Homeಮುಖಪುಟಅಹಮದಾಬಾದ್‌: ಲೇಕ್ ಗಾರ್ಡ್‌ನ್‌ನಲ್ಲಿ ನಮಾಜ್ ಆರೋಪ, ವಿಎಚ್‌ಪಿಯಿಂದ ಶುದ್ಧೀಕರಣ

ಅಹಮದಾಬಾದ್‌: ಲೇಕ್ ಗಾರ್ಡ್‌ನ್‌ನಲ್ಲಿ ನಮಾಜ್ ಆರೋಪ, ವಿಎಚ್‌ಪಿಯಿಂದ ಶುದ್ಧೀಕರಣ

- Advertisement -
- Advertisement -

ಅಹಮದಾಬಾದ್‌ನ ಐಷಾರಾಮಿ ವಸ್ತ್ರಪುರ್ ಪ್ರದೇಶದಲ್ಲಿನ ಲೇಕ್ ಗಾರ್ಡ್‌ನ್‌ನಲ್ಲಿ ನವೆಂಬರ್ 15 ರಂದು ಕೆಲವು ಮುಸ್ಲಿಮರು ನಮಾಜ್ ಸಲ್ಲಿಸಿದ್ದಾರೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸದಸ್ಯರು  ಶುದ್ಧೀಕರಣ ನಡೆಸಿದ್ದಾರೆ.

ಈ ಬಗ್ಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಮತ್ತು ನವೆಂಬರ್ 15 ರಂದು ನಡೆದ ಶುದ್ಧೀಕರಣ ಘಟನೆಯ ಬಗ್ಗೆ ಯಾರೂ ತಮ್ಮನ್ನು ಸಂಪರ್ಕಿಸಿಲ್ಲ ಎಂದು ವಸ್ತ್ರಾಪುರ ಪೊಲೀಸ್ ಇನ್ಸ್‌ಪೆಕ್ಟರ್ ಸಂದೀಪ್ ಖಂಬ್ಲಾ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ, ನಗರದ ಜನಪ್ರಿಯ ಹ್ಯಾಂಗ್‌ಔಟ್ ಆಗಿರುವ ವಸ್ತ್ರಾಪುರ ಲೇಕ್ ಗಾರ್ಡ್‌ನ್‌ನಲ್ಲಿ ನಾಲ್ಕು ಮಂದಿ ಮುಸ್ಲಿಂ ಪುರುಷರು ಮತ್ತು ಇಬ್ಬರು ಬುರ್ಖಾ ಧರಿಸಿದ ಮಹಿಳೆಯರು ನಮಾಜ್ ಮಾಡುತ್ತಿರುವ  ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿತ್ತು. ಗಾರ್ಡ್‌ನ್ ಸಮೀಪವಿರುವ ಕಟ್ಟಡದ ನಿವಾಸಿಯೊಬ್ಬರು ಈ ವಿಡಿಯೊವನ್ನು ಚಿತ್ರೀಕರಿಸಿರಬಹುದು ಎನ್ನಲಾಗಿದೆ.

ಇದನ್ನೂ ಓದಿ: ಲೀಗಲ್ ನೋಟಿಸ್: ಜೈಭೀಮ್‌ ನಟ ಸೂರ್ಯ ಬೆಂಬಲಕ್ಕೆ ನಿಂತವರು ಇವರು!

“ಸೋಮವಾರ ಸಂಜೆ, ಕೆಲವು ವಿಎಚ್‌ಪಿ ಕಾರ್ಯಕರ್ತರು ಸ್ಥಳವನ್ನು ಶುದ್ಧೀಕರಿಸಲು ಉದ್ಯಾನವನ್ನು ತಲುಪಿದ್ದರು. ಅವರು ಮಂತ್ರಗಳನ್ನು ಪಠಿಸಿ, ಸ್ಥಳದಲ್ಲಿ ಗಂಗಾಜಲ ಚಿಮುಕಿಸಿದ್ದಾರೆ. ಇದು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಆಗಿತ್ತು. ಇಂತಹ ನಮಾಜ್ ಅಂತಿಮವಾಗಿ ಆ ತುಂಡು ಭೂಮಿಯ ಮೇಲೆ ಹಕ್ಕು ಸಾಧಿಸಲು ಕಾರಣವಾಗುತ್ತದೆ” ಎಂದು ಗುಜರಾತ್ ವಿಎಚ್‌ಪಿ ಕಾರ್ಯದರ್ಶಿ ಅಶೋಕ್ ರಾವಲ್ ಅವರನ್ನು ದಿ ಹಿಂದೂ ಉಲ್ಲೇಖಿಸಿದೆ.

ಮೂಲಗಳ ಪ್ರಕಾರ, ವೀಡಿಯೊದಲ್ಲಿ ನಮಾಜ್ ಮಾಡುತ್ತಿರುವವರು ಈ ಲೇಕ್ ಗಾರ್ಡ್‌ನ್‌ ಸಮೀಪದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ತಮ್ಮ ಸಂಬಂಧಿಕರನ್ನು ನೋಡಲು ಬಂದಿರಬಹುದು ಎನ್ನಲಾಗಿದೆ.


ಇದನ್ನೂ ಓದಿ: ನಟ ಸುಶಾಂತ್‌ ಸಿಂಗ್‌ ಕುಟುಂಬದ ಐವರು ಸದಸ್ಯರು ರಸ್ತೆ ಅಪಘಾತದಲ್ಲಿ ದುರ್ಮರಣ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...