ಜನರ ಸಂಕಷ್ಟಗಳನ್ನೆ ಲಾಭ ಮಾಡಿಕೊಳ್ಳುತ್ತಿರುವ ಸರ್ಕಾರ: ಪ್ರಧಾನಿಗೆ ಸೋನಿಯಾ ತೀಕ್ಷ್ಣ ಪತ್ರ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಬೆಲೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. “ಜನರ ದುಃಖ ಮತ್ತು ಸಂಕಟಗಳಿಂದ” ಲಾಭ ಪಡೆಯಲು ಸರ್ಕಾರ ಹವಣಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಪತ್ರವನ್ನು ಕಾಂಗ್ರೆಸ್ ಪಕ್ಷವು ತನ್ನ ಅಧಿಕೃತ ಟ್ವಿಟರ್‌ನಲ್ಲಿ ಪ್ರಕಟಿಸಿದೆ. “ಇಂಧನ ಬೆಲೆಗಳು ಐತಿಹಾಸಿಕ ಮತ್ತು ಸಮರ್ಥನೀಯವಲ್ಲದ ಗರಿಷ್ಠ ಮಟ್ಟದಲ್ಲಿವೆ. ವಾಸ್ತವವಾಗಿ, ಪೆಟ್ರೋಲ್ ದೇಶದ ಅನೇಕ ಭಾಗಗಳಲ್ಲಿ ಲೀಟರ್‌ಗೆ 100 ರೂ. ಗಡಿಯನ್ನು ದಾಟಿದೆ. ಡೀಸೆಲ್‌ನ ಏರುತ್ತಿರುವ ಬೆಲೆ ಲಕ್ಷಾಂತರ ರೈತರ ಸಂಕಷ್ಟವನ್ನು ಹೆಚ್ಚಿಸಿದೆ” ಎಂದು ಸೋನಿಯಾ ತಿಳಿಸಿದ್ದು, ಅಂತರರಾಷ್ಟ್ರೀಯ ಕಚ್ಚಾ ತೈಲದ ಮಧ್ಯಂತರ ಬೆಲೆಗಳ ಹೊರತಾಗಿಯೂ ಈ ಬೆಲೆಗಳನ್ನು ಹೆಚ್ಚಿಸಲಾಗಿದೆ ಎಂದು ಅಪಾದಿಸಿದ್ದಾರೆ.

ಇದನ್ನೂ ಓದಿ: ಭೀಮಾ ಕೊರೆಗಾಂವ್ – ಕ್ರಾಂತಿಕಾರಿ ತೆಲುಗು ಕವಿ ವರವರ ರಾವ್‌ಗೆ ಆರು ತಿಂಗಳ ಜಾಮೀನು

ಕಚ್ಚಾ ತೈಲ ಬೆಲೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ಇದ್ದದ್ದಕ್ಕಿಂತ ಈಗ ಅರ್ಧದಷ್ಟಿದೆ ಎಂದು ಅವರು ನೆನಪಿಸಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಸತತ 12 ದಿನಗಳವರೆಗೆ ಹೆಚ್ಚಿಸಲಾಗಿದ್ದು, ಮಹಾರಾಷ್ಟ್ರದ ಮುಂಬೈಯಲ್ಲಿ ಪೆಟ್ರೋಲ್‌ಗೆ ಸಾರ್ವಕಾಲಿಕ ಗರಿಷ್ಠ 97 ರೂ ಮತ್ತು ಡೀಸೆಲ್‌ಗೆ 88 ರೂ ಕ್ಕಿಂತಲೂ ಹೆಚ್ಚಾಗಿದೆ.

ಅಂತರರಾಷ್ಟ್ರೀಯ ತೈಲ ಬೆಲೆಗಳು ಎರಡು ದಶಕಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದ್ದರಿಂದ ಉಂಟಾದ ಲಾಭವನ್ನು ಪಡೆದುಕೊಳ್ಳಲು ಕೇಂದ್ರ ಸರ್ಕಾರವು, ಕಳೆದ ವರ್ಷ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ದಾಖಲೆಯ ಮಟ್ಟದಲ್ಲಿ ಹೆಚ್ಚಿಸಿತ್ತು.

ಉದ್ಯೋಗ ನಷ್ಟ, ವೇತನ ಮತ್ತು ಮನೆಯ ಆದಾಯದ ವ್ಯವಸ್ಥಿತ ಕುಸಿತಕ್ಕೆ ಭಾರತ ಸಾಕ್ಷಿಯಾಗುತ್ತಿದೆ ಎಂದು ತಮ್ಮ ಪತ್ರದಲ್ಲಿ ತಿಳಿಸಿರುವ ಸೋನಿಯಾ ಗಾಂಧಿ, “ಮಧ್ಯಮ ವರ್ಗ ಮತ್ತು ಅಂಚಿನಲ್ಲಿರುವವರು ಕಷ್ಟ ಡುತ್ತಿದ್ದಾರೆ” ಎಂಬುದನ್ನು ಪ್ರಧಾನಿಯ ಗಮನಕ್ಕೆ ತಂದಿದ್ದಾರೆ.

ಇದನ್ನೂ ಓದಿ: ನನ್ನ ಬಂಧನದಲ್ಲಿ ಬಿಜೆಪಿಯ ಪಿತೂರಿಯಿದೆ ಎಂದ ಬಿಜೆಪಿ ನಾಯಕಿ ಪಮೇಲಾ ಗೋಸ್ವಾಮಿ

“ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅತಿಯಾದ ಅಬಕಾರಿ ಸುಂಕವನ್ನು ವಿಧಿಸುವಲ್ಲಿ ನಿಮ್ಮ ಸರ್ಕಾರ ಅಸಮಂಜಸ ನಿಲುವು ತೆಗೆದುಕೊಂಡಿದೆ. ಅಂದರೆ ಪ್ರತಿ ಲೀಟರ್ ಪೆಟ್ರೋಲ್‌ಗೆ ರೂ 33 ಮತ್ತು ಪ್ರತಿ ಲೀಟರ್ ಡೀಸೆಲ್‌ಗೆ ರೂ. 32 ಅಬಕಾರಿ ಸುಂಕ ವಸೂಲಿ ಮಾಡಲಾಗುತ್ತಿದೆ. ಇದು ಈ ಇಂಧನಗಳ ಮೂಲ ಬೆಲೆಗಿಂತ ಹೆಚ್ಚಾಗಿದೆ. ಸರ್ಕಾರದ ಆರ್ಥಿಕ ನಿರ್ವಹಣೆಯ ವಿಫಲತೆ ಮತ್ತು ದುರುಪಯೋಗವನ್ನು ಮುಚ್ಚಿಹಾಕಲು ಈ ಸುಲಿಗೆ ನಡೆದಿದೆ’’ ಎಂದು ಸೋನಿಯಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಯಾವುದೇ ಸರ್ಕಾರವು ಇಂತಹ ಯೋಚನಾರಹಿತ ಮತ್ತು ಅಸೂಕ್ಷ್ಮ ಕ್ರಮಗಳನ್ನು ನೇರವಾಗಿ ನಮ್ಮ ಜನರ ವೆಚ್ಚದಲ್ಲಿ ಹೇಗೆ ಸಮರ್ಥಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾನು ವಿಫಲವಾಗಿದ್ದೇನೆ” ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಅಬಕಾರಿ ಸುಂಕವನ್ನು ಭಾಗಶಃ ಹಿಂತೆಗೆದುಕೊಳ್ಳುವ ಮೂಲಕ ಇಂಧನ ಬೆಲೆಯನ್ನು ಕಡಿಮೆ ಮಾಡಿ ಎಂದು ಸೋನಿಯಾ ಗಾಂಧಿ ಒತ್ತಾಯಿಸಿದ್ದಾರೆ. “ಇಂಧನ ಬೆಲೆ ಹೆಚ್ಚಳವನ್ನು ವಾಪಾಸು ಪಡೆಯಿರಿ ಮತ್ತು ನಮ್ಮ ಮಧ್ಯಮ ಮತ್ತು ಸಂಬಳ ಪಡೆಯುವ ವರ್ಗಗಳು, ರೈತರು ಮತ್ತು ಬಡವರಿಗೆ ಲಾಭವನ್ನು ನೀಡಿ. ಈ ಜನರು ಎಂದೂ ಕಂಡರಿಯದ ಆರ್ಥಿಕ ಕುಸಿತ, ವ್ಯಾಪಕ ನಿರುದ್ಯೋಗ, ವೇತನ ಕಡಿತ ಮತ್ತು ಉದ್ಯೋಗ ನಷ್ಟಗಳೊಂದಿಗೆ ಹೋರಾಡುತ್ತಿದ್ದಾರೆ’’ ಎಂದು ಅವರು ಪ್ರಧಾನಿಯ ಗಮನ ಸೆಳೆದಿದ್ದಾರೆ.

“ನಿಮ್ಮ ಸರ್ಕಾರವು ಈಗ ನೆಪಗಳನ್ನು ಹೇಳುವ ಬದಲು ಪರಿಹಾರಗಳತ್ತ ಗಮನ ಹರಿಸುವ ಸಮಯ ಬಂದಿದೆ” ಎಂದು ಸೋನಿಯಾ ಗಾಂಧಿ ಬರೆದಿದ್ದಾರೆ.

ಇದನ್ನೂ ಓದಿ: ‘ಮಂತ್ರಾಲಯದ ಸ್ವಾಮೀಜಿ ಕರೆ ಮಾಡಿದ್ದರು’ – ಪಠ್ಯ ಕಡಿತಕ್ಕೆ ಸ್ಪಷ್ಟನೆ ನೀಡಿದ ಶಿಕ್ಷಣ ಸಚಿವರು

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here