಳಕೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ವಿತರಿಸಲಾಗುವ ಆಹಾರ ಧಾನ್ಯದ ಚೀಲಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪೋಟೋವನ್ನು ಸ್ಪಷ್ಟವಾಗಿ ಪ್ರದರ್ಶಿಸಲು ಕೇಂದ್ರ ಸರ್ಕಾರವು ಮುಂದಾಗಿದೆ.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿಯಲ್ಲಿ, ಅಂತ್ಯೋದಯ ಅನ್ನ ಯೋಜನೆ (AAY) ಮತ್ತು ಆದ್ಯತಾ ಕುಟುಂಬಗಳ (PHH) ಸುಮಾರು 81.35 ಕೋಟಿ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸಲಾಗುತ್ತಿದೆ. 2020-21 ಮತ್ತು 2021-22ರ ಹಣಕಾಸು ವರ್ಷಗಳಲ್ಲಿ PMGKAY ಅನುಷ್ಠಾನದ ಸಮಯದಲ್ಲಿ 75 ಕೋಟಿಗೂ ಹೆಚ್ಚು ಫಲಾನುಭವಿಗಳು ಆಹಾರ ಧಾನ್ಯಗಳನ್ನು ಪಡೆದಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಜನವರಿ 12, 2024ರ ಸುತ್ತೋಲೆಯಲ್ಲಿ, ಭಾರತೀಯ ಆಹಾರ ನಿಗಮವು (ಎಫ್‌ಸಿಐ) ತನ್ನ ಎಲ್ಲಾ 26 ಪ್ರಾದೇಶಿಕ ಕಚೇರಿಗಳಿಗೆ ಪಿಎಂಜಿಕೆಎವೈ ಅಡಿಯಲ್ಲಿ ಆಹಾರ ಧಾನ್ಯಗಳನ್ನು ವಿತರಿಸುವಾಗ, ಆಹಾರ ಧಾನ್ಯದ ಚೀಲಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪೋಟೋಗಳನ್ನು ಹಾಕುವಂತೆ ಸೂಚಿಸಲಾಗಿದೆ.

ಇದರಿಂದಾಗಿ ರಾಜಸ್ಥಾನ ಒಂದರಲ್ಲೇ ಮೋದಿಯ ಪೋಟೋ ಇರುವ ಬ್ಯಾಗ್‌ಗಳಿಗೆ 13.29 ಕೋಟಿ ಬೆಲೆ ರೂ.ವೆಚ್ಚ ಮಾಡಲಾಗಿದೆ. ಸಾಮಾಜಿ ಕಾರ್ಯಕರ್ತ ಅಜಯ್ ಬೋಸ್‌ ಅವರು ರಾಜಸ್ಥಾನದ ಜೈಪುರದ ಪ್ರಾದೇಶಿಕ ಕಚೇರಿಯಲ್ಲಿ ಎಫ್‌ಸಿಐನ ಶೇಖರಣಾ ವಿಭಾಗಕ್ಕೆ ಮಾಹಿತಿ ಕೋರಿ ಸಲ್ಲಿಸಿದ ಅರ್ಜಿಗೆ ಈ ಉತ್ತರವನ್ನು ನೀಡಲಾಗಿದೆ. ರಾಜಸ್ಥಾನವು ಪ್ರತಿ ಚೀಲಕ್ಕೆ 12.375 ದರದಲ್ಲಿ 1.07 ಕೋಟಿ ಸಿಂಥೆಟಿಕ್ ಬ್ಯಾಗ್‌ಗಳ ಪೂರೈಕೆ ಆದೇಶವನ್ನು ನೀಡಿದೆ.

ರಾಜಸ್ಥಾನದಲ್ಲಿ ಈ ಕುರಿತು ಟೆಂಡರ್‌ಗಳನ್ನು ಐದು ಕಂಪನಿಗಳಿಗೆ ನೀಡಲಾಗಿದೆ, ರಾಜಸ್ಥಾನ ಮೂಲದ ಸಲಾಸರ್ ಟೆಕ್ನೋಟೆಕ್ಸ್ ಪ್ರೈವೇಟ್ ಲಿಮಿಟೆಡ್, ರಾಜಸ್ಥಾನ ಫ್ಲೆಕ್ಸಿಬಲ್ ಪ್ಯಾಕೇಜಿಂಗ್ ಲಿಮಿಟೆಡ್, ಅಲಯನ್ಸ್ ಪಾಲಿಸಾಕ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಗುಜರಾತ್ ಮೂಲದ ಮೋರ್ ಟೆಕ್‌ಫ್ಯಾಬ್ ಪ್ರೈವೇಟ್ ಲಿಮಿಟೆಡ್ ಮತ್ತು ಗುಜರಾತ್ ಬ್ಲಾಸ್ಟ್ ಇಂಡಸ್ಟ್ರೀಸ್‌ಗೆ ಟೆಂಡರ್‌ ನೀಡಲಾಗಿದೆ.

ರಾಜಸ್ಥಾನವು ಪ್ರತಿ ಚೀಲಕ್ಕೆ 12.375ರಂತೆ ಒಪ್ಪಂದವನ್ನು ನೀಡಿದರೆ, ನಾಗಾಲ್ಯಾಂಡ್ ಕೇವಲ ಒಂದು ಕಂಪನಿಗೆ ಇದರ ಗುತ್ತಿಗೆ ನೀಡಿದೆ. ರಾಜಸ್ಥಾನ್ ಫ್ಲೆಕ್ಸಿಬಲ್ ಪ್ಯಾಕೇಜಿಂಗ್ ಪ್ರತಿ ಚೀಲಕ್ಕೆ 9.30ಕ್ಕೆ ನೀಡುವ ಬಗ್ಗೆ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ದಿಮಾಪುರ್‌ನಲ್ಲಿರುವ ಎಫ್‌ಸಿಐ ಪ್ರಾದೇಶಿಕ ಕಚೇರಿ ಆರ್‌ಟಿಐ ಉತ್ತರದಲ್ಲಿ ತಿಳಿಸಿದೆ. ತಮಿಳುನಾಡು 1.14 ಕೋಟಿ ಚೀಲಗಳ ಪೂರೈಕೆಗೆ ಟೆಂಡರ್ ಕರೆದಿದೆ. ತಮಿಳುನಾಡಿನ ಎಫ್‌ಸಿಐನ ಪ್ರಾದೇಶಿಕ ಕಚೇರಿಯು ನೀಡಿರುವ ಆರ್‌ಟಿಐ ಮಾಹಿತಿಯಲ್ಲಿ ಇದು ಬಯಲಾಗಿದೆ. ಮಹಾರಾಷ್ಟ್ರ ಇನ್ನೂ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಲ್ಲ.

ಸಾಂಕ್ರಾಮಿಕ ರೋಗದ ವೇಳೆ 2020ರಲ್ಲಿ ಪ್ರಾರಂಭವಾದ PMGKAY ಯೋಜನೆಯಡಿಯಲ್ಲಿನ ಉಚಿತ ಆಹಾರ ಧಾನ್ಯ ವಿತರಣೆ ಯೋಜನೆಯನ್ನು ಇತ್ತೀಚೆಗೆ ಮುಂದುವರಿಸಲಾಗಿತ್ತು. ಇದೀಗ ಈ ಯೋಜನೆಯ ಅಕ್ಕಿ ಚೀಲದಲ್ಲಿ ಮೋದಿ ಪೋಟೋವನ್ನು ಹಾಕುವಂತೆ ಸೂಚಿಸಲಾಗಿದೆ. ಇದು ಚುನಾವಣಾ ಪ್ರಚಾರದ ಭಾಗ ಎಂದು ವ್ಯಾಪಕ ಟೀಕೆಗೆ ಕಾರಣವಾಗಿದೆ.

ಪಡಿತರ ಅಂಗಡಿಗಳಲ್ಲಿ ಪ್ರಧಾನಿ ನರೇಂದ್ರ ಅವರ ಕಟೌಟ್ ಇರುವ ಸೆಲ್ಫಿ ಪಾಯಿಂಟ್‌ಗಳನ್ನು, ಫ್ಲೆಕ್ಸ್‌ಗಳನ್ನು ಮತ್ತು ಬೋರ್ಡ್‌ಗಳನ್ನು ಅಳವಡಿಸುವಂತೆ ಕೇಂದ್ರ ಸರ್ಕಾರ ನೀಡಿರುವ ನಿರ್ದೇಶನವನ್ನು ಕೇರಳ ಸರಕಾರ ತಿರಸ್ಕರಿಸಿತ್ತು. ಇದು ಖಂಡಿತವಾಗಿಯೂ ಲೋಕಸಭೆ ಚುನಾವಣೆಯ ಪ್ರಚಾರದ ಭಾಗವಾಗಿದೆ. ಇದು ಸರಿಯಲ್ಲ ಮತ್ತು ಇದನ್ನು ಕೇರಳದಲ್ಲಿ ಜಾರಿಗೆ ತರುವುದು ಕಷ್ಟ ಎಂದು ನಾವು ಕೇಂದ್ರಕ್ಕೆ ತಿಳಿಸುತ್ತೇವೆ ಎಂದು ಕೇರಳ ಸಿಎಂ ಪಿಣರಾಯ್‌ ವಿಜಯನ್‌ ಹೇಳಿದ್ದರು.

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕೇಂದ್ರ ಸರ್ಕಾರದ ಪ್ರಚಾರದ ಭಾಗದಲ್ಲಿ ‘ಸೆಲ್ಫಿ ಪಾಯಿಂಟ್‌ಗಳು’ ದೊಡ್ಡ ಭಾಗವಾಗಿದೆ. ಅವುಗಳನ್ನು ಸಾರ್ವಜನಿಕ ಸ್ಥಳಗಳು, ರೈಲು ನಿಲ್ದಾಣಗಳು, ಶಿಕ್ಷಣ ಸಂಸ್ಥೆಗಳು ಇತ್ಯಾದಿಗಳಲ್ಲಿ ಇರಿಸುವಂತೆ ಈ ಮೊದಲು ನಿರ್ದೇಶನವನ್ನು ನೀಡಲಾಗಿತ್ತು. ಇವೆಲ್ಲವನ್ನೂ ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಲಾಗುತ್ತಿದೆ. ಇತ್ತೀಚೆಗೆ ವಿಶ್ವವಿದ್ಯಾನಿಲಯಗಳಲ್ಲಿ ಮೋದಿ ಸೆಲ್ಫಿ ಪಾಯಿಂಟ್‌ಗಳ ನಿರ್ಮಾಣಕ್ಕೆ ಆದೇಶ ಕೊಟ್ಟಿರುವುದು ವಿವಾದಕ್ಕೆ ಕಾರಣವಾಗಿತ್ತು. ಆ ಬಳಿಕ ರೈಲ್ವೇ ನಿಲ್ದಾಣಗಳಲ್ಲಿ ಸಾರ್ವಜನಿಕರ ವೆಚ್ಚದಲ್ಲಿ ಮೋದಿಯ ಪೋಟೋ ಇರುವಂತೆ ಸೆಲ್ಫಿ ಪಾಯಿಂಟ್‌ಗಳನ್ನು ನಿರ್ಮಿಸಲಾಗಿದೆ ಎನ್ನವುದು ಆರ್‌ಟಿಐ ಮಾಹಿತಿಯಿಂದ ಬಯಲಾಗಿತ್ತು. ಮೋದಿ ಸಾರ್ವಜನಿಕರ ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಟೀಕಿಸಿದ್ದವು.

ಇದನ್ನು ಓದಿ: ‘ಅಕ್ಬರ್‌’, ‘ಸೀತಾ’ ಹೆಸರಿನ ಸಿಂಹಗಳನ್ನು ಒಂದೇ ಸ್ಥಳದಲ್ಲಿ ಬಿಟ್ಟಿದ್ದಕ್ಕೆ ಹೈಕೋರ್ಟ್‌ ಮೆಟ್ಟಿಲೇರಿದ ವಿಹೆಚ್‌ಪಿ: ವಿಲಕ್ಷಣ ಘಟನೆ

 

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...