Homeಮುಖಪುಟಕ್ರಿಪ್ಟೋ ಕರೆನ್ಸಿ ಚಿನ್ನದಂತೆ ಬಳಸಬಹುದು; ಕೇಂದ್ರ ಸರ್ಕಾರ ನಿರ್ಧಾರ?

ಕ್ರಿಪ್ಟೋ ಕರೆನ್ಸಿ ಚಿನ್ನದಂತೆ ಬಳಸಬಹುದು; ಕೇಂದ್ರ ಸರ್ಕಾರ ನಿರ್ಧಾರ?

- Advertisement -
- Advertisement -

ಬಿಟ್‌ ಕಾಯಿನ್‌ ಥರದ ಕ್ರಿಪ್ಟೋ ಕರೆನ್ಸಿಗಳನ್ನು ಲೀಗಲ್ ಟೆಂಡರ್‌‌ ಮಾಡುತ್ತಾರೆಯೇ ಎಂಬ ಚರ್ಚೆಗಳು ದೇಶದಲ್ಲಿ ನಡೆಯುತ್ತಿವೆ. ಕ್ರಿಫ್ಟೋ ಕರೆನ್ಸಿಯನ್ನು ವರ್ಚ್ಯೂಯಲ್‌ ಹಣವಾಗಿ ಬಳಸಬೇಕೆ, ವಸ್ತುವಾಗಿ ಪರಿಗಣಿಸಬೇಕೆ ಅಥವಾ ಆಸ್ತಿಯಾಗಿ ಪರಿಗಣಿಸಬೇಕೆ ಎಂಬ ಕುರಿತು ಸರ್ಕಾರ ನಿರ್ಧರಿಸಲು ಮುಂದಾಗಿದೆ.

ಅನಿಯಂತ್ರಿತ ಕ್ರಿಫ್ಟೋ ಕರೆನ್ಸಿ ಮನಿ ಲ್ಯಾಂಡರಿಂಗ್‌ ಹಾಗೂ ಭಯೋತ್ಪಾದನೆಗೆ ಅವಕಾಶ ಮಾಡಿಕೊಡುತ್ತದೆ ಎಂದು ಹೇಳುತ್ತಿರುವ ಸರ್ಕಾರವು, ಕ್ರಿಫ್ಟೋ ಕರೆನ್ಸಿ ಸಂಬಂಧ ಒಂದು ನಿಲುವನ್ನು ತಾಳಲು ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಚರ್ಚೆಗಳು ನಡೆದಿವೆ.

ವಹಿವಾಟುಗಳಿಗೆ ಅಥವಾ ಪಾವತಿಗಳನ್ನು ಮಾಡಲು ಕ್ರಿಪ್ಟೋಕರೆನ್ಸಿಗಳ ಬಳಕೆಯನ್ನು ಕೇಂದ್ರ ಸರ್ಕಾರ ನಿರ್ಬಂಧಿಸಬಹುದು. ಆದರೆ ಅವುಗಳನ್ನು ಚಿನ್ನ, ಷೇರುಗಳು ಅಥವಾ ಬಾಂಡ್‌ಗಳಂತಹ ಸ್ವತ್ತುಗಳಾಗಿ ಇರಿಸಿಕೊಳ್ಳಲು ಅವಕಾಶ ನೀಡುತ್ತದೆ ಎಂದು ಎಕನಾಮಿಕ್ ಟೈಮ್ಸ್ ಬುಧವಾರ ವರದಿ ಮಾಡಿದೆ.

ಹೊಸ ಹೂಡಿಕೆದಾರರನ್ನು ಆಕರ್ಷಿಸಲು ಸಕ್ರಿಯವಾಗಿ ಪ್ರಯತ್ನಿಸುತ್ತಿರುವ ಎಕ್ಸ್‌ಚೆಂಜ್‌ಗಳು ಮತ್ತು ಫ್ಲಾಟ್‌ಫಾರ್ಮ್‌‌ಗಳನ್ನ ಒಳಗೊಂಡಂತೆ ಕ್ರಿಪ್ಟೋ ಕಂಪನಿಗಳನ್ನು ನಿಯಂತ್ರಿಸಲು ಸರ್ಕಾರವು ಉತ್ಸುಕವಾಗಿದ್ದು, ಈಗ ಕೈಗೊಂಡಿರುವ  ನಿರ್ಧಾರವು ಸಂಪೂರ್ಣ ನಿಷೇಧವನ್ನು ತಪ್ಪಿಸುತ್ತದೆ ಎಂದು ಮೂಲಗಳು ಹೇಳಿವೆ.

ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್‌ ಬೋರ್ಡ್ ಆಫ್ ಇಂಡಿಯಾ (SEBI)ವನ್ನು ನಿಯಂತ್ರಕ ಸಂಸ್ಥೆ ಎಂದು ಗೊತ್ತುಪಡಿಸಬಹುದು. ಆದರೂ ಅದನ್ನು ಅಂತಿಮಗೊಳಿಸಲಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕರೆನ್ಸಿಗಿಂತ ಹೆಚ್ಚಾಗಿ ಸ್ವತ್ತು ಎಂದು ವರ್ಗೀಕರಿಸಲು, ಸ್ವೀಕಾರವನ್ನು ಪಡೆಯಲು ಮತ್ತು ನಿಷೇಧವನ್ನು ತಪ್ಪಿಸಲು ಹಲವಾರು ಪ್ರಯತ್ನಗಳನ್ನು ಕ್ರಿಪ್ಟೋ ಸಮುದಾಯ ಮಾಡಿದೆ.

ಭಾರತ ಮತ್ತು ಕ್ರಿಪ್ಟೋ: ಕಳೆದ ಕೆಲವು ವರ್ಷಗಳಲ್ಲಿ ಭಾರತವು ಡಿಜಿಟಲ್ ಕರೆನ್ಸಿಗಳೊಂದಿಗೆ ಸಂಬಂಧವನ್ನು ಹೊಂದಿದೆ. 2018ರಲ್ಲಿ ಕ್ರಿಪ್ಟೋ ವಹಿವಾಟುಗಳನ್ನು ಪರಿಣಾಮಕಾರಿಯಾಗಿ ನಿಷೇಧಿಸಲಾಯಿತು. ಆದರೆ ಸುಪ್ರೀಂ ಕೋರ್ಟ್ ಮಾರ್ಚ್ 2020ರಲ್ಲಿ ನಿರ್ಬಂಧವನ್ನು ರದ್ದುಗೊಳಿಸಿತು.

ಭಾರತೀಯ ರಿಸರ್ವ್ ಬ್ಯಾಂಕ್ ಇದುವರೆಗೆ ಕ್ರಿಪ್ಟೋ ಕರೆನ್ಸಿಗಳನ್ನು ಸ್ವೀಕರಿಸಲು ಸಿದ್ಧವಿರಲಿಲ್ಲ. ಆರ್ಥಿಕ ಸ್ಥಿರತೆ ಮತ್ತು ಬಂಡವಾಳ ನಿಯಂತ್ರಣಗಳ ಸಂಭವನೀಯ ಅಪಾಯಗಳ ಬಗ್ಗೆ ಆರ್‌ಬಿಐ ಕಳವಳ ವ್ಯಕ್ತಪಡಿಸಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು, ಕ್ರಿಪ್ಟೋಕರೆನ್ಸಿಗಳ ವಿಷಯದ ಬಗ್ಗೆ ಭಾರತಕ್ಕೆ ಹೆಚ್ಚು ಆಳವಾದ ಚರ್ಚೆಗಳ ಅಗತ್ಯವಿದೆ ಎಂದು ಹೇಳಿದ್ದಾರೆ.

ಸಂಪುಟದ ಅನುಮೋದನೆಗಾಗಿ ಸರ್ಕಾರವು ಕ್ರಿಪ್ಟೋ ಮಸೂದೆಯನ್ನು ತರಬಹುದು. ನವೆಂಬರ್ 29ರಂದು ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಹೊಸ ಮಸೂದೆಯನ್ನು ಮಂಡಿಸಬಹುದು ಎಂದು ವರದಿ ಹೇಳಿದೆ.

‘ಕ್ರಿಪ್ಟೋಕರೆನ್ಸಿಗಳ ಮೇಲೆ ಕಟ್ಟುನಿಟ್ಟಾದ ನಿಯಮಗಳನ್ನು ಹೇರಿ’: ಕ್ರಿಪ್ಟೋ ಕರೆನ್ಸಿಗೆ ಯಾವುದೇ ರೂಪದಲ್ಲಾದರೂ ಅವಕಾಶ ನೀಡಿದರೆ, ಅದು ಸಂಪತ್ತು ಬಂಡವಾಳಶಾಹಿಗಳಲ್ಲಿ ಶೇಖರವಾಗಬಹುದು ಎಂಬ ಆತಂಕಗಳು ವ್ಯಕ್ತವಾಗಿವೆ.


ಇದನ್ನೂ ಓದಿರಿ: ಮಧ್ಯಪ್ರದೇಶ: ದೇವಸ್ಥಾನಕ್ಕೆ ಸಂಪೂರ್ಣ ಭೂಮಿ ನೀಡಿದ ಕುಟುಂಬಕ್ಕೆ ಬಹಿಷ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿ ದಾರಿ ತಪ್ಪಿಸುವ ಜಾಹೀರಾತು ಪ್ರಕರಣ; ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ರಾಮ್‌ದೇವ್‌ಗೆ ಸುಪ್ರೀಂ ತಪರಾಕಿ

0
ಪತಂಜಲಿ ಉತ್ಪನ್ನಗಳ ದಾರಿತಪ್ಪಿಸುವ ಜಾಹೀರಾತು ಪ್ರಕರಣದಲ್ಲಿ ಸಾರ್ವಜನಿಕ ಕ್ಷಮೆಯಾಚಿಸುವಂತೆ ಯೋಗ ಗುರು ರಾಮ್‌ದೇವ್, ಅವರ ಸಹಾಯಕ ಬಾಲಕೃಷ್ಣ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಒಂದು ವಾರ ಕಾಲಾವಕಾಶ ನೀಡಿದೆ. ಆದರೆ, ಈಗ ಅವರನ್ನು...