ಕೊರೊನಾ ಪ್ರಕರಣಗಳು ಹೆಚ್ಚಿರುವ 6 ರಾಜ್ಯಗಳಲ್ಲಿ ಕೇಂದ್ರ ತಂಡ ನಿಯೋಜನೆ
ಸಾಂದರ್ಭಿಕ ಚಿತ್ರ

ದೇಶದಲ್ಲಿ ಅತೀ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವ ಕೇರಳ, ಅರುಣಾಚಲ ಪ್ರದೇಶ, ತ್ರಿಪುರ, ಒಡಿಶಾ, ಛತ್ತೀಸಗಢ ಮತ್ತು ಮಣಿಪುರ ರಾಜ್ಯಗಳಲ್ಲಿ ಒಕ್ಕೂಟ ಸರ್ಕಾರವು ವಿಶೇಷ ಕೊರೊನಾ ನಿಯಂತ್ರಣ ತಂಡಗಳನ್ನು ನಿಯೋಜಿಸಿದೆ.

ಈ ಆರು ರಾಜ್ಯಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳ ತುರ್ತು ನಿಯಂತ್ರಣ ಮತ್ತು ನಿಯಂತ್ರಣ ಕ್ರಮಗಳಿಗಾಗಿ ತಂಡಗಳನ್ನು ಕಳುಹಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ತಲಾ ಇಬ್ಬರು ಸದಸ್ಯರಿರುವ ಈ ತಂಡವು ವೈದ್ಯ ಮತ್ತು ಸಾರ್ವಜನಿಕ ಆರೋಗ್ಯ ತಜ್ಞರನ್ನು ಒಳಗೊಂಡಿದೆ. ತಂಡಗಳನ್ನು ತಕ್ಷಣವೇ ಆರು ರಾಜ್ಯಗಳಿಗೆ ಕಳುಹಿಸಲಾಗಿದೆ. ಕೋವಿಡ್ ನಿರ್ವಹಣೆಯ ಕೈಗೊಳ್ಳುವ ಪ್ರಯತ್ನಗಳಲ್ಲಿ ತಂಡಗಳು ರಾಜ್ಯಗಳನ್ನು ಬೆಂಬಲಿಸಲಿವೆ ಮತ್ತು ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿಭಾಯಿಸುತ್ತವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ತಿಳಿಸಿದೆ.

ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ: ಒಕ್ಕೂಟ ಸರ್ಕಾರಕ್ಕೆ 6 ವಾರಗಳ ಗಡುವು ನೀಡಿದ ಸುಪ್ರೀಂ

ಈ ತಂಡಗಳು ಕೋವಿಡ್ ಮಾರ್ಗಸೂಚಿಗಳು ಮತ್ತು ಅದರ ಜಾರಿಗೊಳಿಸುವಿಕೆ, ಆಸ್ಪತ್ರೆಯಲ್ಲಿ ಹಾಸಿಗೆಗಳ ಲಭ್ಯತೆ, ಆಂಬ್ಯುಲೆನ್ಸ್‌ಗಳು, ವೆಂಟಿಲೇಟರ್‌ಗಳು ಮತ್ತು ವೈದ್ಯಕೀಯ ಆಮ್ಲಜನಕವನ್ನು ಒಳಗೊಂಡಂತೆ ಸಾಕಷ್ಟು ಲಾಜಿಸ್ಟಿಕ್ಸ್, ಜೊತೆಗೆ ಕೋವಿಡ್ ವ್ಯಾಕ್ಸಿನೇಷನ್ ಪ್ರಗತಿಯನ್ನು ಖಚಿತಪಡಿಸುತ್ತವೆ. ರಾಜ್ಯಗಳು ಕೊರೊನಾ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಾಗ, ಕೇಂದ್ರದ ತಂಡ ಸಾರ್ವಜನಿಕ ಆರೋಗ್ಯ ಚಟುವಟಿಕೆಗಳ ಕುರಿತು ಪರಿಹಾರ ಕ್ರಮಗಳನ್ನು ಸಹ ಸೂಚಿಸುತ್ತವೆ ಎಂದು ತಿಳಿಸಲಾಗಿದೆ.

ಮಣಿಪುರಕ್ಕೆ ತೆರಳುವ ತಂಡದ ನೇತೃತ್ವವನ್ನು ಹೆಚ್ಚುವರಿ ಡಿಡಿಜಿ ಮತ್ತು ಇಎಂಆರ್ ನಿರ್ದೇಶಕ ಡಾ. ಎಲ್ ಸ್ವಾಸ್ತಿಚರನ್  ವಹಿಸಲಿದ್ದಾರೆ. ಅರುಣಾಚಲ ಪ್ರದೇಶಕ್ಕೆ ತಂಡದ ನೇತೃತ್ವವನ್ನು (ಎಐಐಹೆಚ್ & ಪಿಹೆಚ್) All India Institute of Hygiene & Public Health ಪ್ರೊಫೆಸರ್ ಡಾ.ಸಂಜಯ್ ಸಾಧುಖಾನ್ ವಹಿಸಿಕೊಳ್ಳಲಿದ್ದಾರೆ. ತ್ರಿಪುರದಲ್ಲಿ ಎಐಐಹೆಚ್ ಮತ್ತು ಪಿಎಚ್‌ನ ಡಾ. ಆರ್.ಎನ್. ಸಿನ್ಹಾ ತಂಡವನ್ನು ಮುನ್ನಡೆಸಲಿದ್ದಾರೆ.

ಕೇರಳದ ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಪ್ರಾದೇಶಿಕ ಕಚೇರಿಗಳಲ್ಲಿ ಸಾರ್ವಜನಿಕ ಆರೋಗ್ಯ ತಜ್ಞ ಡಾ. ರುಚಿ ಜೈನ್ ತಂಡವನ್ನು ಮುನ್ನಡೆಸಲಿದ್ದಾರೆ. ಎಐಐಹೆಚ್ ಮತ್ತು ಪಿಎಚ್‌ನ ಸಾರ್ವಜನಿಕ ಆರೋಗ್ಯ ತಜ್ಞ ಡಾ. ಎ ಡಾನ್ ಒಡಿಶಾ ತಂಡವನ್ನು ಮುನ್ನಡೆಸಲಿದ್ದು, ಛತ್ತೀಸ್‌ಗಢ ತಂಡದ ನೇತೃತ್ವವನ್ನು ರಾಯ್‌ಪುರದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ಸಹಾಯಕ ಪ್ರಾಧ್ಯಾಪಕ ಡಾ. ದಿಬಾಕರ್ ಸಾಹು ವಹಿಸಲಿದ್ದಾರೆ.

ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿಭಾಯಿಸುವಾಗ ಈ ಕೊರೊನಾ ನಿಯಂತ್ರಣ ತಂಡಗಳು ಉದ್ದೇಶಿತ ಕೋವಿಡ್ ಪ್ರತಿಕ್ರಿಯೆ ಮತ್ತು ನಿರ್ವಹಣೆಗೆ ರಾಜ್ಯಗಳ ಪ್ರಯತ್ನಗಳಲ್ಲಿ ರಾಜ್ಯಗಳನ್ನು ಬೆಂಬಲಿಸಲಿವೆ  ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.


ಇದನ್ನೂ ಓದಿ: ಮಹಾರಾಷ್ಟ್ರದಿಂದ ರಾಜ್ಯಕ್ಕೆ ಪ್ರವೇಶ ಬೇಕೆಂದರೆ ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯ: ನೈರುತ್ಯ ರೈಲ್ವೆ

LEAVE A REPLY

Please enter your comment!
Please enter your name here