Homeಕರ್ನಾಟಕಎರಡು ವರ್ಷ ಪೂರೈಸಿದ ಅರುಣ್ ಜೋಳದಕೂಡ್ಲಿಗಿ ಸಂಪಾದಕತ್ವದ ‘ಅಂಬೇಡ್ಕರ್ ಓದು’

ಎರಡು ವರ್ಷ ಪೂರೈಸಿದ ಅರುಣ್ ಜೋಳದಕೂಡ್ಲಿಗಿ ಸಂಪಾದಕತ್ವದ ‘ಅಂಬೇಡ್ಕರ್ ಓದು’

ಈ ತನಕ 351 ಜನರಿಂದ 525 ಸರಣಿಗಳನ್ನು ಓದಿಸಲಾಗಿದ್ದು, ಯೂಟ್ಯೂಬ್‌ನಲ್ಲಿ ಲಭ್ಯವಿರುವ ಈ ಸರಣಿಯನ್ನು ಕನ್ನಡದಲ್ಲಿ 120 ಗಂಟೆಗಳ ಕಾಲ ಕೇಳಬಹುದಾಗಿದೆ

- Advertisement -
- Advertisement -

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳನ್ನು ಅಂತರ್ಜಾಲದ ಮೂಲಕ ಮನೆ-ಮನಗಳಿಗೆ ತಲುಪಿಸುವ ಭಾಗವಾಗಿ ಬರಹಗಾರ, ಪ್ರಾಧ್ಯಾಪಕ ಅರುಣ್ ಜೋಳದಕೂಡ್ಲಿಗಿ ಅವರ ಸಂಪಾದಕತ್ವದಲ್ಲಿ  ನಡೆಯುತ್ತಿರುವ ‘ಅಂಬೇಡ್ಕರ್‌ ಓದು’ ಯೂಟ್ಯೂಬ್‌ ಸರಣಿ ಕಾರ್ಯಕ್ರಮ ತನ್ನ ಎರಡು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ.

ಸೆಪ್ಟಂಬರ್ 7, 2020 ರಂದು ಖ್ಯಾತ ಲೇಖಕಿ ಹೆಚ್.ಎಸ್.ಅನುಪಮಾ ಮೊದಲ ಸಂಚಿಕೆ ಓದುವ ಮೂಲಕ ‘ಅಂಬೇಡ್ಕರ್‌ ಓದು’ ಸರಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಈ ಓದು ಸರಣಿಯು ತನ್ನ 525 ನೇ ಸಂಚಿಕೆ ತಲುಪಿದ್ದು, ಅಂಬೇಡ್ಕರ್ ಬೌದ್ಧ ದಮ್ಮ ಸ್ವೀಕರಿಸಿದ ದಿನದ ಅಕ್ಟೋಬರ್-14 ರ ವಿಶೇಷ ಸಂಚಿಕೆಯನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಟಿ.ಎಂ.ಭಾಸ್ಕರ್ ಅವರು ಓದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸರಣಿ ಓದು ಕಾರ್ಯಕ್ರಮದಲ್ಲಿ ಈ ತನಕ 351 ಜನರಿಂದ 525 ಸರಣಿಗಳನ್ನು ಓದಿಸಲಾಗಿದೆ. ಯೂಟ್ಯೂಬ್‌ನಲ್ಲಿ ಲಭ್ಯವಿರುವ ಈ ಓದಿನ ಸರಣಿಯನ್ನು ಕನ್ನಡದಲ್ಲಿ 120 ಗಂಟೆಗಳ ಕಾಲ ಕೇಳಬಹುದಾಗಿದೆ. ಈತನಕ 167 ಮಹಿಳೆಯರು 300 ಕ್ಕಿಂತ ಹೆಚ್ಚಿನ ಸರಣಿಗಳನ್ನು ಓದಿರುವುದು ಈ ಓದು ಸರಣಿಯ ವಿಶೇಷವಾಗಿದೆ.

ಇದನ್ನೂ ಓದಿ: ಹುಲಿ ಜಾನಪದ; ಕನ್ನಡ ಜಾನಪದ ಪರಂಪರೆಯಲ್ಲಿ ಹುಲಿಯ ಜತೆಗಿನ ಮುಖಾಮುಖಿ- ಅರುಣ್ ಜೋಳದಕೂಡ್ಲಿಗಿ

ವಿಶೇಷವಾಗಿ ಓದಿನ 500 ನೇ ಸಂಚಿಕೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಓದಿದ್ದರು. ಈ ಹಿಂದೆ ರಾಜ್ಯಸಭಾ ಸದಸ್ಯರಾದ ಎಲ್.ಹನುಮಂತಯ್ಯ, ಸಂಗೀತ ನಿರ್ದೇಶಕ ಹಂಸಲೇಖ, ನಟರಾದ ರಮೇಶ್ ಅರವಿಂದ, ಕಿಶೋರ್, ರಂಗಾಯಣ ರಘು, ಅಚ್ಯುತ ಕುಮಾರ್, ಸಿನೆಮಾ ನಿರ್ದೇಶಕರಾದ ಬಿ.ಸುರೇಶ್, ಬಿ.ಎಂ ಗಿರಿರಾಜ, ಮಾಜಿ ಸಚಿವೆ ಮೋಟಮ್ಮ ಓದಿದ್ದರು.

ಅಲ್ಲದೆ ಬಿಜಾಪುರದ ಮಹಿಳಾ ವಿವಿಯ ವಿಶ್ರಾಂತ ಕುಲಪತಿಗಳಾದ ಪ್ರೊ. ಸಬೀಹಾ ಭೂಮಿಗೌಡ, ಹಿರಿಯ ಲೇಖಕರಾ ದೇವನೂರು ಮಹಾದೇವ, ಅಮರೇಶ ನುಗಡೋಣಿ, ನಟರಾಜ ಹುಳಿಯಾರ, ಹೆಚ್.ಎಸ್.ರಾಘವೇಂದ್ರರಾವ್, ಜಾನಪದ ಅಕಾಡೆಮಿ ಅಧ್ಯಕ್ಷರಾದ ಪದ್ಮಶ್ರೀ ಮಂಜಮ್ಮ ಜೋಗತಿ ಪತ್ರಕರ್ತರಾದ ದಿನೇಶ ಅಮಿನಮಟ್ಟು, ರವೀಂದ್ರ ಭಟ್, ವೈ.ಗ ಜಗದೀಶ, ರಶ್ಮಿ ಎಸ್. ಸೇರಿದಂತೆ ಸಾಹಿತಿಗಳು, ಪತ್ರಕರ್ತರು, ನಟರು, ಶಿಕ್ಷರು, ವಿದ್ಯಾರ್ಥಿಗಳು, ರೈತರು ಎಲ್ಲಾ ಹಿನ್ನೆಲೆಯವರೂ ಓದಿನ ಭಾಗವಾಗಿದ್ದಾರೆ.

ಅರುಣ್ ಜೋಳದಕೂಡ್ಲಿಗಿ ಅವರು 2019 ರ ಏಪ್ರಿಲ್ 14 ರಂದು ತಮ್ಮ ಪೇಸ್‌ಬುಕ್ ಪೇಜ್‌ನಲ್ಲಿ ಅಂಬೇಡ್ಕರ್ ಓದನ್ನು ಲೈವ್ ಮಾಡಿದ್ದರು. “ಈ ಓದಿಗೆ ಸಿಕ್ಕ ಪ್ರತಿಕ್ರಿಯೆ ಓದನ್ನು ನಿರಂತರವಾಗಿ ನಡೆಸುವ ಕನಸೊಂದನ್ನು ಹುಟ್ಟಿಸಿತ್ತು” ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: ದಮನಿತರ ಸಿಟ್ಟಿನ ಏಕೀಕರಣ – ಅರುಣ್ ಜೋಳದಕೂಡ್ಲಿಗಿ

“ಖಾಸಗಿ ವಾಹಿನಿಯಲ್ಲಿ ಮಹಾನಾಯಕ ದಾರವಾಹಿ ಶುರುವಾದ ನಂತರ ಅಂತರ್ಜಾಲದಲ್ಲಿ ಕನ್ನಡದಲ್ಲಿ ಅಂಬೇಡ್ಕರ್ ಹುಡುಕಾಟ ಹೆಚ್ಚಾಯಿತು. ಆದರೆ ಅಂತರ್ಜಾಲದಲ್ಲಿ ಕನ್ನಡದಲ್ಲಿ ಅಂಬೇಡ್ಕರ್ ಅರಿವು ಹೆಚ್ಚಾಗಿ ಇರಲಿಲ್ಲ. ಆಗ ಅಂತರ್ಜಾಲದಲ್ಲಿ ಅಂಬೇಡ್ಕರ್ ಚಿಂತನೆಗಳು ಸಿಗುವಂತಾಗಬೇಕು ಎಂದು ಅಂಬೇಡ್ಕರ್ ಓದು ಪ್ರಾರಂಭಿಸಲಾಯಿತು” ಎಂದು ಅರುಣ್ ನೆನಪಿಸಿಕೊಳ್ಳುತ್ತಾರೆ.

“ನಾನು ನೆಪಮಾತ್ರನಾಗಿದ್ದು ‘ಇದು ಸಹಭಾಗಿತ್ವದ ಯಶಸ್ಸು’. ‘ಎಲ್ಲರ ಅಂಬೇಡ್ಕರ್’ ಎನ್ನುವ ತತ್ವದಡಿ ಎಲ್ಲರೂ ಅಂಬೇಡ್ಕರ್ ಅವರನ್ನು ಓದುವಂತಾಗಬೇಕು, ಎಲ್ಲರೂ ಕೇಳುವಂತಾಗಬೇಕು. ಅಂಬೇಡ್ಕರ್ ಚಿಂತನೆ ಕನ್ನಡದಲ್ಲಿ ಕೇಳಲು ಅಂತರ್ಜಾಲದಲ್ಲಿ ಸಿಗುವಂತಾಗಬೇಕು ಎನ್ನುವ ಕನಸು ಈ ಸರಣಿಯ ಹಿಂದಿದೆ” ಎಂದು ಅವರು ತಿಳಿಸಿದ್ದಾರೆ.

“ಈ ತರಹದ ಅಂಬೇಡ್ಕರ್ ಆಡಿಯೋ ಆರ್ಖೈವ್ ರೂಪುಗೊಂಡಿರುವುದು ಭಾರತದ ದೇಸಿ ಭಾಷೆಗಳಲ್ಲಿ ಇದು ಮೊದಲ ಪ್ರಯತ್ನ. ಇದು ಇತರೆ ಭಾಷಿಕರಿಗೆ ಮಾದರಿಯಾಗಬೇಕು ಎನ್ನುವುದು ನನ್ನ ಕನಸಾಗಿದೆ. ಈ ತನಕ ಯೂಟೂಬ್ ಚಾನಲ್ಲಿನಲ್ಲಿ ಒಂಬತ್ತು ಲಕ್ಷದಷ್ಟು ಕೇಳುವಿಕೆ ಸಾಧ್ಯವಾಗಿದೆ”

ಇದನ್ನೂ ಓದಿ: ’ಮಹಾನಾಯಕ’ನಿಗೆ ಒಂದು ವರ್ಷ: ಧಾರಾವಾಹಿಯನ್ನು ಜನ ಅಪ್ಪಿಕೊಂಡ ಬಗೆ…

“ಅನೇಕರು ಈ ಓದಿನಿಂದ ಪ್ರೇರಿತರಾಗಿದ್ದಾರೆ. ಇದೀಗ ಅನೇಕರು ಅಂಬೇಡ್ಕರ್ ಓದಿನ ಅವಕಾಶಕ್ಕಾಗಿ ಕೇಳುತ್ತಿದ್ದಾರೆ. ಇದು ಈ ಸರಣಿಯ ರೂಪಾಂತರವಾಗಿದೆ. ಅಂಬೇಡ್ಕರ್ ಅವರ ಸಮಕಾಲೀನವೆನಿಸುವ ಎಲ್ಲಾ ಬರಹಗಳನ್ನು ಓದಿಸುವ ಗುರಿ ಈ ಸರಣಿಗಿದೆ. ಹಾಗಾಗಿ ಅಂಬೇಡ್ಕರ್ ಓದು ಇನ್ನೂ ಮುಂದುವರಿಯಲಿದೆ. ಅಂಬೇಡ್ಕರ್ ಓದಿನ ಸಹಭಾಗಿಗಳಾದ ಎಲ್ಲರಿಗೂ ಮತ್ತೊಮ್ಮೆ ಜೈಭೀಮ್ ನಮನಗಳನ್ನು ಸಲ್ಲಿಸುವೆ” ಎಂದು ಅವರು ಹೇಳಿದ್ದಾರೆ.

ಅರುಣ್ ಜೋಳದಕುಡ್ಲಿಗಿ ಅವರ ಬ್ಲಾಗ್‌ಪೋಸ್ಟ್‌‌‌‌ ಕನ್ನಡ ಜಾನಪದ
ಅರುಣ್ ಜೋಳದಕುಡ್ಲಿಗಿ ಅವರ ಯೂಟ್ಯೂಬ್‌‌ ಚಾನೆಲ್‌ Arun jolad Kudligi

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...