Homeಕರ್ನಾಟಕ‘ದೇವರೆ ಶಿಕ್ಷೆ ಕೊಡುವ ಕಾಲ‌ ಬರುತ್ತದೆ’: ಯಡಿಯೂರಪ್ಪ ವಿರುದ್ದ ರೇವಣ್ಣ ಕಿಡಿ

‘ದೇವರೆ ಶಿಕ್ಷೆ ಕೊಡುವ ಕಾಲ‌ ಬರುತ್ತದೆ’: ಯಡಿಯೂರಪ್ಪ ವಿರುದ್ದ ರೇವಣ್ಣ ಕಿಡಿ

- Advertisement -
- Advertisement -

“ಜಿಲ್ಲೆಯ ಅಭಿವೃದ್ಧಿ ಸಂಪೂರ್ಣವಾಗಿದ್ದ ನಿಂತಿದ್ದು, ದ್ವೇಷದ ರಾಜಕಾರಣ ‌ಎಷ್ಟು ದಿನ ಮಾಡುತ್ತೀರಿ ಮಾಡಿ. ನಾವೇನು ಹೆದರಿ ಓಡುವುದಿಲ್ಲ. ಯಡಿಯೂರಪ್ಪ ಶಾಶ್ವತವಾಗಿ ಇರ್ತಾನಾ? ದೇವರೇ ಶಿಕ್ಷೆ ಕೊಡುವ ಕಾಲ‌ ಬರುತ್ತದೆ” ಎಂದು ಹಾಸನ ಜಿಲ್ಲೆಯ ಅಭಿವೃದ್ದಿ ಕುರಿತು ಮಾಜಿ ಸಚಿವ, ಜೆಡಿಎಸ್‌ ಮುಖಂಡ ಎಚ್‌‌‌ಡಿ ರೇವಣ್ಣ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ದ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

“ಯಡಿಯೂರಪ್ಪ ಒಬ್ಬ ಡಿನೋಟಿಫಿಕೇಷನ್ ಮುಖ್ಯಮಂತ್ರಿ. ಹಾಸನದಲ್ಲಿ ಭೂಸ್ವಾಧೀನವಾಗಿದ್ದ ಜಮೀನನ್ನು ಭೂ ಮಾಲೀಕರ ಜೊತೆ ಶಾಮೀಲಾಗಿ ವಾಪಾಸ್ ಕೊಟ್ಟರು. ನನ್ನ 21 ವರ್ಷದ ರಾಜಕಾರಣದಲ್ಲಿ ಸುಳ್ಳು ಹೇಳುವ, ದ್ವೇಷದ ರಾಜಕಾರಣ ಮಾಡುವ ನಂ.1 ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ” ಎಂದು ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೊರೊನಾ 3ನೇ ಅಲೆಯ ಆತಂಕ ಹೆಚ್ಚಿಸಿದ ಯುರೋ ಕಪ್ ಫುಟ್ಬಾಲ್ ಟೂರ್ನಿ

“ಮುಂದಿನ ಚುನಾವಣೆಯಲ್ಲಿ ಬಿಜೆಪಿ 130, ಕಾಂಗ್ರೆಸ್ 150 ಗೆಲ್ಲುತ್ತೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಒಟ್ಟು 280 ಸೀಟ್ ಆಗುತ್ತೆ, ಹಾಗಾದರೆ ಬಾಕಿಯವರು ಯಾರು ಇಲ್ಲವೇ ಇಲ್ವಾ? 2023ರಲ್ಲಿ ಬಿಜೆಪಿ ಎಷ್ಟು ಸ್ಥಾನ ಪಡೆಯುತ್ತೆ ನಾನು ನೋಡುತ್ತೇನೆ” ಎಂದು ಸವಾಲೆಸೆದಿದ್ದಾರೆ.

“ಹಾಸನ ವಿಮಾನ ನಿಲ್ದಾಣ ಕಾಮಗಾರಿಯನ್ನು ಮೂಲಭೂತ ಅಭಿವೃದ್ಧಿ ಇಲಾಖೆಯಿಂದ ಮಾಡಲು ಇಂಜಿನಿಯರ್‌ಗಳಿಲ್ಲ. ಪಿಡಬ್ಲ್ಯೂಡಿ ಇಲಾಖೆಯಿಂದ ಮಾಡುವುದಾದರೆ ಮಾಡಿ. ಇಲ್ಲವಾದರೆ ದೇವರು ಶಕ್ತಿ ಕೊಟ್ಟಾಗ ಮಾಡುತ್ತೇವೆ. ವಿಮಾನ ನಿಲ್ದಾಣಕ್ಕೆ 761 ಎಕರೆ ಭೂಮಿ ಅವಶ್ಯಕವಿದೆ. 536 ಎಕರೆ ಭೂ ಸ್ವಾಧೀನ ಮಾಡಲಾಗಿದೆ” ಎಂದು ಹೇಳಿದ್ದಾರೆ.

“ಶಿವಮೊಗ್ಗ, ಬಿಜಾಪುರ, ಕಲಬುರಗಿಯ ಏರ್‌ಪೋರ್ಟ್‌ ಅನ್ನು ಪಿಡಬ್ಲ್ಯೂಡಿಗೆ ಕೊಡಬಹುದು. ಆದರೆ ಹಾಸನದ ಏರ್‌ಫೋರ್ಟ್ ಅನ್ನು ಯಾಕೆ ಪಿಡಬ್ಲ್ಯೂಡಿಗೆ ಕೊಡಬಾರದು. ಶಿವಮೊಗ್ಗ ಮಾದರಿಯಲ್ಲಿ ಕಾಮಗಾರಿ ಮಾಡುವುದಾದರೆ ಮಾಡಲಿ ಇಲ್ಲಾ, ಕಾಮಗಾರಿ ತಡೆ ಹಿಡಿಯುತ್ತೇವೆ. ಇದರಲ್ಲಿ ರಾಜಕೀಯ ಬೆರಸುವುದು ಬೇಡ, ನಾಟಕವಾಡುವುದು ಬೇಡ. ನಾಮಕವಸ್ತೆಗೆ ಮಾಡಿ ವಿಮಾನ ‌ನಿಲ್ದಾಣ ಮಾಡಿದ್ದೆವು ಎನ್ನುವುದು ಬೇಡ. ಮಾನ-ಮಾರ್ಯದೆ ಇದ್ದರೆ, ಗೌರವ ಇದ್ದರೆ ಪಿಡಬ್ಲ್ಯೂಡಿಗೆ ಮೂಲಕ‌ ಮಾಡಲಿ” ಎಂದು ರೇವಣ್ಣ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆ: 1000 ಜನರಿಗೆ ಒಂದರಂತೆ ಶೌಚಾಲಯವೂ ಇಲ್ಲ ಎಂದ ವರದಿ

ಇದನ್ನೂ ಓದಿ: ವಿಜಯೇಂದ್ರ, ಸಚಿವರ ಹೆಸರಿನಲ್ಲಿ ವಂಚನೆ: ಶ್ರೀರಾಮುಲು ಆಪ್ತ ಸಹಾಯಕ ರಾಜಣ್ಣ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗಾಳಿಪಟ-2: ಯೋಗರಾಜ ಭಟ್ರ ಲಾಜಿಕ್‌ಗಳನ್ನು ‘ದೇವ್ಲೆ’ ಬಲ್ಲ!

ನೀವು ಬರಹಗಾರರಾಗಿದ್ದೀರಾ? ಹೌದಾದರೆ, ನೀವು ಆರಂಭಿಕ ದಿನಗಳಲ್ಲಿ ಬರೆದ ಒಂದು ಬರಹವನ್ನು ಮತ್ತೆ ಓದಿ ನೋಡಿ. ಎಷ್ಟೊಂದು ಪೇವಲವಾಗಿ ಬರೆದಿದ್ದೇನಲ್ಲ ಅಂತ ನಿಮಗೆಯೇ ಅನಿಸಲೂಬಹುದು. ಕಾಲ ಉರುಳಿದಂತೆ, ನಮ್ಮ ಅನುಭವಗಳು ದಟ್ಟವಾದಂತೆ ಬರವಣಿಗೆಯೂ...