Homeಮುಖಪುಟಎಲ್​ಪಿಜಿ ಸಿಲಿಂಡರ್ ಬೆಲೆ 92 ರೂ. ಇಳಿಕೆ; ವಾಣಿಜ್ಯ ಸಿಲಿಂಡರ್‌ಗೆ ಮಾತ್ರ ಅನ್ವಯ

ಎಲ್​ಪಿಜಿ ಸಿಲಿಂಡರ್ ಬೆಲೆ 92 ರೂ. ಇಳಿಕೆ; ವಾಣಿಜ್ಯ ಸಿಲಿಂಡರ್‌ಗೆ ಮಾತ್ರ ಅನ್ವಯ

- Advertisement -
- Advertisement -

2023-24ರ ಆರ್ಥಿಕ ವರ್ಷದ ಮೊದಲ ದಿನವಾದ ಇಂದು ಸರ್ಕಾರ ಎಲ್​ಪಿಜಿ ಸಿಲಿಂಡರ್​​ಗಳ ಬೆಲೆಯನ್ನು ಪರಿಷ್ಕರಿಸಿದೆ. ಏಪ್ರಿಲ್ 1ರಂದು ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ 92 ರೂಪಾಯಿಗಳಷ್ಟು ಇಳಿಕೆಯಾಗಿದೆ. ಆದರೆ ಇದು ವಾಣಿಜ್ಯ ಸಿಲಿಂಡರ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ. ಗೃಹ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ.

14.2 ಕೆಜಿ ತೂಕದ ಗೃಹ ಬಳಕೆಯ ಸಿಲಿಂಡರ್ ಬೆಲೆ ಸ್ಥಿರವಾಗಿದೆ. ಮಾರ್ಚ್​ನಲ್ಲಿದ್ದ ದರದಲ್ಲಿಯೇ ಗೃಹ ಬಳಕೆಯ ಸಿಲಿಂಡರ್ ಖರೀದಿಸಬೇಕು. ಮಾರ್ಚ್​ ನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 50ರೂ. ಏರಿಕೆ ಮಾಡಲಾಗಿತ್ತು.

ಗಮನಾರ್ಹ ಮಾಹಿತಿ ಎಂದರೆ ಮಾರ್ಚ್‌ನಲ್ಲಿ ಸರ್ಕಾರವು ವಾಣಿಜ್ಯ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು 350ರೂ. ಹೆಚ್ಚಿಸಿತ್ತು ಮತ್ತು ಏ.1ರಂದು ಅಂದರೆ ಇಂದಿನಿಂದ (ಶನಿವಾರ) 92 ಇಳಿಕೆ ಮಾಡಿದೆ.

ಇದನ್ನೂ ಓದಿ: ಜೆಡಿಎಸ್ ಅಧಿಕಾರಕ್ಕೆ ಬಂದರೆ 50% ಗ್ಯಾಸ್ ಸಬ್ಸಿಡಿ, 5 ಸಿಲಿಂಡರ್ ಉಚಿತ: ಹೆಚ್‌.ಡಿ ಕುಮಾರಸ್ವಾಮಿ

ದೇಶದ ಪ್ರಮುಖ ನಗರಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ:

ದೆಹಲಿ: 2,028ರೂ.

ಚೆನ್ನೈ: 2,192.50ರೂ.

ಕೋಲ್ಕತ್ತಾ: 2,132ರೂ.

ಮುಂಬೈ: 1,980ರೂ.

ಬೆಂಗಳೂರು: 1,685ರೂ.

ಗೃಹ ಬಳಕೆಯ ಸಿಲಿಂಡರ್ ಬೆಲೆ:

ದೆಹಲಿ: 1,103ರೂ.

ಚೆನ್ನೈ: 1,118.5ರೂ.

ಕೋಲ್ಕತ್ತಾ: 1,129ರೂ.

ಮುಂಬೈ: 1,112.5ರೂ.

ಬೆಂಗಳೂರು: 1,105.50ರೂ.

ಪಾಟ್ನಾ: 1,202ರೂ.

ಅಹಮದಾಬಾದ್: 1,110ರೂ.

ಭೋಪಾಲ್: 1,118.50ರೂ.

ಗೃಹಬಳಕೆಯ LPG ಸಿಲಿಂಡರ್‌ಗಳಿಗಿಂತ ಭಿನ್ನವಾಗಿ, ವಾಣಿಜ್ಯ ಅನಿಲ ದರಗಳು ಏರಿಳಿತಗೊಳ್ಳುತ್ತಲೇ ಇರುತ್ತವೆ. ಏಪ್ರಿಲ್ 1, 2022 ರಂದು ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್  2,253 ರೂ.ಗೆ ಲಭ್ಯವಿತ್ತು ಮತ್ತು ಇಂದಿನಿಂದ ಬೆಲೆಗಳು 2,028 ರೂ.ಗೆ ಇಳಿಕೆಯಾಗಿದೆ.

ಕಳೆದ ಒಂದು ವರ್ಷದಲ್ಲಿ ದೆಹಲಿಯಲ್ಲಿ ಮಾತ್ರ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 225 ರೂಪಾಯಿ ಇಳಿಕೆಯಾಗಿತ್ತು. ಉಳಿದ ಭಾಗದಲ್ಲಿ ಬೆಲೆ ಇಳಿಕೆಯಾಗಿರಲಿಲ್ಲ. ಬೆಲೆ ಏರಿಕೆ ಹಿನ್ನೆಲೆ ಮಾರ್ಚ್​ನಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಪ್ರತಿಭಟನೆ ನಡೆಸಲಾಗಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬುಲ್ಡೋಝರ್ ಬಳಸಿ ಮನೆ ಧ್ವಂಸ ಪ್ರಕರಣ : ಐದು ಕುಟುಂಬಗಳಿಗೆ 30 ಲಕ್ಷ ರೂ....

0
ನಾಗಾಂವ್‌ ಜಿಲ್ಲೆಯಲ್ಲಿ 2022ರಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಘಟನೆಯ ಬಳಿಕ ಐದು ಮುಸ್ಲಿಂ ಕುಟುಂಬಗಳ ಮನೆಗಳನ್ನು ಬುಲ್ಡೋಝರ್ ಬಳಸಿ ಸರ್ಕಾರ ಧ್ವಂಸಗೊಳಿಸಿತ್ತು. ಇದೀಗ ಮನೆ ಕಳೆದುಕೊಂಡವರಿಗೆ ಪರಿಹಾರವಾಗಿ 30 ಲಕ್ಷ ರೂಪಾಯಿಗಳನ್ನು...