Homeಮುಖಪುಟಜನಾಕ್ರೋಶಕ್ಕೆ ಬೆಚ್ಚಿದ ಸರ್ಕಾರ: ಬೆಂಗಳೂರು-ಮೈಸೂರು ಟೋಲ್ ದರ ಹೆಚ್ಚಳಕ್ಕೆ ತಡೆ

ಜನಾಕ್ರೋಶಕ್ಕೆ ಬೆಚ್ಚಿದ ಸರ್ಕಾರ: ಬೆಂಗಳೂರು-ಮೈಸೂರು ಟೋಲ್ ದರ ಹೆಚ್ಚಳಕ್ಕೆ ತಡೆ

- Advertisement -
- Advertisement -

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ರಸ್ತೆಯಲ್ಲಿ ಟೋಲ್ ವಸೂಲಿ ಆರಂಭವಾದ ಕೇವಲ 17 ದಿನಗಳಲ್ಲಿ ಮತ್ತೆ ಟೋಲ್ ದರ ಹೆಚ್ಚಳಕ್ಕೆ ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಟೋಲ್ ದರ ಹೆಚ್ಚಳ ಆದೇಶವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಡೆ ಹಿಡಿದಿದೆ.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ, ಅಲ್ಲಲ್ಲಿ ಸಣ್ಣ ಪುಟ್ಟ ಕಾಮಗಾರಿಗಳು ನಡೆಯುತ್ತಿವೆ ಎಂದು ಸ್ವತಃ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹರವರೇ ಒಪ್ಪಿಕೊಂಡಿದ್ದಾರೆ. ಹಾಗಾಗಿ ಟೋಲ್ ದರ ಹೆಚ್ಚಳ ಮಾಡಬಾರದು ಎಂದು ಮನವಿ ಮಾಡಿದ್ದೆ ಎಂದು ಅವರು ತಮ್ಮ ಫೇಸ್‌ಬುಕ್‌ ಲೈವ್‌ನಲ್ಲಿ ತಿಳಿಸಿದ್ದಾರೆ.

ಸದ್ಯದ ಬೆಂಗಳೂರಿನಿಂದ ನಿಡಘಟ್ಟವರೆಗಿನ ಟೋಲ್ ದರ ಹೀಗಿದೆ.

ಕಾರ್, ವ್ಯಾನ್‌, ಜೀಪ್‌ಗಳ ಏಕಮುಖ ಸಂಚಾರ ಟೋಲ್ ದರವನ್ನು ₹135. ದ್ವಿಮುಖ ಸಂಚಾರ ದರವು ₹205. ಲಘು ವಾಹನಗಳು, ಮಿನಿ ಬಸ್‌ಗಳ ಏಕಮುಖ ಟೋಲ್‌ ₹220. ದ್ವಿಮುಖ ಸಂಚಾರಕ್ಕೆ ₹405

ಟ್ರಕ್‌, ಬಸ್, ಎರಡು ಆಕ್ಸೆಲ್‌ ವಾಹನಗಳ ಏಕಮುಖ ಟೋಲ್‌ ಬರೋಬ್ಬರಿ ₹460 ದ್ವಿಮುಖ ಸಂಚಾರಕ್ಕೆ ₹690

ಅದೇ ರೀತಿಯಾಗಿ 3 ಆಕ್ಸೆಲ್ ವಾಣಿಜ್ಯ ವಾಹನಗಳ ಏಕಮುಖ ಸಂಚಾರ ದರವು ₹500. ದ್ವಿಮುಖ ಸಂಚಾರ ದರ ₹700

ಭಾರಿ ವಾಹನಗಳ ಏಕಮುಖ ಟೋಲ್‌ ₹720. ದ್ವಿಮುಖ ಸಂಚಾರಕ್ಕೆ ₹1,080.

7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್‌ ವಾಹನಗಳ ದರವು ₹880. ದ್ವಿಮುಖ ಸಂಚಾರಕ್ಕೆ ₹1,315ರೂ ನಿಗದಿ ಮಾಡಲಾಗಿದೆ.

ಇದನ್ನೂ ಓದಿ: ಎಲ್​ಪಿಜಿ ಸಿಲಿಂಡರ್ ಬೆಲೆ 92 ರೂ. ಇಳಿಕೆ; ವಾಣಿಜ್ಯ ಸಿಲಿಂಡರ್‌ಗೆ ಮಾತ್ರ ಅನ್ವಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read