Homeಮುಖಪುಟ‘ವೇದಗಣಿತ’ ಯೋಜನೆ ಹಿಂಪಡೆದ ಸರ್ಕಾರ; ದಲಿತರ ಹೋರಾಟಕ್ಕೆ ಗೆಲುವು

‘ವೇದಗಣಿತ’ ಯೋಜನೆ ಹಿಂಪಡೆದ ಸರ್ಕಾರ; ದಲಿತರ ಹೋರಾಟಕ್ಕೆ ಗೆಲುವು

“ಎಸ್‌ಸಿ, ಎಸ್‌ಟಿ ಸಮುದಾಯದ ಎಸ್‌ಸಿಎಸ್‌ಪಿ/ಟಿಎಸ್‌ಪಿಯ ಸುಮಾರು 70 ಕೋಟಿ ಹಣವನ್ನು ಉಳಿಸಿದ್ದೇವೆ” ಎಂದು ಹೋರಾಟಗಾರ ಹ.ರಾ.ಮಹೇಶ್‌ ತಿಳಿಸಿದ್ದಾರೆ.

- Advertisement -
- Advertisement -

ದಲಿತ ವಿದ್ಯಾರ್ಥಿಗಳಿಗೆ ವೇದಗಣಿತ ಕಲಿಸುವ ಯೋಜನೆಯನ್ನು ರೂಪಿಸಿದ್ದ ಸರ್ಕಾರ, ತೀವ್ರ ವಿರೋಧದ ಬಳಿಕ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಹೀಗಾಗಿ ದಲಿತರಿಗೆ ಮೀಸಲಾಗಿದ್ದ ಕೋಟ್ಯಂತರ ಹಣ ದುರುಪಯೋಗ ಆಗುವುದು ತಪ್ಪಿದೆ.

ವೇದಗಣಿತ ನೆಪದಲ್ಲಿ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕುರಿತು ದೂರುಗಳು ಬಂದಿದ್ದವು. ದಲಿತ ಹೋರಾಟಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ದಲಿತರಿಗೆ ಮೀಸಲಾದ ಹಣವನ್ನು ಖಾಸಗಿ ಸಂಸ್ಥೆಗಳು ದುರುಪಯೋಗ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿತ್ತು. ಈ ಕುರಿತು ‘ನಾನುಗೌರಿ.ಕಾಂ’ ಸರಣಿಯಾಗಿ ವರದಿ ಮಾಡಿತ್ತು. ವೇದಗಣಿತದಿಂದ ದಲಿತ ಮಕ್ಕಳ ಮೇಲೆ ಬೀರುವ ದೂರಗಾಮಿ ಪರಿಣಾಮಗಳ ಕುರಿತು ಬೆಳಕು ಚೆಲ್ಲಲಾಗಿತ್ತು. ಶಿಕ್ಷಣ ಇಲಾಖೆ ವ್ಯಾಪ್ತಿಯ ಕೆಲಸವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಾಡುತ್ತಿರುವುದು ಕೂಡ ಅನುಮಾನಗಳಿಗೆ ಆಸ್ಪದ ನೀಡಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಡಾ.ಬಿ.ಆರ್‌.ಅಂಬೇಡ್ಕರ್‌ ಸಂವಿಧಾನ ಹಕ್ಕುಗಳ ಸಂರಕ್ಷಣಾ ಪರಿಷತ್ ಈ ಕುರಿತು ಸರ್ಕಾರದ ಕಾರ್ಯದರ್ಶಿ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ದೂರು ಸಲ್ಲಿಸಿತ್ತು. ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆಯನ್ನು ಉಲ್ಲಂಘಿಸಿ ವೇದಗಣಿತ ಯೋಜನೆಗೆ ಆದೇಶವನ್ನು ಹೊರಡಿಸಲಾಗಿದೆ. ಸದರಿ ಆದೇಶವು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಅನುಸೂಚಿತ ಜಾತಿಗಳು/ಅನುಸೂಚಿತ ಪಂಗಡಗಳ ಅಭಿವೃದ್ಧಿ ಪರಿಷತ್ ಸಭೆಯಲ್ಲಿ ಕ್ರಿಯಾ ಯೋಜನೆ ಅನುಮೋದನೆಗೊಂಡಿರುವುದಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆಯ ಅನಧಿಕೃತ ಟಿಪ್ಪಣಿ ಉಲ್ಲೇಖಿಸಿತ್ತು.

ಆ ನಂತರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆಯ ಅಪರ ಮುಖ್ಯನಿರ್ದೇಶಕರು ತಮ್ಮ ನಿರ್ದೇಶನಗಳನ್ನು ಹಿಂಪಡೆದಿರುವುದಾಗಿ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ತಿಳಿಸಿದ್ದಾರೆ.

“ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿರುವ ಶೇ. 25ರ ಅನುದಾನದಲ್ಲಿ 5ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಸೂಕ್ತ ಸಮವಸ್ತ್ರ ಸಹಿತ ವೇದಗಣಿತ ತರಬೇತಿ ನೀಡಲು ಎವಿಎಂ ಅಕಾಡೆಮಿಗೆ (ಹಿರಿಯೂರು) ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ನಿಯಮಾನುಸಾರ ಮಾರ್ಗಸೂಚಿಗಳನ್ವಯ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಉಲ್ಲೇಖಿತ ಪತ್ರದಲ್ಲಿ ನಿರ್ದೇಶನ ನೀಡಲಾಗಿತ್ತು. ಪ್ರಸ್ತುತ ಸದರಿ ವಿಷಯದ ಕುರಿತು ಪುನರ್‌ ಪರಿಶೀಲಿಸಲಾಗಿದ್ದು, ಶಾಲೆಗಳಿಗೆ ಬೋಧಿಸುವ ವಿಷಯಗಳ ಪಠ್ಯಕ್ರಮದ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ನಿರ್ಧರಿಸಬೇಕಾಗಿರುತ್ತದೆ. ಆದರೆ ಈ ಕುರಿತು  ಸದರಿ ಇಲಾಖೆಯೊಂದಿಗೆ ಸಮಾಲೋಚಿಸದೆ ನಿರ್ದೇಶನ ನೀಡಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಉಲ್ಲೇಖಿತ ಸರ್ಕಾರದ ಪತ್ರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ದಲಿತರ 70 ಕೋಟಿ ರೂ. ಉಳಿಸಿದ್ದೇವೆ: ಹ.ರಾ.ಮಹೇಶ್‌

“ಎಸ್‌ಸಿ, ಎಸ್‌ಟಿ ಸಮುದಾಯದ ಎಸ್‌ಸಿಎಸ್‌ಪಿ/ಟಿಎಸ್‌ಪಿಯ ಸುಮಾರು 70 ಕೋಟಿ ಹಣವನ್ನು ಉಳಿಸಿದ್ದೇವೆ” ಎಂದು  ಡಾ.ಬಿ.ಆರ್‌.ಅಂಬೇಡ್ಕರ್‌ ಸಂವಿಧಾನ ಹಕ್ಕುಗಳ ಸಂರಕ್ಷಣಾ ಪರಿಷತ್‌ನ ಹ.ರಾ.ಮಹೇಶ್‌ ತಿಳಿಸಿದ್ದಾರೆ.

“ವೇದ ಗಣಿತದ ನೆಪದಲ್ಲಿ ನಾಡಿನ ಸುಮಾರು ಒಂದೂವರೆ ಲಕ್ಷ ಮುಗ್ದ ಎಸ್‌ಸಿಎಸ್‌ಟಿ ವಿದ್ಯಾರ್ಥಿಗಳು ಅನರ್ಥ ವೇದೀಕರಣಗೊಳ್ಳುವುದನ್ನು ತಪ್ಪಿಸಿದ್ದೇವೆ. ಈ ಹೋರಾಟಕ್ಕೆ ನಮ್ಮೊಡನೆ ನೇರವಾಗಿ ಭಾಗವಹಿಸಿದ ಚಳವಳಿಯ ಒಡನಾಡಿಗಳಿಗೆ, ಎಸ್‌ಸಿಎಸ್‌ಪಿ/ ಟಿಎಸ್‌ಪಿ ಪರಿಣಿತ ಹೋರಾಟಗಾರರಿಗೆ, ವಕೀಲ ಬಂಧುಗಳಿಗೆ, ಕೆಲ ಪತ್ರಕರ್ತ ಮಿತ್ರರಿಗೆ ಹಾಗೂ ದೂರದಿಂದಲೇ ನೈತಿಕ ಬೆಂಬಲ ಸೂಚಿಸಿದ ನಾಡಿನ ಎಲ್ಲಾ ಪ್ರಜ್ಞಾವಂತ ಬಂಧುಗಳಿಗೆ ಭೀಮನಮನಗಳನ್ನು ಸಲ್ಲಿಸುತ್ತೇವೆ” ಎಂದಿದ್ದಾರೆ.

ಇವುಗಳನ್ನು ಓದಿರಿ: ‘ವೇದಗಣಿತ’ ಕುರಿತು ‘ನಾನುಗೌರಿ.ಕಾಂ’ ಮಾಡಿರುವ ಸರಣಿ ವರದಿಗಳನ್ನು ಓದಲು ‘ಇಲ್ಲಿ ಕ್ಲಿಕ್‌ ಮಾಡಿ’

“ಆದರೆ, ಇದು ನಮ್ಮ ಸಂಪೂರ್ಣ ಗೆಲುವಲ್ಲ. ಈ ಕೆಟ್ಟ ಐಡಿಯಾವನ್ನು ಕೊಟ್ಟವರು, ಎಸ್‌ಸಿಎಸ್‌ಟಿ ಹಣವನ್ನು ದುರ್ಬಳಕೆಗೆ ಮುಂದಾಗಿ ಏಕಾಏಕಿ ಸುತ್ತೋಲೆ ಕಳಿಸಿದ ಸರ್ಕಾರದ ಅಧಿಕಾರಿಗಳುಮತ್ತು ನಮ್ಮ ಹಣವನ್ನು ಅನೀತಿ ಹಾಗೂ ಅನ್ಯಾಯವಾಗಿ ಕಬಳಿಸಲು ಸಜ್ಜಾಗಿದ್ದ ಎವಿಎಂ ಎಂಬ ಮನುವಾದಿ ಖಾಸಗಿಸಂಸ್ಥೆ ವಿರುದ್ಧ ಕ್ರಮ ಜರುಗಿಸಬೇಕಾಗಿದೆ. ಇವರೆಲ್ಲರ ಮೇಲೂ ಕಾನೂನಿನ ಕ್ರಮ ಜರುಗಿಸುವವರೆಗೂ ಹೋರಾಟ ಮುಂದುವರಿಸುತ್ತೇವೆ” ಎಂದು ಎಚ್ಚರಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...