Homeಮುಖಪುಟ'ಹಿಂದೂ ರಾಷ್ಟ್ರ' ಸಿದ್ದಾಂತವೇ ಖಲಿಸ್ಥಾನ್‌ ಪ್ರತ್ಯೇಕತೆ ಹೋರಾಟಕ್ಕೆ ಕಾರಣ: ಅಶೋಕ್ ಗೆಹ್ಲೋಟ್

‘ಹಿಂದೂ ರಾಷ್ಟ್ರ’ ಸಿದ್ದಾಂತವೇ ಖಲಿಸ್ಥಾನ್‌ ಪ್ರತ್ಯೇಕತೆ ಹೋರಾಟಕ್ಕೆ ಕಾರಣ: ಅಶೋಕ್ ಗೆಹ್ಲೋಟ್

- Advertisement -
- Advertisement -

ಪಂಜಾಬ್‌ನ ಆಡಳಿತಾರೂಢ ಬಿಜೆಪಿಯ ‘ಹಿಂದೂ ರಾಷ್ಟ್ರ’ ಸಿದ್ಧಾಂತವನ್ನು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಶುಕ್ರವಾರ ಕಟುವಾಗಿ ಟೀಕಿಸಿದ್ದಾರೆ. ನಿಮ್ಮ ಈ ‘ಹಿಂದೂ ರಾಷ್ಟ್ರ’ ಸಿದ್ಧಾಂತವೇ ಖಲಿಸ್ತಾನ್ ಚಳವಳಿಯ ಉದಯಕ್ಕೆ ಮತ್ತು ಪಂಜಾಬ್‌ನಲ್ಲಿ ಅಮೃತಪಾಲ್ ಸಿಂಗ್‌ರಂತಹ ಪ್ರತ್ಯೇಕತಾವಾದಿಗಳು ಹುಟ್ಟಿಕೊಳ್ಳಲು ಕಾರಣವಾಗಿದೆ ಎಂದು ಹೇಳಿದ್ದಾರೆ.

ಭರತ್‌ಪುರದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಗೆಹ್ಲೋಟ್, ಖಲಿಸ್ತಾನ್ ಪ್ರತ್ಯೇಕತಾವಾದಿ, ಬಂಡುಕೋರ ಅಮೃತಪಾಲ್ ಸಿಂಗ್ ಅವರ ಜನಪ್ರಿಯತೆಗೆ ಬಿಜೆಪಿ ಮತ್ತು ಆರೆಸ್ಸೆಸ್ ಸಿದ್ಧಾಂತಗಳೇ ಕಾರಣ ಎಂದು ದೂಷಿಸಿದ್ದಾರೆ.

”ಮೋಹನ್ ಭಾಗವತ್ ಮತ್ತು ನರೇಂದ್ರ ಮೋದಿ ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡಿದರೆ, ನಾನು ಖಲಿಸ್ತಾನ್ ಬಗ್ಗೆ ಏಕೆ ಮಾತನಾಡಬಾರದು? ಎಂದು ಅಮೃತಪಾಲ್ ಸಿಂಗ್ ಹೇಳುತ್ತಿದ್ದಾರೆ” ಇಂತಹ ಹೇಳಿಕೆ ನೀಡುವಲ್ಲಿ ಸಿಂಗ್ ಅವರ ದಿಟ್ಟತನದ ಹಿಂದಿನ ಕಾರಣವನ್ನು ಗೆಹ್ಲೋಟ್ ಪ್ರಶ್ನಿಸಿದರು. ದೇಶದಲ್ಲಿ ಧರ್ಮ ಮತ್ತು ರಾಜಕೀಯ ಬೆಸೆದುಕೊಂಡಿದೆ ಎಂದು ಹೇಳಿದರು.

ಇದನ್ನೂ ಓದಿ: ಎಲ್ಲ ನಾಗರಿಕರೂ ಹಿಂದೂಗಳು ಹಾಗಾಗಿ ಭಾರತ ಹಿಂದೂ ರಾಷ್ಟ್ರ: ಆದಿತ್ಯನಾಥ್ ವಿವಾದಾತ್ಮಕ ಹೇಳಿಕೆ

”ಧರ್ಮದ ಹೆಸರಿನಲ್ಲಿ ಜನರನ್ನು ಮೆಚ್ಚಿಸುವುದು ಸುಲಭ. ಆದರೆ ನಮ್ಮ ದೇಶದ ಬಗ್ಗೆ ಚಿಂತಿಸಬೇಕು,” ಎಂದು ಎಚ್ಚರಿಸಿದರು. ”ಇಂದಿರಾ ಗಾಂಧಿ ಅವರು ಖಲಿಸ್ತಾನ್ ರಚನೆಗೆ ಅವಕಾಶ ನೀಡಲಿಲ್ಲ, ಅದಕ್ಕಾಗಿಯೇ ಅವರನ್ನು ಕೊಲ್ಲಲಾಯಿತು” ಎಂದು ಸಿಎಂ ಗೆಹ್ಲೋಟ್ ಎಂದು ಹೇಳಿದರು.

ಪಂಜಾಬ್ ಪೊಲೀಸರು ಅಮೃತಪಾಲ್ ಸಿಂಗ್ ಮತ್ತು ಆತನ ಸಹಚರರನ್ನು ಬಂಧಿಸಲು ಹುಡುಕಾಟ ನಡೆಸಿದ್ದಾರೆ. ಮತ್ತೊಂದೆಡೆ ಪರಾರಿಯಾಗಿರುವ ವಾರಿಸ್ ಪಂಜಾಬ್ ಡಿ ಮುಖ್ಯಸ್ಥರು ಎರಡು ವೀಡಿಯೊ ಸಂದೇಶಗಳನ್ನು ಮತ್ತು ಒಂದು ಆಡಿಯೊ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. ಮಾರ್ಚ್ 18 ರಿಂದ ಪರಾರಿಯಾಗಿರುವ ಸಿಂಗ್ ಗುರುವಾರ ಫೇಸ್‌ಬುಕ್‌ನಲ್ಲಿ ಲೈವ್‌ಗೆ ಹೋಗಿ ತಾನು ಶರಣಾಗುವುದಿಲ್ಲ. ”ನಾನು ಪಲಾಯನಗೈದಿದ್ದೇನೆ ಮತ್ತು ನನ್ನ ಸಹಚರರನ್ನು ತೊರೆದಿದ್ದೇನೆ ಎಂದು ಭಾವಿಸುವವರು ಈ ಭ್ರಮೆಯನ್ನು ತಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳಬಾರದು. ನನಗೆ ಸಾವಿಗೆ ಭಯವಿಲ್ಲ ಎಂದು ಪಂಜಾಬಿ ಭಾಷೆಯಲ್ಲಿ ವಿಡಿಯೋದಲ್ಲಿ ಘೋಷಿಸಿದರು.

ಗುರುವಾರದ ವೀಡಿಯೊದಲ್ಲಿ ಕಾಣಿಸಿಕೊಳ್ಳುವ ಮೊದಲು ಅಮೃತಪಾಲ್ ಸಿಂಗ್ ಆಡಿಯೊ ಸಂದೇಶ ಕಳುಹಿಸಿದ್ದು ಅದರಲ್ಲಿ, ಸಿಖ್ ನಾಯಕ ಅಕಾಲ್ ತಖ್ತ್‌ಗೆ ಸಭೆಯನ್ನು ಕರೆಯುವಂತೆ ಮತ್ತು ಅಕಾಲ್ ತಖ್ತ್ ಸಮುದಾಯದ ನಾಯಕ ಎಂದು ಸಾಬೀತುಪಡಿಸುವಂತೆ ಕೇಳಿಕೊಂಡಿದ್ದಾನೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...